ಮರಾಠಿ ಚಲನಚಿತ್ರ (Marathi film) ಮತ್ತು ದೂರದರ್ಶನ ನಿರ್ದೇಶಕಿ (TV director) ಸ್ವಪ್ನಾ ವಾಘಮಾರೆ ಜೋಶಿ (Swapna Waghmare Joshi) ಅವರ ಮನೆಗೆ ಕಳ್ಳನೊಬ್ಬ ಪ್ರವೇಶಿಸಿದ್ದು, ಸಾಕುನಾಯಿ ನೀಡಿದ ಎಚ್ಚರಿಕೆಯಿಂದ ಕಳ್ಳ ಓಡಿ ಹೋಗುವಂತಾಯಿತು ಎಂಬುದಾಗಿ ಸ್ವಪ್ನಾ ವಾಘಮಾರೆ ಅವರ ಆಪ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ (Viral Video) ಸಹಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮನೆಯಲ್ಲಿ ಸಾಕು ಪ್ರಾಣಿಗಳಿರುವುದು ಯಾಕೆ ಅಗತ್ಯ ಎಂಬುದನ್ನೂ ಅವರು ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಇನ್ ಸ್ಟಾ ಗ್ರಾಮ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲು ವಾಘಮಾರೆ ಅವರು ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಅವರಿಗೆ ಕರೆ ಮಾಡಿ ರಾತ್ರಿ 3 ಗಂಟೆಯ ಸುಮಾರಿಗೆ ತಮ್ಮ ಮನೆಯೊಳಗೆ ನಡೆದ ಘಟನೆಗಳ ಬಗ್ಗೆ ಹೇಳಿಕೊಂಡಿದ್ದಾರೆ ಎಂಬುದನ್ನು ಅಶೋಕ್ ವಿವರಿಸಿದ್ದಾರೆ.
ಪೋಸ್ಟ್‌ನ ಪ್ರಕಾರ ನಿರ್ದೇಶಕರು ಲಿವಿಂಗ್ ರೂಮ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಗಳಲ್ಲಿ ಸಂಪೂರ್ಣ ವಿಡಿಯೋ ಸೆರೆಯಾಗಿದೆ. ಕಳ್ಳನೊಬ್ಬ ಪೈಪ್ ಮೂಲಕ ಹತ್ತಿಕೊಂಡು ಬಂದು ಆರನೇ ಮಹಡಿಯಲ್ಲಿರುವ ಅಪಾರ್ಟ್ ಮೆಂಟ್ ನೊಳಗೆ ತೆರೆದ ಕಿಟಕಿಯ ಮೂಲಕ ಪ್ರವೇಶಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಅವನು ಕದಿಯಲು ದುಬಾರಿ ವಸ್ತುಗಳನ್ನು ಹುಡುಕುತ್ತಾ ಮನೆಯೊಳಗೇ ಮುಕ್ತವಾಗಿ ತಿರುಗಾಡುತ್ತಿದ್ದ. ಸ್ವಪ್ನಾ ಮತ್ತು ಅವರ ತಾಯಿ ಮಲಗಿದ್ದ ಕೋಣೆಗೆ ಪ್ರವೇಶಿಸಲು ಪ್ರಯತ್ನಿಸಿದನು. ಅಲ್ಲಿದ್ದವರು ಕೊಂಚ ಎಚ್ಚರಗೊಂಡಂತೆ ಆಗಿದ್ದರಿಂದ ಒಳಗೆ ಹೋಗಲಿಲ್ಲ. ನಿರ್ದೇಶಕರ ಮಗಳ ಪರ್ಸ್‌ನಿಂದ 6,000 ರೂಪಾಯಿ ಕದ್ದಿದ್ದಾನೆ.
ಸ್ವಲ್ಪ ಸಮಯದ ಅನಂತರ ವಾಘಮಾರೆಯ ಸಾಕುನಾಯಿಗೆ ಕಳ್ಳ ಮನೆಗೆ ಬಂದಿರುವುದು ಗೊತ್ತಾಗಿ ಬೊಗಳಲು ಪ್ರಾರಂಭಿಸಿತ್ತು. ತಕ್ಷಣ ಮನೆಯಲ್ಲಿ ಇದ್ದವರು ಎಚ್ಚರಗೊಂಡರು. ಮನೆಯವರು ಕಳ್ಳನನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಕಳ್ಳ ತಕ್ಷಣ ಮನೆಗೆ ನುಗ್ಗಿದ ದಾರಿಯಲ್ಲೇ ಓಡಿ ಹೋಗಿದ್ದಾನೆ.
ಇದೊಂದು ಎಲ್ಲರಿಗೂ ಎಚ್ಚರಿಕೆಯ ಘಟನೆಯಾಗಿದೆ. ವಿಶೇಷವಾಗಿ ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರು ಇರುವ ಮನೆಯಲ್ಲಿ ಬಹಳ ಎಚ್ಚರಿಕೆ ವಹಿಸಬೇಕಿದೆ ಎಂಬುದಾಗಿ ಅಶೋಕ್ ಈ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.
ಅಂಧೇರಿಯ ಲೋಖಂಡ್ವಾಲಾ ಕಾಂಪ್ಲೆಕ್ಸ್ ನಲ್ಲಿ ನೆಲೆಸಿರುವ ಸ್ವಪ್ನಾ ಅವರ ನಿವಾಸದ 6 ನೇ ಮಹಡಿಯನ್ನು ಕಳ್ಳನೊಬ್ಬ ಪೈಪ್‌ಗಳ ಸಹಾಯದಿಂದ ಹೇಗೆ ಏರಿದ್ದಾನೆ ಮತ್ತು ಇಳಿದಿದ್ದಾನೆ ಎಂಬುದನ್ನು ನೋಡಿದರೆ ಖಂಡಿತಾ ಎಲ್ಲರೂ ಶಾಕ್ ಆಗುತ್ತೀರಿ ಎಂದು ಅಶೋಕ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿರುವ ಈ ಪೋಸ್ಟ್ ಗೆ ಸಾಕಷ್ಟು ಕಾಮೆಂಟ್ ಗಳು ಬಂದಿವೆ. ಕೆಲವರು ಕಟ್ಟಡಗಳ ಭದ್ರತಾ ಸಿಬ್ಬಂದಿಯನ್ನು ದೂಷಿಸಿದ್ದಾರೆ.
ಘಟನೆಯ ಕುರಿತು ಪೊಲೀಸ್ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಈ ನಡುವೆ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ನಿರ್ದೇಶಕರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಒಬ್ಬರು ಬರೆದಿದ್ದಾರೆ, ಇದು ಆಘಾತಕಾರಿ! ಜಾಗೃತೆಯಾಗಿರಿ ಎಂದು ಹೇಳಿದ್ದಾರೆ. ಇನ್ನೊಬ್ಬರು ತುಂಬಾ ಆಘಾತಕಾರಿ. ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: ವಿಂಡೀಸ್ ಆಟಗಾರನ ಸಿಟ್ಟಿಗೆ ಸಿಕ್ಸರ್ಗೆ ಸಿಡಿದ ಹೆಲ್ಮೆಟ್!
ಏನು ನರಕ … ಇದು ತುಂಬಾ ಭಯಾನಕವಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಮತ್ತೊಬ್ಬರು ತುಂಬಾ ಕೆಟ್ಟದು ಮತ್ತು ಆಘಾತಕಾರಿ. ಕಾವಲುಗಾರರು ಸಾಮಾನ್ಯವಾಗಿ ರಾತ್ರಿ ಪಾಳಿಯಲ್ಲಿ ಮಲಗುತ್ತಾರೆ. ಕಿಟಕಿಗಳನ್ನು ಗ್ರಿಲ್‌ಗಳಿಂದ ಮುಚ್ಚುವುದು ಮುಖ್ಯ. ದೇವರಿಗೆ ಧನ್ಯವಾದಗಳು ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ಅಂತಹ ಕಟ್ಟಡಗಳಲ್ಲಿ ಉತ್ತಮ ಭದ್ರತಾ ಸೇವೆ ಕೈಗೊಳ್ಳುವಂತೆ ಅನೇಕರು ಒತ್ತಾಯಿಸಿದ್ದಾರೆ.