1.ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆ; ಬಿಎಸ್‌ವೈ ಮೇಲುಗೈ
ಮಾಜಿ ಡಿಸಿಎಂ ಆರ್. ಅಶೋಕ್ (R Ashok) ಅವರು ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕರಾಗಿ ಶುಕ್ರವಾರ ನಡೆದ ಶಾಸಕಾಂಗ ಪಕ್ಷ ಸಭೆಯಲ್ಲಿ ಆಯ್ಕೆಯಾಗಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪಾರುಪತ್ಯ ಮುಂದುವರಿದಂತಾಗಿದೆ. ಯಡಿಯೂರಪ್ಪ ಸೂಚಿಸಿದವರೇ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರಾಗಿ ಆಯ್ಕೆಯಾದಂತೆ ಆಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ: ಎಲ್ಲರನ್ನೂ ಗೆಲ್ಲಬಲ್ಲ ಅಜಾತಶತ್ರು ಸಾಮ್ರಾಟ್ ಅಶೋಕ್ ಈಗ ವಿಪಕ್ಷ ನಾಯಕ
2. ಬಿಜೆಪಿ ಒಂದೇ ಕುಟುಂಬಕ್ಕೆ ಸೀಮಿತ ಆಗಬಾರದು; ಅಡ್ಜೆಸ್ಟ್‌ಮೆಂಟ್ ನಿಲ್ಲಿಸಿ: ಯತ್ನಾಳ್ ಕೆಂಡಾಮಂಡಲ ಕರ್ನಾಟಕದ ವಿಧಾನಸಭೆಯಲ್ಲಿ ಅಡ್ಜೆಸ್ಟ್ ಮೆಂಟ್ ಆಗಿದ್ದರ ಬಗ್ಗೆ ಕೇಂದ್ರದ ವೀಕ್ಷಕರಿಗೆ ತಿಳಿಸಿದ್ದೇನೆ. ರಾಜ್ಯ ಬಿಜೆಪಿ (BJP Karnataka) ಒಂದೇ ಕುಟುಂಬಕ್ಕೆ ಸೀಮಿತ ಆಗಬಾರದು ಎಂದು ಕೂಡಾ ಹೇಳಿದ್ದೇನೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಅಸಮಾಧಾನವನ್ನು ನೇರವಾಗಿ ತೋಡಿಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ: Basanagowda Pateel Yatnal : ನ ದೈನ್ಯಂ, ನ ಪಲಾಯನಂ ; ಯತ್ನಾಳ್ ಮಾತಿನ ಅರ್ಥವೇನು?
3. ಬಿಜೆಪಿಯವರು ಮುಸ್ಲಿಂ ಸ್ಪೀಕರ್ ಎದುರು ನಮಸ್ಕಾರ್ ಸಾಬ್ ಅಂತ ನಿಂತ್ಕೋಬೇಕು: ಜಮೀರ್ ಹೊಸ ವಿವಾದ
ಮುಸ್ಲಿಂ ಸ್ಪೀಕರ್ (Muslim Speaker) ಎದುರು ಬಿಜೆಪಿ ಶಾಸಕರು ನಮಸ್ಕಾರ್ ಸಾಬ್ ಅಂತ ನಿಂತ್ಕೋಬೇಕು. ಒಳ್ಳೊಳ್ಳೆಯ ಬಿಜೆಪಿ ಶಾಸಕರೂ ಹೀಗೆ ನಿಲ್ಲುವಂತೆ ಮಾಡಿದ್ದು ನಮ್ಮ ಕಾಂಗ್ರೆಸ್ ಎಂದು ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹೇಳಿದ್ದು ವಿವಾದ ಸೃಷ್ಟಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ : Zameer Ahmed : ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ; ಉಲ್ಟಾ ಹೊಡೆದ ಜಮೀರ್!
4. ಅವನಿಗೆ 42, ಅವಳಿಗೆ 24 : ಸಂಸದ ದೇವೇಂದ್ರಪ್ಪ ಪುತ್ರನಿಂದ ಯುವತಿಗೆ ವಂಚನೆ; ಏನಿದು ಲವ್ವಿಡವ್ವಿ?
ಬಳ್ಳಾರಿ ಸಂಸದ ದೇವೇಂದ್ರಪ್ಪ (Ballary MP Devendrappa) ಅವರ ಪುತ್ರ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಪ್ರೊ. ರಂಗನಾಥ್ ಅವರ ಮೇಲೆ ಯುವತಿಗೆ ವಂಚನೆ (Physical Abuse) ಮಾಡಿದ ಆರೋಪದಲ್ಲಿ ಪ್ರಕರಣದ ದಾಖಲಾಗಿದೆ. ಇದೇ ವೇಳೆ ಪ್ರೊ. ರಂಗನಾಥ್ ಅವರು ಯುವತಿಯ ಮೇಲೆ ಹನಿಟ್ರ್ಯಾಪ್ (Honey trap) ಆರೋಪ ಮಾಡಿ ಕೇಸು ದಾಖಲಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ: 2ನೇ ಪತ್ನಿಯಾದರೂ ಓಕೆ; ಸಂಸದ ದೇವೇಂದ್ರಪ್ಪ ಪುತ್ರನೇ ಬೇಕು ಎಂದ ಯುವತಿ
5. ತನ್ನದೇ ಡೀಪ್‌ಫೇಕ್ ವಿಡಿಯೋ ನೋಡಿ ದಂಗಾದ ಮೋದಿ; ಎಚ್ಚರಿಕೆ ನೀಡುವಂತೆ ಚಾಟ್‌ಜಿಪಿಟಿಗೆ ಸೂಚನೆ
ಡೀಪ್‌ಫೇಕ್ ತಂತ್ರಜ್ಞಾನದ (Deepfake) ಮೂಲಕ ನಟಿಯರ ಅಶ್ಲೀಲ ವಿಡಿಯೊಗಳು ವೈರಲ್ ಆಗುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಡೀಪ್‌ಫೇಕ್ ತಂತ್ರಜ್ಞಾನದ (Deepfake Technology) ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6.Job Alert: ಎಸ್‌ಬಿಐಯಲ್ಲಿದೆ ಭರ್ಜರಿ 8,283 ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆ ಆರಂಭ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ನಿರ್ವಹಿಸಬೇಕು ಎಂದು ಕನಸು ಕಾಣುತ್ತಿರುವ ಪದವೀಧರರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಕಡೆಯಿಂದ ಭರ್ಜರಿ ಖುಷಿಯ ಸುದ್ದಿಯೊಂದು ಬಂದಿದೆ. ಎಸ್‌ಬಿಐ ಖಾಲಿ ಇರುವ ಬರೋಬ್ಬರಿ 8,283 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ನ. 17ರಿಂದಲೇ ಅರ್ಜಿ ಸಲ್ಲಿಸಲು ಅವಕಾಶವಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಫೈನಲ್ ಪಂದ್ಯಕ್ಕೆ ಅಂಪೈರ್ ಪಟ್ಟಿ ಬಿಡುಗಡೆ; ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ನಡುಕ!
ಭಾರತ ಮತ್ತು ಆಸ್ಟ್ರೇಲಿಯಾ(India vs Australia Final) ನಡುವಣ ವಿಶ್ವಕಪ್ ಫೈನಲ್ ಪಂದ್ಯದ ಅಂಪೈರ್ಗಳ(World Cup 2023 final Umpires) ಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ಫೈನಲ್ ಹಣಾಹಣಿಯಲ್ಲಿ ಆನ್ ಫೀಲ್ಡ್ ಅಂಪೈರ್ ಗಳಾಗಿ ರಿಚರ್ಡ್ ಇಲ್ಲಿಂಗ್ವರ್ತ್(Richard Illingworth) ಮತ್ತು ರಿಚರ್ಡ್ ಕೆಟಲ್ಬರೋ(Richard Kettleborough) ಅವರು ಕಾರ್ಯ ನಿರ್ವಹಿಸಲಿದ್ದಾರೆ ಆದರೆ ಈ ಪಟ್ಟಿಯನ್ನು ಕಂಡು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ನಡುಕವೊಂದು ಶುರುವಾಗಿದೆ. ಯಾಕೆ? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಯೋಜನೆಯಲ್ಲಿದ್ದೀರಾ? ಈ ತಂತ್ರ ಅನುಸರಿಸಿ
ಪ್ರಸ್ತುತ ಯಾವಾಗ, ಏನು ಸಂಭವಿಸುತ್ತದೆ ಎನ್ನುವುದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಉಳಿತಾಯ ಮಾಡುವತ್ತ ಗಮನ ಹರಿಸುವುದು ಅನಿವಾರ್ಯ ಎನಿಸಿಕೊಂಡಿದೆ. ತಮ್ಮ ಠೇವಣಿಗೆ ಅತ್ಯುತ್ತಮ ಬಡ್ಡಿ ದರ ದೊರೆಯಬೇಕು ಎಂದು ಪ್ರತಿಯೊಬ್ಬರೂ ಆಗ್ರಹಿಸುವುದು ತಪ್ಪಲ್ಲ. ಅಂತಹವರಿಗೆ ನಿಶ್ಚಿತ ಠೇವಣಿ (Fixed deposit-FD) ಉತ್ತಮ ಆಯ್ಕೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇಂದಿನ ಮನಿಗೈಡ್ (Money Guide) ಫಿಕ್ಸೆಡ್ ಡೆಪಾಸಿಟ್‌ನ ಸಮಗ್ರ ಮಾಹಿತಿಯನ್ನು ನಿಮ್ಮ ಮುಂದೆ ಇಡಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. Tiger 3 box office collection: ಆರು ದಿನಗಳಲ್ಲಿ ವಿಶ್ವಾದ್ಯಂತ 300 ಕೋಟಿ ರೂ. ಕಲೆಕ್ಷನ್ ಮಾಡಿದ ಟೈಗರ್ 3
ಟೈಗರ್-3 ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ (Tiger 3 box office collection) 300 ಕೋಟಿ ರೂ. ಕ್ಲಬ್ ಪ್ರವೇಶಿಸಿದೆ. ಭಾರತದಲ್ಲಿ 229 ಕೋಟಿ ರೂ. (₹188.25 ಕೋಟಿ ನಿವ್ವಳ) ಗಳಿಸಿದೆ. ಬಿಡುಗಡೆಯಾದ ಆರು ದಿನಗಳಲ್ಲಿ ಭಾರತದಲ್ಲಿ 188.25 ಕೋಟಿ ರೂ. ನಿವ್ವಳ ಕಲೆಕ್ಷನ್ ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. Viral Video: ಈ ಮಗುವಿಗೆ ಜೀವಂತ ಹಾವೇ ಆಟದ ಗೊಂಬೆ; ನೆಟ್ಟಿಗರು ಶಾಕ್
ಜಗತ್ತಿನ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ಕೂಡ ಸೇರಿವೆ. ಇವುಗಳಲ್ಲಿ ಬಹುತೇಕ ವಿಷ ರಹಿತವಾಗಿದ್ದರೂ ಅನೇಕ ಮಂದಿ ʼಹಾವುʼ ಎನ್ನುವ ಪದ ಕಿವಿಗೆ ಬಿದ್ದರೆ ಸಾಕು ಬೆಚ್ಚಿ ಬೀಳುತ್ತಾರೆ. ಅಂತಹದರಲ್ಲಿ ಇಲ್ಲಿ ಚಿಕ್ಕ ಮಗುವೊಂದು ಜೀವಂತ ಹಾವನ್ನು ಗೊಂಬೆಯಂತೆ ಕೈಯಲ್ಲಿ ಹಿಡಿದು ನಿರ್ಭೀತಿಯಿಂದ ಆಟವಾಡುತ್ತಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ (Viral Video). ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ