Site icon Vistara News

VISTARA TOP 10 NEWS: ಕಿವೀಸ್‌ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಭಾರತ, ಸಚಿನ್‌ ದಾಖಲೆ ಮುರಿದ ಕೊಹ್ಲಿ…

Vistara Top 10 News 1511

1. ನ್ಯೂಜಿಲ್ಯಾಂಡ್‌ ವಿರುದ್ಧ ಭರ್ಜರಿ ಜಯಭೇರಿ: ಫೈನಲ್‌ಗೆ ನೆಗೆದೇರಿದ ಭಾರತ, ವಿಶ್ವವಿಜಯಕ್ಕೆ ಒಂದೇ ಹೆಜ್ಜೆ
2023ರ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಬಾಲ್‌ ಮತ್ತು ಬ್ಯಾಟ್‌ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಭಾರತ ತಂಡ ನ್ಯೂಜಿಲ್ಯಾಂಡನ್ನು 70 ರನ್‌ಗಳಿಂದ ಸೋಲಿಸಿ ಅಜೇಯವಾಗಿಯೇ ಫೈನಲ್‌ ಪ್ರವೇಶ ಮಾಡಿದೆ. ವಿರಾಟ್‌ ಕೊಹ್ಲಿ ಮತ್ತು ಶ್ರೇಯಸ್‌ ಅಯ್ಯರ್‌ ಅವರ ಶತಕಗಳು ಮತ್ತು ಮಹಮ್ಮದ್‌ ಶಮಿ ಅವರ ಏಳು ವಿಕೆಟ್‌ ಗೊಂಚಲು ಭಾರತಕ್ಕೆ ವಿಜಯ ಮಾಲೆ ತೊಡಿಸಿತು. ನವೆಂಬರ್‌ 16ರಂದು ನಡೆಯುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಇನ್ನೊಂದು ಸೆಮಿಫೈನಲ್‌ನ ವಿಜೇತರ ಜತೆಗೆ ಭಾರತ ವಿಶ್ವಕಪ್‌ಗಾಗಿ ಅಂತಿಮ ಹೋರಾಟ ನಡೆಸಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2. ಸಚಿನ್‌ ರೆಕಾರ್ಡ್‌ ಮುರಿದು ʼಶತಕʼಗಳ ವಿಶ್ವ ದಾಖಲೆ ಬರೆದ ಕಿಂಗ್‌ ಕೊಹ್ಲಿ
ಆಧನಿಕ ಕ್ರಿಕೆಟ್​ನ ಸರ್ವಶ್ರೇಷ್ಠ ಬ್ಯಾಟರ್​ ವಿರಾಟ್ ಕೊಹ್ಲಿ ಭಾರತದ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್ ಅವರ ಶತಕಗಳ ದಾಖಲೆ ಮುರಿದ್ದಾರೆ. ಅವರೀಗ ಏಕ ದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆ ಬರೆದಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಅವರು ತಮ್ಮ 50ನೇ ಶತಕ ಬಾರಿಸಿದ್ದಾರೆ. ವಿಶ್ವ ಕಪ್ ಟೂರ್ನಿಯಲ್ಲೇ ಸಚಿನ್ ದಾಖಲೆಯ ಮುರಿದು ಗರಿಷ್ಠ ಏಕದಿನ ಶತಕಗಳ ದಾಖಲೆ ಬರೆದ ಅವರು ಇತಿಹಾಸದ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಸಿಕ್ಸರ್‌ ಬಾರಿಸಿ ವಿಶ್ವದಾಖಲೆ ಬರೆದ ರೋಹಿತ್‌ ಶರ್ಮಾ
ಈ ಸುದ್ದಿಯನ್ನೂ ಓದಿ: ಆಸೀಸ್‌ ಮಣಿಸಿ ಮೊದಲ ಫೈನಲ್‌ ಕಂಡೀತೇ ದಕ್ಷಿಣ ಆಫ್ರಿಕಾ?

3. ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅಧಿಕಾರ ಸ್ವೀಕಾರ, ಎಲ್ಲೆಡೆ ಜಯಘೋಷ
ರಾಜ್ಯದ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ (BJP State President) ಬಿ.ವೈ. ವಿಜಯೇಂದ್ರ (BY Vijayendra) ಅವರು ಬುಧವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿದರು. ಈ ಮೂಲಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಭಾರತೀಯ ಜನತಾ ಪಕ್ಷಕ್ಕೆ ರಣೋತ್ಸಾಹ ತುಂಬಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಮಹತ್ವದ ಟಾಸ್ಕ್‌ಗೆ ಅವರೀಗ ಹೆಗಲು ಕೊಟ್ಟಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಮೋದಿಗಾಗಿ 28ಕ್ಕೆ 28 ಸೀಟು ಗೆಲ್ಲಿಸುವುದೇ ನನ್ನ ಗುರಿ: ವಿಜಯೇಂದ್ರ ಘೋಷಣೆ
ಈ ಸುದ್ದಿಯನ್ನೂ ಓದಿ: ನ.17ಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆದ ವಿಜಯೇಂದ್ರ; ವಿಪಕ್ಷ ನಾಯಕ ಯಾರು?

4. ಮುಸ್ಲಿಂ ಮುಖಂಡರ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ ಸರ್ಕಾರ, ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಬಹುದು!
ಕೆಲವು ಮುಸ್ಲಿಂ ಸಂಘಟನೆಗಳು ಮತ್ತು ಮುಸ್ಲಿಂ ಕೇಂದ್ರಿತ ಪಕ್ಷಗಳ ವಿರೋಧಕ್ಕೆ ಮಣಿದಿರುವ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ಹಿಜಾಬ್‌ ಧರಿಸಿ ಕೆಇಎ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ! ಕೆಇಎ ಪರೀಕ್ಷೆಗೆ ಹಿಜಾಬ್‌ ನಿಷೇಧವಿಲ್ಲ, ಕಾಲುಂಗುರ ಹಾಗೂ ಮಾಂಗಲ್ಯ ಧರಿಸಿ ಮಹಿಳಾ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5.ದೇಶದಲ್ಲಿ ನಿರುದ್ಯೋಗ ಭಾರಿ ಪ್ರಮಾಣ ಕುಸಿತ; ಮೋದಿ ಎಫೆಕ್ಟ್‌?
 ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ದೇಶಾದ್ಯಂತ ನಿರುದ್ಯೋಗ ಪ್ರಮಾಣ ಜಾಸ್ತಿಯಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ಬೆನ್ನಲ್ಲೇ, ದೇಶದಲ್ಲಿ ನಿರುದ್ಯೋಗ ಪ್ರಮಾಣವು (Unemployment Rate) ದಾಖಲೆ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಎಸ್‌ಬಿಐ ರಿಸರ್ಚ್‌ (SBI Research) ವರದಿ ತಿಳಿಸಿದೆ. ಎಸ್‌ಬಿಐ ರಿಸರ್ಚ್‌ನ ದಿ ಪೀರಿಯಾಡಿಕ್‌ ಲೇಬರ್‌ ಫೋರ್ಸ್‌ ಸರ್ವೇ (PLFS) ವರದಿಯು ದೇಶದಲ್ಲಿ ನಿರುದ್ಯೋಗ ಪ್ರಮಾಣ ಕುಂಠಿತವಾಗಿರುವುದನ್ನು ದೃಢಪಡಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಕಾಂಗ್ರೆಸ್‌ ಸೇರಿದ ಜೆಡಿಎಸ್‌ನ ಇಬ್ಬರು ಮಾಜಿ ಶಾಸಕರು; ಕೋಮುವಾದಿ ಜನತಾ ದಳವೆಂದ ಸಿಎಂ
ರಾಜ್ಯ ರಾಜಕೀಯದಲ್ಲಿ (Karnataka Politics) ಕಾಂಗ್ರೆಸ್‌ನಿಂದ ಆಪರೇಷನ್‌ ಹಸ್ತದ (Operation Hasta) ಕಾರ್ಯಾಚರಣೆ ಮುಂದುವರಿದಿದೆ. ಜೆಡಿಎಸ್‌ ನಾಯಕರೂ, ಮಾಜಿ ಶಾಸಕರಾದ ಗೌರಿ ಶಂಕರ್ ಮತ್ತು ಮಂಜುನಾಥ್ ಬುಧವಾರ ಅಧಿಕೃತವಾಗಿ ಕಾಂಗ್ರೆಸ್‌ ಸೇರಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7.ಚೀನಾಗೆ ಭಾರತ ಠಕ್ಕರ್‌! ದೇಶಿ ನಿರ್ಮಿತ ಲಘು ಟ್ಯಾಂಕ್‌ ಸೇನೆ ಸೇರಲು ಸಜ್ಜು
ಸದಾ ಸಂಘರ್ಷ ಸನ್ನದ್ಧ ಸ್ಥಿತಿಯಲ್ಲಿರುವ ಚೀನಾಗೆ (China) ಠಕ್ಕರ್ ನೀಡಲು ಭಾರತವು (India) ಸಜ್ಜಾಗಿದೆ. ಹೌದು, ಎತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ದೇಶಿ ನಿರ್ಮಿತ ಮೊದಲ ಲೈಟ್ ಟ್ಯಾಂಕ್ (Light Tank) ಅನ್ನು ಭಾರತವು ಶೀಘ್ರವೇ ನಿಯೋಜನೆ ಮಾಡಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ನಾಲ್ವರನ್ನು ಕೊಂದವನ ಟಾರ್ಗೆಟ್‌ ಅವಳೇ ಅಯ್ನಾಜ್‌; ಕಾರಣ ಬಿಚ್ಚಿಟ್ಟ ಹಂತಕ
ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು (Four of Family murdered) ಅತ್ಯಂತ ಬರ್ಬರವಾಗಿ ಚೂರಿಯಿಂದ ಇರಿದು ಕೊಲೆ (Udupi Murder) ಮಾಡಿದ ಹಂತಕ (Killer Arrest) ಪ್ರವೀಣ್‌ ಅರುಣ್‌ ಚೌಗುಲೆಯನ್ನು ಉಡುಪಿಯ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 14 ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ. ಈ ನಡುವೆ ಈ ಕೊಲೆಗೆ ಪ್ರವೀಣ್‌ ಚೌಗುಲೆಯ ಟಾರ್ಗೆಟ್‌ ಆಗಿದ್ದದ್ದು ನೂರ್‌ ಮಹಮದ್‌ ಅವರ ಎರಡನೇ ಮಗಳು, ಏರ್‌ ಹೋಸ್ಟೆಸ್‌ ಆಗಿರುವ ಅಯ್ನಾಜ್‌ ಎನ್ನುವುದು ಸ್ಪಷ್ಟವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9.ರೈತರ ಖಾತೆಗೆ ಕಿಸಾನ್‌ ಸಮ್ಮಾನ್‌ ಹಣ ಜಮೆ; ಒಮ್ಮೆ ಚೆಕ್‌ ಮಾಡಿಕೊಳ್ಳಿ
ಪ್ರಧಾನ್‌ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ (Prime Minister Kisan Samman Nidhi Scheme-PM-KISAN)ಯ 15ನೇ ಕಂತನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು (ನವೆಂಬರ್‌ 15) ಬಿಡುಗಡೆ ಮಾಡಿದ್ದಾರೆ. ಝಾರ್ಖಂಡ್‌ನ ಕುಂಟಿಯಲ್ಲಿ ನಡೆದ ಸಮಾರಂಭದಲ್ಲಿ ಈ ಘೋಷಣೆಯನ್ನು ಪ್ರಕಟಿಸಲಾಯಿತು. 8.5 ಕೋಟಿ ಅರ್ಹ ರೈತರ ಖಾತೆಗಳಿಗೆ 18,000 ಕೋಟಿ ರೂ. ಜಮೆ ಮಾಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. Viral Video: ಗೂಳಿಯೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸಬೇಕೆ? ಈತನ ತಂತ್ರ ಫಾಲೋ ಮಾಡಿ!
ದ್ವಿಚಕ್ರ ವಾಹನ, ಕಾರಿನಲ್ಲಿ ತಮ್ಮ ನೆಚ್ಚಿನ ಸಾಕು ಪ್ರಾಣಿಗಳನ್ನು ಕರೆದೊಯ್ಯುವುದನ್ನು ನೋಡಿದ್ದೇವೆ. ಕೆಲವು ಬಾರಿ ಸಾಕು ನಾಯಿಯೇ ಹಾರಿ ಬೈಕ್‌ ಮೇಲೆ ಕುಳಿತುಕೊಳ್ಳುವುದನ್ನು ಕಂಡಿದ್ದೇವೆ. ಆದರೆ ಗೂಳಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದರೆ ಈ ವಿಡಿಯೊ ನೋಡಿ. ವ್ಯಕ್ತಿಯೊಬ್ಬ ಗೂಳಿಯನ್ನು ಬೈಕ್‌ ಮುಂದೆ ಕೂರಿಸಿಕೊಂಡು ಸಾಗುತ್ತಿರುವ ದೃಶ್ಯ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ (Viral Video). ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಮತ್ತಷ್ಟು ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ:

Exit mobile version