Site icon Vistara News

VISTARA TOP 10 NEWS : ಲಿಂಗಾಯತ ಸಿಎಂ ತಲ್ಲಣದಿಂದ ಮೋದಿ ಚುನಾವಣಾ ಪ್ರಚಾರ ಆರಂಭದವರೆಗೆ ಪ್ರಮುಖ ಸುದ್ದಿ

Vistara top 10 News 3009

1. ರಾಜ್ಯದಲ್ಲಿ ಲಿಂಗಾಯತ ಸಿಎಂ ಕೂಗು; ಶಾಮನೂರು ಆಕ್ರೋಶಕ್ಕೆ ಕಾಂಗ್ರೆಸ್‌ನಲ್ಲಿ ತಲ್ಲಣ
ರಾಜ್ಯ ಕಾಂಗ್ರೆಸ್‌ನಲ್ಲಿ ಈಗ ಲಿಂಗಾಯತರ ಅವಗಣನೆ ಮತ್ತು ಲಿಂಗಾಯತರು ಸಿಎಂ ಆಗಬೇಕು (Lingayat CM Demdand) ಎಂಬ ಕೂಗೆದ್ದಿದೆ. ಲಿಂಗಾಯತ ಸಮುದಾಯದ ಹಿರಿಯ ನಾಯಕ, 92 ವರ್ಷದ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅವರ ಆಕ್ರೋಶದ ಒಂದು ನುಡಿ ಈ ರಾಜ್ಯ ಕಾಂಗ್ರೆಸ್‌ನಲ್ಲಿ ತಲ್ಲಣಗಳನ್ನು ಸೃಷ್ಟಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ 1: ಛದ್ಮವೇಷಧಾರಿ ಸಿದ್ದರಾಮಯ್ಯ, ನೀವು ಯಾವ ಸೀಮೆ ಜಾತ್ಯತೀತ?: HDK ಫುಲ್‌ ಗರಂ
ಪೂರಕ ಸುದ್ದಿ 2: ಆಪರೇಷನ್‌ ಹಸ್ತ ತೀವ್ರ; ಜೆಡಿಎಸ್‌, ಬಿಜೆಪಿಯ ಇಬ್ಬರು ಮಾಜಿ ಶಾಸಕರು ಕೈವಶ

2. ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದ ಆರೋಪಿ ಸೆರೆ; ಇವರೆಲ್ಲ ಹಿಂದೂ ಧರ್ಮ ವಿರೋಧಿಗಳು ಎಂದ!
ರಾಜ್ಯದ ಹಲವು ಸಾಹಿತಿಗಳು ಮತ್ತು ಚಿಂತಕರಿಗೆ ಸಾಲು ಸಾಲು ಬೆದರಿಕೆ ಪತ್ರ (Life threat) ಬರೆದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ರ ಬರೆದ ದಾವಣಗೆರೆ ಮೂಲದ ಶಿವಾಜಿ ರಾವ್ ಹಿಂದೂ ಹಿಂದೂ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ಚಿಂತಕರಿಗೆ ಬೆದರಿಕೆ ಹಾಕಿದ ಶಿವಾಜಿ ರಾವ್ ಬೆಳಗ್ಗೆ 4 ಗಂಟೆಗೆ ಎದ್ದು ಭಗವದ್ಗೀತೆ ಓದ್ತಿದ್ದ!

3. ಕೆಜಿ ಹಳ್ಳಿ ಗೋಲಿಬಾರ್‌ನಲ್ಲಿ ಸತ್ತವರು ಅಮಾಯಕರಲ್ಲ ಎಂದು ಒಪ್ಪಿಕೊಂಡ ಕಾಂಗ್ರೆಸ್ ಸರ್ಕಾರ
ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ವೇಳೆ ಕಿಡಿಗೇಡಿಗಳ ಗುಂಪಿನ ಮೇಲೆ ನಡೆದ ಗೋಲಿಬಾರ್‌ನಲ್ಲಿ (DJ Halli-KG Halli Golibar) ಸತ್ತವರು ಅಮಾಯಕರಲ್ಲ ಎಂದು ಕಾಂಗ್ರೆಸ್‌ ಸರ್ಕಾರ ಒಪ್ಪಿಕೊಂಡಿದೆ. ಈ ಕುರಿತ ಮ್ಯಾಜಿಸ್ಟ್ರೇಟ್‌ ವರದಿಯನ್ನು ಒಪ್ಪಿಕೊಳ್ಳುವ ಮೂಲಕ ಕಾಂಗ್ರೆಸ್‌ ಸರ್ಕಾರ, ಆ ಮೂಲಕ ಈ ಹಿಂದೆ ತಾನೇ ಮಾಡಿದ್ದ ಆರೋಪವನ್ನು ನಿರಾಕರಿಸಿದಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ವರದಿ ಯಥಾವತ್ತು ಸ್ವೀಕರಿಸಿರುವುದು ಸ್ವಾಗತಾರ್ಹ: ಬೊಮ್ಮಾಯಿ

4. ಕಾವೇರಿ ಪ್ರಾಧಿಕಾರದ ಮುಂದೆ ಮರುಪರಿಶೀಲನೆ ಅರ್ಜಿ ಸಲ್ಲಿಕೆ, ತೀರ್ಪು ನೋಡಿಕೊಂಡು ಸುಪ್ರೀಂಗೆ
ಸೆ. 28ರಿಂದ ಅಕ್ಟೋಬರ್‌ 15ರವರೆಗೆ ತಮಿಳುನಾಡಿಗೆ ಪ್ರತಿ ದಿನವೂ 3000 ಕ್ಯೂಸೆಕ್‌ ನೀರು ಹರಿಸಬೇಕು (Cauvery water Dispute) ಎಂಬ ಆದೇಶವನ್ನು ಮರುಪರಿಶೀಲಿಸಲು ಕೋರಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ರಾಜ್ಯ ಸರ್ಕಾರ ಶನಿವಾರ ಮರುಪರಿಶೀಲನೆ ಅರ್ಜಿ ಸಲ್ಲಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ವಿಸ್ತಾರ ಅಂಕಣ: ಎಡಬಿಡಂಗಿ ಪಾಕಿಗಳನ್ನು ಕುಣಿಸುತ್ತಿರುವ ಅಮೆರಿಕದ ಬಗ್ಗೆ ಎಚ್ಚರ ವಹಿಸಬೇಕಿದೆ
ಒಂದೇ ದೇಶದ ರಾಯಭಾರಿಗಳು ಭಿನ್ನ ದೇಶಗಳಲ್ಲಿ ಭಿನ್ನ ನಿಲುವನ್ನು ತಳೆಯುತ್ತಾರೆ ಎಂದರೆ ಅದು ಅಮೆರಿಕದಿಂದ ಮಾತ್ರ ಸಾಧ್ಯ. ಹಾಗಾದರೆ ಈ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಅಮೆರಿಕ ರಾಯಭಾರಿ ಭೇಟಿ ನೀಡಿದ್ದೇಕೆ? ಅದರ ಮಹತ್ವವೇನು? ಎನ್ನುವುದನ್ನು ವಿಶ್ಲೇಷಿಸಿದ್ದಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ತಮ್ಮ ವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

6. 4 ರಾಜ್ಯ, 6 ದಿನ, 8 ರ‍್ಯಾಲಿ; ಚುನಾವಣಾ ರಾಜ್ಯಗಳಲ್ಲಿ ಪ್ರಧಾನಿ ಮೋದಿ ಸುತ್ತಾಟ!
ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಮುಂಬರುವ ತಿಂಗಳುಗಳಲ್ಲಿ ಚುನಾವಣೆ ನಡೆಯಲಿರುವ ನಾಲ್ಕು ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ಆರು ದಿನಗಳ ಕಾಲ ಮೆಗಾ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. Financial Rules: ನಾಳೆಯಿಂದ 10 ಪ್ರಮುಖ ನಿಯಮಗಳ ಬದಲಾವಣೆ; ತಿಳಿಯದಿದ್ದರೆ ಲಾಸ್‌ ತಪ್ಪಿದ್ದಲ್ಲ!
ಹಣಕಾಸು, ವಿಮೆ. ಡಿಜಿಟಲ್‌ ಸೇರಿ ಹಲವು ಕ್ಷೇತ್ರಗಳಲ್ಲಿ ಅಕ್ಟೋಬರ್‌ 1ರಿಂದ ನಿಯಮಗಳು ಬದಲಾಗಿವೆ. ಇವೆಲ್ಲ ತಿಳಿದುಕೊಳ್ಳುವ ಮೂಲಕ ಹಣ ಹಾಗೂ ಸಮಯ ಉಳಿಸಿರಿ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. World Cup History: ಲಾರ್ಡ್ಸ್​ ಅಂಗಳದಲ್ಲಿ ಚೊಚ್ಚಲ ವಿಶ್ವಕಪ್​ ಎತ್ತಿದ ಕಪಿಲ್ ಡೆವಿಲ್ಸ್
ಕೆಟ್‌ನಲ್ಲಿ ಅಚ್ಚರಿ,ಅನಿರೀಕ್ಷಿತ, ಅದ್ಭುತ, ಪವಾಡ ಇವೆಲ್ಲವೂ ಏಕಕಾಲದಲ್ಲಿ ಸಂಭವಿಸುತ್ತದೆ ಎನ್ನುವ ಮಾತನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದು 1983ರ(1983 Cricket World Cup) ವಿಶ್ವಕಪ್‌. ಅದರಲ್ಲಿ ಕಪಿಲ್‌ ದೇವ್‌ ಸಾರಥ್ಯದ ಭಾರತ ತಂಡ ನೂತನ ವಿಶ್ವ ಚಾಂಪಿಯನ್‌ ಆಗಿ ಮೂಡಿಬಂದಿತ್ತು! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. Raja Marga Column : ಅಸ್ಮಿತಾಯ್: ಕೊಂಕಣಿ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ವಿರಾಟ್ ಕ್ಯಾನ್ವಾಸ್
ಕೊಂಕಣಿ ಭಾಷೆಯಲ್ಲೊಂದು ಅದ್ಭುತವಾದ ಸಿನಿಮಾ ಬಂದಿದೆ. ಹೆಸರು ಅಸ್ಮಿತಾಯ್. ಆಂತರ್ಯದಲ್ಲೊಂದು ಪ್ರೀತಿ ಕಥೆಯನ್ನು ಹೊತ್ತು ಸಾಗುವ ಈ ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಡಿಪಿಕ್ಟ್‌ ಆಗುವುದು ಮಹೋನ್ನತವಾದ ಕೊಂಕಣಿ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ವಿರಾಟ್‌ ಸ್ವರೂಪಗಳು. ಪೂರ್ಣ ಲೇಖನಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

10.Heart Touching Video: 1 ವರ್ಷದ ಬಳಿಕ ಭೇಟಿಯಾದ ಸಾಕುತಂದೆ; ಶ್ವಾನ ಮಾಡಿದ್ದೇನು?
ʼ777 ಚಾರ್ಲಿʼ ಕನ್ನಡ ಚಿತ್ರದಲ್ಲಿ ತೋರಿಸಿರುವಂತೆ ಮಾನವ ಶ್ವಾನ ನಡುವಿನ ಬಾಂಧವ್ಯದ ವಿಡಿಯೊವೊಂದು ವೈರಲ್‌ ಆಗಿದೆ. ವರ್ಷದ ಬಳಿಕ ಭೇಟಿಯಾದ ಸಾಕು ತಂದೆಯ ಮೇಲಿನ ಶ್ವಾನದ ಪ್ರೀತಿ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ. ಪೂರ್ಣ ಲೇಖನಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version