ನವದೆಹಲಿ: ಧರ್ಮ, ಧಾರ್ಮಿಕ ವಿಚಾರ, ದೇವರ ಹೆಸರು ಹೇಳಿಕೊಂಡು ದುಡ್ಡು ಮಾಡುವವರು ಒಂದು ಕಡೆಯಾದ್ರೆ ಅದೇ ವಿಚಾರವನ್ನಿಟ್ಟುಕೊಂಡು ಹೆಣ್ಣು ಮಕ್ಕಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ವಂಚಕರ ಸಂಖ್ಯೆ ಹೆಚ್ಚಾಗಿದೆ. ನಕಲಿ ಬಾಬಾ(Fake Baba)ಗಳು ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿರುವ ಸುದ್ದಿಗಳು ಬೆಳಕಿಗೆ ಬರುತ್ತಿದ್ದರೂ ಜನರಿಗಂತೂ ಬುದ್ದಿ ಬರುತ್ತಲೇ ಇಲ್ಲ. ಇದೀಗ ಅಂತಹದ್ದೇ ಒಂದು ಘಟನೆ ವರದಿಯಾಗಿದೆ. ಆ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗುತ್ತಿದೆ.
ನಕಲಿ ಬಾಬಾನೊಬ್ಬ ಯುವತಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ಹೊಟ್ಟೆನೋವಿಗೆಂದು ಪೋಷಕರ ಜೊತೆ ಬಂದಿದ್ದ ಯುವತಿಯ ಮೈಯನ್ನು ಮುಟ್ಟಿ ಆಕೆ ತಂದೆ ತಾಯಿ ಎದುರೇ ನಕಲಿ ಬಾಬಾ ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿಯ ಎದೆ, ಹೊಟ್ಟೆಯನ್ನು ಮುಟ್ಟಿ ನಕಲಿ ಬಾಬಾ ವಿಕೃತಿ ಮೆರೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ
ಇನ್ನು ಯುವತಿ ಬಾಬಾನ ವರ್ತನೆಗೆ ಬೇಸತ್ತು ತನ್ನನ್ನು ಮುಟ್ಟದಂತೆ ಎಷ್ಟೇ ತಡೆದರೂ ಈ ಬಾಬಾ ಮಾತ್ರ ಮತ್ತೆ ಮತ್ತೆ ಅದನೇ ಮಾಡುತ್ತಾನೆ. ಅದೂ ಅಲ್ಲದೇ ಆಕೆಯ ತಂದೆ ತಾಯಿ ಕೂಡ ಆಕೆಯನ್ನು ಬಾಬಾನ ಚಿಕಿತ್ಸೆಗೆ ಸಹಕರಿಸುವಂತೆ ಒತ್ತಾಯಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬುದಾಗಿದೆ.
Even a stranger could tell how uncomfortable the girl is but her Parents still didn’t bother to STOP it.
— Nehr_who? (@Nher_who) August 24, 2024
These so called ‘babas’ are a menace and need to be dealt with strictly.
Massive awareness is needed. pic.twitter.com/zQuznATAIf
ಕೆಲವು ತಿಂಗಳಗಳ ಹಿಂದೆ ಚಾಮರಾಜನಗರದಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಚಿಕಿತ್ಸೆಗೆಂದು ಬಂದಿದ್ದ ವಿವಾಹಿತೆಯನ್ನು ನಕಲಿ ಬಾಬಾ ಒಬ್ಬ ತಲೆಕೆಡಿಸಿ ತನ್ನತ್ತ ಸೆಳೆದುಕೊಂಡಿದ್ದಾನೆ ಎಂದು ತಿಳಿದ ಪತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿತ್ತು. ಇಲ್ಲಿನ ನಿವಾಸಿ ಮಹಮದ್ ಅಫ್ಘಾನ್ ಎಂಬಾತ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಮೈಸೂರಿನ ಬಾಬಾ ಖುರ್ರಾಂ ಪಾಷಾ ಎಂಬಾತನ ವಿರುದ್ಧ ಈಗ ಗಂಭೀರ ಆರೋಪ ಕೇಳಿ ಬಂದಿದೆ.
ಮಹಮ್ಮದ್ ಅಫ್ಘನ್ ಹಾಗೂ ಆತನ ಪತ್ನಿ ತಿನ್ಜೀಯಾ ಕೌಸರ್ ಗುಂಡ್ಲುಪೇಟೆಯ ಅಮೀರ್‌ಜಾನ್ ರೋಡ್‌ನ ನಿವಾಸದಲ್ಲಿ ವಾಸಿಸುತ್ತಿದ್ದರು. ಪತ್ನಿ ತನ್ಜೀಯಾ ಕೌಸರ್‌ಗೆ ಕಳೆದ ಕೆಲವು ತಿಂಗಳ ಹಿಂದೆ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ ಮೈಸೂರಿನ ರಾಜೀವನಗರದ ಬಾಬಾ ಖುರ್ರಂ ಪಾಷಾನ ಬಳಿ ದಂಪತಿ ತೆರಳಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಸಾಯಿಬಾಬಾನ 3ನೇ ಅವತಾರ ಎಂದು ನಂಬಿಸಿ ಕೋಟ್ಯಂತರ ರೂ. ವಂಚನೆ: ನಕಲಿ ಬಾಬಾ ಪರಾರಿ!