Narendra Modi: ಸ್ತ್ರೀ ಸಬಲೀಕರಣಕ್ಕೆ ಮಹಿಳಾ ಮೀಸಲಾತಿ ಶಕ್ತಿ, ಇದು ಐತಿಹಾಸಿಕ; ಮೋದಿ ಸಂತಸ Vistara News

ದೇಶ

Narendra Modi: ಸ್ತ್ರೀ ಸಬಲೀಕರಣಕ್ಕೆ ಮಹಿಳಾ ಮೀಸಲಾತಿ ಶಕ್ತಿ, ಇದು ಐತಿಹಾಸಿಕ; ಮೋದಿ ಸಂತಸ

Narendra Modi: ನವದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆ ವೇಳೆ ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿ ವಿಧೇಯಕಕ್ಕೆ ಅಂಗೀಕಾರ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

VISTARANEWS.COM


on

Narendra Modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಲೋಕಸಭೆ (Lok Sabha) ಮತ್ತು ರಾಜ್ಯ ವಿಧಾನಸಭೆಗಳಲ್ಲಿ (State Assembly) ಮಹಿಳೆಯರಿಗೆ ಶೇ.33ರಷ್ಟು ಮೀಸಲು ಕಲ್ಪಿಸುವ ವಿಧೇಯಕಕ್ಕೆ (Women’s Reservation Bill) ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಧೇಯಕಕ್ಕೆ ಅಂಗೀಕಾರ ದೊರೆತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ, “ದೇಶದ ಮಹಿಳಾ ಸಬಲೀಕರಣದ ದಿಸೆಯಲ್ಲಿ ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ” ಎಂದು ಹೇಳಿದ್ದಾರೆ.

“ನಾರಿಶಕ್ತಿ ವಂದನ್‌ ಅಧಿನಿಯಮ ವಿಧೇಯಕಕ್ಕೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿರುವುದು ಐತಿಹಾಸಿಕವಾಗಿದೆ. ದಶಕಗಳಿಂದ ದೇಶದ ಹೆಣ್ಣುಮಕ್ಕಳಿಗೆ ನನಸಾಗಿಯೇ ಉಳಿದ ಮಹಿಳಾ ಮೀಸಲಾತಿ ಕನಸನ್ನು ಕೇಂದ್ರ ಸರ್ಕಾರ ನನಸು ಮಾಡುತ್ತಿದೆ. ಇದು ದೇಶದ ಏಳಿಗೆಯಲ್ಲಿ ಮಹಿಳೆಯರ ಸಹಭಾಗಿತ್ವ ಪ್ರಮಾಣವನ್ನು ಹೆಚ್ಚಿಸಲಿದೆ. ಕೇಂದ್ರ ಸರ್ಕಾರವು ದೇಶದ ಮಹಿಳೆಯರ ಕುಟುಂಬದ ಸದಸ್ಯನಂತೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುತ್ತಿರುವುದೇ ಸಾಕ್ಷಿಯಾಗಿದೆ. ಇದು ಪೀಳಿಗೆಗಳವರೆಗೆ ಸ್ತ್ರೀ ಸಬಲೀಕರಣಕ್ಕೆ ನೆರವಾಗಲಿದೆ” ಎಂದು ತಿಳಿಸಿದರು.

ಪೂರ್ಣ ಬಹುಮತದ ಸರ್ಕಾರದ ಕೊಡುಗೆ

“ಕಳೆದ 30 ವರ್ಷಗಳಿಂದಲೂ ಮಹಿಳಾ ಮೀಸಲಾತಿ ಬಗ್ಗೆ ಚರ್ಚಿಸಲಾಗುತ್ತಿತ್ತು. ಆದರೆ, ಯಾರೂ ಮಹಿಳಾ ಮೀಸಲಾತಿ ನೀಡಲು ಸಾಧ್ಯವಾಗಿರಲಿಲ್ಲ. ಆದರೆ, ದೇಶದ ಜನರು ಪೂರ್ಣ ಬಹುಮತದ ಸರ್ಕಾರ ಅಸ್ತಿತ್ವಕ್ಕೆ ತಂದ ಕಾರಣ, ನಮಗೆ ಬಹುಮತ ನೀಡಿದ ಕಾರಣ ದೇಶದ ಮಹಿಳೆಯರಿಗೆ ಇಂದು ಮೀಸಲಾತಿ ನೀಡಲು ಸಾಧ್ಯವಾಗುತ್ತಿದೆ. ಇದೆಲ್ಲ ಸ್ಥಿರ, ಬಹುಮತದ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದೇ ಸಾಕ್ಷಿಯಾಗಿದೆ” ಎಂದು ಹೇಳಿದರು.

ನರೇಂದ್ರ ಮೋದಿ ಅವರು ಭಾಷಣದ ವೇಳೆ ಕಳೆದ ಒಂಬತ್ತು ವರ್ಷದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೆ ತಂದ ಯೋಜನೆಗಳ ಕುರಿತು ಮಾತನಾಡಿದರು. “ದೇಶದ ಕೋಟ್ಯಂತರ ಮನೆಗಳಲ್ಲಿ ಶೌಚಾಲಯ ನಿರ್ಮಿಸುವ ಮೂಲಕ ಹೆಣ್ಣುಮಕ್ಕಳ ಗೌರವ ಕಾಪಾಡಲಾಗಿದೆ. ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್‌ ಸಂಪರ್ಕ, ಸುಕನ್ಯಾ ಸಮೃದ್ಧಿ ಯೋಜನೆಗಳ ಮೂಲಕ ಹೆಣ್ಣುಮಕ್ಕಳ ಏಳಿಗೆಗೆ ಶ್ರಮಿಸಲಾಗಿದೆ. ಅಷ್ಟೇ ಏಕೆ, ತ್ರಿವಳಿ ತಲಾಖ್‌ ರದ್ದುಗೊಳಿಸುವ ಮೂಲಕ ದೇಶದ ಮುಸ್ಲಿಂ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಲಾಗಿದೆ” ಎಂದರು.

ಇದನ್ನೂ ಓದಿ: Women’ Reservation bill : ಮಹಿಳಾ ಮೀಸಲಾತಿಗೆ ಸಿದ್ದರಾಮಯ್ಯ ಸ್ವಾಗತ, ಈಗ ಯೋಗಿ ಆದಿತ್ಯನಾಥ್‌ ಏನಂತಾರೆ?

ನರೇಂದ್ರ ಮೋದಿ ಅವರು ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸುತ್ತಲೇ ಬಿಜೆಪಿ ಕಾರ್ಯಕರ್ತೆಯರು, ನಾಯಕಿಯರು ಹೂಮಳೆ ಸುರಿಸಿ ಗೌರವ ಸಲ್ಲಿಸಿದರು. ಹಾಗೆಯೇ, ಭಾರತ್‌ ಮಾತಾ ಕೀ ಜೈ, ಮೋದಿ ಮೋದಿ ಎಂಬ ಘೋಷಣೆಗಳನ್ನೂ ಕೂಗಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Mizoram Election Result: ಇಂದು ಮಿಜೋರಾಂ ಎಲೆಕ್ಷನ್ ರಿಸಲ್ಟ್; ಮತ ಎಣಿಕೆ ಒಂದು ದಿನ ಮುಂದೂಡಿದ್ದೇಕೆ?

Mizoram Election Result: 40 ಸದಸ್ಯ ಬಲ ಮಿಜೋರಾಂ ವಿಧಾನಸಭೆಗೆ ನವೆಂಬರ್ 7ರಂದು ಮತದಾನ ನಡೆದಿದ್ದು, ಸೋಮವಾರ ರಿಸಲ್ಟ್ ಪ್ರಕಟವಾಗಲಿದೆ.

VISTARANEWS.COM


on

Mizoram Election Result will be announced on December 4, 2023
ಸಾಂದರ್ಭಿಕ ಚಿತ್ರ.
Koo

ನವೆಂಬರ್: ಈಶಾನ್ಯ ರಾಜ್ಯ ಮಿಜೋರಾಂ ವಿಧಾನಸಭೆ ಚುನಾವಣೆಯ ಫಲಿತಾಂಶ (Mizoram Election Result) ಡಿಸೆಂಬರ್ 4, ಸೋಮವಾರ ಪ್ರಕಟವಾಗಲಿದೆ. 40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಗೆ ನವೆಂಬರ್ 7ರಂದು ಮತದಾನ ನಡೆದಿತ್ತು. ವಾಸ್ತವದಲ್ಲಿ, ಛತ್ತೀಸ್‌ಗಢ, ತೆಲಂಗಾಣ, ರಾಜಸ್ಥಾನ ಮತ್ತು ಮಧ್ಯ ಪ್ರದೇಶಗಳ ರಾಜ್ಯಗಳ ಮತ ಎಣಿಕೆಯಂದೇ (Election Result 2023) ಮಿಜೋರಾಂ ಚುನಾವಣೆ ರಿಸಲ್ಟ್ ಕೂಡ ಪ್ರಕಟವಾಗಬೇಕಿತ್ತು. ಕ್ರೈಸ್ತರೇ ಹೆಚ್ಚಿರುವ ಮಿಜೋರಾಂನಲ್ಲಿ ಭಾನುವಾರ(ಡಿ.3) ಬದಲಿಗೆ ಸೋಮವಾರ ರಿಸಲ್ಟ್ ಪ್ರಕಟಿಸುವಂತೆ ವ್ಯಾಪಕ ಮನವಿಗಳು ಬಂದ ಹಿನ್ನೆಲೆಯಲ್ಲಿ, ಕೇಂದ್ರ ಚುನಾವಣಾ ಆಯೋಗವು (Election Commission) ಮತ ಎಣಿಕೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಿತ್ತು(Assembly Election 2023).

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಮಿಜೋರಾಂನಲ್ಲಿ ಮತ ಎಣಿಕೆಯ ದಿನದ ಬದಲಾವಣೆಗಾಗಿ ವಿವಿಧ ವಲಯಗಳಿಂದ ಸಾವಿರಾರು ವಿನಂತಿಗಳನ್ನು ಆಯೋಗವು ಸ್ವೀಕರಿಸಿತ್ತು. ಈ ಹಿನ್ನೆಲೆಯಲ್ಲಿ ಮತ ಎಣಿಕೆ ಕಾರ್ಯವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿತ್ತು. ಕ್ರೈಸ್ತರೇ ಹೆಚ್ಚಿರುವ ಮಿಜೋರಾಮ್‌ನಲ್ಲಿ ಭಾನುವಾರ ಅವರಿಗೆ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದ ದಿನವಾಗಿದೆ. ಮತ ಎಣಿಕೆಯು ಭಾನುವಾರಕ್ಕೆ ಘೋಷಣೆಯಾದ್ದರಿಂದ ಮುಂದೂಡುವಂತೆ ಮಿಜೋರಾಮ್ ಜನರು ಮನವಿ ಮಾಡಿಕೊಂಡಿದ್ದರು. ಜನರ ಮನವಿಗಳನ್ನು ಪರಿಗಣಿಸಿದ ಆಯೋಗವು ಮಿಜೋರಾಂನ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಯ ಎಣಿಕೆಯ ದಿನಾಂಕವನ್ನು ಡಿಸೆಂಬರ್ 3ರಿಂದ ಡಿ. 4ಕ್ಕೆ ಪರಿಷ್ಕರಿಸಲು ನಿರ್ಧರಿಸಿದೆ ಕೇಂದ್ರ ಚುನಾವಣಾ ಆಯೋಗವು ತನ್ನ ಹೇಳಿಕೆಯಲ್ಲಿ ತಿಳಿಸಿತ್ತು. ಮಿಜೋರಾಂ ವಿಧಾನಸಭೆಗೆ ನವೆಂಬರ್ 7ರಂದು ಮತದಾನ ನಡೆದಿತ್ತು.

ಇನ್ನುಳಿದಂತೆ, ಈ ಹಿಂದೆ ಘೋಷಣೆ ಮಾಡಿದಂತೆಯೇ ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯ ವಿಧಾಸಭೆ ಚುನಾವಣೆಯ ಮತ ಎಣಿಕೆ ಕಾರ್ಯವು ಡಿಸೆಂಬರ್ 4, ಭಾನುವಾರವೇ ನಡೆದಿದೆ. ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್‌ಗಢ ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೇರಿದೆ.

Mizoram Exit Poll: ಎಂಎನ್‌ಎಫ್‌ ಕಡೆಗೆ ಒಲವು, ಆದರೂ ಅತಂತ್ರ ವಿಧಾನಸಭೆ ನಿರೀಕ್ಷೆ

ಈಶಾನ್ಯ ರಾಜ್ಯ ಮಿಜೋರಾಮ್‌ನಲ್ಲಿ (Mizoram Exit Poll) ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF), ಪ್ರಮುಖ ವಿರೋಧ ಪಕ್ಷ ಝೋರಾಂ ಪೀಪಲ್ಸ್ ಮೂವ್ಮೆಂಟ್ (ZPM) ಮತ್ತು ಕಾಂಗ್ರೆಸ್ (Congress Party) ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಮತದಾರರು ಆಡಳಿತಾರೂಢ ಎಂಎನ್‌ಪಿ ಪರವಾಗಿ ತಮ್ಮ ಒಲವು ತೋರಿಸಿದ್ದಾರೆ ಎಂದು ಎಕ್ಸಿಟ್ ಪೋಲ್‌ಗಳು ಹೇಳುತ್ತಿವೆ. ಇಷ್ಟಾಗಿಯೂ ಕೆಲವು ಸಮೀಕ್ಷೆಗಳು ಅತಂತ್ರ ವಿಧಾನಸಭೆಯನ್ನು ಊಹಿಸಿವೆ. ಅಂತಿಮವಾಗಿ ಯಾರ ಪಾಲಿಗೆ ಜಯ ದಕ್ಕಲಿದೆ ಎಂಬುದು ಡಿಸೆಂಬರ್ 4ರಂದು ಗೊತ್ತಾಗಲಿದೆ(Exit Polls Result 2023).

40 ಸದಸ್ಯರ ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ಮತದಾನ ಶಾಂತಿಯುತವಾಗಿ ನಡೆದಿತ್ತು. ಶೇಕಡಾ 80 ಕ್ಕೂ ಹೆಚ್ಚು ಮತದಾನ ದಾಖಲಾಗಿದೆ. ಈ ಬಾರಿ ಮಿಜೋರಾಂನಲ್ಲಿ ಶೇ.81.25ರಷ್ಟು ಮಹಿಳಾ ಮತದಾರರು ಹಾಗೂ ಶೇ.80.04ರಷ್ಟು ಪುರುಷ ಮತದಾರರು ಮತ ಚಲಾಯಿಸಿದ್ದಾರೆ. ರಾಜ್ಯದ ಒಟ್ಟು 8.52 ಲಕ್ಷ ಮತದಾರರಲ್ಲಿ ಶೇಕಡಾ 174 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸಲು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ರಾಜ್ಯದ ಎಲ್ಲಾ 11 ಜಿಲ್ಲೆಗಳ ಪೈಕಿ, ಸೆರ್ಚಿಪ್ ಜಿಲ್ಲೆಯಲ್ಲಿ ಅತಿ ಹೆಚ್ಚು 84.78% ಮತದಾನ ದಾಖಲಾಗಿದ್ದು, ಮಾಮಿತ್ ಜಿಲ್ಲೆಯಲ್ಲಿ 84.65%, ಹನ್ಹಥಿಯಾಲ್ ಜಿಲ್ಲೆಯಲ್ಲಿ 84.19% ಮತ್ತು ಲುಂಗ್ಲೈ ಜಿಲ್ಲೆಯಲ್ಲಿ 83.68% ಮತದಾನವಾಗಿದೆ.

18 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿದ್ದರು. ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್), ಪ್ರಮುಖ ವಿರೋಧ ಪಕ್ಷ ಝೋರಾಂ ಪೀಪಲ್ಸ್ ಮೂವ್ಮೆಂಟ್ (ಝಡ್ಪಿಎಂ) ಮತ್ತು ಕಾಂಗ್ರೆಸ್ ತಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಇದಕ್ಕೆ ಹೋಲಿಸಿದರೆ, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಕ್ರಮವಾಗಿ 23 ಮತ್ತು 4 ಸ್ಥಾನಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿವೆ. 2018 ರ ನವೆಂಬರ್​ನಲ್ಲಿ ನಡೆದ ಕೊನೆಯ ವಿಧಾನಸಭಾ ಚುನಾವಣೆಯಲ್ಲಿ ಎಂಎನ್ಎಫ್ 26 ಸ್ಥಾನಗಳನ್ನು, ಜಡ್​ಪಿಎಂ 8 ಸ್ಥಾನಗಳನ್ನು, ಕಾಂಗ್ರೆಸ್ 5 ಮತ್ತು ಬಿಜೆಪಿ 1 ಸ್ಥಾನಗಳನ್ನು ಗೆದ್ದಿದೆ. 40 ಸದಸ್ಯರ ಮಿಜೋರಾಂ ವಿಧಾನಸಭೆಯ ಫಲಿತಾಂಶಗಳನ್ನು ಡಿಸೆಂಬರ್ 3 ರಂದು ಪ್ರಕಟವಾಗಲಿದೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Continue Reading

ದೇಶ

ತೆಲಂಗಾಣ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಿದ ಕಾಂಗ್ರೆಸ್

Telangana Result 2023: ತೆಲಂಗಾಣದ 119 ಕ್ಷೇತ್ರಗಳಲ್ಲಿ ಕಾಂಗ್ರೆಸ್ 65 ಮತ್ತು ಬಿಆರ್‌ಎಸ್ 39 ಸ್ಥಾನಗಳಲ್ಲಿ ಗೆಲವು ಸಾಧಿಸಿವೆ.

VISTARANEWS.COM


on

Congress delegation met Telangana Governor and stake claim to form govt
Koo

ಹೈದ್ರಾಬಾದ್: ನಿರೀಕ್ಷೆಯಂತೆ ತೆಲಂಗಾಣದಲ್ಲಿ ಭರ್ಜರಿಯ ಜಯ ಸಾಧಿಸಿರುವ (Telangana Result 2023) ಕಾಂಗ್ರೆಸ್ ಪಕ್ಷವು(Congress Party), ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಕೆ ಚಂದ್ರಶೇಖರ ರಾವ್ (KCR) ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ನಿಯೋಗ (Revanth Reddy-led Congress delegation) ಭಾನುವಾರ ರಾಜ್ಯಪಾಲ ತಮಿಳಿಸಾಯಿ ಸೌಂದರರಾಜನ್(Governor Tamilisai Soundararajan) ಅವರನ್ನು ಭೇಟಿ ಮಾಡಿ, ಸರ್ಕಾರ ರಚಿಸಲು ಹಕ್ಕು ಮಂಡಿಸಿತು. ಕೆಸಿಆರ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ರಾಜ್ಯಪಾಲರು, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗುವವರೆಗೆ ಅಧಿಕಾರದಲ್ಲಿ ಮುಂದುವರಿಯುವಂತೆ ಸೂಚಿಸಿದರು(Election Result 2023). ರೇವಂತ್ ರೆಡ್ಡಿ ನೇತೃತ್ವದ ನಿಯೋಗದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೂ ಇದ್ದರು.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

2014ರಲ್ಲಿ ರಚನೆಯಾದ ತೆಲಂಗಾಣ ಇದೇ ಮೊದಲ ಬಾರಿಗೆ ಬಿಆರ್‌ಎಸ್ ಹೊರತಾದ ಸರ್ಕಾರವನ್ನು ಕಾಣುತ್ತಿದೆ. ನವೆಂಬರ್ 30ರಂದು ತೆಲಂಗಾಣದಲ್ಲಿ ಚುನಾವಣೆ ನಡೆದಿದ್ದು, ಭಾನುವಾರ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. 119 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 65 ಸ್ಥಾನಗಳನ್ನು ಗೆದ್ದರೆ, ಆಡಳಿತಾರೂಢ ಬಿಆರ್‌ಎಸ್ 39 ಸ್ಥಾನವನ್ನು ಗೆದ್ದು ಸೋಲೋಪ್ಪಿಕೊಂಡಿತು. ಇನ್ನು ಬಿಜೆಪಿ 8 ಮತ್ತು ಎಐಎಂಐಎ 7 ಸ್ಥಾನಗಳನ್ನು ಗೆದ್ದುಕೊಂಡಿವೆ.

ಡಿಸೆಂಬರ್ 4 ಅಥವಾ 9 ರಂದು ನೂತನ ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭದ್ರತಾ ವ್ಯವಸ್ಥೆ ಮಾಡುವಂತೆ ರೆಡ್ಡಿ ಸ್ಥಳೀಯ ಪೊಲೀಸರಿಗೆ ಸೂಚಿಸಿದ್ದಾರೆ. ಅವರು ಡಿಜಿಪಿ ಅಂಜನಿ ಕುಮಾರ್, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಎಡಿಜಿ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಸೈದ್ಧಾಂತಿಕ ಹೋರಾಟ ಮುಂದುವರಿಯಲಿದೆ ಎಂದ ರಾಹುಲ್; ಖರ್ಗೆ ಹೇಳಿದ್ದೇನು?

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶವು(Election Result 2023) ಕಾಂಗ್ರೆಸ್ ಪಕ್ಷದ (Congress Party) ಪಾಲಿಗೆ ಅಷ್ಟೇನೂ ಖುಷಿ ನೀಡಿಲ್ಲ. ತೆಲಂಗಾಣ (Telangana) ಹೊರತುಪಡಿಸಿದರೆ ರಾಜಸ್ಥಾನ(Rajasthan), ಛತ್ತೀಸ್‌ಗಢ (Chhattisgarh) ಮತ್ತು ಮಧ್ಯ ಪ್ರದೇಶದಲ್ಲಿ (Madhya Pradesh) ಸೋತಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ಸೋಲು ಒಪ್ಪಿಕೊಳ್ಳುವುದಾಗಿ ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು, ಸೈದ್ಧಾಂತಿಕ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಅಲ್ಲದೇ, ಕಾಂಗ್ರೆಸ್‌ ಅಧಿಕಾರ ನೀಡಿರುವ ತೆಲಂಗಾಣದ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಸೋಲು ತಾತ್ಕಾಲಿಕ ಎಂದು ಹೇಳಿದ್ದಾರೆ.

ನಾವು ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ಜನಾದೇಶವನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇವೆ. ಆದರೆ, ನಮ್ಮ ಸೈದ್ಧಾಂತಿಕ ಹೋರಾಟ ಮುಂದುವರಿಯಲಿದೆ. ತೆಲಂಗಾಣ ಜನತೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ತೆಲಂಗಾಣ ಪ್ರಜೆಗಳಿಗೆ ನೀಡಿರುವ ಭರವಸೆಯನ್ನು ನಾವು ಖಂಡಿತವಾಗಿಯೂ ಈಡೇರಿಸುತ್ತೇವೆ. ಅವರ ಶ್ರಮ ಮತ್ತು ಬೆಂಬಲಕ್ಕಾಗಿ ಎಲ್ಲಾ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ರಾಹುಲ್ ಗಾಂಧಿ ಅವರು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಕ್ಕೂ ಮೊದಲು ಮಧ್ಯ ಪ್ರದೇಶದ ಸೋಲಿನ ಕುರಿತು ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು, ನಾವು ಸೋಲನ್ನು ಸ್ವೀಕರಿಸುತ್ತೇವೆ. ಸೋಲಿಗೆ ಕಾರಣಗಳು ಏನು ಎಂದು ಕಂಡು ಹಿಡಿದು, ಕೊರತೆಗಳ ಬಗ್ಗೆ ವಿಶ್ಲೇಷಣೆ ಮಾಡುತ್ತೇವೆ ಎಂದು ಹೇಳಿದ್ದರು. ನಾವು ಲೋಪದೋಷಗಳನ್ನು ವಿಶ್ಲೇಷಿಸುತ್ತೇವೆ. ನಾವು ಪ್ರಸ್ತಾಪಿಸಿದ ವಿಷಯಗಳು ಮತದಾರರಿಗೆ ಏಕೆ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಕಾರಣಗಳನ್ನು ಹುಡುಕುತ್ತೇವೆ. ನಾವು ಗೆಲ್ಲುವ ಅಥವಾ ಸೋತ ಅಭ್ಯರ್ಥಿಗಳೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಅಲ್ಲದೇ, ಬಿಜೆಪಿಯ ಭಾರಿ ಗೆಲುವಿಗೆ ಅಭಿನಂದನೆ ಸಲ್ಲಿಸಿದರು.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Continue Reading

ಟಾಪ್ 10 ನ್ಯೂಸ್

VISTARA TOP 10 NEWS : ಬಿಜೆಪಿಗೆ 4ನೇ ಮೂರು ಬಹುಮತ, ಸೈದ್ಧಾಂತಿಕ ಹೋರಾಟ ನಿರಂತರ ಎಂದ ರಾಹುಲ್​ ಮತ್ತಿತರ ದಿನದ ಪ್ರಮುಖ ಸುದ್ದಿಗಳು

ದೇಶ, ವಿದೇಶಗಳ ಸುದ್ದಿಗಳು, ದಿನವಿಡೀ ನಡೆದ ಪ್ರಮುಖ ಬೆಳವಣಿಗೆಗಳ ಸುತ್ತುನೋಟವೇ Vistara Top10 News

VISTARANEWS.COM


on

Top 10 news
Koo

1. ಬಿಜೆಪಿಗೆ ನಾಲ್ಕನೇ ಮೂರು ಬಹುಮತ, ಕಾಂಗ್ರೆಸ್‌ಗೆ ಒಂದೇ ಗ್ಯಾರಂಟಿ!
ನವದೆಹಲಿ: 2024ರ ಲೋಕಸಭೆ ಚುನಾವಣೆಯ (Lok Sabha Election 2024) ಸೆಮಿಫೈನಲ್‌ ಎಂದೇ ವಿಶ್ಲೇಷಿಸಲಾಗಿದ್ದ ಪಂಚರಾಜ್ಯ ಚುನಾವಣೆಯಲ್ಲಿ (Assembly Elections 2023) ನಾಲ್ಕು ರಾಜ್ಯಗಳ ಫಲಿತಾಂಶ ಭಾನುವಾರ (ಡಿಸೆಂಬರ್‌ 3) ಹೊರಬಿದ್ದಿದ್ದು, ಭಾರತೀಯ ಜನತಾ ಪಕ್ಷ ಮೂರು ರಾಜ್ಯಗಳಲ್ಲಿ ನಿಚ್ಚಳ ಬಹುಮತದೊಂದಿಗೆ ಜಯಭೇರಿ ಬಾರಿಸಿದೆ. ಕಾಂಗ್ರೆಸ್‌ ಒಂದು ರಾಜ್ಯವನ್ನು ಗೆದ್ದುಕೊಂಡಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಗದ್ದುಗೆ ಏರಿದ್ದರೆ, ತೆಲಂಗಾಣದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಿದೆ. ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಸೋಮವಾರ (ಡಿಸೆಂಬರ್‌ 4) ನಡೆಯಲಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ.
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಕುರಿತ ವಿಸ್ತೃತ ಸುದ್ದಿಗಳೀಗಾಗಿ ಕ್ಲಿಕ್‌ ಮಾಡಿ:

2. 3 ರಾಜ್ಯದ ಗೆಲುವು 2024ರ ಹ್ಯಾಟ್ರಿಕ್ ಜಯದ ಮುನ್ಸೂಚನೆ; ಮೋದಿ ಬಣ್ಣನೆ
ನವದೆಹಲಿ: ಹ್ಯಾಟ್ರಿಕ್ ರಾಜ್ಯಗಳ ಗೆಲವು, ಕೇಂದ್ರದಲ್ಲಿ 2024 ಬಿಜೆಪಿಯ (BJP Party) ಹ್ಯಾಟ್ರಿಕ್ ಗೆಲುವಿನ (hat-trick win)ಮುನ್ಸೂಚನೆಯಾಗಿದೆ. ಸಾಮಾನ್ಯವಾಗಿ ಚುನಾವಣಾ ಫಲಿತಾಂಶವನ್ನು ಊಹಿಸುವುದಿಲ್ಲ(Election Result 2023). ಆದರೆ, ಈ ಬಾರಿ ರಾಜಸ್ಥಾನದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಚುನಾವಣೆ ನಡೆಯುವುದಕ್ಕಿಂತಲೂ ಮುಂಚೆಯೇ ಊಹಿಸಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಹೇಳಿದರು. ಅಲ್ಲದೇ, ಜಾತಿಯಾಧರದ ಮೇಲೆ ದೇಶವನ್ನು ಒಡೆಯಲು ಮುಂದಾಗಿರುವವರಿಗೆ ಈ ಚುನಾವಣೆ ಫಲಿತಾಂಶವು ಪಾಠ ಕಲಿಸಿದೆ. ನಾನು ಯಾವಾಗಲೂ ಹೇಳುತ್ತೇನೆ. ದೇಶದಲ್ಲಿ ಇರೋದು ನಾಲ್ಕು ಜಾತಿಗಳು; ನಾರಿ(ಮಹಿಳೆ), ಯುವಾ(ಯುವ ಜನತೆ), ರೈತರು ಮತ್ತು ಬಡವರು ಎಂದು ಪ್ರಧಾನಿ ಮೋದಿ ಹೇಳಿದರು(Assembly Election 2023). ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ.

3. ನಮ್ಮ ಗ್ಯಾರಂಟಿ ಯಶಸ್ಸಿನಿಂದ ತೆಲಂಗಾಣದಲ್ಲಿ ಗೆಲುವು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವುಗಳು ಸ್ವಾಭಾವಿಕ. ಪ್ರತಿಯೊಂದು ಚುನಾವಣಾ ಫಲಿತಾಂಶದಲ್ಲಿ ರಾಜಕೀಯ ಪಕ್ಷಗಳು ಕಲಿಯುವ ಪಾಠ ಇರುತ್ತದೆ. ನಾವು ಸೋಲಿನಿಂದ ಕುಗ್ಗುವುದಿಲ್ಲ, ಗೆಲುವಿನಿಂದ ಹಿಗ್ಗುವುದಿಲ್ಲ. ಇನ್ನು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ (Assembly Elections 2023) ಕಾಂಗ್ರೆಸ್‌ ಗೆಲುವಿಗೆ ಕರ್ನಾಟಕದ ಗ್ಯಾರಂಟಿ ಯೋಜನೆಯ (Congress Guarantee Scheme) ಕೊಡುಗೆ ಬಹಳ ದೊಡ್ಡದಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ.
ಇದನ್ನೂ ಓದಿ : Assembly Elections 2023 : ರಾಜ್ಯದಿಂದ ಹೋದ ಹಣದ ಥೈಲಿಗಳು ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲಿಸಿವೆ: ಎಚ್‌ಡಿಕೆ

4. ಮೋದಿ ಎಂಬ ಗ್ಯಾರಂಟಿ ಎದುರು ಹೀನಾಯವಾಗಿ ಸೋತ ಕಾಂಗ್ರೆಸ್‌ ಗ್ಯಾರಂಟಿ
ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ (Assembly Elections 2023) ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮೂರೂ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ (BJP wins three states) ಬಹುಮತದೊಂದಿಗೆ ಜಯಭೇರಿ ಬಾರಿಸಿದೆ. ಈ ಪೈಕಿ ರಾಜಸ್ಥಾನ ಮತ್ತು ಛತ್ತೀಸ್‌ ಗಢದಲ್ಲಿ ಬಿಜೆಪಿ ಕಾಂಗ್ರೆಸ್‌ ಕೈಯಿಂದ ಅಧಿಕಾರವನ್ನು ಕಿತ್ತುಕೊಂಡಿದೆ. ಕಾಂಗ್ರೆಸ್‌ ಕರ್ನಾಟಕದಲ್ಲಿ ಮಾಡಿದ್ದ ಗ್ಯಾರಂಟಿ ಪ್ರಯೋಗವನ್ನು ಈ ರಾಜ್ಯಗಳಲ್ಲಿ ನಡೆಸುವ ಮೂಲಕ ದೊಡ್ಡ ಸದ್ದು ಮಾಡಿತ್ತು. ಆದರೆ, ಈ ಎಲ್ಲ ಗ್ಯಾರಂಟಿಗಳ ಆಮಿಷಗಳನ್ನು ಮೀರಿ ಹಿಂದಿ ಪ್ರಾಬಲ್ಯದ ಮೂರು ರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯವನ್ನು ಸಾಧಿಸಿದ್ದು ಹೇಗೆ ಎಂಬ ಪ್ರಶ್ನೆಗೆ ಅಲ್ಲಿನ ನಾಯಕರು ನೀಡುವುದು ಒಂದೇ ಉತ್ತರ: ಮೋದಿ ಕಿ ಗ್ಯಾರಂಟಿ (Modi ki guarantee). ಅಂದರೆ ಕಾಂಗ್ರೆಸ್‌ನ ಎಲ್ಲ ಗ್ಯಾರಂಟಿಗಳನ್ನು ಮೀರಿದ್ದು ನರೇಂದ್ರ ಮೋದಿ (PM Narendra Modi) ಎಂಬ ಗ್ಯಾರಂಟಿ ಎನ್ನುವುದು ಅವರ ನಿಲುವು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ.

5.ಸೈದ್ಧಾಂತಿಕ ಹೋರಾಟ ಮುಂದುವರಿಯಲಿದೆ ಎಂದ ರಾಹುಲ್; ಖರ್ಗೆ ಹೇಳಿದ್ದೇನು?
ನವದೆಹಲಿ: ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶವು(Election Result 2023) ಕಾಂಗ್ರೆಸ್ ಪಕ್ಷದ (Congress Party) ಪಾಲಿಗೆ ಅಷ್ಟೇನೂ ಖುಷಿ ನೀಡಿಲ್ಲ. ತೆಲಂಗಾಣ (Telangana) ಹೊರತುಪಡಿಸಿದರೆ ರಾಜಸ್ಥಾನ(Rajasthan), ಛತ್ತೀಸ್‌ಗಢ (Chhattisgarh) ಮತ್ತು ಮಧ್ಯ ಪ್ರದೇಶದಲ್ಲಿ (Madhya Pradesh) ಸೋತಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ಸೋಲು ಒಪ್ಪಿಕೊಳ್ಳುವುದಾಗಿ ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು, ಸೈದ್ಧಾಂತಿಕ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಅಲ್ಲದೇ, ಕಾಂಗ್ರೆಸ್‌ ಅಧಿಕಾರ ನೀಡಿರುವ ತೆಲಂಗಾಣದ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಸೋಲು ತಾತ್ಕಾಲಿಕ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ.

6. ಭಾರತ ತಂಡಕ್ಕೆ ಕೊನೇ ಪಂದ್ಯದಲ್ಲೂ ಜಯ, 4-1 ಅಂತರದಿಂದ ಸರಣಿ ಕೈವಶ
ಬೆಂಗಳೂರು: ಐದು ಪಂದ್ಯಗಳ ಟಿ20 ಸರಣಿಯ ಕೊನೇ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ (ind vs aus) ವಿರುದ್ಧ 6 ರನ್​ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯನ್ನು ಭಾರತ ತಂಡ 4-1 ಅಂತರದಿಂದ ಕೈವಶ ಮಾಡಿಕೊಂಡಿದೆ. ರಾಯ್ಪುರದಲ್ಲಿ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಭಾರತ ತಂಡ ಸರಣಿಯನ್ನು ಗೆದ್ದುಕೊಂಡಿತ್ತು. ಹೀಗಾಗಿ ಐದನೇ ಪಂದ್ಯಕ್ಕೆ ಹೆಚ್ಚಿನ ಮೌಲ್ಯ ಇರಲಿಲ್ಲ. ಆದಾಗ್ಯೂ ಭಾರತ ತಂಡ ಸರ್ವತೋಮುಖ ಪ್ರದರ್ಶನ ನೀಡುವ ಮೂಲಕ ವಿಜಯ ತನ್ನದಾಗಿಸಿಕೊಂಡಿತು. ವಿಶ್ವ ಕಪ್​ ಫೈನಲ್ ಸೋಲಿನ ಬಳಿಕ ಆಸ್ಟ್ರೇಲಿಯಾ ತಂಡದ ವಿರುದ್ಧವೇ ಸರಣಿ ಗೆಲ್ಲುವ ಮೂಲಕ ಭಾರತ ತಂಡ ಸಮಾಧಾನ ಮಾಡಿಕೊಂಡಿತು. ಇದೇ ವೇಳೆ ಒಟ್ಟು 136 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿರುವ ಏಕೈಕ ತಂಡ ಎಂಬ ಹೆಗ್ಗಳಿಕೆಯನ್ನೂ ಗಳಿಸಿತು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ.

7. ಚಿಕ್ಕಮಗಳೂರು ಪೊಲೀಸ್-ವಕೀಲರ ಸಂಘರ್ಷ; ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಪೊಲೀಸ್-ವಕೀಲರ ಸಂಘರ್ಷ ಪ್ರಕರಣವನ್ನು (Atrocity on Lawyer) ಸರ್ಕಾರವು ಸಿಐಡಿಗೆ ವರ್ಗಾವಣೆ ಮಾಡಿದೆ. ಚಿಕ್ಕಮಗಳೂರಿನ ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಿನ್ನೆ ಅಹೋರಾತ್ರಿ ಪೊಲೀಸರ ಹಾಗೂ ಕುಟುಂಬಸ್ಥರ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರಠಾಣೆಗೆ ಐಜಿಪಿ ಚಂದ್ರಗುಪ್ತ ಭೇಟಿ ನೀಡಿದರು. ನಿನ್ನೆಯ ಪ್ರತಿಭಟನೆಗೆ ಕಾರಣವಾದ ಲೋಪದೋಷಗಳ ಬಗ್ಗೆ, ಸಮಸ್ಯೆಗಳ ಕುರಿತು ಇಂಚಿಂಚೂ ಮಾಹಿತಿ ಪಡೆದರು. ಬಳಿಕ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಆಗಿರುವುದಾಗಿ ಸ್ಪಷ್ಟ ಪಡಿಸಿದರು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ.

8. ಅಧಿವೇಶನಕ್ಕೆ ಬೇಗ ಬಂದವರಿಗೆ ಟೀ ಕಪ್‌; ತಡವಾಗಿ ಬಂದವರಿಗೂ ಪ್ರಶಸ್ತಿ: ಯು.ಟಿ. ಖಾದರ್‌
ಬೆಂಗಳೂರು: ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ (Belagavi Assembly Session) ಈ ಬಾರಿ ಶಾಸಕರು, ಸಚಿವರ ಹಾಜರಾತಿಗಾಗಿ ಸ್ಪೀಕರ್‌ ಯು.ಟಿ. ಖಾದರ್‌ (Speaker UT Khader) ವಿಶೇಷ ಕಾರ್ಯಯೋಜನೆಯೊಂದನ್ನು ರೂಪಿಸಿದ್ದಾರೆ. ಪ್ರತಿ ದಿನ ಸದನಕ್ಕೆ ಬೇಗ ಬರುವ ಸದಸ್ಯರಿಗೆ ಬಹುಮಾನ ಕೊಡುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಅತಿ ಹೆಚ್ಚು ಗೈರು ಹಾಜರಾಗುವ ಸದಸ್ಯರಿಗೂ ಪ್ರಶಸ್ತಿ ನೀಡಲಾಗುತ್ತಿದೆ. ಮುಂದೆ ಅವರು ಗೈರಾಗದಂತೆ ಮಾಡಲು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಯು.ಟಿ. ಖಾದರ್‌ ತಿಳಿಸಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ.

9. ಸೈಕ್ಲೋನ್‌ ಎಫೆಕ್ಟ್‌; ನಾಳೆ ಮಳೆ ಜತೆಗೆ ಥಂಡಿ ಗಾಳಿ
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮಿಚುಂಗ್ ಚಂಡಮಾರುತದ ಪರಿಣಾಮದಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಮೋಡ ಕವಿದ ವಾತಾವರಣ (karnataka weather Forecast) ಇರಲಿದೆ. ಮುಂದಿನ 24 ಗಂಟೆಗಳಲ್ಲಿ ಮಿಚುಂಗ್ ಸೈಕ್ಲೋನ್ ತೀವ್ರಗೊಳ್ಳುವ ನಿರೀಕ್ಷೆ ಇದ್ದು ಮಳೆಯಾಗುವ (Rain News) ನಿರೀಕ್ಷೆ ಇದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ.

10. ಮೈಕಲ್‌ ಉಳಿಸಲು ಎಲಿಮಿನೇಶನ್‌ ಕ್ಯಾನ್ಸಲ್‌ ಮಾಡಿದ್ರಾ ಕಿಚ್ಚ?
ಬೆಂಗಳೂರು: ಈ ವಾರ ಒಟ್ಟು ಎಂಟು ಮಂದಿ (BBK SEASON 10) ನಾಮಿನೇಟ್ ಆಗಿದ್ದರು. ವರ್ತೂರು ಸಂತೋಷ್, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ಮೈಕಲ್ ಅಜಯ್, ವಿನಯ್ ಗೌಡ, ನಮ್ರತಾ ಗೌಡ, ತನಿಷಾ ಕುಪ್ಪಂಡ, ಸ್ನೇಹಿತ್ ಗೌಡ ನಾಮಿನೇಟ್ ಆಗಿದ್ದರು. ಮೊದಲೇ ವರ್ತೂರ್‌ ಸೇವ್‌ ಎಂದು ಗೊತ್ತಾದ ಕೂಡಲೇ ಸ್ನೇಹಿತ್‌ ಮನೆಯಿಂದ ಹೊರಗೆ ಹೋಗುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಆದರೆ ಈಗ ಮೂಲಗಳ ಪ್ರಕಾರ ಸುದೀಪ್‌ ಅವರು ಇದೇ ಮೊದಲ ಬಾರಿಗೆ ತಮ್ಮ ವಿಶೇಷ ಅಧಿಕಾರವನ್ನು ಬಳಸಿಕೊಂಡು ಮೈಕಲ್‌ ಅರನ್ನು ಬಚಾವ್‌ ಮಾಡಿದ್ದಾರೆ ಎನ್ನಲಾಗುತ್ತಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್​ ಮಾಡಿ.

Continue Reading

ದೇಶ

ರಾಜಸ್ಥಾನ, ಛತ್ತೀಸ್‌ಗಢ ಸೋಲಿನೊಂದಿಗೆ 3 ರಾಜ್ಯಗಳಿಗೆ ಸೀಮಿತವಾದ ಕಾಂಗ್ರೆಸ್!

Congress Party: ಭಾನುವಾರ ಪ್ರಕಟವಾದ ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ನಿರಾಶೆ ಅನುಭವಿಸಿದೆ. ಆಡಳಿತದಲ್ಲಿದ್ದ ಛತ್ತೀಸ್‍‌ಗಢ ಮತ್ತು ರಾಜಸ್ಥಾನದಲ್ಲಿ ಸೋಲು ಕಂಡಿದೆ.

VISTARANEWS.COM


on

with defeat of Rajasthan and Chhattisgarh Congress ruled states reduced to 3
Koo

ನವದೆಹಲಿ: ನಾಲ್ಕು ರಾಜ್ಯಗಳ ಚುನಾವಣೆಗ ಪೈಕಿ ಮೂರು ರಾಜ್ಯಗಳನ್ನು ಭರ್ಜರಿಯಾಗಿ ಗೆದ್ದಿರುವ ಭಾರತೀಯ ಜನತಾ ಪಾರ್ಟಿಯ (BJP Party) ಸ್ವಂತ ಬಲದೊಂದಿಗೆ ಆಡಳಿತ ನಡೆಸುತ್ತಿರುವ ರಾಜ್ಯಗಳ ಸಂಖ್ಯೆ ಈಗ 12ಕ್ಕೆ ಏರಿಕೆಯಾಗಿದೆ. ಅದೇ ವೇಳೆ, ಎರಡು ರಾಜ್ಯಗಳನ್ನು ಕಳೆದುಕೊಂದಿರುವ ಕಾಂಗ್ರೆಸ್ (Congress Party) ಆಡಳಿತ ರಾಜ್ಯಗಳ ಸಂಖ್ಯೆ ಮೂರಕ್ಕೆ ಕುಸಿದಿದೆ. ಭಾರತೀಯ ಜನತಾ ಪಾರ್ಟಿಯು ಮಧ್ಯ ಪ್ರದೇಶದಲ್ಲಿ ಆಡಳಿತವನ್ನು ಉಸಿಕೊಳ್ಳುವುದರ ಜತೆಗೆ, ಕಾಂಗ್ರೆಸ್ ಅಧಿಕಾರದಲ್ಲಿದ್ದ ರಾಜಸ್ಥಾನ (Rajasthan) ಮತ್ತು ಛತ್ತೀಸ್‌ಗಢವನ್ನು (Chhattisgarh) ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇನ್ನು ಎರಡು ರಾಜ್ಯಗಳನ್ನು ಕಳೆದುಕೊಂಡಿರುವ ಕಾಂಗ್ರೆಸ್ ದಕ್ಷಿಣ ಭಾರತದಲ್ಲಿ (South India) ಕರ್ನಾಟಕ ಮಾತ್ರವಲ್ಲದೇ ತೆಲಂಗಾಣದಲ್ಲಿ (Telangana) ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ(election result 2023).

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಬಿಜೆಪಿ ಸ್ವಂತ ಬಲದ ಮೇಲೆ ಸದ್ಯ ಉತ್ತರಾಖಂಡ, ಹರ್ಯಾಣ, ಉತ್ತರ ಪ್ರದೇಶ, ಗುಜರಾತ್, ಗೋವಾ, ಅಸ್ಸಾಮ್, ತ್ರಿಪುರಾ, ಮಣಿಪುರ, ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ. ಈ ಸಾಲಿಗೆ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳು ಸೇರ್ಪಡೆಯಾಗಿವೆ. ಅಲ್ಲದೆ, ಮಹಾರಾಷ್ಟ್ರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟದ ಸರ್ಕಾರಗಳಿವೆ.

ಛತ್ತೀಸ್‌ಗಢ ಮತ್ತು ರಾಜಸ್ಥಾನ ಸೋಲು ಕಂಡಿರುವ ಕಾಂಗ್ರೆಸ್ ಪಕ್ಷವು ಸ್ವಂತ ಬಲದ ಮೇಲೆ ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಾತ್ರವೇ ಅಧಿಕಾರವನ್ನು ಹೊಂದಿದೆ. ಅಲ್ಲದೇ, ಬಿಹಾರ, ಜಾರ್ಖಂಡ ರಾಜ್ಯಗಳಲ್ಲಿ ಕಾಂಗ್ರೆಸ್ ಮೈತ್ರಿ ಕೂಟದ ಭಾಗವಾಗಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಡಿಎಂಕೆಯೊಂದಿಗೆ ಮೈತ್ರಿ ಹೊಂದಿದ್ದರೂ ಸರ್ಕಾರದ ಭಾಗವಾಗಿಲ್ಲ.

ಉತ್ತರ ಭಾರತದಲ್ಲಿ ಆಪ್ ಪ್ರಮುಖ ಪ್ರತಿಪಕ್ಷ!

ಮಜಾ ಅಂದರೆ, ಉತ್ತರ ಭಾರತದಲ್ಲಿ ಆಮ್ ಆದ್ಮಿ ಪಾರ್ಟಿ ಈಗ ಪ್ರಮುಖ ಪ್ರತಿಪಕ್ಷದ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ದಿಲ್ಲಿ ಮತ್ತು ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಆಪ್, ಕಾಂಗ್ರೆಸ್‌ನಿಂದ ಪ್ರತಿಪಕ್ಷ ಸ್ಥಾನವನ್ನು ಕಸಿದುಕೊಂಡಿದೆ. ಇವತ್ತಿನ ಫಲಿತಾಂಶಗಳ ಬಳಿಕ, ದಿಲ್ಲಿ ಮತ್ತು ಪಂಜಾಬ್ ಎರಡು ಆಡಳಿತ ರಾಜ್ಯಗಳೊಂದಿಗೆ ಆಮ್ ಆದ್ಮಿ ಪಾರ್ಟಿ ಉತ್ತರ ಭಾರತದಲ್ಲಿ ಪ್ರಮುಖ ಪ್ರತಿ ಪಕ್ಷವಾಗಿ ಹೊರಹೊಮ್ಮಿದೆ ಎಂದು ಆಪ್‌ ನಾಯಕ ಜಾಸ್ಮಿನ್ ಶಾ ಅವರು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತದಲ್ಲಿ ಸದ್ಯ ಬಿಜೆಪಿ, ಕಾಂಗ್ರೆಸ್, ಬಹುಜನ ಸಮಾಜ ಪಾರ್ಟಿ(ಬಿಎಸ್ಪಿ), ಸಿಪಿಎಂ, ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ) ಆಮ್ ಆದ್ಮ ಪಾರ್ಟಿ(ಆಪ್)ಗಳು ರಾಷ್ಟ್ರೀಯ ಪಕ್ಷಗಳಾಗಿವೆ. 2024ರಲ್ಲಿ ಸಿಕ್ಕಿಮ್, ಅರುಣಾಚಲ ಪ್ರದೇಶ, ಒಡಿಶಾ, ಆಂಧ್ರ ಪ್ರದೇಶ ರಾಜ್ಯಗಳ ಚುನಾವಣೆಯು ನಡೆಯಲಿದೆ. ಈ ಚುನಾವಣೆಗಳ ಜತೆಗೆ ಲೋಕಸಭೆ ಚುನಾವಣೆ ಕೂಡ ನಡೆಯಲಿದೆ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Continue Reading
Advertisement
Mizoram Election Result will be announced on December 4, 2023
ದೇಶ4 hours ago

Mizoram Election Result: ಇಂದು ಮಿಜೋರಾಂ ಎಲೆಕ್ಷನ್ ರಿಸಲ್ಟ್; ಮತ ಎಣಿಕೆ ಒಂದು ದಿನ ಮುಂದೂಡಿದ್ದೇಕೆ?

Congress delegation met Telangana Governor and stake claim to form govt
ದೇಶ4 hours ago

ತೆಲಂಗಾಣ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಿದ ಕಾಂಗ್ರೆಸ್

Crime news
ಕರ್ನಾಟಕ5 hours ago

ಧಾರವಾಡದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

Top 10 news
ಟಾಪ್ 10 ನ್ಯೂಸ್5 hours ago

VISTARA TOP 10 NEWS : ಬಿಜೆಪಿಗೆ 4ನೇ ಮೂರು ಬಹುಮತ, ಸೈದ್ಧಾಂತಿಕ ಹೋರಾಟ ನಿರಂತರ ಎಂದ ರಾಹುಲ್​ ಮತ್ತಿತರ ದಿನದ ಪ್ರಮುಖ ಸುದ್ದಿಗಳು

with defeat of Rajasthan and Chhattisgarh Congress ruled states reduced to 3
ದೇಶ5 hours ago

ರಾಜಸ್ಥಾನ, ಛತ್ತೀಸ್‌ಗಢ ಸೋಲಿನೊಂದಿಗೆ 3 ರಾಜ್ಯಗಳಿಗೆ ಸೀಮಿತವಾದ ಕಾಂಗ್ರೆಸ್!

Bhavani Revanna
ಕರ್ನಾಟಕ6 hours ago

ತಮ್ಮ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸುಟ್ಟು ಹಾಕಿ ಎಂದ ಭವಾನಿ ರೇವಣ್ಣ! ವಿಡಿಯೊ ನೋಡಿ

Bangalore bulls
ಕ್ರೀಡೆ6 hours ago

Pro Kabaddi : ತಲೈವಾಸ್​, ಗುಜರಾತ್​ ಜಯಂಟ್ಸ್​ಗೆ ಗೆಲುವು

indian cricket team
ಕ್ರಿಕೆಟ್6 hours ago

Ind vs Aus : ಭಾರತ ತಂಡಕ್ಕೆ ಕೊನೇ ಪಂದ್ಯದಲ್ಲೂ ಜಯ, 4-1 ಅಂತರದಿಂದ ಸರಣಿ ಕೈವಶ

this hat-trick has guaranteed the 2024 victory Says PM Narendra Modi
ದೇಶ7 hours ago

PM Narendra Modi: 3 ರಾಜ್ಯದ ಗೆಲುವು 2024ರ ಹ್ಯಾಟ್ರಿಕ್ ಜಯದ ಮುನ್ಸೂಚನೆ; ಮೋದಿ ಬಣ್ಣನೆ

drown in sea
ಉತ್ತರ ಕನ್ನಡ7 hours ago

Drown in Sea: ಗೋಕರ್ಣ ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ನೀರುಪಾಲು

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Police call off protest FIR against lawyer who slapped police
ಕರ್ನಾಟಕ17 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ23 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ1 day ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ6 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

ಟ್ರೆಂಡಿಂಗ್‌