1.ಕ್ಲೈಮ್ಯಾಕ್ಸ್‌ನತ್ತ ಬಿಹಾರ ಜಂಪಿಂಗ್ ಪಾಲಿಟಿಕ್ಸ್- ಬಿಜೆಪಿ, ಜೆಡಿಯು ಮೈತ್ರಿ ಸರ್ಕಾರ ಬಹುತೇಕ ಫಿಕ್ಸ್
ಬಿಹಾರದಲ್ಲಿ ರಾಜಕೀಯ ಬೆಳವಣಿಗೆಗಳು (Bihar Politics) ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿವೆ. ಆರ್‌ಜೆಡಿ ಜತೆಗಿನ ಮೈತ್ರಿ ಮುರಿದುಕೊಂಡು ಬಿಜೆಪಿ ಜತೆ ಕೈಜೋಡಿಸಲು ನಿತೀಶ್ ಕುಮಾರ್ (Nitish Kumar) ಅವರು ತುದಿಗಾಲಿನ ಮೇಲೆ ನಿಂತಿದ್ದಾರೆ. ಬಿಜೆಪಿಯೂ ಶಾಸಕಾಂಗ ಸಭೆ ನಡೆಸುವ ಮೂಲಕ ಶಾಸಕರ ಬೆಂಬಲ ದೃಢಪಡಿಸಿಕೊಂಡಿದೆ. ಅತ್ತ, ಆರ್‌ಜೆಡಿಯೂ ಶಾಸಕರ ಸಭೆ ನಡೆಸಿದೆ. ನಿತೀಶ್ ಕುಮಾರ್ ಅವರು ಇಂದೇ (ಜನವರಿ 27) ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
2. ನಿಗಮ ಮಂಡಳಿ ನೇಮಕದ ಬೆನ್ನಲ್ಲೇ ಭುಗಿಲೆದ್ದ ಭಿನ್ನಮತ; ಸಚಿವ ಸ್ಥಾನಕ್ಕೆ ವರಾತ
ಕಾಂಗ್ರೆಸ್ ಸರ್ಕಾರ 36 ಶಾಸಕರನ್ನು ನಿಗಮ ಮತ್ತು ಮಂಡಳಿಗಳ (Board and Corporation) ಅಧ್ಯಕ್ಷರಾಗಿ ನೇಮಕ ಮಾಡಿದೆ. ಆದರೆ, ಇದು ಹಲವು ವಿವಾದಗಳಿಗೆ, ಅಪಸ್ವರಗಳಿಗೆ ಕಾರಣವಾಗಿದೆ. ನೇಮಕಗೊಂಡ ಕೆಲವರು ತಮಗೆ ಮಹತ್ವವಿಲ್ಲದ ನಿಗಮಗಳನ್ನು ನೀಡಿದ್ದಾರೆ ಎಂದು ಅಪಸ್ವರ ಎತ್ತಿದರೆ, ಇನ್ನು ಕೆಲವರು ನಿಗಮ-ಮಂಡಳಿ ಬೇಕಾಗಿಲ್ಲ. ಮಂತ್ರಿ ಖಾತೆಯೇ ಬೇಕು ಎಂದು ಹಠ ಹಿಡಿದಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಬಿಜೆಪಿಯಲ್ಲಿ ಶುರು ಉಸ್ತುವಾರಿ ಟೀಮ್ ದರ್ಬಾರ್ ಶುರು: ರಾಜ್ಯಕ್ಕೆ ಇಬ್ಬರು ಪ್ರಭಾರಿ
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಜೆಪಿ ಜಿಲ್ಲಾ ಘಟಕಗಳು ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರನ್ನು(BJP Karnataka) ನೇಮಿಸಲಾಗಿತ್ತು. ಇದೀಗ 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿ ಹಾಗೂ ಸಂಚಾಲಕರನ್ನು ನೇಮಕ ಮಾಡಲಾಗಿದೆ. ಜತೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನೂ ನೇಮಿಸಲಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
4.BJP Karnataka : ಲೋಕಸಭಾ ಪ್ರಚಾರಕ್ಕೆ ಬಿಜೆಪಿ ಮಾಸ್ಟರ್ ಪ್ಲ್ಯಾನ್ ರೆಡಿ, ಕಾರ್ಯಕಾರಿಣಿ ಒಪ್ಪಿಗೆ
ಮುಂದಿನ ಲೋಕಸಭಾ ಚುನಾವಣೆಯನ್ನೇ (Parliament Elections 2024) ಪ್ರಧಾನವಾಗಿಟ್ಟುಕೊಂಡು ಬಿಜೆಪಿ ರಾಜ್ಯ ಕಾರ್ಯಕಾರಿಣಿ (BJP State Executive meet) ವಿಶೇಷ ಸಭೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ನಡೆದು ಸಂಸತ್ ಚುನಾವಣೆಯ ಮಾಸ್ಟರ್ ಪ್ಲ್ಯಾನ್ ಬಹುತೇಕ ಸಿದ್ಧಪಡಿಸಲಾಗಿದೆ. ಇದಕ್ಕೆ ಕಾರ್ಯಕಾರಿಣಿ ಒಪ್ಪಿಗೆಯನ್ನು ನೀಡಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾರ್ಯಕಾರಿಣಿ ಬಿಟ್ಟು ಸಿಎಂ ಸಿದ್ದರಾಮಯ್ಯ ಜತೆ ಸುತ್ತಾಡಿದ ಸೋಮಶೇಖರ್
5. ಬಿಜೆಪಿ ಗೆಲ್ಲಿಸುವ ಶಾಮನೂರು ಹೇಳಿಕೆ; ಕಮಲ ಖುಷಿಖುಷಿ, ಕೈಗೆ ಕಸಿವಿಸಿ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ (Shivamogga Constituency) ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ ರಾಘವೇಂದ್ರ (MP BY Raghavendra) ಅವರನ್ನೇ ಪುನರಾಯ್ಕೆ ಮಾಡಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ವಿಸ್ತಾರ ಅಂಕಣ: ಮತ್ತೆ ಮತ್ತೆ ಹಳೆಯ ಸೂತ್ರಕ್ಕೇ ಜೋತುಬೀಳುವ ಕಾಂಗ್ರೆಸ್
ಕಾಂಗ್ರೆಸ್ ಮನಸ್ಸು ಮಾಡಿದರೆ ಮುಂದೊಂದು ದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಬಹುದು. ಆದರೆ, ಕಾಂಗ್ರೆಸ್‌ಗೆ ರಾಮನನ್ನು ಸೋಲಿಸಲು ಸಾಧ್ಯವಿಲ್ಲ. ಏಕೆಂದರೆ, ರಾಮ ಈ ದೇಶದ ಕಣಕಣದಲ್ಲಿ ಬೆರೆತುಹೋಗಿದ್ದಾನೆ ಎನ್ನುತ್ತಾರೆ ವಿಸ್ತಾರ ನ್ಯೂಸ್ ನಿರ್ದೇಶಕರಾಗಿರುವ ಹರಿಪ್ರಕಾಶ್ ಕೋಣೆಮನೆ ಅವರು ತಮ್ಮ ವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ
7. Ram Mandir: ಅಯೋಧ್ಯೆಯಲ್ಲಿ ಇನ್ನು ಮುಂದೆ ರಾಮ ದರ್ಶನಕ್ಕೆ ಹೆಚ್ಚುವರಿ ಸಮಯಾವಕಾಶ
ಅಯೋಧ್ಯೆ: ಜನವರಿ 22ರಂದು ನಡೆದ ಪ್ರಾಣ ಪ್ರತಿಷ್ಠೆ ಸಮಾರಂಭದ ಬಳಿಕ ಅಯೋಧ್ಯೆ ರಾಮ ಮಂದಿರ (Ram Mandir) ಸಾರ್ವಜನಿಕರ ಭೇಟಿಗಾಗಿ ಮುಕ್ತವಾಗಿದೆ. ಭಕ್ತರ ಭೇಟಿಗೆ ಭಾಗಿಲು ತೆರೆದ ಆರಂಭದ ದಿನದಿಂದಲೇ ಜನ ದಟ್ಟನೆ ಕಂಡು ಬಂದಿದ್ದು, ಇದೀಗ ದೇವರ ದರ್ಶನ ಅವಧಿ ಹೆಚ್ಚಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ರಾಮನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಕೇರಳದಲ್ಲಿ ಸರ್ಕಾರ V/S ರಾಜಭವನ ಫೈಟ್: ರಸ್ತೆಯಲ್ಲೇ ಗವರ್ನರ್ ಪ್ರೊಟೆಸ್ಟ್
ವಿಶಿಷ್ಟ ಬೆಳವಣಿಗೆಯೊಂದರಲ್ಲಿ, ಕೇರಳ ರಾಜ್ಯಪಾಲ (Kerala Governor) ಆರಿಫ್ ಮೊಹಮ್ಮದ್ ಖಾನ್ (Arif Mohammed Khan) ಅವರು ಕೊಲ್ಲಂ ಜಿಲ್ಲೆಯ ನಿಲಮೇಲ್‌ನಲ್ಲಿ ಇಂದು ಬೀದಿ ಬದಿಯ ಅಂಗಡಿಯ ಮುಂದೆ ಧರಣಿ ಕುಳಿತರು. ತಮ್ಮ ಮೇಲೆ ಮುಗಿಬಿದ್ದು ಪ್ರತಿಭಟನೆ ನಡೆಸಿದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (Students Federation of India- SFI) ಕಾರ್ಯಕರ್ತರನ್ನು ಬಂಧಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಅವರು ಧರಣಿ ನಡೆಸಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9.Dress Code : ತುಂಡುಡುಗೆ ತಕರಾರು; ಹಂಪಿ ವಿರೂಪಾಕ್ಷ ದೇಗುಲದಲ್ಲೂ ಇನ್ಮುಂದೆ ಡ್ರೆಸ್‌ಕೋಡ್
ವಿಜಯನಗರ: ರಾಜ್ಯದ ಹಲವು ದೇವಾಲಯಗಳಲ್ಲಿ ವಸ್ತ್ರ ಸಂಹಿತೆಯ (Dress code in temple) ಕೂಗು ಜೋರಾಗಿದೆ. ಇದೇ ಕೂಗು ಈಗ ವಿಶ್ವವಿಖ್ಯಾತ ಹಂಪಿ ವಿರೂಪಾಕ್ಷ ದೇಗುಲದಲ್ಲೂ (Hampi Virupaksha Temple) ಪ್ರತಿಧ್ವನಿಸಿದೆ. ದೇಶಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ಈ ದೇವಸ್ಥಾನವನ್ನು ಪ್ರವೇಶಿಸುವ ಭಕ್ತರಿಗೆ, ಪ್ರವಾಸಿಗರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲು ಚಿಂತನೆ ನಡೆದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಮಗನ ಸ್ಟಾರ್ಗಿರಿಯ ನಡುವೆಯೂ ಗ್ಯಾಸ್ ಸಿಲಿಂಡರ್ ಹೊರುತ್ತಿರುವ ರಿಂಕು ಸಿಂಗ್ ಅಪ್ಪ! ಇಲ್ಲಿದೆ ವಿಡಿಯೊ
ಭಾರತ ತಂಡದ ಸೀಮಿತ ಓವರ್ಗಳ ಸೆಟಅಪ್ನಲ್ಲಿ ಸದ್ಯಕ್ಕೆ ಶಾಶ್ವತ ಸ್ಥಾನ ಪಡೆದಿರುವ ರಿಂಕು ಸಿಂಗ್ ವಿನಮ್ರ ವ್ಯಕ್ತಿತ್ವವನ್ನು ಕಾಪಾಡಿಕೊಂಡಿದ್ದಾರೆ. ಸಾಕಷ್ಟು ಖ್ಯಾತಿ ಪಡೆದಿರುವ ರಿಂಕು ಸಿಂಗ್ ಅಪ್ಪ ಖಾನ್ಚಂದ್ರ ಸಿಂಗ್ ಇನ್ನೂ ಗ್ಯಾಸ್ ಸಿಲಿಂಡರ್ ಹೊರುವ ಕೆಲಸ ನಿಲ್ಲಿಸಿಲ್ಲ ಎಂಬುದು ಅವರ ಬದ್ಧತೆಗೆ ಸಾಕ್ಷಿ. ಕೆಲಸ ಕೊಟ್ಟಿದ್ದ ಮಾಲೀಕರ ಋಣ ಅವರು ತೀರಿಸುತ್ತಿದ್ದು ಸಿಲಿಂಡರ್ ಹೊರುವ ವಿಡಿಯೊ ವೈರಲ್ ಆಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ