Site icon Vistara News

Viral Video: ಹೊಟೇಲ್‌ ಮಾಲೀಕನನ್ನು ಮುಖಾಮೂತಿ ನೋಡದೆ ಚಚ್ಚಿದ ಶಾಸಕ; ವಿಡಿಯೋ ಫುಲ್‌ ವೈರಲ್‌

Viral Video

ಕೋಲ್ಕತ್ತಾ: ಎರಡು ದಿನಗಳ ಹಿಂದೆ ಭದ್ರತಾ ಸಿಬ್ಬಂದಿ ನೂತನ ಸಂಸದೆ ಕಂಗನಾ ರಣಾವತ್‌(Kangana Ranaut)ಗೆ ಕಪಾಳಮೋಕ್ಷ ಮಾಡಿರುವ ಸುದ್ದಿ ಮಾಸುವ ಮುನ್ನವೇ ಶಾಸಕನೋರ್ವ ಇದೀಗ ಸುದ್ದಿಯಾಗಿದ್ದಾರೆ. ಪಶ್ಚಿಮ ಬಂಗಾಳ(West Bengal)ದ ತೃಣಮೂಲ ಕಾಂಗ್ರೆಸ್‌(TMC) ಶಾಸಕ ರೆಸ್ಟೋರೆಂಟ್‌ವೊಂದರ ಮಾಲಿಕರಿಗೆ ಕಪಾಳಮೋಕ್ಷ ಮಾಡುವ ಮೂಲಕ ದಾಂಧಲೆ ಎಬ್ಬಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌(Viral Video) ಆಗುತ್ತಿದೆ.

ವೈರಲ್‌ ವಿಡಿಯೋದಲ್ಲೇನಿದೆ?

ಕೋಲ್ಕತ್ತಾದಲ್ಲಿ ಈ ಘಟನೆ ನಡೆದಿದ್ದು, ನಟ, ಟಿಎಂಸಿ ಶಾಸಕ ಸೋಹಮ್‌ ಚಕ್ರವರ್ತಿ ರೆಸ್ಟೋರೆಂಟ್‌ ಮಾಲಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಕೋಲ್ಕತ್ತಾ ಡಿಲೈಟ್‌ ಎಂಬ ರೆಸ್ಟೋರೆಂಟ್‌ ಮಾಲೀಕ ಅನಿಸುರ್‌ ಆಲಂ ಮತ್ತು ಶಾಸಕ ಸೋಹಮ್‌ ನಡುವೆ ಪಾರ್ಕಿಂಗ್‌ ವಿಚಾರಕ್ಕೆ ಗಲಾಟೆ ನಡೆದಿತ್ತು. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತ್ತು. ಈ ವೇಳೆ ಆಲಂ ಟಿಎಂಸಿ ಪಕ್ಷ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂಬ ಕಾರಣಕ್ಕೆ ಸೋಹಮ್‌ ಆತನಿಗೆ ಕಪಾಳ ಮೋಕ್ಷ ಮಾಡಿ ಥಳಿಸಿದ್ದಾರೆ.

ನ್ಯೂಟೌನ್ ಪ್ರದೇಶದಲ್ಲಿರುವ ಈ ಕೋಲ್ಕತ್ತಾ ಡಿಲೈಟ್‌ ರೆಸ್ಟೋರೆಂಟ್‌ನ ಪಾರ್ಕಿಂಗ್‌ ಪ್ರದೇಶದಲ್ಲಿ ಶಾಸಕರ ಬೆಂಬಲಿಗನೊಬ್ಬ ತನ್ನ ವಾಹನ ನಿಲ್ಲಿಸಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಆಲಂ ಆ ವಅಹನವನ್ನು ತೆರವುಗೊಳಿಸುವಂತೆ ಹಾಗೂ ಅದು ತಮ್ಮ ಗ್ರಾಹಕರಿಗೆ ಮೀಸಲಿಟ್ಟಿರುವ ಪಾರ್ಕಿಂಗ್‌ ಜಾಗ ಎಂದು ಹೇಳಿದ್ದ. ಆಗ ಆತ ತಾನು ಶಾಸಕನ ಸ್ನೇಹಿತ ಎಂದು ಹೇಳಿದ್ದಾನೆ. ಅದಕ್ಕೆ ಆಲಂ ನೀನು ಯಾರಾದರೆ ನನಗೇನು? ಪ್ರಧಾನಿಯ ಸ್ನೇಹಿತನಾಗಿದ್ದರೂ ವಾಹನ ತೆರವುಗೊಳಿಸಲೇಬೇಕು ಎಂದು ಹೇಳಿದ್ದಾನೆ. ಆಗ ಸ್ಥಳಕ್ಕೆ ಬಂದ ಶಾಸಕ ಸೋಹಮ್‌ ಆಲಂ ಮುಖಾಮೂತಿ ನೋಡದೇ ಚಚ್ಚಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವಸೋಹಮ್‌, ರೆಸ್ಟೋರೆಂಟ್‌ ಮಾಲೀಕನ ಮೇಲೆ ಹಲ್ಲೆ ನಡೆಸಿರುವುದು ನಿಜ. ಕೆಳಗೆ ಮಾರಾಮಾರಿ ಸದ್ದು ಕೇಳಿ ಧಾವಿಸಿ ಬಂದೆ. ಮಾಲೀಕರು ನನ್ನ ಸಿಬ್ಬಂದಿಯನ್ನು ನಿಂದಿಸುತ್ತಿರುವುದನ್ನು ನಾನು ನೋಡಿದೆ. ಅವರು ನನ್ನನ್ನು ಮತ್ತು ಅಭಿಷೇಕ್ ಬ್ಯಾನರ್ಜಿಯನ್ನು ನಿಂದಿಸಿದ್ದಾರೆ. ನಾನು ನನ್ನ ತಾಳ್ಮೆ ಕಳೆದುಕೊಂಡೆ ಮತ್ತು ಅವನಿಗೆ ಕಪಾಳಮೋಕ್ಷ ಮಾಡಿದ್ದೇನೆ ಎಂದು ಹೇಳಿದರು.

ಇನ್ನು ಸೋಹಮ್‌ ಒಬ್ಬ ಸೋಶಿಯಲ್‌ ಮೀಡಿಯಾ ಇನ್‌ಫ್ಲೂವೆನ್ಶಿಯಲ್‌. ಅವರು ಶೂಟಿಂಗ್‌ಗಾಗಿ ಹೊಟೇಲ್‌ಗೆ ಬಂದಿದ್ದಾಗ ಈ ಘಟನೆ ನಡೆದಿದೆ. ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಹೆಚ್ಚುವರಿ ಕಾರುಗಳನ್ನು ತೆಗೆಯುವಂತೆ ಆಲಂ ಹೇಳಿದ ನಂತರ ಸೋಹಮ್ ನಮ್ಮ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಸೆಕ್ಯುರಿಟಿಯವರು ಕೂಡ ನಮ್ಮನ್ನು ಥಳಿಸಿದ್ದಾರೆ. ನಾವು ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ ಎಂದು ಹೊಟೇಲ್‌ ಮ್ಯನೇಜರ್‌ ಹೇಳಿದ್ದಾರೆ.

ಇದನ್ನೂ ಓದಿ: Narendra Modi: ಮೋದಿ ಪ್ರಮಾಣವಚನಕ್ಕೆ 7 ವಿದೇಶಿ ನಾಯಕರು; 8000 ಅತಿಥಿಗಳು

Exit mobile version