Site icon Vistara News

Viral Video: ಅಬ್ಬಾ.. ಮದ್ವೆ ಮಂಟಪದಲ್ಲೇ ಬಿಗ್‌ ಫೈಟ್‌; ವರನಿಗಾಗಿ ಯುವತಿಯರ ಮಾರಾಮಾರಿ-ವಿಡಿಯೋ ವೈರಲ್‌

Viral video

ನವದೆಹಲಿ: ಸಿನಿಮಾಗಳಲ್ಲಿ ತ್ರಿಕೋನ ಪ್ರೇಮಕಥೆ(Love story)ಗಳನ್ನು ನೋಡಿರ್ತೀರಿ. ಒಬ್ಬನಿಗಾಗಿ ಇಬ್ಬರು ಮಹಿಳೆಯರ ನಡುವಿನ ಫೈಟ್‌ ಅಥವಾ ಒಬ್ಬಳಿಗೋಸ್ಕರ ಇಬ್ಬರು ಹುಡುಗರ ನಡುವೆ ಮಾರಾಮಾರಿ ಹೀಗೆ ಹಲವಾರು ಸೀನ್‌ಗಳನ್ನು ಸಿನಿಮಾಗಳಲ್ಲಿ ನೋಡಿರ್ತೇವೆ. ಇದೀಗ ಅಂತಹದ್ದೇ ಒಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇಲ್ಲಿ ಮದುವೆ ಮಂಟಪದಲ್ಲೇ ವರನಿಗಾಗಿ ಇಬ್ಬರು ಯುವತಿಯರ ನಡುವೆ ಮಾರಾಮಾರಿ ನಡೆದಿದ್ದು, ಈ ಫೈಟ್‌ ಯಾವ WWFಗೂ ಕಡಿಮೆಯಿಲ್ಲ. ಈ ವೈರಲ್‌(Viral Video) ಆಗಿರುವ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ.

ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅನಿತಾ ಸುರೇಶ್‌ ಶರ್ಮಾ ಎಂಬ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದು, ಇಬ್ಬರು ಯುವತಿಯರು ವೇದಿಕೆಯಲ್ಲೇ ಯುವಕನಿಗಾಗಿ ಹೊಡೆದಾಟ ನಡೆಸಿದ್ದಾರೆ. ಇಲ್ಲಿ ಮಧು ಮತ್ತು ವರನ ಪ್ರೇಯಸಿ ನಡುವೆ ಮಾರಾಮಾರಿ ನಡೆದಿದೆ. ಒಬ್ಬರನೊಬ್ಬರು ಬೈದಾಡಿಕೊಂಡು ಇಬ್ಬರು ಜುಟ್ಟು ಹಿಡಿ ಹೊಡೆದಾಟ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: Pakistan: ಟಾಪ್‌ ಕಂಪನಿಗಳಲ್ಲಿ ಭಾರತೀಯರೇ CEO; ಆದರೆ ನಮ್ಮ ಮಕ್ಕಳು? ಪಾಕ್‌ ಸಂಸದನ ವಿಡಿಯೊ ವೈರಲ್‌

ಯುವಕ ಇನ್ನೇನು ತಾಳಿ ಕಟ್ಟಬೇಕೆನ್ನುವ ಹೊತ್ತಲ್ಲಿ ಮದುವೆ ಮಂಟಪಕ್ಕೆ ಬಂದಿದ್ದ ಆತನ ಪ್ರೇಯಸಿ ತಕರಾರು ಮಾಡಿದ್ದಾಳೆ. ಆಗ ವೇದಿಕೆಯಲ್ಲಿದ್ದ ವಧು ಕೂಡ ಆಕೆಯ ಜೊತೆ ಜಗಳಕ್ಕಿಳಿದಿದ್ದಾಳೆ. ಇನ್ನು ಇಬ್ಬರು ಯುವತಿಯರೂ ಕೆಂಪು ಬಣ್ಣ ಮದುವೆ ಲೆಹಂಗಾ ತೊಟ್ಟಿದ್ದು, ಎಲ್ಲರೆದುರೇ ಪರಸ್ಪರ ಬಡಿದಾಡಿಕೊಂಡಿದ್ದಾರೆ. ನಡುವಲ್ಲಿದ್ದ ವರ ಇಬ್ಬರನ್ನೂ ತಡೆಯಲು ಪ್ರಯತ್ನಿಸಿದ್ದನಾದರೂ ಯುವತಿಯರಿಬ್ಬರು ಯಾರ ಮಾತನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಇನ್ನು ಮದುವೆ ಆಗಮಿಸಿದ ಅತಿಥಿಗಳಲ್ಲಿ ಒಬ್ಬರು ಈ ಘಟನೆ ವಿಡಿಯೋ ಮಾಡಿದ್ದು, ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಐದು ದಿನಗಳ ಹಿಂದೆ ಇನ್‌ಸ್ಟಾ ಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್‌ ಮಾಡಲಾಗಿದ್ದು, 1ಲಕ್ಷಕ್ಕೂ ಅಧಿಕ ಲೈಕ್ಸ್‌ ಬಂದಿದೆ.

ವಿಡಿಯೋ ನೋಡಿರುವ ನೆಟ್ಟಿಗರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ಹುಡುಗ ಸರ್ಕಾರಿ ನೌಕರನಾಗಿರಬೇಕು ಅದಕ್ಕಾಗಿ ಈ ಫೈಟ್‌ ಎಂದು ಒಬ್ಬರು ಕಮೆಂಟ್‌ ಮಾಡಿದ್ದರೆ, ದೇವರೇ ನನ್ನನ್ನು ಮೇಲೆ ಕರೆಸಿಕೋ.. ಇವನಿಗೂ ಗರ್ಲ್‌ಫ್ರೆಂಡ್‌ ಇದ್ದಾಳೆ ಅಂತಾ ಮತ್ತೊಬ್ಬ ಕಮೆಂಟ್‌ ಹಾಕಿದ್ದಾನೆ. ಪಕ್ಕದಲ್ಲಿ ಇನ್ನೊಬ್ಬ ವರ ಇದ್ದಾನೆ ಸರಿಯಾಗಿ ನೋಡಿ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

Exit mobile version