Site icon Vistara News

Viral Video: ರಣ ಭೀಕರ ಬಿರುಗಾಳಿ..! ಆಘಾತಕಾರಿ ವಿಡಿಯೋ ಎಲ್ಲೆಡೆ ವೈರಲ್‌

Viral Video

ಅಮೆರಿಕ: ಭೀಕರ ಬಿರುಗಾಳಿ(Tornadoes)ಯ ರಭಸಕ್ಕೆ ಐವರು ಬಲಿಯಾಗಿದ್ದು, 35ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಮೆರಿಕ(America)ದ ಲೋವಾ ನಗರದದ ಗ್ರೀನ್‌ಫೀಲ್ಡ್‌(Greenfield)ನಲ್ಲಿ ನಡೆದಿದೆ. ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಈ ಭೀಕರ ಬಿರುಗಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದ್ದು, ಗಾಯಾಳುಗಳ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿದ್ದಾರೆ.

ಲೋವಾ ಸಾರ್ವಜನಿಕ ಸುರಕ್ಷತಾ ವಿಭಾಗದ ಅಧಿಕಾರಿಗಳು ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಬಿರುಗಾಳಿಗೆ ನಾಲ್ವರು ಗ್ರೀನ್‌ಫೀಲ್ಡ್‌ನಲ್ಲೇ ಮೃತಪಟ್ಟಿದ್ದಾರೆ. ಮತ್ತೊರ್ವ ಮಹಿಳೆ ಕಾರು ಸಮೇತ ಬಿರುಗಾಳಿ ರಭಸಕ್ಕೆ 25ಮೈಲು ದೂರ ಹಾರಿ ಹೋಗಿ ಬಿದಿದ್ದು, ಕಾರಿನೊಳಗೇ ಮೃತಪಟ್ಟಿದ್ದಾಳೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾದ ಪರಿಣಾಮ 46ವರ್ಷದ ಮೊನಿಕಾ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಗ್ರೀನ್‌ ಫೀಲ್ಡ್‌ ನಗರದಲ್ಲಿ ಸುಮಾರು 55 ಮೈಲುಗಳವರೆಗೆ ಈ ಬಿರುಗಾಳಿ ಬೀಸಿದ್ದು, ಅನೇಕ ಮನೆ, ಕಟ್ಟಡಗಳು ಹಾನಿಗೊಳಗಾಗಿವೆ. ಸಾವಿರಾರು ಜನ ಬಿರುಗಾಳಿ ರಭಸಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ನಡುವೆ ಡಲ್ಲಾಸ್‌ ಸೇರಿದಂತೆ ಟೆಕ್ಸಾಸ್‌ನ ಕೆಲವು ಭಾಗಗಳಲ್ಲಿ ಭೀಕರ ಪ್ರವಾಹವಾಗುವ ಎಚ್ಚರಿಕೆಯನ್ನು ರಾಷ್ಟ್ರೀಯ ಹವಾಮಾನ ಇಲಾಖೆ ನೀಡಿದೆ.

ಹವಾಮಾನ ಬದಲಾವಣೆಯು ಪ್ರಪಂಚದಾದ್ಯಂತ ಚಂಡಮಾರುತಗಳ ತೀವ್ರತೆಯನ್ನು ಹೆಚ್ಚಿಸುತ್ತದೆ. ಅಮೆರಿಕದಲ್ಲಿ ಆಗಾಗ ಸುಂಟರಗಾಳಿ ಸಂಭವಿಸುತ್ತಿರುತ್ತದೆ. ಏಪ್ರಿಲ್‌ನಲ್ಲಿ ಅಮೆರಿಕದಲ್ಲಿ ಎರಡನೇ ಅತಿ ದೊಡ್ಡ ಸುಂಟರಗಾಳಿ ಇದಾಗಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಳೆದ ವಾರ ಮುಂಬೈನಲ್ಲೂ ಭಾರೀ ಗಾಳಿ ಸಹಿತ ಮಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಮಧ್ಯಾಹ್ನ 3 ಗಂಟೆ ಹೊತ್ತಿಗೇ ವಾತಾವರಣದಲ್ಲಿ ಉಂಟಾದ ದಿಢೀರ್ ಬದಲಾವಣೆ ಉಂಟಾಗಿತ್ತು. ದ್ವಿಚಕ್ರ ವಾಹನಗಳಲ್ಲಿ ಕುಳಿತು ಸಾಗುತ್ತಿದ್ದ ಜನರು ಭಾರೀ ಗಾಳಿ, ಮಳೆಯಿಂದಾಗಿ ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ರಕ್ಷಣೆಗಾಗಿ ಅಂಗಡಿ ಮುಂಗಟ್ಟುಗಳತ್ತ ಓಡಿದರು. ಮುಂಬೈ ನಗರದ ಘಾಟ್‌ಕೋಪರ್, ಬಾಂದ್ರಾ, ಕುರ್ಲಾ, ಧಾರಾವಿ ಪ್ರದೇಶಗಳಲ್ಲಿ ಭಾರೀ ಮಳೆ ಆಗಿದೆ. ಕ್ಷಣಾರ್ಧದಲ್ಲಿ ಸಂಚಾರದಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿತ್ತು.

ಇದನ್ನೂ ಓದಿ:bomb Hoax: ಶಾಲೆ, ದೇವಸ್ಥಾನದ ಬಳಿಕ ರಾಜಧಾನಿಯ ಪ್ರತಿಷ್ಠಿತ ಹೋಟೆಲ್‌ಗೂ ಬಾಂಬ್‌ ಬೆದರಿಕೆ

ಮುಂಬೈ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಲ್ಯಾಂಡಿಂಗ್ ಹಾಗೂ ಟೇಕಾಫ್‌ಗೆ ಭಾರೀ ಅಡ್ಡಿ ಉಂಟಾಗಿತ್ತು. ದೇಶದ ಅತ್ಯಂತ ಹೆಚ್ಚು ಚಟುವಟಿಕೆಯಿಂದ ಕೂಡಿರುವ ಈ ವಿಮಾನ ನಿಲ್ದಾಣದಲ್ಲಿ ವಿಮಾನಯಾನವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಯ್ತು. ಮುಂಬೈ ಮಹಾ ನಗರಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ವಿಮಾನಗಳ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿತ್ತು.

Exit mobile version