Congress Karnataka: ನಿಗಮ-ಮಂಡಳಿಗಳಲ್ಲಿ 44 ಕಾಂಗ್ರೆಸ್‌ ಕಾರ್ಯಕರ್ತರಿಗೆ ಅಧಿಕಾರ ಭಾಗ್ಯ; ಸಿಎಂ ಗ್ರೀನ್ ಸಿಗ್ನಲ್ - Vistara News

ಪ್ರಮುಖ ಸುದ್ದಿ

Congress Karnataka: ನಿಗಮ-ಮಂಡಳಿಗಳಲ್ಲಿ 44 ಕಾಂಗ್ರೆಸ್‌ ಕಾರ್ಯಕರ್ತರಿಗೆ ಅಧಿಕಾರ ಭಾಗ್ಯ; ಸಿಎಂ ಗ್ರೀನ್ ಸಿಗ್ನಲ್

Congress Karnataka: ಕಾಂಗ್ರೆಸ್‌ ಸರ್ಕಾರದಲ್ಲಿ ಸಾಮಾನ್ಯ ಕೈ ಕಾರ್ಯಕರ್ತರಿಗೂ ಅಧಿಕಾರ ನೀಡಲಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಈ ಹಿಂದೆ ಹಲವು ಬಾರಿ ಹೇಳಿದ್ದರು. ಅದರಂತೆ ಈ ಬಾರಿ ನಿಗಮ ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗಿದೆ.

VISTARANEWS.COM


on

44 Congress workers to get power in corporations and boards
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮೊದಲ ಪಟ್ಟಿಯಲ್ಲಿ 34 ಶಾಸಕರನ್ನು ನಿಗಮ ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಕ ಮಾಡಿದ ಬೆನ್ನಲ್ಲೇ ಇದೀಗ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ಈ ಬಾರಿ ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತರಿಗೆ (Congress Karnataka) ಅಧಿಕಾರ ಭಾಗ್ಯ ದೊರೆತಿದೆ. 44 ಕಾರ್ಯಕರ್ತರನ್ನು ನಿಗಮ ಮಂಡಳಿಗಳಿಗೆ ಆಯ್ಕೆ ಮಾಡುವುದಕ್ಕೆ ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿದ್ದು, ಈ ಬಗ್ಗೆ ಗುರುವಾರ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಈ ಹಿಂದೆ ಹಲವು ಸಂದರ್ಭದಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಅಧಿಕಾರ ನೀಡಲಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಅದರಂತೆ ಈ ಬಾರಿ ಕಾರ್ಯಕರ್ತರನ್ನು ನಿಗಮ-ಮಂಡಳಿಗಳಿಗೆ ನೇಮಕ ಮಾಡಲಾಗಿದೆ.

ಇದನ್ನೂ ಓದಿ | Congress Karnataka: ಕೊನೆಗೂ ಹೊರಬಿದ್ದ ನಿಗಮ-ಮಂಡಳಿ ಪಟ್ಟಿ; 36 ಶಾಸಕರಿಗೆ ಮಣೆ, ಡಿಕೆಶಿ ಮೇಲುಗೈ

ಒಟ್ಟು 44 ಕಾಂಗ್ರೆಸ್ ಕಾರ್ಯಕರ್ತರಿಗೆ ಅಧಿಕಾರ ಸಿಕ್ಕಿದ್ದು, ಪಟ್ಟಿಯನ್ನು ಅನುಮೋದಿಸಿ ಆಯಾ ಇಲಾಖೆಗಳಿಗೆ ರವಾನೆ ಮಾಡಲಾಗಿದೆ. ಇಲಾಖೆಗಳಿಂದ ಗುರುವಾರ ಅಧಿಕೃತ ಆದೇಶ ಆಗಲಿದೆ ಮೂಲಗಳಿಂದ ತಿಳಿದುಬಂದಿದೆ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಡಾ. ನಾಗಲಕ್ಷ್ಮೀ ಚೌಧರಿ ನೇಮಕವಾಗಿದ್ದಾರೆ. ದಾಸರಹಳ್ಳಿ ಕ್ಷೇತ್ರದ ಟಿಕೆಟ್ ತ್ಯಾಗ ಮಾಡಿದ್ದ ಹಿನ್ನೆಲೆಯಲ್ಲಿ ನಾಗಲಕ್ಷ್ಮೀ ಚೌಧರಿ ಅವರನ್ನು ಮಹಿಳಾ ಆಯೋಗಕ್ಕೆ ನೇಮಕ ಮಾಡಲಾಗಿದೆ ಎನ್ನಲಾಗಿದೆ.

ನಿಗಮ-ಮಂಡಳಿ ನೇಮಕಕ್ಕೆ ಸಿಎಂ, ಡಿಸಿಎಂ ಮಧ್ಯೆ ಡಿಶುಂ ಡಿಶುಂ; ಡಿಕೆಶಿ ಮೇಲುಗೈ

CM Siddaramaiah and DK Shivakumar

ರಾಜ್ಯದ ಜನತೆ ಕಾಂಗ್ರೆಸ್‌ಗೆ 136 ಸೀಟು ಕೊಟ್ಟು ಗೆಲ್ಲಿಸಿದ್ದರೂ ಪಕ್ಷದಲ್ಲಿ (Congress Karnataka) ಈವರೆಗೆ ಡಿಶುಂ ಡಿಶುಂ ಮಾತ್ರ ನಿಂತಿಲ್ಲ. ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ತಾಳಮೇಳದಲ್ಲಿ ಆಗಾಗ ಅಪಸ್ವರ ಕೇಳಿ ಬರುತ್ತಲೇ ಇದೆ. ಇದು ನಿಗಮ – ಮಂಡಳಿ ನೇಮಕದಲ್ಲೂ ಹಾಗೇ ಆಗಿದೆ. ಇದೀಗ ಕಾರ್ಯಕರ್ತರಿಗೆ ಅಧಿಕಾರ ನೀಡಲು ಹೈಕಮಾಂಡ್‌ ಮಣೆ ಹಾಕಿರುವುದರಿಂದ ಡಿಕೆಶಿ ಮೇಲುಗೈ ಸಾಧಿಸಿದಂತಾಗಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ 6 ತಿಂಗಳಾದರೂ ಸಹ ನಿಗಮ-ಮಂಡಳಿಗಳ ನೇಮಕಕ್ಕೆ ಸರ್ಕಸ್ ಮುಂದುವರಿದಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಒಮ್ಮತಕ್ಕೆ ಬಾರದೇ ಇರುವುದರಿಂದ ನೇಮಕಕ್ಕೆ ಬ್ರೇಕ್ ಬಿದ್ದಿದೆ. ತಮ್ಮ ತಮ್ಮ ಆಪ್ತರಿಗೆ ಅಧಿಕಾರ ಕೊಡಿಸುವ ಗುರಿಯಲ್ಲಿ ಸಿದ್ದರಾಮಯ್ಯ-ಡಿಕೆಶಿಯಿಂದ ನಾನಾ – ನೀನಾ ಫೈಟ್‌ ಶುರುವಾಗಿರುವುದೇ ಈ ಎಲ್ಲ ಗೊಂದಲಕ್ಕೆ ಕಾರಣವಾಗಿದೆ.

ಕೈಗೂಡದ ಸಭೆ; ಮೂಡದ ಒಮ್ಮತ

ನವೆಂಬರ್‌ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾಧ ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್ ನಡೆಸಿದ್ದ ಸಭೆ ವಿಫಲವಾಗಿತ್ತು. ಪಂಚರಾಜ್ಯಗಳ ಚುನಾವಣೆ ಮಧ್ಯೆಯೇ ಕಾಂಗ್ರೆಸ್ ವರಿಷ್ಠರು ಸಂಧಾನ ನಡೆಸಿ ಒಮ್ಮತದ ತೀರ್ಮಾನವನ್ನು ತೆಗೆದುಕೊಳ್ಳಲು ಪ್ರಯತ್ನ ಪಟ್ಟಿದ್ದರು. ಆದರೆ, ಈ ಸಭೆಯೂ ಫಲಗೂಡಲಿಲ್ಲ. ನಾನು ಜಗ್ಗಲ್ಲ.. ನಾನು ಬಗ್ಗಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರೆ, ನಾನೇ ಸುಪ್ರೀಂ ಅಂತಾ ಸಿದ್ದರಾಮಯ್ಯ ಪಟ್ಟು ಹಿಡಿದು ಕುಳಿತಿದ್ದಾರೆ. 3 ಮೀಟಿಂಗ್‌ ಮಾಡಿದರೂ ಒಮ್ಮತ ಮೂಡದಿರುವ ಕಾರಣಕ್ಕೆ ರಣದೀಪ್‌ ಸಿಂಗ್‌ ಸುರ್ಜೇವಾಲಾ, ವೇಣುಗೋಪಾಲ್ ರಿಟರ್ನ್‌ ಆಗಿದ್ದಾರೆ. ಹೀಗಾಗಿ ಡಿಸೆಂಬರ್‌ 2ನೇ ವಾರ ಬಂದರೂ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ.

ಇಬ್ಬರ ಬಳಿಯೂ ಒಂದೊಂದು ಪಟ್ಟಿ!

ಸಿಎಂ ಸಿದ್ದರಾಮಯ್ಯ ಬಳಿ ಒಂದು ಪಟ್ಟಿ, ಡಿಸಿಎಂ ಡಿ.ಕೆ. ಶಿವಕುಮಾರ್ ಬಳಿ ಇನ್ನೊಂದು ಪಟ್ಟಿ ಇದೆ. ಸಿದ್ದರಾಮಯ್ಯ ರೆಡಿ ಮಾಡಿಟ್ಟುಕೊಂಡಿರುವ ಪಟ್ಟಿಗೆ ಡಿ.ಕೆ.ಶಿವಕುಮಾರ್ ಒಪ್ಪೋಕೆ ಸಿದ್ಧರಿಲ್ಲ. ಅದೇ ಡಿಸಿಎಂ ಡಿ.ಕೆ. ಶಿವಕುಮಾರ್‌ ತೋರಿಸುತ್ತಿರುವ ಪಟ್ಟಿಗೆ ಸಿಎಂ ಸಿದ್ದರಾಮಯ್ಯ ಸುತಾರಾಂ ಒಪ್ಪುತ್ತಿಲ್ಲ.

ಸುರ್ಜೇವಾಲ ಮುಂದೆ ಸಿದ್ದರಾಮಯ್ಯ ಹೇಳಿದ್ದೇನು?
ಲೋಕಸಭಾ ಚುನಾವಣೆ ಸಮೀಪ ಬರುತ್ತಿರುವುದರಿಂದ ಮೊದಲ ಪಟ್ಟಿಯಲ್ಲಿ ಶಾಸಕರಿಗೆ ಸ್ಥಾನವನ್ನು ಕಲ್ಪಿಸೋಣ. ಚುನಾವಣೆ ಎದುರಿಸಲು ಸರ್ಕಾರದಲ್ಲಿ ಅಸಮಾಧಾನ ವ್ಯಕ್ತಪಡಿಸುವ ಶಾಸಕರು ಇರಬಾರದು. ಹೀಗಾಗಿ ಶಾಸಕರಿಗೆ ಮಣೆ ಹಾಕಿ ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ಮುಂದೆ ಸಿಎಂ ಸಿದ್ದರಾಮಯ್ಯ ತಮ್ಮ ವಾದವನ್ನು ಮಂಡಿಸಿದ್ದಾರೆ.

ಡಿಕೆಶಿ ವಾದಕ್ಕೆ ಸಿದ್ದರಾಮಯ್ಯ ಪ್ರತಿವಾದ

ಕಾರ್ಯಕರ್ತರ ಕೈಗೆ ಅಧಿಕಾರ ಕೊಡಬೇಕು, ಅದರಲ್ಲಿ ನನ್ನ ತಕರಾರು ಇಲ್ಲ. ಆದರೆ, ಕಾರ್ಯಕರ್ತರು ನಮ್ಮ ಮಾತು ಕೇಳುತ್ತಾರೆ, ಶಾಸಕರ ಮಾತು ಕೇಳುತ್ತಾರೆ. ಹೀಗಾಗಿ ಮೊದಲ ಪಟ್ಟಿಯಲ್ಲಿ ಶಾಸಕರಿಗೆ ಕೊಡೋಣ. ಬಹಿರಂಗ ಅಸಮಾಧಾನ ಹೇಳಿಕೆಗಳಿಗೆ ಕಡಿವಾಣ ಹಾಕಲು ನಾನು ಸೂಚಿಸಿದ ಪಟ್ಟಿಯನ್ನು ಫೈನಲ್‌ ಮಾಡಿ ಸಿಎಂ ಸಿದ್ದರಾಮಯ್ಯ ಪ್ರತಿವಾದ ಮಂಡಿಸಿದ್ದಾರೆ.

ಸಿದ್ದರಾಮಯ್ಯ ಪ್ರತಿವಾದಕ್ಕೆ ಡಿಕೆಶಿ ಕೌಂಟರ್‌

ನಾನು ಎಲ್ಲವನ್ನೂ ತ್ಯಾಗ ಮಾಡಿದ್ದೇನೆ. ನಾನು ಕೇಳುತ್ತಿರುವುದು ಚುನಾವಣೆಯಲ್ಲಿ ಕೆಲಸ ಮಾಡಿದ ಶಾಸಕರು ಮತ್ತು ಕಾರ್ಯಕರ್ತರಿಗೆ ಅವಕಾಶ ಕೊಡಿ ಎಂದು. ನನ್ನ ಮಾತು ಕೇಳಿ ಅವರ ಕೈಗೆ ಅವಕಾಶ ಕೊಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೌಂಟರ್‌ ನೀಡಿದ್ದಾರೆ.

ಇದನ್ನೂ ಓದಿ | DK Shivakumar : ಹಿಮಾಚಲ ಕಾಂಗ್ರೆಸ್‌ ಸರ್ಕಾರದ ರಕ್ಷಣೆಗೆ ಟ್ರಬಲ್‌ ಶೂಟರ್‌ ಡಿಕೆಶಿ ಎಂಟ್ರಿ

ಉಭಯ ನಾಯಕರಿಗೆ ಸುರ್ಜೇವಾಲ ಹೇಳಿದ್ದೇನು?
ಇಬ್ಬರ ಪಟ್ಟಿಯನ್ನು ನಾನು ತೆಗೆದುಕೊಂಡು ಹೋಗುತ್ತೇನೆ. ದೆಹಲಿಗೆ ಪಟ್ಟಿ ತೆಗೆದುಕೊಂಡು ಹೋಗುತ್ತೇನೆ. ನಿಮ್ಮನ್ನು ಕರೆದಾಗ ಬನ್ನಿ ಚರ್ಚೆ ಮಾಡಿ ಫೈನಲ್‌ ಮಾಡೋಣ ಎಂದು ರಣದೀಪ್‌ ಸಿಂಗ್ ಸುರ್ಜೇವಾಲ‌ ಹೇಳಿದ್ದಾರೆ.

ಸಿದ್ದರಾಮಯ್ಯ ಬಣದ ಆಕಾಂಕ್ಷಿಗಳು..!

 • ಪಿಎಂ ನರೇಂದ್ರ ಸ್ವಾಮಿ
 • ಶಿವಲಿಂಗೇಗೌಡ
 • ಅನಿಲ್‌ ಚಿಕ್ಕಮಾದು
 • ಬಂಗಾರಪೇಟೆ ನಾರಾಯಣಸ್ವಾಮಿ
 • ಕೆ.ವೈ. ನಂಜೇಗೌಡ
 • ಬಿ.ಆರ್‌. ಪಾಟೀಲ್‌‌
 • ಗಣೇಶ್‌ ಹುಕ್ಕೇರಿ
 • ಮಹಾಂತೇಶ್‌ ಕೌಜಲಗಿ
 • ಯಶವಂತರಾಯಗೌಡ ಪಾಟೀಲ್‌
 • ಬಿ.ಜಿ ಗೋವಿಂದಪ್ಪ
 • ರಾಘವೇಂದ್ರ ಹಿಟ್ನಾಲ್‌‌
 • ರಘುಮೂರ್ತಿ
 • ಪ್ರಸಾದ್‌‌ ಅಬ್ಬಯ್ಯ
 • ಜೆ.ಟಿ. ಪಾಟೀಲ್‌
 • ವಿಜಯಾನಂದ ಕಾಶಪ್ಪನವರ್‌
 • ನಾಡಗೌಡ
 • ಪ್ರಿಯಕೃಷ್ಣ
 • ರಿಜ್ವಾನ್‌ ಅರ್ಷಾದ್‌‌‌

ಡಿ.ಕೆ. ಶಿವಕುಮಾರ್‌ ಬಣದ ಆಕಾಂಕ್ಷಿಗಳು

 • ರಮೇಶ್‌‌ ಬಂಡಿಸಿದ್ದೇಗೌಡ
 • ಟಿ.ಡಿ. ರಾಜೇಗೌಡ
 • ಬಿ.ಕೆ. ಸಂಗಮೇಶ್‌‌
 • ಸತೀಶ್‌ ಸೈಲ್‌
 • ಬಸವನಗೌಡ ತುರುವಿಹಾಳ್‌‌
 • ಬಾಲಕೃಷ್ಣ
 • ಕೊತ್ತನೂರು ಮಂಜು
 • ಶರತ್‌ ಬಚ್ಚೇಗೌಡ
 • ಡಾ.ರಂಗನಾಥ್‌‌
 • ಬಸವರಾಜ ಶಿವಗಂಗ
 • ಬೇಲೂರು ಗೋಪಾಲಕೃಷ್ಣ
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Rishabh Pant: ಐಪಿಎಲ್​ನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ರಿಷಭ್ ಪಂತ್​

Rishabh Pant: ರಿಷಭ್ ಪಂತ್ ಕಾರು ಅವಘಡದಿಂದ ಉಂಟಾದ ಗಾಯಗಳಿಂದಾಗಿ 2023ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡಿರಲಿಲ್ಲ. ಸುಮಾರು ಒಂದೂವರೆ ವರ್ಷದ ಬಳಿಕ ವೃತ್ತಿಪರ ಕ್ರಿಕೆಟ್​ಗೆ ಮರಳಿದ ಅವರು ಅಬ್ಬರಿಸಲು ಆರಂಭಿಸಿದ್ದಾರೆ. ಏತನ್ಮಧ್ಯೆ ಅವರು ಈ ಮಹತ್ಸಾಧನೆ ಮಾಡಿದ್ದಾರೆ.

VISTARANEWS.COM


on

Rishabh Pant
Koo

ಲಖನೌ: ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ (Rishabh Pant) ಐಪಿಎಲ್​​ನಲ್ಲಿ 3000 ರನ್ ಗಡಿ ದಾಟಿದ ಸಾಧನೆ ಮಾಡಿದ್ದಾರೆ. ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ವಿರುದ್ದದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ‘ಮಿರಾಕಲ್ ಮ್ಯಾನ್’ 104 ಐಪಿಎಲ್ ಪಂದ್ಯಗಳನ್ನು ಆಡಿದ್ದು, 34.61 ಸರಾಸರಿಯಲ್ಲಿ 3000 ರನ್ ಗಡಿ ದಾಟಿದ್ದಾರೆ. ಈ ಮೂಲಕ ಅವರು ಮತ್ತೊಂದು ಸಾಧನೆ ಮಾಡಿದ್ದಾರೆ. ಪಂದ್ಯದಲ್ಲಿ ಅವರು ಸ್ಫೋಟಕ 41 ರನ್ ಬಾರಿಸಿದ್ದಾರೆ. ಈ ಮೂಲಕ ಅವರ ನೇತೃತ್ವದ ತಂಡವು ಹಾಲಿ ಐಪಿಎಲ್​ನಲ್ಲಿ 2ನೇ ಗೆಲವು ದಾಖಲಿಸಿದೆ.

ರಿಷಭ್ ಪಂತ್ ಕಾರು ಅವಘಡದಿಂದ ಉಂಟಾದ ಗಾಯಗಳಿಂದಾಗಿ 2023ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡಿರಲಿಲ್ಲ. ಸುಮಾರು ಒಂದೂವರೆ ವರ್ಷದ ಬಳಿಕ ವೃತ್ತಿಪರ ಕ್ರಿಕೆಟ್​ಗೆ ಮರಳಿದ ಅವರು ಅಬ್ಬರಿಸಲು ಆರಂಭಿಸಿದ್ದಾರೆ. ಏತನ್ಮಧ್ಯೆ ಅವರು ಈ ಮಹತ್ಸಾಧನೆ ಮಾಡಿದ್ದಾರೆ.

ಐಪಿಎಲ್​ನಲ್ಲಿ 3,000 ರನ್ ಪೂರೈಸಿದ ಅತ್ಯಂತ ಕಿರಿಯ ಆಟಗಾರು ಇವರು

 • 24y, 215d – ಶುಬ್ಮನ್ ಗಿಲ್
 • 26y, 186d – ವಿರಾಟ್ ಕೊಹ್ಲಿ
 • 26y, 191d – ರಿಷಭ್ ಪಂತ್
 • 26y, 320d – ಸಂಜು ಸ್ಯಾಮ್ಸನ್
 • 27y, 161d – ಸುರೇಶ್ ರೈನಾ

ಡೆಲ್ಲಿ 6 ವಿಕೆಟ್ ವಿಜಯ

ಲಖನೌ: ಕುಲ್ದೀಪ್ ಯಾದವ್​ (20 ರನ್​ಗೆ 3 ವಿಕೆಟ್) ಮಾರಕ ಬೌಲಿಂಗ್​​ ಹಾಗೂ ಜೇಕ್ ಫ್ರೇಸರ್-ಮೆಕ್ಗುರ್ಕ್ (55 ರನ್​) ಅರ್ಧ ಶತಕದ ನೆರವು ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 2024ರ (IPL 2024) 26ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್​ಗಳ ಗೆಲುವು ಸಾಧಿಸಿದೆ. ಇದು ಡೆಲ್ಲಿ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಲಭಿಸಿದ ಎರಡನೇ ಗೆಲುವಾಗಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಆರ್​ಸಿಬಿಯನ್ನು ಒಂದು ಸ್ಥಾನ ಕೆಳಕ್ಕೆ ತಳ್ಳಿ 9ನೇ ಸ್ಥಾನಕ್ಕೆ ಏರಿದೆ. ಸೋಲಿನ ಹೊರತಾಗಿಯೂ ಲಕ್ನೊ ತಂಡ ನಾಲ್ಕನೇ ಸ್ಥಾನದಲ್ಲಿ ಉಳಿದಿದೆ.

ಇಲ್ಲಿನ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 167 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಡೆಲ್ಲಿ ತಂಡ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್​ಗೆ 170 ರನ್ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ತವರಿನ ತಂಡಕ್ಕೆ ಸೋಲುಣಿಸಿ ಗೆಲುವಿನ ಹಳಿಗೆ ಮರಳಿತು. ರಿಷಭ್ ಪಂತ್ ಕೂಡ ಬ್ಯಾಟಿಂಗ್​ನಲ್ಲಿ ಅಮೋಘ ಪ್ರದರ್ಶನ ನೀಡಿದರು. ಅವರು 24 ಎಸೆತಕ್ಕೆ 41 ರನ್ ಬಾರಿಸಿತು.

ಇದನ್ನೂ ಓದಿ: IPL 2024 : ಆನ್​ಫೀಲ್ಡ್​ ಅಂಪೈರ್​ ಜತೆ ವಾಗ್ವಾದ ನಡೆಸಿದ ರಿಷಭ್ ಪಂತ್​; ಏನಾಯಿತು ಅವರಿಗೆ?

ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ಹೆಚ್ಚು ಪರಿಣಾಮಕಾರಿಯಾಗಿ ಬ್ಯಾಟ್ ಮಾಡಲಿಲ್ಲ. ಕ್ವಿಂಟನ್ ಡಿ ಕಾಕ್​ 19 ರನ್​ಗೆ ಔಟಾದರೆ ರಾಹುಲ್ 22 ಎಸೆತಕ್ಕೆ 39 ರನ್ ಬಾರಿಸಿ ಔಟಾದರು. ನಂತರದಲ್ಲಿ ಲಕ್ನೊ ಬ್ಯಾಟಿಂಗ್ ಬಲ ಕುಸಿಯಿತು. ದೇವದತ್​​ ಪಡಿಕ್ಕಲ್​ 3, ಸ್ಟೊಯ್ನಿಸ್​ 8 ರನ್​, ಪೂರನ್​ ಶೂನ್ಯಕ್ಕೆ ಔಟಾದರು. 89 ರನ್​ಗೆ 6 ವಿಕೆಟ್​ ಕಳೆದುಕೊಂಡ ಲಖನೌ ಚಿಂತೆಗೆ ಬಿತ್ತು. ಈ ವೇಳೆ ಆಪದ್ಭಾಂದವ ಆಯುಷ್​​ ಬದೋನಿ 35 ಎಸೆತಕ್ಕೆ 55 ರನ್ ಬಾರಿಸಿ ತಂಡದ ಮರ್ಯಾದೆ ಉಳಿಸಿದರು. ಕೊನೆಯಲ್ಲಿ ಅರ್ಶದ್ ಖಾನ್​ 20 ರನ್ ಬಾರಿಸಿ ತಮ್ಮ ನೆರವು ಕೊಟ್ಟರು. ಡೆಲ್ಲಿ ಪರ ಖಲೀಲ್ ಅಹ್ಮದ್​ ಕೂಡ 2 ವಿಕೆಟ್ ಉರುಳಿಸಿದರು.

Continue Reading

ಪ್ರಮುಖ ಸುದ್ದಿ

IPL 2024 : ಲಕ್ನೊ ಸೂಪರ್​ ಜೈಂಟ್ಸ್ ವಿರುದ್ಧ ಡೆಲ್ಲಿ ತಂಡಕ್ಕೆ 6 ವಿಕೆಟ್​ ವಿಜಯ

IPL 2024 : ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 167 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಡೆಲ್ಲಿ ತಂಡ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್​ಗೆ 170 ರನ್ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ತವರಿನ ತಂಡಕ್ಕೆ ಸೋಲುಣಿಸಿ ಗೆಲುವಿನ ಹಳಿಗೆ ಮರಳಿತು. ರಿಷಭ್ ಪಂತ್ ಕೂಡ ಬ್ಯಾಟಿಂಗ್​ನಲ್ಲಿ ಅಮೋಘ ಪ್ರದರ್ಶನ ನೀಡಿದರು. ಅವರು 24 ಎಸೆತಕ್ಕೆ 41 ರನ್ ಬಾರಿಸಿತು.

VISTARANEWS.COM


on

IPL 2024
Koo

ಲಖನೌ: ಕುಲ್ದೀಪ್ ಯಾದವ್​ (20 ರನ್​ಗೆ 3 ವಿಕೆಟ್) ಮಾರಕ ಬೌಲಿಂಗ್​​ ಹಾಗೂ ಜೇಕ್ ಫ್ರೇಸರ್-ಮೆಕ್ಗುರ್ಕ್ (55 ರನ್​) ಅರ್ಧ ಶತಕದ ನೆರವು ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 2024ರ (IPL 2024) 26ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್​ಗಳ ಗೆಲುವು ಸಾಧಿಸಿದೆ. ಇದು ಡೆಲ್ಲಿ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಲಭಿಸಿದ ಎರಡನೇ ಗೆಲುವಾಗಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಆರ್​ಸಿಬಿಯನ್ನು ಒಂದು ಸ್ಥಾನ ಕೆಳಕ್ಕೆ ತಳ್ಳಿ 9ನೇ ಸ್ಥಾನಕ್ಕೆ ಏರಿದೆ. ಸೋಲಿನ ಹೊರತಾಗಿಯೂ ಲಕ್ನೊ ತಂಡ ನಾಲ್ಕನೇ ಸ್ಥಾನದಲ್ಲಿ ಉಳಿದಿದೆ.

ಇಲ್ಲಿನ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 167 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಡೆಲ್ಲಿ ತಂಡ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್​ಗೆ 170 ರನ್ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ತವರಿನ ತಂಡಕ್ಕೆ ಸೋಲುಣಿಸಿ ಗೆಲುವಿನ ಹಳಿಗೆ ಮರಳಿತು. ರಿಷಭ್ ಪಂತ್ ಕೂಡ ಬ್ಯಾಟಿಂಗ್​ನಲ್ಲಿ ಅಮೋಘ ಪ್ರದರ್ಶನ ನೀಡಿದರು. ಅವರು 24 ಎಸೆತಕ್ಕೆ 41 ರನ್ ಬಾರಿಸಿತು.

ಇದನ್ನೂ ಓದಿ: IPL 2024 : ಆನ್​ಫೀಲ್ಡ್​ ಅಂಪೈರ್​ ಜತೆ ವಾಗ್ವಾದ ನಡೆಸಿದ ರಿಷಭ್ ಪಂತ್​; ಏನಾಯಿತು ಅವರಿಗೆ?

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಹೊರಟ ಡೆಲ್ಲಿ ತಂಡ ಉತ್ತಮ ಆರಂಭವನ್ನೇನೂ ಪಡೆಯಲಿಲ್ಲ. ಲಯ ಕಂಡುಕೊಳ್ಳುವುದಕ್ಕೆ ಶ್ರಮಿಸುತ್ತಿದ್ದ ಡೇವಿಡ್​ ವಾರ್ನರ್​ 8 ರನ್​ಗೆ ನಿರ್ಗಮಿಸಿದರು. ಇದರೊಂದಿಗೆ 24 ರನ್​ಗಳಿಗೆ ಡೆಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ, ಪೃಥ್ವಿ ಶಾ ಉಪಯುಕ್ತ 32 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಆದರೆ 63 ರನ್​ಗೆ ಎರಡನೇ ವಿಕೆಟ್​ ಉರುಳಿತು.

ಮೆಕ್ಗುರ್ಕ್- ಪಂತ್ ಜತೆಯಾಟ

ಸಣ್ಣ ಮೊತ್ತಕ್ಕೆ ಎರಡು ವಿಕೆಟ್ ಉರುಳಿದ ಕಾರಣ ಪಂತ್​ ಹಾಗೂ ಮೆಗ್​ಕುರ್ಕ್​ ಆರಂಭದಲ್ಲಿ ಎಚ್ಚರಿಕೆಯ ಆಟವಾಡಿ ಇನಿಂಗ್ಸ್​ ಕಟ್ಟಿದರು. ಈ ಜೋಡಿ ತಂಡದ ಮೊತ್ತವನ್ನು 140ಕ್ಕೆ ಕೊಂಡೊಯ್ದಿತು. ಹೀಗಾಗಿ ಡೆಲ್ಲಿ ತಂಡಕ್ಕೆ ಗೆಲುವಿನ ಭರವಸೆ ಮೂಡಿತು. ಮೆಗ್​ಕುರ್ಕ್​ 5 ಸಿಕ್ಸರ್ ಸಮೇತ 55 ರನ್ ಬಾರಿಸಿದರೆ ಪಂತ್ ಕೂಡ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್​ 15 ಹಾಗೂ ಶಾಯ್​ ಹೋಪ್​ 11 ರನ್ ಬಾರಿಸಿದರು.

ಬದೋನಿ ಆಸರೆ

ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ಹೆಚ್ಚು ಪರಿಣಾಮಕಾರಿಯಾಗಿ ಬ್ಯಾಟ್ ಮಾಡಲಿಲ್ಲ. ಕ್ವಿಂಟನ್ ಡಿ ಕಾಕ್​ 19 ರನ್​ಗೆ ಔಟಾದರೆ ರಾಹುಲ್ 22 ಎಸೆತಕ್ಕೆ 39 ರನ್ ಬಾರಿಸಿ ಔಟಾದರು. ನಂತರದಲ್ಲಿ ಲಕ್ನೊ ಬ್ಯಾಟಿಂಗ್ ಬಲ ಕುಸಿಯಿತು. ದೇವದತ್​​ ಪಡಿಕ್ಕಲ್​ 3, ಸ್ಟೊಯ್ನಿಸ್​ 8 ರನ್​, ಪೂರನ್​ ಶೂನ್ಯಕ್ಕೆ ಔಟಾದರು. 89 ರನ್​ಗೆ 6 ವಿಕೆಟ್​ ಕಳೆದುಕೊಂಡ ಲಖನೌ ಚಿಂತೆಗೆ ಬಿತ್ತು. ಈ ವೇಳೆ ಆಪದ್ಭಾಂದವ ಆಯುಷ್​​ ಬದೋನಿ 35 ಎಸೆತಕ್ಕೆ 55 ರನ್ ಬಾರಿಸಿ ತಂಡದ ಮರ್ಯಾದೆ ಉಳಿಸಿದರು. ಕೊನೆಯಲ್ಲಿ ಅರ್ಶದ್ ಖಾನ್​ 20 ರನ್ ಬಾರಿಸಿ ತಮ್ಮ ನೆರವು ಕೊಟ್ಟರು. ಡೆಲ್ಲಿ ಪರ ಖಲೀಲ್ ಅಹ್ಮದ್​ ಕೂಡ 2 ವಿಕೆಟ್ ಉರುಳಿಸಿದರು.

Continue Reading

ಪ್ರಮುಖ ಸುದ್ದಿ

Khalistani Terrorist : ದೆಹಲಿ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನಿ ಉಗ್ರ ಪ್ರಭ್​ಪ್ರೀತ್ ಸಿಂಗ್ ಸೆರೆ

Khalistani Terrorist : ಖಲಿಸ್ತಾನ್ ಜಿಂದಾಬಾದ್ ಫೋರ್ಸ್ (ಕೆಜೆಡ್ಎಫ್) ಉಗ್ರ ಪ್ರಭ್​ ಪ್ರೀತ್​ ಸಿಂಗ್ ಜರ್ಮನಿಯನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಭಯೋತ್ಪಾದಕ ನೇಮಕ, ಧನಸಹಾಯ ಮತ್ತು ಸಹಾಯ ಮಾಡ್ಯೂಲ್ ಅನ್ನು ನಡೆಸುತ್ತಿದ್ದನು” ಎಂದು ಪಂಜಾಬ್​​ನ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

VISTARANEWS.COM


on

Khalistan Terrorist
Koo

ನವ ದೆಹಲಿ: ಖಲಿಸ್ತಾನ್ ಜಿಂದಾಬಾದ್ ಫೋರ್ಸ್ ಗೆ ಸೇರಿದ ಉಗ್ರ (Khalistani terrorist) ಪ್ರಭ್ ಪ್ರೀತ್ ಸಿಂಗ್ ನನ್ನು ಪಂಜಾಬ್ ಪೊಲೀಸರು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Delhi Airport)ಬಂಧಿಸಿದ್ದಾರೆ. ಖಲಿಸ್ತಾನ್ ಜಿಂದಾಬಾದ್ ಫೋರ್ಸ್ ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿದೆ. ಪ್ರಭ್​ಪ್ರೀತ್​ ​ಸಿಂಗ್ ಪೋಲೆಂಡ್​ ವೀಸಾ ಮೂಲಕ ಜರ್ಮನಿಗೆ ಹೋಗಿ ನೆಲೆಸಿದ್ದ. ಅಲ್ಲಿ ಖಲಿಸ್ತಾನಿ ಭಯೋತ್ಪಾದಕ ಮಾಡ್ಯೂಲ್​​ಗೆ ಉಗ್ರರ ನೇಮಕ ಮತ್ತು ಧನಸಹಾಯ ಮಾಡಿದ್ದ.

ಪಂಜಾಬ್ ಪೊಲೀಸರ ರಾಜ್ಯ ವಿಶೇಷ ಕಾರ್ಯಾಚರಣೆ ವಿಭಾಗ, ನಿಷೇಧಿತ ಖಲಿಸ್ತಾನ್ ಪ್ರತ್ಯೇಕತಾವಾದಿ ಸಂಘಟನೆಯ ಕಾರ್ಯಕರ್ತನನ್ನು ಪ್ರಭ್​ಪ್ರೀತ್​ನನ್ನು ಬಂಧಿಸಿದೆ ಎಂದು ಮಾಹಿತಿ ನೀಡಿದೆ. ಖಲಿಸ್ತಾನ್ ಜಿಂದಾಬಾದ್ ಫೋರ್ಸ್ (ಕೆಜೆಡ್ಎಫ್) ಉಗ್ರ ಪ್ರಭ್​ ಪ್ರೀತ್​ ಸಿಂಗ್ ಜರ್ಮನಿಯನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಭಯೋತ್ಪಾದಕ ನೇಮಕ, ಧನಸಹಾಯ ಮತ್ತು ಸಹಾಯ ಮಾಡ್ಯೂಲ್ ಅನ್ನು ನಡೆಸುತ್ತಿದ್ದನು” ಎಂದು ಪಂಜಾಬ್​​ನ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಖಲಿಸ್ತಾನ್ ಜಿಂದಾಬಾದ್ ಫೋರ್ಸ್​​ನ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಪಂಜಾಬ್ ಪೊಲೀಸರು ಮುಂದಾಗಿದ್ದಾರೆ ಎಂದು ಯಾದವ್ ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ನೀಡಿದ್ದಾರೆ.

ಭಯೋತ್ಪಾದಕನನ್ನು ಹೇಗೆ ಸೆರೆಹಿಡಿದಿರುವುದು ಹೇಗೆ?


ಅಧಿಕೃತ ದಾಖಲೆಯ ಪ್ರಕಾರ, 2020 ರಲ್ಲಿ, ಪಂಜಾಬ್ ಪೊಲೀಸರ ವಿಶೇಷ ವಿಭಾಗ ಕೆಜೆಡ್ಎಫ್ ಭಯೋತ್ಪಾದಕ ಜಗದೀಶ್ ಸಿಂಗ್ ಭುರಾ ಬಗ್ಗೆ ಗೌಪ್ಯ ಮಾಹಿತಿ ಸ್ವೀಕರಿಸಿತ್ತು. ಆತನ ನಿಕಟವರ್ತಿಯೇ ಪ್ರಭ್​ಪ್ರೀತ್​. ಪಂಜಾಬ್​ನಲ್ಲಿ ದೊಡ್ಡ ವ್ಯಕ್ತಿಗಳನ್ನು ಕೊಲ್ಲಲು ಭುರಾ ಯೋಜನೆಯನ್ನು ರೂಪಿಸಿದ್ದ. ಅದರಲ್ಲಿ ಪ್ರಭ್​ಪ್ರೀತ್​ ಸಂಚು ಕೂಡ ಇತ್ತು. ಆತ ಜರ್ಮನಿಯಲ್ಲೇ ಕುಳಿತು ಭಾರತ ಮೂಲದ ಸಹಚರರಿಗೆ ಶಸ್ತ್ರಾಸ್ತ್ರಗಳನ್ನು ವಿತರಿಸಿದ್ದ.

ಇದನ್ನೂ ಓದಿ: United Kingdom: ‘ಪ್ರಯಾಣಕ್ಕೆಅಪಾಯಕಾರಿ’ ದೇಶಗಳ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಿದ ಬ್ರಿಟನ್​!

ಪಂಜಾಬ್ ಪೊಲೀಸರು ಆ ನಾಲ್ವರು ಖಲಿಸ್ತಾನ್ ಜಿಂದಾಬಾದ್ ಫೋರ್ಸ್ ಕಾರ್ಯಕರ್ತರನ್ನು ಬಂಧಿಸಿ ಅವರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡು ದಾಳಿ ವಿಫಲಗೊಳಿಸಿದ್ದರು. ಅಲ್ಲದೆ, ಏರ್​ಪೋರ್ಟ್​ಗೆ ಲುಕ್ ಔಟ್ ನೋಟಿಸ್​ ನೀಡಿ ಪ್ರಭ್ ಪ್ರೀತ್ ಸಿಂಗ್ ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಖೆಡ್ಡಾ ತೋಡಿದ್ದರು.

ಖಲಿಸ್ತಾನಿ ಕಾರ್ಯಕರ್ತರು ಬಹಿರಂಗಪಡಿಸಿದ್ದೇನು?

ಖಲಿಸ್ತಾನಿ ಭಯೋತ್ಪಾದಕ ಭುರಾ ಮತ್ತು ಅವನ ನಿಕಟವರ್ತಿ ಪ್ರಭ್​ಪ್ರೀತ್​ ಸಿಂಗ್ ನಿರ್ದೇಶನದ ಮೇರೆಗೆ ಕೆಲಸ ಮಾಡುತ್ತಿದ್ದೆವು ಎಂದು ಬಂಧಿತ ಕಾರ್ಯಕರ್ತರು ತನಿಖೆಯ ಸಮಯದಲ್ಲಿ ಬಹಿರಂಗಪಡಿಸಿದ್ದರು. ಭಯೋತ್ಪಾದಕ ಜೋಡಿಯು ಪಂಜಾಬ್​​ನಲ್ಲಿ ದೊಡ್ಡ ಸಂಚು ರೂಪಿಸಿದ್ದರು.

ಪ್ರಭ್ ಪ್ರೀತ್ ಸಿಂಗ್ ಜರ್ಮನಿಯಲ್ಲಿ ವಾಸಿಸುತ್ತಿದ್ದ ಎಂದು ಅವರು ಬಹಿರಂಗಪಡಿಸಿದ್ದರು. ನಂತರ ಪಂಜಾಬ್ ಪೊಲೀಸರು ಖಲಿಸ್ತಾನಿ ಭಯೋತ್ಪಾದಕನ ಬಂಧನವನ್ನು ಖಚಿತಪಡಿಸಿಕೊಳ್ಳಲು ನವದೆಹಲಿಯ ಬ್ಯೂರೋ ಆಫ್ ಇಮಿಗ್ರೇಷನ್ ಮೂಲಕ ಲುಕ್ ಔಟ್ ಸುತ್ತೋಲೆ ಹೊರಡಿಸಿದ್ದರು. ಪಂಜಾಬ್ ಪೊಲೀಸ್ ಅಧಿಕಾರಿಗಳ ಪ್ರಕಾರ, ಖಲಿಸ್ತಾನಿ ಭಯೋತ್ಪಾದಕ ಪ್ರಭ್​ಪ್ರೀತ್​ ಸಿಂಗ್ 2017 ರಲ್ಲಿ ಪೋಲೆಂಡ್​ಗೆ ಹೋಗಿದ್ದನು ಮತ್ತು 2020 ರಲ್ಲಿ ರಸ್ತೆ ಮೂಲಕ ಜರ್ಮನಿಗೆ ಹೋಗಿದ್ದ.

Continue Reading

ಪ್ರಮುಖ ಸುದ್ದಿ

United Kingdom: ‘ಪ್ರಯಾಣಕ್ಕೆಅಪಾಯಕಾರಿ’ ದೇಶಗಳ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಿದ ಬ್ರಿಟನ್​!

VISTARANEWS.COM


on

Pakistan
Koo

ನವದೆಹಲಿ: ಬ್ರಿಟನ್ ನ​ (United Kingdom) ಯುನೈಟೆಡ್ ಕಿಂಗ್​ಡಮ್​ ವಿದೇಶಾಂಗ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್​​ಸಿಡಿಒ) ನಾಗರಿಕರಿಗೆ ಪ್ರಯಾಣಿಸಲು ‘ತುಂಬಾ ಅಪಾಯಕಾರಿ’ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನವನ್ನು ಸೇರಿಸಿದೆ ಎಂದು ಮ್ಯಾಂಚೆಸ್ಟರ್ ಈವಿನಿಂಗ್ ನ್ಯೂಸ್ ಅನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ಶುಕ್ರವಾರ ವರದಿ ಮಾಡಿದೆ. ಎಫ್​​ಸಿಡಿಒ ನಿಷೇಧಿಸಿದ ಒಟ್ಟು ಪ್ರದೇಶಗಳ ಸಂಖ್ಯೆ ಇದೀಗ 24ಕ್ಕೆ ಏರಿದೆ.

ಈ ಪಟ್ಟಿಯು ಅಪರಾಧ, ಯುದ್ಧ, ಭಯೋತ್ಪಾದನೆ, ರೋಗ, ಹವಾಮಾನ ಪರಿಸ್ಥಿತಿಗಳು, ನೈಸರ್ಗಿಕ ವಿಪತ್ತುಗಳು ಮತ್ತು ಪ್ರಯಾಣಿಕರ ಸುರಕ್ಷತೆಗೆ ಬೆದರಿಕೆಗಳು ಸೇರಿದಂತೆ ಸಂಭಾವ್ಯ ಅಪಾಯಗಳನ್ನು ಆಧರಿಸಿದೆ. ರಷ್ಯಾ, ಉಕ್ರೇನ್, ಇಸ್ರೇಲ್, ಇರಾನ್, ಸುಡಾನ್, ಲೆಬನಾನ್, ಬೆಲಾರಸ್ ಮತ್ತು ಪ್ಯಾಲೆಸ್ಟೈನ್ ಪ್ರದೇಶಗಳು ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡ ದೇಶಗಳಾಗಿವೆ. ಈ ತಾಣಗಳು ಪ್ರಸ್ತುತ ಗಮನಾರ್ಹ ಯುದ್ಧ ಮತ್ತು ಮಿಲಿಟರಿ ಸಂಘರ್ಷಗಳಲ್ಲಿ ತೊಡಗಿವೆ.

ಅಫ್ಘಾನಿಸ್ತಾನ, ಬುರ್ಕಿನಾ ಫಾಸೊ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಚಾಡ್, ಹೈಟಿ, ಇರಾಕ್, ಇಸ್ರೇಲ್, ಲೆಬನಾನ್, ಲಿಬಿಯಾ, ಮಾಲಿ, ನೈಜರ್, ಉತ್ತರ ಕೊರಿಯಾ, ಸೊಮಾಲಿಯಾ, ಸೊಮಾಲಿಲ್ಯಾಂಡ್, ದಕ್ಷಿಣ ಸುಡಾನ್, ಸಿರಿಯಾ, ವೆನೆಜುವೆಲಾ ಮತ್ತು ಯೆಮೆನ್ ಕಪ್ಪುಪಟ್ಟಿಯಲ್ಲಿರುವ ದೇಶಗಳು. ಹೆಚ್ಚುವರಿಯಾಗಿ, ವಿದೇಶಾಂಗ ಕಚೇರಿ ಕೆಂಪು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೆಂಪು ಪಟ್ಟಿಯಲ್ಲಿರುವ ದೇಶಗಳು ‘ಸಂಪೂರ್ಣವಾಗಿ ಅಗತ್ಯವಲ್ಲದಿದ್ದರೆ’ ಪ್ರಯಾಣವನ್ನು ತಪ್ಪಿಸಬೇಕಾದ ಪ್ರದೇಶಗಳಾಗಿವೆ. ಈ ಪಟ್ಟಿಯಲ್ಲಿ ಪಾಕಿಸ್ತಾನವೂ ಸೇರಿದೆ.

ಪಾಕ್​ನಲ್ಲಿ ಸಾವು ನೋವುಗಳು

2023 ರಲ್ಲಿ 789 ಭಯೋತ್ಪಾದಕ ದಾಳಿಗಳು ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಂದ ಪಾಕಿಸ್ತಾನವು 1,524 ಹಿಂಸಾಚಾರ ಸಂಬಂಧಿತ ಸಾವುನೋವುಗಳು ಮತ್ತು 1,463 ಗಾಯಗಳಿಗೆ ಸಾಕ್ಷಿಯಾಗಿದೆ ಎಂದು ಪಾಕಿಸ್ತಾನದ ಸುದ್ದಿ ವೆಬ್​​ಸೈಟ್​ ಡಾನ್ ವರದಿಯಲ್ಲಿ ತಿಳಿಸಿದೆ. ನಾಗರಿಕರು ಮತ್ತು ಕಾನೂನುಬಾಹಿರರು ಸೇರಿದಂತೆ ಒಟ್ಟು ಸಾವುನೋವುಗಳು ಆರು ವರ್ಷಗಳ ಗರಿಷ್ಠ ಮಟ್ಟ ತಲುಪಿವೆ/ ಇದು 2018 ರಲ್ಲಿ ದಾಖಲಾದ ಸಂಖ್ಯೆಗಳನ್ನು ಮೀರಿದೆ ಮತ್ತು 2017 ರ ನಂತರದ ಗರಿಷ್ಠ ಸಂಖ್ಯೆಯನ್ನು ಸೂಚಿಸುತ್ತದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Iran- Israel War : ಮುಂದಿನ 48 ಗಂಟೆಗಳೊಳಗೆ ಇರಾನ್-ಇಸ್ರೇಲ್ ಭೀಕರ ಯುದ್ಧ ಶುರು!

ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳು ಹಿಂಸಾಚಾರದ ಪ್ರಮುಖ ಕೇಂದ್ರ ಬಿಂದುಗಳಾಗಿ ಹೊರಹೊಮ್ಮಿವೆ. ಇದು ಒಟ್ಟು ಸಾವುನೋವುಗಳಲ್ಲಿ 90% ಕ್ಕಿಂತ ಹೆಚ್ಚು ಮತ್ತು 84% ದಾಳಿಗಳನ್ನು ಒಳಗೊಂಡಿದೆ, ಇದು ಭಯೋತ್ಪಾದನೆಯಿಂದ ಭದ್ರತಾ ಪಡೆ ಕಾರ್ಯಾಚರಣೆಗಳವರೆಗಿನ ಘಟನೆಗಳನ್ನು ಒಳಗೊಂಡಿದೆ.

ಧಾರ್ಮಿಕ ಹಿಂಸಾಚಾರದಲ್ಲಿ ವಿಷಯದಲ್ಲಿ ಆತಂಕಕಾರಿ ಹೆಚ್ಚಳ ಕಂಡುಬಂದಿದೆ. 2023 ರಲ್ಲಿ, ಧಾರ್ಮಿಕ ಸಮುದಾಯಗಳು ಮತ್ತು ಅವರ ಪೂಜಾ ಸ್ಥಳಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ಕೃತ್ಯಗಳು 203 ಜೀವಗಳನ್ನು ಬಲಿಪಡೆದಿವೆ. 2021 ರಿಂದ ಈ ರಾಷ್ಟ್ರವು ನಿರಂತರ ಹಿಂಸಾಚಾರ ಕಂಡಿದೆ.

Continue Reading
Advertisement
Rishabh Pant
ಕ್ರಿಕೆಟ್47 mins ago

Rishabh Pant: ಐಪಿಎಲ್​ನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ರಿಷಭ್ ಪಂತ್​

IPL 2024
ಪ್ರಮುಖ ಸುದ್ದಿ1 hour ago

IPL 2024 : ಲಕ್ನೊ ಸೂಪರ್​ ಜೈಂಟ್ಸ್ ವಿರುದ್ಧ ಡೆಲ್ಲಿ ತಂಡಕ್ಕೆ 6 ವಿಕೆಟ್​ ವಿಜಯ

NIA Raid
ಕರ್ನಾಟಕ1 hour ago

NIA Raid: ಹುಬ್ಬಳ್ಳಿಯಲ್ಲಿ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದ ಎನ್‌ಐಎ

Khalistan Terrorist
ಪ್ರಮುಖ ಸುದ್ದಿ2 hours ago

Khalistani Terrorist : ದೆಹಲಿ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನಿ ಉಗ್ರ ಪ್ರಭ್​ಪ್ರೀತ್ ಸಿಂಗ್ ಸೆರೆ

Lok Sabha Election 2024
ಕರ್ನಾಟಕ2 hours ago

Lok Sabha Election 2024: ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆ; ಇವರ ಆಸ್ತಿ ಎಷ್ಟು?

Pakistan
ಪ್ರಮುಖ ಸುದ್ದಿ2 hours ago

United Kingdom: ‘ಪ್ರಯಾಣಕ್ಕೆಅಪಾಯಕಾರಿ’ ದೇಶಗಳ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಿದ ಬ್ರಿಟನ್​!

Chikkaballapur Lok Sabha Constituency BJP Candidate Dr K Sudhakar is campaigning in various places today
ಚಿಕ್ಕಬಳ್ಳಾಪುರ3 hours ago

Lok Sabha Election 2024: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ರಿಂದ ಏ.13ರಂದು ಪ್ರಚಾರ

Union Minister Pralhad Joshi statement
ಹುಬ್ಬಳ್ಳಿ3 hours ago

Lok Sabha Election 2024: ದೇಶದ್ರೋಹಿ ಕೃತ್ಯ ನಿಗ್ರಹಕ್ಕೆ ಮೋದಿ ಸರ್ಕಾರವೇ ಬೇಕು: ಪ್ರಲ್ಹಾದ್‌ ಜೋಶಿ

Union Minister Pralhad Joshi latest statement in hubli
ಕರ್ನಾಟಕ3 hours ago

Lok Sabha Election 2024: ರಾಜ್ಯದಲ್ಲಿ ಕಾಂಗ್ರೆಸ್ 3ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲಲ್ಲ: ಪ್ರಲ್ಹಾದ್‌ ಜೋಶಿ ಸವಾಲು

Rashtrotthana Hospital adopts Dozi technology to provide greater safety to patients
ಕರ್ನಾಟಕ3 hours ago

Rashtrotthana Parishat: ಡೋಝಿ ತಂತ್ರಜ್ಞಾನ ಅಳವಡಿಸಿಕೊಂಡ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rameshwaram Cafe Blast Fake IDs created and captured bombers hiding in Kolkata
ಕ್ರೈಂ12 hours ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ20 hours ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 day ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20242 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರದಲ್ಲಿ ಅಧಿಕ ಲಾಭ

Ugadi 2024
ಬಾಗಲಕೋಟೆ3 days ago

Ugadi 2024 : ಬೀಳಗಿಯ ಎಕ್ಕೆ ಎಲೆ ಭವಿಷ್ಯ; ಈಶಾನ್ಯ, ಪಶ್ಚಿಮ ಭಾಗದಲ್ಲಿ ಭಾರಿ ಕಂಟಕ!

ugadi 2024
ಧಾರವಾಡ3 days ago

Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?

Dina Bhavishya
ಭವಿಷ್ಯ4 days ago

Dina Bhavishya : ನೂತನ ಸಂವತ್ಸರದಲ್ಲಿ ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ

Dina Bhavishya
ಭವಿಷ್ಯ5 days ago

Dina Bhavishya : ಅತಿರೇಕದ ಮಾತು ಈ ರಾಶಿಯವರಿಗೆ ಒಳ್ಳೆಯದಲ್ಲ

Rockstar Bull of bull festival king fame passes away
ಹಾವೇರಿ5 days ago

Rockstar Bull: ಹೋರಿ ಹಬ್ಬದ ಕಿಂಗ್ ಖ್ಯಾತಿಯ ರಾಕ್‌ ಸ್ಟಾರ್‌ ಬುಲ್‌ ಇನ್ನಿಲ್ಲ; ಬೊಮ್ಮಾಯಿ ಕಂಬನಿ

ಟ್ರೆಂಡಿಂಗ್‌