Site icon Vistara News

VISTARA TOP 10 NEWS : 370ನೇ ವಿಧಿ ರದ್ದತಿಗೆ ಸುಪ್ರೀಂ ಮುದ್ರೆ, ತಾಯಿಯನ್ನೇ ಬೆತ್ತಲೆಗೊಳಿಸಿದ ಕ್ರೂರಿಗಳು…

Vistara top 10 News

1.370ನೇ ವಿಧಿ ರದ್ದತಿ ಸರಿ ಎಂದ ಸುಪ್ರೀಂ ಕೋರ್ಟ್‌; ಮೋದಿ ಸರ್ಕಾರದ ನಿರ್ಧಾರಕ್ಕೆ ಜಯ
ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ವಿಶೇಷ ಸ್ಥಾನಮಾನ (Special Status) ಕಲ್ಪಿಸುವ ಆರ್ಟಿಕಲ್ 370 (Article 370) ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿದೆ. ಆರ್ಟಿಕಲ್‌ 370 ತಾತ್ಕಾಲಿಕವಾಗಿದ್ದು, ಆ ಕುರಿತು ಕ್ರಮ ಕೈಗೊಳ್ಳುವ ಅಧಿಕಾರ ರಾಷ್ಟ್ರಪತಿಗಳದ್ದಾಗಿದೆ ಎಂದು ಸಾಂವಿಧಾನಿಕ ಪೀಠ ಹೇಳಿದೆ. ಇದರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ಈ ವಿಚಾರದಲ್ಲಿ ಐತಿಹಾಸಿಕ ಜಯ ದೊರೆತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ 1. ಕಾಶ್ಮೀರದಲ್ಲಿ 2024ರ ಸೆ.30ರೊಳಗೆ ಚುನಾವಣೆ; ಸುಪ್ರೀಂ ಆರ್ಡರ್‌
ಪೂರಕ ಸುದ್ದಿ 2. ಆರ್ಟಿಕಲ್‌ 370 ರದ್ದಿನ ಕುರಿತು ಐತಿಹಾಸಿಕ ತೀರ್ಪು: ಯಾವ ನ್ಯಾಯಮೂರ್ತಿಗಳು ಏನೆಂದರು?
ಪೂರಕ ಸುದ್ದಿ 3. ಸುಪ್ರೀಂ ತೀರ್ಪು ಐತಿಹಾಸಿಕ; ಏಕತೆ, ಪ್ರಗತಿಗೆ ಪೂರಕ ಎಂದ ಮೋದಿ

2. ಸಚಿವ ಜಮೀರ್‌ ಅಹಮದ್‌ ವಜಾಗೆ ಬಿಜೆಪಿ ಪಟ್ಟು; ಸದನದಲ್ಲಿ ಕೋಲಾಹಲ, ನಾಳೆ ಬಿಗ್‌ ಡಿಬೇಟ್‌
ಮುಸ್ಲಿಂ ಶಾಸಕರೊಬ್ಬರು ನಡೆದುಬರುತ್ತಿದ್ದಂತೆಯೇ ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಕೂಡಾ ಎದ್ದು ನಿಂತು ನಮಸ್ಕಾರ್‌ ಸಾಬ್‌ ಎಂದು ಹೇಳುವ ಹಾಗೆ ಕಾಂಗ್ರೆಸ್‌ ಮಾಡಿದೆ ಎಂಬ ಹೇಳಿಕೆ ನೀಡಿದ ಸಚಿವ ಜಮೀರ್‌ ಅಹಮದ್‌ ಖಾನ್‌ ವಜಾಕ್ಕೆ ಬಿಜೆಪಿ ಪಟ್ಟು ಹಿಡಿದಿದೆ. ಸೋಮವಾರ ಈ ವಿಷಯ ಎತ್ತಿಕೊಂಡು ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದೆ. ಇದರ ಬಗ್ಗೆ ಮಂಗಳವಾರ ಚರ್ಚೆಗೆ ಅವಕಾಶ ಸಿಕ್ಕಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಹಿಂದೂಗಳು ಮುಸ್ಲಿಮರ ಅಡಿಯಾಳುಗಳು ಎಂದೇ ಜಮೀರ್‌ ಹೇಳಿದ್ದು: ಆರ್‌ ಅಶೋಕ್

3. ಪೆಟ್ರೋಲ್‌, ಡೀಸೆಲ್‌ ಬೆಲೆ ಶೀಘ್ರ ಇಳಿಕೆ! ಲೋಕಸಭೆ ಎಲೆಕ್ಷನ್‌ ಎಫೆಕ್ಟ್‌?
ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ (International Market) ಕಚ್ಚಾ ತೈಲ (Crude Oil) ಬೆಲೆ ಭಾರೀ ಇಳಿಕೆ ಕಂಡ ಪರಿಣಾಮ ದೇಶದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗುವ ಸಾಧ್ಯತೆಗಳಿವೆ! (Petrol, Diesel price) ಒಂದು ವರ್ಷದಿಂದ ಈ ಬೆಲೆಗಳಲ್ಲಿ ಅಂಥ ಬದಲಾವಣೆಗಳಾಗಿರಲಿಲ್ಲ. ಈಗ ಲಾಭದ ಪಾಲನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಭಾರೀ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ದೇವೇಗೌಡರಿಗೆ ಗೇಟ್‌ಪಾಸ್‌; ಜೆಡಿಎಸ್‌ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ ಕೆ ನಾಣು!
ಬಿಜೆಪಿ ಜತೆ ಜೆಡಿಎಸ್‌ ಮೈತ್ರಿ ಘೋಷಿಸಿದ ಬಳಿಕ ದಳ ಇಬ್ಭಾಗವಾಗಿದೆ. ಸಿಎಂ ಇಬ್ರಾಹಿಂ ಸೇರಿ ಹಲವು ಅಲ್ಪಸಂಖ್ಯಾತ ಮುಖಂಡರು ದಳಪತಿಗಳ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಆದರೆ, ಇದೀಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ದೇವೇಗೌಡರನ್ನು ನಿರಾಕರಿಸಿರುವ ಬಂಡಾಯ ನಾಯಕರು, ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿಸಿ.ಕೆ.ನಾಣು ಅವರನ್ನು ನೇಮಕ ಮಾಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಮಧ್ಯಪ್ರದೇಶಕ್ಕೆ ಮೋಹನ್‌ ಯಾದವ್‌ ನೂತನ ಮುಖ್ಯಮಂತ್ರಿ
ಬಿಜೆಪಿ ಮಧ್ಯ ಪ್ರದೇಶದ (Madhya Pradesh) ನೂತನ ಮುಖ್ಯಮಂತ್ರಿಯನ್ನಾಗಿ ಮೋಹನ್ ಯಾದವ್ (Mohan Yadav) ಅವರನ್ನು ಆಯ್ಕೆ ಮಾಡಿದೆ. ಸೋಮವಾರ ಶಾಸಕರ ಸಭೆಯನ್ನು ನಡೆಸಿ, ಅಂತಿಮವಾಗಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಜತೆಗೆ ಜಗದೀಶ್ ದೇವರಾ ಮತ್ತು ರಾಜೇಶ್ ಶುಕ್ಲಾ ಅವರನ್ನು ಇಬ್ಬರು ಉಪ ಮುಖ್ಯಮಂತ್ರಿಗಳಾಗಿ ನೇಮಕ ಮಾಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಪ್ರೀತಿಸಿದವಳ ಜತೆ ಓಡಿ ಹೋದ ಯುವಕ; ತಾಯಿಯನ್ನೇ ಬೆತ್ತಲೆಗೊಳಿಸಿದ ಕ್ರೂರಿಗಳು!
ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ (Assault Case) ನಡೆಸಿರುವ ಅಮಾನವೀಯ ಘಟನೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ಯುವಕನೊಬ್ಬ ಪ್ರೀತಿಸಿದ ಯುವತಿ ಜತೆಗೆ ಮನೆ ಬಿಟ್ಟು ಓಡಿ ಹೋಗಿದ್ದ. ಇದರಿಂದ ಆಕ್ರೋಶಗೊಂಡು ಯುವಕನ ತಾಯಿಯನ್ನೇ ಬೆತ್ತಲೆಗೊಳಿಸಿದ ದುರುಳರು ದುರ್ವರ್ತನೆ ತೋರಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ಮಹಿಳೆಯನ್ನು ಬೆತ್ತಲೆಗೊಳಿಸಿದ ಕಿರಾತಕರು ಅರೆಸ್ಟ್;‌ ಓಡಿಹೋದ ಪ್ರೇಮಿಗಳಿಗೆ ಸರ್ಚ್‌

7. ಲೋಕಸಭೆಗೆ ಇಲ್ಲದ ನಮಾಜ್‌ ಬ್ರೇಕ್‌ ರಾಜ್ಯಸಭೆಗೂ ಇಲ್ಲ: ರದ್ದು ಮಾಡಿದ ಸಭಾಧ್ಯಕ್ಷ ಜಗದೀಪ್‌ ಧನ್ಕರ್‌
ನಿಯಮಾವಳಿಯಲ್ಲಿ ಇಲ್ಲದೇ ಇದ್ದರೂ ರಾಜ್ಯಸಭೆಯಲ್ಲಿ ರೂಢಿಯಾಗಿ ನಡೆದುಕೊಂಡು ಬಂದಿದ್ದ ಶುಕ್ರವಾರ ಮಧ್ಯಾಹ್ನದ ಅರ್ಧ ಗಂಟೆಯ ನಮಾಜ್‌ ಬ್ರೇಕ್‌ (Namaz break) ಅನ್ನು ಉಪರಾಷ್ಟ್ರಪತಿ (Vice President), ರಾಜ್ಯಸಭಾ (Rajya sabha Chairman) ಅಧ್ಯಕ್ಷ ಜಗದೀಪ್‌ ಧನ್ಕರ್‌ (jagdeep dhankhar) ರದ್ದುಪಡಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ರಾಜಮಾರ್ಗ ಅಂಕಣ: ಎಸ್ಸೆಸ್ಸೆಲ್ಸಿ ಕೂಡ ಕಂಪ್ಲೀಟ್‌ ಮಾಡದ ನಿಖಿಲ್‌ ಕಾಮತ್‌ ಗೆಲುವಿನ ಗುಟ್ಟೇನು?
ನಿಖಿಲ್‌ ಕಾಮತ್‌ ಯಾರಿಗೆ ಗೊತ್ತಿಲ್ಲ ಹೇಳಿ. ಜೆರೋಧಾ ಕಂಪನಿಯ ಸ್ಥಾಪಕರಲ್ಲಿ ಒಬ್ಬರು. ಅವರು ಈಗ 9,176 ಕೋಟಿ ರೂ. ಒಡೆಯ. ಎಸ್ಸೆಸ್ಸೆಲ್ಸಿ ಕೂಡಾ ಪಾಸ್‌ ಮಾಡದ ಅವರು ಈ ಸಾಧನೆ ಮಾಡಲು ಕಾರಣವಾದ ಆ ಐಡಿಯಾ‌ ಮತ್ತು ಟರ್ನಿಂಗ್‌ ಪಾಯಿಂಟ್‌ ಯಾವುದು? ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಭಾರತ-ದಕ್ಷಿಣ ಆಫ್ರಿಕಾ ದ್ವಿತೀಯ ಟಿ 20 ಪಂದ್ಯದ ಹವಾಮಾನ ವರದಿ ಹೇಗಿದೆ?
ಡರ್ಬಾನ್​ನಲ್ಲಿ ಭಾನುವಾರ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA) ನಡುವಣ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಇತ್ತಂಡಗಳ ದ್ವಿತೀಯ ಮುಖಾಮುಖಿ ಮಂಗಳವಾರ ಗ್ಕೆಬರ್ಹಾ ಸೇಂಟ್ ಜಾರ್ಜ್ ಪಾರ್ಕ್​ನಲ್ಲಿ(St George’s Park, Gqeberha) ನಡೆಯಲಿದೆ. ಈ ಪಂದ್ಯಕ್ಕೂ ಮಳೆ ಭೀತಿ ತಪ್ಪಿದ್ದಲ್ಲ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ ಬ್ರಹ್ಮಚಾರಿ ಸಂಘ; ರಾಹುಲ್‌ ಗಾಂಧಿ ಅಧ್ಯಕ್ಷ!
ಕರ್ನಾಟಕದಲ್ಲಿ ಬ್ರಹ್ಮಚಾರಿ ಸಂಘ ಶುರುವಾಗುತ್ತಿದ್ದು, ಪಾದಯಾತ್ರೆ ಉದ್ಘಾಟನೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರೇ ಅಧ್ಯಕ್ಷರಾಗಲಿದ್ದಾರೆ. ಮಂಡ್ಯದ ಬ್ರಹ್ಮಚಾರಿಗಳು ದೇಶಾದ್ಯಂತ ಬ್ರಹ್ಮಚಾರಿ (Brahmachari Sangha) ಸಂಘಟನೆ ವಿಸ್ತರಿಸಲು ಮುಂದಾಗಿದ್ದಾರೆ. ಅಖಿಲ ಭಾರತೀಯ ಬ್ರಹ್ಮಚಾರಿಗಳ ಸಂಘಕ್ಕೆ ಅಧ್ಯಕ್ಷರಾಗಲು ಕಾಂಗ್ರೆಸ್‌ನ ಕೇಂದ್ರ ನಾಯಕ ರಾಹುಲ್ ಗಾಂಧಿ ಅವರಿಗೆ ಆಹ್ವಾನ ಕೊಟ್ಟಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version