ಲಕ್ಷಾಂತರ ಯೂಟ್ಯೂಬ್ ಚಾನೆಲ್‌ಗಳಿದ್ದು (YouTube channels) ಇದರಲ್ಲಿ ಮಿಸ್ಟರ್ ಬೀಸ್ಟ್ (MrBeast) 267 ಮಿಲಿಯನ್ ಚಂದಾದಾರರನ್ನು (subscribers) ಹೊಂದಿದ್ದು, ಅತೀ ಹೆಚ್ಚು ಸಬ್ ಸ್ಕ್ರೈಬ್ ಆಗಿರುವ ಯುಟ್ಯೂಬ್ ಚಾನೆಲ್ ಎಂಬ ಖ್ಯಾತಿಯನ್ನು ಪಡೆದಿದೆ. ಟಿ-ಸಿರೀಸ್‌ಅನ್ನು (T-Series) ಕೆಳಗಿಳಿಸಿ ಮಿಸ್ಟರ್ ಬೀಸ್ಟ್ ಮೊದಲ ಸ್ಥಾನವನ್ನು ಪಡೆದಿದೆ.
ಯು ಟ್ಯೂಬ್‌ನಲ್ಲಿ ಟಿ-ಸಿರೀಸ್ 266 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಇದರ ಬಳಿಕ ಕೊಕೊಮೆಲನ್ – ನರ್ಸರಿ ರೈಮ್ಸ್ (Cocomelon – Nursery Rhymes) 176 ಮಿಲಿಯನ್, ಎಸ್ ಇಟಿ ಇಂಡಿಯಾ (SET India) 173 ಮಿಲಿಯನ್, ಕಿಡ್ಸ್ ಡಯಾನಾ ಶೋ (Kids Diana Show) 122 ಮಿಲಿಯನ್, ವ್ಲಾಡ್ ಮತ್ತು ನಿಕಿ (Vlad and Niki) 118 ಮಿಲಿಯನ್, ಲೈಕ್ ನಾಸ್ತ್ಯ (Like Nastya) 116 ಮಿಲಿಯನ್, ಪ್ಯೂಡಿಪಿ (Pewdiepie) 111 ಮಿಲಿಯನ್, ಝೀ ಸಂಗೀತ ಕಂಪೆನಿ (Zee Music Company) 107 ಮಿಲಿಯನ್ ಮತ್ತು WWE 102 ಮಿಲಿಯನ್ ಚಂದಾದಾರನ್ನು ಹೊಂದಿದೆ.
ಮಿಸ್ಟರ್ ಬೀಸ್ಟ್ ಭಾನುವಾರ ಟಿ-ಸರಣಿಯನ್ನು ಮೀರಿಸಿ ಅತಿ ಹೆಚ್ಚು ಚಂದಾದಾರರಾಗಿರುವ ಯೂಟ್ಯೂಬರ್ ಆಗಿ ಹೊರಹೊಮ್ಮಿದೆ. 26 ವರ್ಷದ ಮಿಸ್ಟರ್ ಬೀಸ್ಟ್ ಅವರ ನಿಜವಾದ ಹೆಸರು ಜೇಮ್ಸ್ ಸ್ಟೀಫನ್. ತಮ್ಮ ಸಾಧನೆಯನ್ನು ಕೊಂಡಾಡುತ್ತಾ ಮಿಸ್ಟರ್ ಬೀಸ್ಟ್ ಹೀಗೆ ಬರೆದಿದ್ದಾರೆ: ಆರು ವರ್ಷಗಳ ಅನಂತರ ನಾವು ಅಂತಿಮವಾಗಿ ಪ್ಯೂಡಿಪಿಯ (PewDiePie) ಮೇಲೆ ಸೇಡು ತೀರಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಮಿಸ್ಟರ್ ಬೀಸ್ಟ್ ಈ ವಾರದ ಆರಂಭದಲ್ಲೇ 2018ರ ಟಿ-ಸೀರೀಸ್‌ನೊಂದಿಗೆ ಚಂದಾದಾರರನ್ನು ಹೆಚ್ಚಿಸುವ ಪೈಪೋಟಿಗೆ ಇಳಿದಿತ್ತು. ಈ ಸಮಯದಲ್ಲಿ PewDiePie ಗೆ ಸಹಾಯ ಮಾಡುವ ಕುರಿತು ಅವರು ಹೇಳಿದ್ದರು. ಜಾನ್ ಯೂಶೈ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಮಿಸ್ಟರ್ ಬೀಸ್ಟ್ ಜೇಮ್ಸ್ ಸ್ಟೀಫನ್ ಅವರು, ಇದು ಅಮೆರಿಕ ಮತ್ತು ಭಾರತದ ವಿರುದ್ಧ ನಡೆದ ಯುದ್ಧ ಎಂದು ನಾನು ಭಾವಿಸುವುದಿಲ್ಲ. ಪ್ರಾರಂಭದಲ್ಲಿ ಇದು ಮೊದಲು ಸ್ವಲ್ಪ ಜನಾಂಗೀಯತೆ ರೂಪವನ್ನು ಪಡೆಯಿತು. ಅಲ್ಲದೇ ಇದು ಭಾರತ ವಿರುದ್ಧ ಅಮೆರಿಕ ಚರ್ಚೆಯಾಗಿ ಬದಲಾಗಬಹುದೆಂಬ ಭಯವಿತ್ತು ಎಂದರು.
ಇದನ್ನೂ ಓದಿ: YouTube New Feature: ನಿಮ್ಮಿಷ್ಟದ ಹಾಡು ಗುನುಗಿದ್ರೂ ಸಾಕು ಯುಟ್ಯೂಬ್ ಆ ಹಾಡನ್ನು ಹೆಕ್ಕಿ ತೆಗೆಯುತ್ತದೆ!
ಚಾನಲ್‌ಗೆ ಇನ್ನೂ ಹೆಚ್ಚು ಚಂದಾದಾರರಾಗಲು ಬಯಸುತ್ತಿದ್ದಾರೆ. ನನಗೆ ಸಹಾಯ ಮಾಡುವ ಬಹಳಷ್ಟು ಜನರಿದ್ದಾರೆ. ನಾನು ಇದರೊಂದಿಗೆ ಬದುಕುತ್ತೇನೆ ಮತ್ತು ಉಸಿರಾಡುತ್ತೇನೆ. ನಾನು ಇದರ ಸೃಷ್ಟಿಕರ್ತ ಎಂದು ಅವರು ಹೇಳಿದರು.
ಹೆಚ್ಚಿನ ಯೂಟ್ಯೂಬ್ ಚಾನೆಲ್ ಸೃಷ್ಟಿಕರ್ತರೇ ನನ್ನ ಚಾನೆಲ್‌ಗೆ ಹೆಚ್ಚು ಚಂದಾದಾರರಾಗಿರುವುದು ಸಂತೋಷವಾಗಿದೆ ಎಂದು ನಾನು ಭಾವಿಸುತ್ತೇನೆ. T-ಸಿರೀಸ್ ಅನ್ನು ನಾಕ್ ಮಾಡುತ್ತಿಲ್ಲ. ಯಾಕೆಂದರೆ ಅವರು ನನಗಿಂತ ಸಾವಿರ ಪಟ್ಟು ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದಾರೆ ಎಂದು ತಿಳಿಸಿದರು.