Site icon Vistara News

VISTARA TOP 10 NEWS: ಬಿಜೆಪಿ-ಜೆಡಿಎಸ್ ಮೈತ್ರಿ ಸೆಟ್ಟಾಯ್ತು, ಸೆ. 26ರವರೆಗೆ ನೀರು ಬಿಡೋದೂ ಫಿಕ್ಸಾಯ್ತು!

Vistara Top 10 News 22

1.ಬಿಜೆಪಿ-ಜೆಡಿಎಸ್‌ ಮೈತ್ರಿ ಘೋಷಣೆ; ಕಾಂಗ್ರೆಸ್‌ ಮಣಿಸಲು ಅಮಿತ್‌ ಶಾ-ಕುಮಾರಸ್ವಾಮಿ ಪಣ
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ದೃಷ್ಟಿಯಿಂದ ಕೊನೆಗೂ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಗೆ (BJP-JDS Alliance) ಅಧಿಕೃತ ಮುದ್ರೆ ಬಿದ್ದಿದೆ. ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರನ್ನು ಭೇಟಿಯಾದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಎರಡೂ ಪಕ್ಷಗಳ ಮೈತ್ರಿಗೆ ಅಧಿಕೃತ ಮುದ್ರೆ ಒತ್ತಿದರು. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಶಕೆ ಆರಂಭ!

2. ಸೆ.26ರವರೆಗೆ ಕಾವೇರಿ ನೀರು ಬಿಡುಗಡೆ ಫಿಕ್ಸ್‌; ಬಳಿಕ ಬಿಡುವುದಿಲ್ಲ ಎಂದು ಅಧಿವೇಶನ ಕರೆದು ನಿರ್ಣಯ?
ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಕಾವೇರಿ ಬಿಕ್ಕಟ್ಟು ಚರ್ಚೆಯಾಗಿದೆ. ಸುಪ್ರೀಂ ಕೋರ್ಟ್‌ ಸೂಚನೆಯಂತೆ ಸೆ. 26ರವರೆಗೆ ನೀರು ಬಿಡುಗಡೆ ಮಾಡುವುದು, ಮುಂದೆ ಮತ್ತೊಮ್ಮೆ ಆದೇಶ ನೀಡದಂತೆ ಅಧಿವೇಶನ ಕರೆದು ನೀರು ಬಿಡುವುದಿಲ್ಲ ಎಂಬ ನಿರ್ಣಯ ತೆಗೆದುಕೊಳ್ಳುವುದೆಂದು ಚರ್ಚೆ ನಡೆದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ಕಾವೇರಿ ಹೋರಾಟಕ್ಕೆ ಧುಮುಕಿದ ಚುಂಚಶ್ರೀ, ರೈತ ಪರ ನಿರ್ಧಾರ ತೆಗೆದುಕೊಳ್ಳಲು ಹಕ್ಕೊತ್ತಾಯ

3. ಏಷ್ಯನ್‌ ಗೇಮ್ಸ್‌ಗೆ ಅರುಣಾಚಲದ ಅಥ್ಲಿಟ್‌ಗೆ ಚೀನಾ ಪ್ರವೇಶ ನಿರಾಕರಣೆ: ಏನಿದು ಹೊಸ ವಿವಾದ?
ಚೀನಾದ ಆತಿಥ್ಯದಲ್ಲಿ ನಡೆಯುವ ಏಷ್ಯನ್​ ಗೇಮ್ಸ್​ನಲ್ಲಿ (Asian Games 2023) ಗಡಿ ರಾಜಕೀಯ ಮುನ್ನೆಲೆಗೆ ಬಂದಿದೆ. ಅರುಣಾಚಲ ಪ್ರದೇಶದ ಮೂವರು ವುಶ್​ ಸ್ಪರ್ಧಿಗಳಿಗೆ ಚೀನಾದ ಅಧಿಕಾರಿಗಳು ಪ್ರವೇಶ ನಿರಾಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಏನಿದು ವಿವಾದ? ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ಸ್ತ್ರೀ ಸಬಲೀಕರಣಕ್ಕೆ ಮಹಿಳಾ ಮೀಸಲಾತಿ ಶಕ್ತಿ, ಇದು ಐತಿಹಾಸಿಕ; ಮೋದಿ ಸಂತಸ
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಕಲ್ಪಿಸುವ ವಿಧೇಯಕಕ್ಕೆ ಅಂಗೀಕಾರ ದೊರೆತ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲಾಗಿದೆ. ಆಗ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸಂತಸ ಹಂಚಿಕೊಂಡರು. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಸನಾತನ ಧರ್ಮ; ಉದಯನಿಧಿ ಸ್ಟಾಲಿನ್‌ಗೆ ಸುಪ್ರೀಂ ನೋಟಿಸ್‌, ಎದುರಾಯ್ತು ಸಂಕಷ್ಟ
“ಸನಾತನ ಧರ್ಮವು ಕೊರೊನಾ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕು” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಹಾಗೂ ತಮಿಳುನಾಡು ಸರ್ಕಾರ ಸೇರಿ 16 ಜನರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಬಿಎಸ್‌ಪಿ ಸಂಸದ ಡ್ಯಾನಿಷ್‌ ಅಲಿ ಉಗ್ರ ಎಂದು ಜರಿದ ಬಿಜೆಪಿ ಎಂಪಿ, ಕ್ರಮಕ್ಕೆ ಪ್ರತಿಪಕ್ಷಗಳ ಆಗ್ರಹ
ಬಿಎಸ್‌ಪಿಯ ಸಂಸದ ಡ್ಯಾನಿಶ್ ಅಲಿ (BSP MP Danish Ali) ಅವರಿಗೆ ಭಾರತೀಯ ಜನತಾ ಪಾರ್ಟಿಯ ಸಂಸದ ರಮೇಶ್ ಬಿಧುರಿ (BJP MP Ramesh Bidhuri) ಅವರು ಸಂಸತ್ತಿನಲ್ಲಿ ‘ಉಗ್ರ’ (Terrorist) ಎಂದು ಕರೆದಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಮೊದಲ ಏಕದಿನ ಶುಭಾರಂಭ: ಆಸ್ಟ್ರೇಲಿಯಾಕ್ಕೆ ಸೋಲುಣಿಸಿ ನಂ. 1 ಪಟ್ಟಕ್ಕೇರಿದ ಭಾರತ
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್​ಗಳ ಸುಲಭ ಗೆಲುವು ಸಾಧಿಸಿದೆ. ಬೌಲಿಂಗ್‌ನಲ್ಲಿ ಮೊಹಮ್ಮದ್‌ ಶಮಿ, ಬ್ಯಾಟಿಂಗ್‌ನಲ್ಲಿ ಶುಭಮನ್‌ ಗಿಲ್‌, ಕೆ.ಎಲ್‌ ರಾಹುಲ್‌, ಋತುರಾಜ್‌ ಗಾಯಕ್ವಾಡ್‌, ಸೂರ್ಯಕುಮಾರ್‌ ಯಾದವ್‌ ಸಖತ್ತಾಗಿ ಮಿಂಚಿದರು. ಈ ಗೆಲುವಿನಿಂದ ಭಾರತ ಏಕದಿನ ಕ್ರಿಕೆಟ್‌ನಲ್ಲೂ ನಂಬರ್‌ ಒನ್‌ ಸ್ಥಾನಕ್ಕೆ ಬಂತು. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ಏಕದಿನ ವಿಶ್ವಕಪ್‌ ಬಹುಮಾನ ಎಷ್ಟು ಗೊತ್ತೆ? ಇಲ್ಲಿದೆ ಎಲ್ಲ ವಿವರ

8 ಯೋಗಿ ರಾಜ್ಯದಲ್ಲಿ ಎನ್‌ಕೌಂಟರ್‌ಗೆ ಮತ್ತೊಬ್ಬ ಪಾತಕಿ ಬಲಿ, ದುಷ್ಕರ್ಮಿಗಳಿಗೆ ನಡುಕ
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ (Yogi Adityanath) ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕ್ರಿಮಿನಲ್‌ಗಳ ಎನ್‌ಕೌಂಟರ್‌ ಜಾಸ್ತಿಯಾಗಿವೆ. ಇದೀಗ ಮಹಿಳಾ ಪೊಲೀಸ್‌ ಪೇದೆಯೊಬ್ಬರ ಹತ್ಯೆಯ ಪ್ರಮುಖ ಆರೋಪಿಯಾದ ಅನೀಶ್‌ ಖಾನ್‌ ಎಂಬುವನನ್ನು ಎನ್‌ಕೌಂಟರ್‌ ಮಾಡಲಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಮುಂದಿನ ಆಸ್ಕರ್‌ ರೇಸ್‌ನಲ್ಲಿ ಯಾವೆಲ್ಲ ಚಿತ್ರಗಳು ಇರಲಿವೆ?
2024ರ ಆಸ್ಕರ್‌ (Oscars 2024) ರೇಸ್‌ನಲ್ಲಿ ಯಾವೆಲ್ಲ ಭಾರತೀಯ ಸಿನಿಮಾಗಳು ಬರಬಹುದು ಎಂಬ ಚರ್ಚೆ ಶುರುವಾಗಿವೆ. ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ (Rocky Aur Rani Kii Prem Kahaani), ʻಜ್ವಿಗಾಟೊʼ (Zwigato), ʻದಿ ಕೇರಳ ಸ್ಟೋರಿʼ ಹೆಸರು ಜೋರಾಗಿ ಕೇಳಿಬರುತ್ತಿದೆ ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ವ್ಯಾನ್‌ನಿಂದ ಜಿಗಿದು ಇಬ್ಬರು ಕೈದಿಗಳ ಪರಾರಿ, ಕತ್ತೆ ಕಾಯುತ್ತಿದ್ದ ಪೊಲೀಸರು!
ಉತ್ತರ ಪ್ರದೇಶದಲ್ಲಿ ಮೂವರು ಆರೋಪಿಗಳು ಪೊಲೀಸ್‌ ವ್ಯಾನ್‌ನಿಂದ ತಪ್ಪಿಸಿಕೊಂಡು ಓಡಿಹೋದ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ. ಹಾಗೆಯೇ, ಉತ್ತರ ಪ್ರದೇಶ ಪೊಲೀಸರ ಕಾರ್ಯವೈಖರಿ ಕುರಿತು ಜನರಿಂದ ಅಸಮಾಧಾನ ವ್ಯಕ್ತವಾಗಿದೆ. ಅವರೇನು ಕತ್ತೆ ಕಾಯ್ತಿದ್ರಾ ಎಂದು ಜನ ಕೇಳ್ತಿದಾರೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version