Site icon Vistara News

Rath Yatra: ಅಮೆರಿಕದ 48 ರಾಜ್ಯಗಳಲ್ಲಿ ನಡೆಯಲಿದೆ ರಾಮಮಂದಿರ ರಥಯಾತ್ರೆ; ಇಲ್ಲಿದೆ ಡಿಟೇಲ್ಸ್‌

Ram Mandir Rath Yatra

48 States, 8,000 Miles, 851 Temples: Ram Mandir Rath Yatra To Kick Off From Chicago

ವಾಷಿಂಗ್ಟನ್:‌ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ (Ram Mandir) ನಿರ್ಮಾಣವಾಗಿದ್ದು, ಹಿಂದುಗಳ 500 ವರ್ಷದ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ಲಕ್ಷಾಂತರ ಭಕ್ತರು ನಿತ್ಯ ರಾಮಲಲ್ಲಾನ (Ram Lalla) ದರ್ಶನ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ, ಅಮೆರಿಕದಾದ್ಯಂತ ರಾಮಮಂದಿರ ರಥಯಾತ್ರೆ (Ram Mandir Rath Yatra) ಕೈಗೊಳ್ಳಲು ಅಮೆರಿಕದ ವಿಶ್ವ ಹಿಂದು ಪರಿಷತ್‌ (Vishwa Hindu Parishad Of America- VHPA) ತೀರ್ಮಾನಿಸಿದೆ. ಅಮೆರಿಕದ 48 ರಾಜ್ಯಗಳಲ್ಲಿ ಸಂಚರಿಸುವ ರಾಮಮಂದಿರ ರಥಯಾತ್ರೆಗೆ ಮಾರ್ಚ್‌ 25ರಂದು ಚಿಕಾಗೋದಲ್ಲಿ ಚಾಲನೆ ನೀಡಲಾಗುತ್ತದೆ.

“ಭಾರತದಲ್ಲಿ ರಾಮಮಂದಿರ ನಿರ್ಮಾಣವು ಜಗತ್ತಿನಾದ್ಯಂತ ಇರುವ 150 ಕೋಟಿ ಹಿಂದುಗಳ ಸಂತಸವನ್ನು ಹೆಚ್ಚಿಸುವ ಜತೆಗೆ ಹಿಂದುಗಳ ಉತ್ಸಾಹವನ್ನು ಹೆಚ್ಚಿಸಿದೆ. ಹಾಗಾಗಿ, ಅಮೆರಿಕದ 48 ರಾಜ್ಯಗಳಲ್ಲಿ ರಾಮಮಂದಿರ ರಥಯಾತ್ರೆ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಮಾರ್ಚ್‌ 25ರಂದು ಚಿಕಾಗೋದಲ್ಲಿ ರಥಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಅಮೆರಿಕ ಹಾಗೂ ಕೆನಡಾದಲ್ಲಿ 800 ಮೈಲುಗಳವರೆಗೆ (1,287 ಕಿಲೋಮೀಟರ್)‌ ಸಂಚರಿಸಲಿದ್ದು, ಅಮೆರಿಕದ 851 ಮತ್ತು ಕೆನಡಾದ 151 ದೇವಾಲಯಗಳಿಗೆ ಭೇಟಿ ನೀಡಲಾಗುತ್ತದೆ” ಎಂದು ವಿಎಚ್‌ಪಿಎ ಪ್ರಧಾನ ಕಾರ್ಯದರ್ಶಿ ಅಮಿತಾಭ್‌ ಮಿತ್ತಲ್‌ ಮಾಹಿತಿ ನೀಡಿದರು.

ಟೊಯೋಟಾ ಸಿಯೆನ್ನಾ ವ್ಯಾನ್‌ಅನ್ನೇ ರಥವನ್ನಾಗಿ ಮಾರ್ಪಾಡು ಮಾಡಲಾಗಿದೆ. ಎರಡು ತಿಂಗಳು ರಥಯಾತ್ರೆ ನಡೆಯಲಿದ್ದು, ಭಗವಾನ್‌ ಶ್ರೀರಾಮ, ಸೀತೆ, ಲಕ್ಷ್ಮಣರ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ರಥಯಾತ್ರೆಯುದ್ದಕ್ಕೂ ಭಕ್ತರಿಗೆ ಅಯೋಧ್ಯೆ ರಾಮಮಂದಿರದ ಪ್ರಸಾದವನ್ನು ಕೂಡ ವಿತರಿಸಲಾಗುತ್ತದೆ. ಕೆನಡಾದಲ್ಲಿ ನಡೆಯುವ ರಥಯಾತ್ರೆಯನ್ನು ಕೂಡ ಪ್ರತ್ಯೇಕವಾಗಿ ಆಯೋಜಿಸಲಾಗಿದೆ. ಅಲ್ಲಿ ಸುಮಾರು 150 ದೇವಾಲಯಗಳಿಗೆ ಭೇಟಿ ನೀಡಲಾಗುತ್ತದೆ” ಎಂದು ಅಮಿತಾಭ್‌ ಮಿತ್ತಲ್‌ ತಿಳಿಸಿದರು.

ಈಗ ಏಕೆ ರಥಯಾತ್ರೆ?

“ಹಿಂದು ಧರ್ಮದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಾಮಮಂದಿರ ರಥಯಾತ್ರೆ ಕೈಗೊಳ್ಳಲಾಗುತ್ತದೆ” ಎಂದು ಹಿಂದು ಮಂದಿರ ಎಂಪವರ್‌ಮೆಂಟ್‌ ಕೌನ್ಸಿಲ್‌ನ ತೇಜಲ್‌ ಶಾ ಮಾಹಿತಿ ನೀಡಿದರು. “ಹಿಂದುಗಳನ್ನು ಒಗ್ಗೂಡಿಸುವುದು, ಅವರಲ್ಲಿ ಹಿಂದು ಧರ್ಮದ ಕುರಿತು ಜಾಗೃತಿ ಮೂಡಿಸುವುದು, ಅವರನ್ನು ಕೂಡ ರಥಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ” ಎಂದು ತಿಳಿಸಿದರು.

ಇದನ್ನೂ ಓದಿ: Raja Marga Column: ಅಡ್ವಾಣಿ ರಥಯಾತ್ರೆ; ರಾಮಜನ್ಮಭೂಮಿ ಹೋರಾಟದ ಮಹತ್ತರ ಮೈಲುಗಲ್ಲು

ಏಪ್ರಿಲ್‌ 23ರಂದು ಹನುಮಾನ್‌ ಜಯಂತಿ ದಿನದಂದು ಅಮೆರಿಕದಲ್ಲಿ ನಡೆಯುವ ರಥಯಾತ್ರೆಯು ಸಮಾರೋಪಗೊಳ್ಳಲಿದೆ ಎಂದು ಅಮಿತಾಭ್‌ ಮಿತ್ತಲ್‌ ತಿಳಿಸಿದ್ದಾರೆ. ಅಮೆರಿಕದ ಬೃಹತ್‌ ಹಾಗೂ ಸಣ್ಣ ದೇವಾಲಯಗಳಿಗೆ ಭೇಟಿ ನೀಡಿದ ಬಳಿಕ ಇಲಿನೋಯಿಸ್‌ನ ಶುಗರ್‌ ಗ್ರೋವ್‌ನಲ್ಲಿ ರಥಯಾತ್ರೆಯು ಮುಗಿಯಲಿದೆ ಎಂದು ಹೇಳಿದರು. ಅಯೋಧ್ಯೆಯ ರಾಮಮಂದಿರವನ್ನು ನರೇಂದ್ರ ಮೋದಿ ಅವರು 2024ರ ಜನವರಿ 22ರಂದು ಲೋಕಾರ್ಪಣೆ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version