Site icon Vistara News

Congress Karnataka: ನಿಗಮ-ಮಂಡಳಿಗಳಲ್ಲಿ 44 ಕಾಂಗ್ರೆಸ್‌ ಕಾರ್ಯಕರ್ತರಿಗೆ ಅಧಿಕಾರ ಭಾಗ್ಯ; ಸಿಎಂ ಗ್ರೀನ್ ಸಿಗ್ನಲ್

Monsoon session

ಬೆಂಗಳೂರು: ಮೊದಲ ಪಟ್ಟಿಯಲ್ಲಿ 34 ಶಾಸಕರನ್ನು ನಿಗಮ ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಕ ಮಾಡಿದ ಬೆನ್ನಲ್ಲೇ ಇದೀಗ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ಈ ಬಾರಿ ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತರಿಗೆ (Congress Karnataka) ಅಧಿಕಾರ ಭಾಗ್ಯ ದೊರೆತಿದೆ. 44 ಕಾರ್ಯಕರ್ತರನ್ನು ನಿಗಮ ಮಂಡಳಿಗಳಿಗೆ ಆಯ್ಕೆ ಮಾಡುವುದಕ್ಕೆ ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿದ್ದು, ಈ ಬಗ್ಗೆ ಗುರುವಾರ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಈ ಹಿಂದೆ ಹಲವು ಸಂದರ್ಭದಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಅಧಿಕಾರ ನೀಡಲಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಅದರಂತೆ ಈ ಬಾರಿ ಕಾರ್ಯಕರ್ತರನ್ನು ನಿಗಮ-ಮಂಡಳಿಗಳಿಗೆ ನೇಮಕ ಮಾಡಲಾಗಿದೆ.

ಇದನ್ನೂ ಓದಿ | Congress Karnataka: ಕೊನೆಗೂ ಹೊರಬಿದ್ದ ನಿಗಮ-ಮಂಡಳಿ ಪಟ್ಟಿ; 36 ಶಾಸಕರಿಗೆ ಮಣೆ, ಡಿಕೆಶಿ ಮೇಲುಗೈ

ಒಟ್ಟು 44 ಕಾಂಗ್ರೆಸ್ ಕಾರ್ಯಕರ್ತರಿಗೆ ಅಧಿಕಾರ ಸಿಕ್ಕಿದ್ದು, ಪಟ್ಟಿಯನ್ನು ಅನುಮೋದಿಸಿ ಆಯಾ ಇಲಾಖೆಗಳಿಗೆ ರವಾನೆ ಮಾಡಲಾಗಿದೆ. ಇಲಾಖೆಗಳಿಂದ ಗುರುವಾರ ಅಧಿಕೃತ ಆದೇಶ ಆಗಲಿದೆ ಮೂಲಗಳಿಂದ ತಿಳಿದುಬಂದಿದೆ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಡಾ. ನಾಗಲಕ್ಷ್ಮೀ ಚೌಧರಿ ನೇಮಕವಾಗಿದ್ದಾರೆ. ದಾಸರಹಳ್ಳಿ ಕ್ಷೇತ್ರದ ಟಿಕೆಟ್ ತ್ಯಾಗ ಮಾಡಿದ್ದ ಹಿನ್ನೆಲೆಯಲ್ಲಿ ನಾಗಲಕ್ಷ್ಮೀ ಚೌಧರಿ ಅವರನ್ನು ಮಹಿಳಾ ಆಯೋಗಕ್ಕೆ ನೇಮಕ ಮಾಡಲಾಗಿದೆ ಎನ್ನಲಾಗಿದೆ.

ನಿಗಮ-ಮಂಡಳಿ ನೇಮಕಕ್ಕೆ ಸಿಎಂ, ಡಿಸಿಎಂ ಮಧ್ಯೆ ಡಿಶುಂ ಡಿಶುಂ; ಡಿಕೆಶಿ ಮೇಲುಗೈ

CM Siddaramaiah and DK Shivakumar

ರಾಜ್ಯದ ಜನತೆ ಕಾಂಗ್ರೆಸ್‌ಗೆ 136 ಸೀಟು ಕೊಟ್ಟು ಗೆಲ್ಲಿಸಿದ್ದರೂ ಪಕ್ಷದಲ್ಲಿ (Congress Karnataka) ಈವರೆಗೆ ಡಿಶುಂ ಡಿಶುಂ ಮಾತ್ರ ನಿಂತಿಲ್ಲ. ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ತಾಳಮೇಳದಲ್ಲಿ ಆಗಾಗ ಅಪಸ್ವರ ಕೇಳಿ ಬರುತ್ತಲೇ ಇದೆ. ಇದು ನಿಗಮ – ಮಂಡಳಿ ನೇಮಕದಲ್ಲೂ ಹಾಗೇ ಆಗಿದೆ. ಇದೀಗ ಕಾರ್ಯಕರ್ತರಿಗೆ ಅಧಿಕಾರ ನೀಡಲು ಹೈಕಮಾಂಡ್‌ ಮಣೆ ಹಾಕಿರುವುದರಿಂದ ಡಿಕೆಶಿ ಮೇಲುಗೈ ಸಾಧಿಸಿದಂತಾಗಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ 6 ತಿಂಗಳಾದರೂ ಸಹ ನಿಗಮ-ಮಂಡಳಿಗಳ ನೇಮಕಕ್ಕೆ ಸರ್ಕಸ್ ಮುಂದುವರಿದಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಒಮ್ಮತಕ್ಕೆ ಬಾರದೇ ಇರುವುದರಿಂದ ನೇಮಕಕ್ಕೆ ಬ್ರೇಕ್ ಬಿದ್ದಿದೆ. ತಮ್ಮ ತಮ್ಮ ಆಪ್ತರಿಗೆ ಅಧಿಕಾರ ಕೊಡಿಸುವ ಗುರಿಯಲ್ಲಿ ಸಿದ್ದರಾಮಯ್ಯ-ಡಿಕೆಶಿಯಿಂದ ನಾನಾ – ನೀನಾ ಫೈಟ್‌ ಶುರುವಾಗಿರುವುದೇ ಈ ಎಲ್ಲ ಗೊಂದಲಕ್ಕೆ ಕಾರಣವಾಗಿದೆ.

ಕೈಗೂಡದ ಸಭೆ; ಮೂಡದ ಒಮ್ಮತ

ನವೆಂಬರ್‌ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾಧ ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್ ನಡೆಸಿದ್ದ ಸಭೆ ವಿಫಲವಾಗಿತ್ತು. ಪಂಚರಾಜ್ಯಗಳ ಚುನಾವಣೆ ಮಧ್ಯೆಯೇ ಕಾಂಗ್ರೆಸ್ ವರಿಷ್ಠರು ಸಂಧಾನ ನಡೆಸಿ ಒಮ್ಮತದ ತೀರ್ಮಾನವನ್ನು ತೆಗೆದುಕೊಳ್ಳಲು ಪ್ರಯತ್ನ ಪಟ್ಟಿದ್ದರು. ಆದರೆ, ಈ ಸಭೆಯೂ ಫಲಗೂಡಲಿಲ್ಲ. ನಾನು ಜಗ್ಗಲ್ಲ.. ನಾನು ಬಗ್ಗಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರೆ, ನಾನೇ ಸುಪ್ರೀಂ ಅಂತಾ ಸಿದ್ದರಾಮಯ್ಯ ಪಟ್ಟು ಹಿಡಿದು ಕುಳಿತಿದ್ದಾರೆ. 3 ಮೀಟಿಂಗ್‌ ಮಾಡಿದರೂ ಒಮ್ಮತ ಮೂಡದಿರುವ ಕಾರಣಕ್ಕೆ ರಣದೀಪ್‌ ಸಿಂಗ್‌ ಸುರ್ಜೇವಾಲಾ, ವೇಣುಗೋಪಾಲ್ ರಿಟರ್ನ್‌ ಆಗಿದ್ದಾರೆ. ಹೀಗಾಗಿ ಡಿಸೆಂಬರ್‌ 2ನೇ ವಾರ ಬಂದರೂ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ.

ಇಬ್ಬರ ಬಳಿಯೂ ಒಂದೊಂದು ಪಟ್ಟಿ!

ಸಿಎಂ ಸಿದ್ದರಾಮಯ್ಯ ಬಳಿ ಒಂದು ಪಟ್ಟಿ, ಡಿಸಿಎಂ ಡಿ.ಕೆ. ಶಿವಕುಮಾರ್ ಬಳಿ ಇನ್ನೊಂದು ಪಟ್ಟಿ ಇದೆ. ಸಿದ್ದರಾಮಯ್ಯ ರೆಡಿ ಮಾಡಿಟ್ಟುಕೊಂಡಿರುವ ಪಟ್ಟಿಗೆ ಡಿ.ಕೆ.ಶಿವಕುಮಾರ್ ಒಪ್ಪೋಕೆ ಸಿದ್ಧರಿಲ್ಲ. ಅದೇ ಡಿಸಿಎಂ ಡಿ.ಕೆ. ಶಿವಕುಮಾರ್‌ ತೋರಿಸುತ್ತಿರುವ ಪಟ್ಟಿಗೆ ಸಿಎಂ ಸಿದ್ದರಾಮಯ್ಯ ಸುತಾರಾಂ ಒಪ್ಪುತ್ತಿಲ್ಲ.

ಸುರ್ಜೇವಾಲ ಮುಂದೆ ಸಿದ್ದರಾಮಯ್ಯ ಹೇಳಿದ್ದೇನು?
ಲೋಕಸಭಾ ಚುನಾವಣೆ ಸಮೀಪ ಬರುತ್ತಿರುವುದರಿಂದ ಮೊದಲ ಪಟ್ಟಿಯಲ್ಲಿ ಶಾಸಕರಿಗೆ ಸ್ಥಾನವನ್ನು ಕಲ್ಪಿಸೋಣ. ಚುನಾವಣೆ ಎದುರಿಸಲು ಸರ್ಕಾರದಲ್ಲಿ ಅಸಮಾಧಾನ ವ್ಯಕ್ತಪಡಿಸುವ ಶಾಸಕರು ಇರಬಾರದು. ಹೀಗಾಗಿ ಶಾಸಕರಿಗೆ ಮಣೆ ಹಾಕಿ ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ಮುಂದೆ ಸಿಎಂ ಸಿದ್ದರಾಮಯ್ಯ ತಮ್ಮ ವಾದವನ್ನು ಮಂಡಿಸಿದ್ದಾರೆ.

ಡಿಕೆಶಿ ವಾದಕ್ಕೆ ಸಿದ್ದರಾಮಯ್ಯ ಪ್ರತಿವಾದ

ಕಾರ್ಯಕರ್ತರ ಕೈಗೆ ಅಧಿಕಾರ ಕೊಡಬೇಕು, ಅದರಲ್ಲಿ ನನ್ನ ತಕರಾರು ಇಲ್ಲ. ಆದರೆ, ಕಾರ್ಯಕರ್ತರು ನಮ್ಮ ಮಾತು ಕೇಳುತ್ತಾರೆ, ಶಾಸಕರ ಮಾತು ಕೇಳುತ್ತಾರೆ. ಹೀಗಾಗಿ ಮೊದಲ ಪಟ್ಟಿಯಲ್ಲಿ ಶಾಸಕರಿಗೆ ಕೊಡೋಣ. ಬಹಿರಂಗ ಅಸಮಾಧಾನ ಹೇಳಿಕೆಗಳಿಗೆ ಕಡಿವಾಣ ಹಾಕಲು ನಾನು ಸೂಚಿಸಿದ ಪಟ್ಟಿಯನ್ನು ಫೈನಲ್‌ ಮಾಡಿ ಸಿಎಂ ಸಿದ್ದರಾಮಯ್ಯ ಪ್ರತಿವಾದ ಮಂಡಿಸಿದ್ದಾರೆ.

ಸಿದ್ದರಾಮಯ್ಯ ಪ್ರತಿವಾದಕ್ಕೆ ಡಿಕೆಶಿ ಕೌಂಟರ್‌

ನಾನು ಎಲ್ಲವನ್ನೂ ತ್ಯಾಗ ಮಾಡಿದ್ದೇನೆ. ನಾನು ಕೇಳುತ್ತಿರುವುದು ಚುನಾವಣೆಯಲ್ಲಿ ಕೆಲಸ ಮಾಡಿದ ಶಾಸಕರು ಮತ್ತು ಕಾರ್ಯಕರ್ತರಿಗೆ ಅವಕಾಶ ಕೊಡಿ ಎಂದು. ನನ್ನ ಮಾತು ಕೇಳಿ ಅವರ ಕೈಗೆ ಅವಕಾಶ ಕೊಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೌಂಟರ್‌ ನೀಡಿದ್ದಾರೆ.

ಇದನ್ನೂ ಓದಿ | DK Shivakumar : ಹಿಮಾಚಲ ಕಾಂಗ್ರೆಸ್‌ ಸರ್ಕಾರದ ರಕ್ಷಣೆಗೆ ಟ್ರಬಲ್‌ ಶೂಟರ್‌ ಡಿಕೆಶಿ ಎಂಟ್ರಿ

ಉಭಯ ನಾಯಕರಿಗೆ ಸುರ್ಜೇವಾಲ ಹೇಳಿದ್ದೇನು?
ಇಬ್ಬರ ಪಟ್ಟಿಯನ್ನು ನಾನು ತೆಗೆದುಕೊಂಡು ಹೋಗುತ್ತೇನೆ. ದೆಹಲಿಗೆ ಪಟ್ಟಿ ತೆಗೆದುಕೊಂಡು ಹೋಗುತ್ತೇನೆ. ನಿಮ್ಮನ್ನು ಕರೆದಾಗ ಬನ್ನಿ ಚರ್ಚೆ ಮಾಡಿ ಫೈನಲ್‌ ಮಾಡೋಣ ಎಂದು ರಣದೀಪ್‌ ಸಿಂಗ್ ಸುರ್ಜೇವಾಲ‌ ಹೇಳಿದ್ದಾರೆ.

ಸಿದ್ದರಾಮಯ್ಯ ಬಣದ ಆಕಾಂಕ್ಷಿಗಳು..!

ಡಿ.ಕೆ. ಶಿವಕುಮಾರ್‌ ಬಣದ ಆಕಾಂಕ್ಷಿಗಳು

Exit mobile version