Site icon Vistara News

Viral Video: ʼಡ್ಯೂಟಿ ಮುಗಿದ ಮೇಲೆ ಮನೆ ಬಾʼ ಎಂದು ಕರೆದ ASI; ಆಮೇಲೆ ಆಗಿದ್ದೇ ಬೇರೆ! ಸ್ಪೈಸ್‌ಜೆಟ್‌ ಸಿಬ್ಬಂದಿ ವಿಡಿಯೋ ವೈರಲ್‌

Viral Video

ಜೈಪುರ: ಸ್ಪೈಸ್‌ಜೆಟ್‌ನ(SpiceJet) ಮಹಿಳಾ ಸಿಬ್ಬಂದಿ ಎಎಸ್‌ಐಗೆ ಕಪಾಳಮೋಕ್ಷ ಮಾಡಿರುವ ಘಟನೆ ಜೈಪುರ ವಿಮಾನ ನಿಲ್ದಾಣ(Jaipur Airport)ದಲ್ಲಿ ನಡೆದಿದೆ. ಘಟನೆ ಬಳಿಕ ಮಹಿಳಾ ಸಿಬ್ಬಂದಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇನ್ನು ಈ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌(Viral Video) ಆಗಿದೆ.

ಘಟನೆ ವಿವರ?

CISF ಅಧಿಕಾರಗಳ ಪ್ರಕಾರ ಸ್ಪೈಸ್‌ ಜೆಟ್‌ ಸಿಬ್ಬಂದಿ ಅನುರಾಧ ರಾಣಿಯನವರು ನಿನ್ನೆ ಸಂಜೆ 4ಗಂಟೆಗೆ ತಮ್ಮ ಸಹದ್ಯೋಗಿಗಳ ಜೊತೆ ವಿಮಾನ ನಿಲ್ದಾಣ ಪ್ರವೇಶಿಸುವಾಗ ಅವರ ಬಳಿ ಇದ್ದ ಅನುಮತಿ ಪತ್ರ ಅವಧಿ ಮೀರಿದ ಕಾರಣ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಗಿರಿರಾಜ್‌ ಪ್ರಸಾದ್‌ ಅವರನ್ನು ತಡೆದಿದ್ದಾರೆ. ಅಲ್ಲದೇ ಅಲ್ಲೇ ಪಕ್ಕದಲ್ಲಿದ್ದ ಸ್ಕ್ರೀನಿಂಗ್‌ ರೂಂ ತೆರಳಿ ತಪಾಸನೆಗೊಳಪಡುವಂತೆ ಅನುರಾಧ ಅವರನ್ನು ಗಿರಿರಾಜ್‌ ಪ್ರಸಾದ್‌ ಹೇಳಿದ್ದರು. ಆ ಸಮಯದಲ್ಲಿ ಅಲ್ಲಿ ಯಾವುದೇ ಮಹಿಳಾ CISF ಅಧಿಕಾರಿಗಳು ಅಲ್ಲಿ ಇರಲಿಲ್ಲ.

ಆಗ ಗಲಾಟೆ ಶುರುವಾಗಿತ್ತು. ಇಬ್ಬರ ನಡುವೆ ಭಾರೀ ವಾಗ್ವಾದ ನಡೆದಿತ್ತು. ಮಾತಿಗೆ ಮಾತು ಬೆಳೆದು ಕೋಪದ ಭರದಲ್ಲಿ ಅನುರಾಧ ಅವರು ಗಿರಿರಾಜ್‌ಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಜೈಪುರ ಸ್ಟೇಷನ್‌ ಹೌಸ್‌ ಆಫೀಸರ್‌ ರಾಮ್‌ ಲಾಲ್‌ ಹೇಳಿದ್ದಾರೆ. ಇನ್ನು ಘಟನೆ ಬಗ್ಗೆ ಸ್ಪೈಸ್‌ ಜೆಟ್‌ ವಕ್ತಾರರು ಪ್ರತಿಕ್ರಿಯಿಸಿದ್ದು, ಅನುರಾಧ ರಾಣಿಯವರ ಬಳಿಕ ಅಧಿಕೃತ ಏರ್‌ಪೋರ್ಟ್‌ ಪ್ರವೇಶ ಪತ್ರ ಇತ್ತು. ಎಎಸ್‌ಐ ಗಿರಿರಾಜ್‌ ಅವರು ಅನುರಾಧ ರಾಣಿಯವರ ಜೊತೆ ಅನುಚಿತವಾಗಿ ವರ್ತಿಸಿದ್ದರು. ಅಲ್ಲದೇ ತಮ್ಮ ಡ್ಯೂಟಿ ಟೈಂ ಮುಗಿದ ಮೇಲೆ ತಮ್ಮ ಮನೆಗೆ ಬರುವಂತೆ ಕರೆದಿದ್ದರು ಎಂದು ಆರೋಪಿಸಿದೆ.

ಸ್ಪೈಸ್‌ಜೆಟ್ ತನ್ನ ಮಹಿಳಾ ಉದ್ಯೋಗಿ ವಿರುದ್ಧ ಲೈಂಗಿಕ ಕಿರುಕುಳದ ಈ ಗಂಭೀರ ಪ್ರಕರಣದಲ್ಲಿ ತಕ್ಷಣ ಕಾನೂನು ಕ್ರಮ ತೆಗೆದುಕೊಳ್ಳುತ್ತಿದೆ ಮತ್ತು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದೆ. ನಾವು ನಮ್ಮ ಉದ್ಯೋಗಿಯ ಪರವಾಗಿ ದೃಢವಾಗಿ ನಿಲ್ಲುತ್ತೇವೆ ಮತ್ತು ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡಲು ಬದ್ಧರಾಗಿದ್ದೇವೆ” ಎಂದು ವಕ್ತಾರರು ಸೇರಿಸಿದ್ದಾರೆ.

ಸ್ಪೈಸ್ ಜೆಟ್ (SpiceJet) ವಿಮಾನ (Airlines) ಸಿಬ್ಬಂದಿಯ ಎಡವಟ್ಟಿನಿಂದಾಗಿ 12 ಗಂಟೆಗಳ ಕಾಲ ವಿಮಾನ ಟೇಕ್ ಆಫ್ (Delhi Bangalore Flight) ಆಗದೆ, ಬೆಂಗಳೂರಿಗೆ ಬರಬೇಕಿದ್ದ ಪ್ರಯಾಣಿಕರು ದಿಲ್ಲಿಯಲ್ಲಿಯೇ ವಿಮಾನದೊಳಗೇ ಕೊಳೆಯುವಂತಾಯಿತು. ನಿನ್ನೆ ಸಂಜೆ ಬೆಂಗಳೂರಿಗೆ ಬರಬೇಕಿದ್ದ ವಿಮಾನ, ಕಡೆಗೂ ಬೆಳಿಗ್ಗೆ ಟೇಕ್ ಆಫ್ (Take Off) ಆಗಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Devanahalli International Airport) ಬಂದಿತ್ತು.

ಇದನ್ನೂ ಓದಿ:Govt Employees: ಸರ್ಕಾರಿ ನೌಕರರ ವಿಮಾ ಪಾಲಿಸಿಗಳ ಮೊತ್ತಕ್ಕೆ ಬೋನಸ್‌ ನೀಡಲು ರಾಜ್ಯ ಸರ್ಕಾರ ಆದೇಶ!

Exit mobile version