1.CWRC ಆದೇಶ ತಿರಸ್ಕಾರ; ತಮಿಳುನಾಡಿಗೆ ಕಾವೇರಿ ನೀರು ಬಿಡದಿರಲು ಸರ್ವಪಕ್ಷ ಸಭೆಯಲ್ಲಿ ನಿರ್ಧಾರ
ಇನ್ನೂ ಹದಿನೈದು ದಿನಗಳ ಕಾಲ ತಮಿಳುನಾಡಿಗೆ ಪ್ರತಿ ದಿನವೂ 5000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (Cauvery water regulation committee) ಆದೇಶವನ್ನು ಧಿಕ್ಕರಿಸಲು ರಾಜ್ಯ ನಿರ್ಧರಿಸಿದೆ. ಸಮಿತಿಯು ಮಂಗಳವಾರ ನೀಡಿದ ಅದೇಶದ ಬಗ್ಗೆ ಚರ್ಚೆಗಾಗಿ ಬುಧವಾರ ಕರೆದಿದ್ದ ಸರ್ವ ಪಕ್ಷ ಸಭೆ ನೀರು ಬಿಡಬಾರದು ಎಂಬ ಒಮ್ಮತದ ತೀರ್ಮಾನಕ್ಕೆ ಬಂದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
2. ಕರುನಾಡಿಗೆ ಎದುರಾಯ್ತು ಭೀಕರ ಬರಗಾಲ: 195 ಬರಪೀಡಿತ ತಾಲೂಕುಗಳ ಪಟ್ಟಿ ಸಿದ್ಧ
ರಾಜ್ಯದಲ್ಲಿ ಒಟ್ಟು 195 ತಾಲೂಕುಗಳು ಬರಪೀಡಿತವಾಗಿವೆ (195 Taluks Drought hit) ಎಂದು ಸಮೀಕ್ಷೆಯಿಂದ ಸ್ಪಷ್ಟವಾಗಿದೆ. ಈ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಬರ ಘೋಷಣೆ ಮಾಡುವಂತೆ ಶಿಫಾರಸು ಮಾಡುವುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಬೈಂದೂರು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ: ಸಿಕ್ಕಿಬಿತ್ತು ಚೈತ್ರಾ ಕುಂದಾಪುರ ಗ್ಯಾಂಗ್
ಹಿಂದು ಫೈರ್ ಬ್ರ್ಯಾಂಡ್ ನಾಯಕಿ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಯೊಬ್ಬರಿಗೆ ವಂಚಿಸಿದೆ. ಚೈತ್ರಾ ಕುಂದಾಪುರ ಮತ್ತು ಇತರ ಒಂಬತ್ತು ಮಂದಿ ತಂಡದಲ್ಲಿದ್ದು ಆರು ಮಂದಿಯನ್ನು ಬಂಧಿಸಲಾಗಿದೆ. ಇದೊಂದು ಅತ್ಯಂತ ಕುತೂಹಲಕಾರಿ ಘಟನೆಯಾಗಿದ್ದು, ಸಮಗ್ರ ವಿವರ ಮುಂದಿನ ವರದಿಗಳಲ್ಲಿವೆ.
1.ಇವಳೆಂಥಾ ವಂಚಕಿ! 5 ಕೋಟಿ ವಂಚಿಸಿದ್ದಷ್ಟೇ ಅಲ್ಲ, ಮರ್ಡರ್ ಕೂಡಾ ಮಾಡಿದ್ದಾಳೆ ಚೈತ್ರಾ ಕುಂದಾಪುರ!
2. ಆರೆಸ್ಸೆಸ್ ಪ್ರಚಾರಕನ ಪಾತ್ರ ಮಾಡಲು 10 ಲಕ್ಷ ಕೊಟ್ಟಿದ್ದ ಚೈತ್ರಾ! ಕಬಾಬ್ ಮಾರೋನು ಬಿಜೆಪಿ ಲೀಡರ್!
3. ಫೈರ್ ಬ್ರಾಂಡ್ ವಂಚಕಿ ಚೈತ್ರಾ ಕುಂದಾಪುರ ಟೀಮ್‌ಗೆ 10 ದಿನಗಳ ಸಿಸಿಬಿ ಕಸ್ಟಡಿ; ಮುಂದುವರಿದ ಹೈಡ್ರಾಮಾ
4. ಚೈತ್ರಾ ಕುಂದಾಪುರ; ಯಾರಿವಳು ಫೈರ್‌ಬ್ರಾಂಡ್ ಹುಡುಗಿ?, ಆಕೆ ಟಿವಿ ನಿರೂಪಕಿ, ಉಪನ್ಯಾಸಕಿ ಆಗಿದ್ದಳು!
4. 75 ಲಕ್ಷ ಮನೆಗಳಿಗೆ ಉಚಿತ ಎಲ್‌ಪಿಜಿ ಕನೆಕ್ಷನ್, 1650 ಕೋಟಿ ರೂ. ನೀಡಿದ ಕೇಂದ್ರ
ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಸುವ ಮೂಲಕ ದೇಶದ ಜನರ ಹೊರೆ ಕಡಿಮೆ ಮಾಡಿದ ಕೇಂದ್ರ ಸರ್ಕಾರ ಈಗ ಮತ್ತೊಂದು ಘೋಷಣೆ ಮಾಡಿದೆ. ದೇಶದ 75 ಲಕ್ಷ ಮನೆಗಳಿಗೆ ಉಜ್ವಲ ಯೋಜನೆ ಅಡಿಯಲ್ಲಿ (Ujjwala Scheme) ಉಚಿತವಾಗಿ ಅಡುಗೆ ಅನಿಲ ಸಂಪರ್ಕ ನೀಡಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. G20 Summit 2023: ಜಿ20 ಶೃಂಗಸಭೆ ಸಕ್ಸೆಸ್, ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ
ಜಿ 20 ಶೃಂಗಸಭೆಯುಯಶಸ್ವಿಯಾಗಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿಯಲ್ಲಿ ಬಿಜೆಪಿ ಕೇಂದ್ರ ಕಚೇರಿಗೆ ಸಂಜೆ ಆಗಮಿಸಿದರು. ಈ ವೇಳೆ, ಬಿಜೆಪಿ ಕಾರ್ಯಕರ್ತರು ಪುಷ್ಪವೃಷ್ಟಿ ಮಾಡುವ ಮೂಲಕ ಭವ್ಯ ಸ್ವಾಗತವನ್ನು ಕೋರಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಸಂಸತ್ ಸಿಬ್ಬಂದಿಗೆ “ಕಮಲʼ ಸಮವಸ್ತ್ರ; ನೆಹರುಗೇನು ನಂಟು? ವಿವಾದ ಏಕೆ?
ನೂತನ ಸಂಸತ್ ಭವನದಲ್ಲಿ ಸೆಪ್ಟೆಂಬರ್ 19ರಂದು ಮೊದಲ ಅಧಿವೇಶನ ನಡೆಯಲಿದೆ. ಅದ್ಧೂರಿಯಾಗಿ ನಿರ್ಮಿಸಿರುವ ಅಧಿವೇಶನಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ, ಸಂಸತ್ ಭವನದ ಸಿಬ್ಬಂದಿಗೆ ನೂತನ ಸಮವಸ್ತ್ರ (Parliament Dress Code) ನೀಡುತ್ತಿರುವ ಕುರಿತು ಈಗ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಸಮವಸ್ತ್ರ ವಿಷಯ ಈಗ ವಿವಾದಕ್ಕೆ ಕಾರಣವಾಗಿದೆ. ಹಾಗಾದರೆ ಏನಿದು ವಿವಾದ? ಪ್ರತಿಪಕ್ಷಗಳು ಏಕೆ ಆಕ್ರೋಶ ವ್ಯಕ್ತಪಡಿಸುತ್ತಿವೆ? ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಗಣೇಶ ಚತುರ್ಥಿ ಸೆ.18ಕ್ಕೋ 19ಕ್ಕೋ; ವಿದ್ವಾಂಸರು ಹೇಳೋದೇನು?
ಈ ಬಾರಿ ಗಣೇಶ ಚತುರ್ಥಿ ಸೆಪ್ಟೆಂಬರ್ 18ಕ್ಕೋ ಅಥವಾ ಸೆಪ್ಟೆಂಬರ್ 19ಕ್ಕೋ ಎಂಬ ಗೊಂದಲ ಇದೆ. ಆದರೆ, ಧಾರ್ಮಿಕವಾಗಿ ಚೌತಿ ಹಬ್ಬದ ನಿರ್ಣಯದ ಅನುಸಾರ ಸೆಪ್ಟೆಂಬರ್ 19ಕ್ಕೆ ಆಚರಣೆ ಸೂಕ್ತ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೇನು ಕಾರಣ ಎಂದೂ ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಫೈನಲ್‌ನಲ್ಲಿ ಭಾರತಕ್ಕೆ ಪಾಕ್ ಎದುರಾಳಿ? ಲಂಕಾ-ಪಾಕ್ ಪಂದ್ಯದ ಲೆಕ್ಕಾಚಾರ ಹೀಗಿದೆ
ಏಷ್ಯಾ ಕಪ್ ಟೂರ್ನಿಯ (Asia Cup 2023) ಸೂಪರ್ 4ರಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳನ್ನು ಸೋಲಿಸುವ ಮೂಲಕ ಭಾರತ ಫೈನಲ್‌ಗೇರಿದೆ. ಈಗಾಗಲೇ ಬಾಂಗ್ಲಾದೇಶ ತಂಡವು ಒಂದು ಪಂದ್ಯ ಬಾಕಿ ಇರುವಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಇದರ ಮಧ್ಯೆಯೇ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳಲ್ಲಿ ಯಾವ ತಂಡ ಫೈನಲ್‌ಗೆ ಬರಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಭಾರತವನ್ನು ನೋಡಿ ಕಲಿಯಬೇಕಿದೆ; ಮೇಕ್ ಇನ್ ಇಂಡಿಯಾ, ಮೋದಿಗೆ ಪುಟಿನ್ ಜೈಕಾರ
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಆತ್ಮೀಯ ಗೆಳೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿಹೊಗಳಿದ್ದಾರೆ. ಮೇಕ್ ಇನ್ ಇಂಡಿಯಾ ಅಭಿಯಾನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಇದನ್ನು ನೋಡಿ ನಾವು ಕಲಿಯಬೇಕು ಎಂದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಈ ವಾರ ಒಟಿಟಿಗೆ ಸೂಪರ್ ಹಿಟ್ ಸಿನಿಮಾಗಳ ಜತೆ ಪ್ಲಾಫ್ ಸಿನಿಮಾಗಳು ಎಂಟ್ರಿ
ಒಟಿಟಿಯಲ್ಲಿ ಹೊಸ ಹೊಸ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ರಿಲೀಸ್ ಆಗಲು ಸಜ್ಜಾಗಿದೆ. ಈ ವಾರ ಥಿಯೇಟರ್‌ನಲ್ಲಿ ಕನ್ನಡದ ‘ತತ್ಸಮ ತದ್ಭವ’ ಹಾಗೂ ತಮಿಳಿನ ‘ಮಾರ್ಕ್ ಆಂಟನಿ’ ಸಿನಿಮಾಗಳು ರಿಲೀಸ್ ಆಗುತ್ತಿವೆ. ಸದ್ಯ ಬಾಕ್ಸಾಫೀಸ್‌ನಲ್ಲಿ ‘ಜವಾನ್’, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗಳ ಆಟ ಮುಮದುವರಿದಿದೆ. ಈ ವಾರ ಸೂಪರ್ ಹಿಟ್ ಸಿನಿಮಾಗಳ ಜತೆಗೆ ಫ್ಲಾಪ್ ಸಿನಿಮಾಗಳು ಎಂಟ್ರಿ ಕೊಟ್ಟಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ