Site icon Vistara News

Actor Darshan: ರೇಣುಕಾಸ್ವಾಮಿ ಸಾಯೋವರೆಗೂ ಶೆಡ್‌ನಲ್ಲೇ ಇದ್ದರಾ ನಟ ದರ್ಶನ್! ಚಾರ್ಜ್ ಶೀಟ್‌ನಲ್ಲಿ ಏನೆಲ್ಲ ಇದೆ ಗೊತ್ತಾ?

Actor Darshan to be questioned in Parappana Agrahara jail

ರೇಣುಕಾಸ್ವಾಮಿ ಕೊಲೆ (Actor Darshan) ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಮುಂದಿನ ಪ್ರಕ್ರಿಯೆಗಳು ಕೂಡ ಮುಂದುವರೆಯುತ್ತಿದೆ.‌ ಕೊಲೆಯಲ್ಲಿ ಹದಿನೇಳು ಜನ ಆರೋಪಿಗಳಿದ್ದಾರೆ. ಕ್ರಿಮಿನಲ್ ಕಾನ್‌ಸ್ಪಿರೆಸಿ ಮಾಡಿ ಪರ್ಪೆಕ್ಟ್ ಕ್ರೈಂ ಎನಿಸಿಕೊಂಡಿರುವವರ ಕೊಲೆ ಪ್ರಕರಣ ಇದಾಗಿದೆ.‌ ಕೊಲೆಯಾದ ಬಳಿಕ ಏನೆಲ್ಲಾ ಮಾಡಬೇಕು‌ ಎಂಬಷ್ಟರ ಮಟ್ಟಿಗೆ ಯೋಚನೆ ಮಾಡಿದ್ದ ಖದೀಮರು ಕೊನೆಗೆ ಪ್ಲಾನ್ ಉಲ್ಟಾ ಹೊಡೆದ ಬಳಿ ಅಷ್ಟೂ ಜನ ಸಿಕ್ಕಿ ಬಿದ್ದಿದ್ದಾರೆ. 17 ಜನ ಆರೋಪಿಗಳು ಯಾವ ರೀತಿ ಕೊಲೆ ಪ್ರಕರಣದಲ್ಲಿ ಪಾತ್ರ ವಹಿಸಿದರು ಎಂಬುದರ ಡಿಟೇಲ್ಸ್ ಇಲ್ಲಿದೆ.

ಪವಿತ್ರಾಗೌಡ

ಕೊಲೆ ಮಾಡಲು ಮೂಲ ಕಾರಣ ಪವಿತ್ರ ಗೌಡ. ಕೃತ್ಯ ನಡೆದ ಸಮಯದಲ್ಲಿ ಅಲ್ಲೇ ಇರುವುದಕ್ಕೆ ಸಾಕ್ಷಿ ಪತ್ತೆಯಾಗಿದೆ.,
ಸಿಸಿಟಿವಿಯಲ್ಲಿ ಪವಿತ್ರಗೌಡ ಸೆರೆಯಾಗಿದ್ದಾರೆ. ಪವಿತ್ರ ಗೌಡ ಮೊಬೈಲ್ ಕೃತ್ಯದ ಸ್ಥಳದಲ್ಲಿ ಆಕ್ಟಿವ್ ಆಗಿರುವುದು ಕಂಡುಬಂದಿದೆ.

ದರ್ಶನ್

ಕಿಡ್ನಾಪ್ ಮಾಡಿಸಿದ್ದು , ಹಲ್ಲೆ ಮಾಡಿದ್ದು, ಕೊಲೆ ನಂತರ ಮುಚ್ಚಿಹಾಕಲು ಹಣ ನೀಡಿದ್ದು ದರ್ಶನ್. ಕೊಲೆ ನಡೆದ ಸ್ಥಳದಲ್ಲಿ ಇರುವುದು ಪತ್ತೆಯಾಗಿದೆ. ಸಿಸಿಟಿವಿಯಲ್ಲಿ ಕೂಡ ದರ್ಶನ್ ಸೆರೆಯಾಗಿದ್ದಾರೆ. ಕೊಲೆ ಬಳಿಕ ಸ್ಥಳದಿಂದ ಪರಾರಿಯಾರಿಯಾಗುವ ದೃಶ್ಯ ಸಹ ಇದೆ. ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾ ಸ್ವಾಮಿ ರಕ್ತ ಇರುವುದು ಪತ್ತೆಯಾಗಿದ್ದು, ದರ್ಶನ್ ಹಲ್ಲೆ ಮಾಡಿರುವ ಬಗ್ಗೆ ಮತ್ತು ಕೊಲೆಯಲ್ಲಿ ಭಾಗಿರುವುದು ದೃಡವಾಗಿದೆ.

ಪವನ್

ಪವಿತ್ರ ಜೊತೆಗೆ ಇದ್ದು ,ಕಿಡ್ನಾಪ್ ಮಾಡುವಾಗ ರಾಘವೇಂದ್ರ ಜೊತೆಗೆ ಸಂಪರ್ಕದಲ್ಲಿ ಇದ್ದುಕೊಂಡು ನಂತ್ರ ಹಲ್ಲೆ ಮಾಡುವ ಸ್ಥಳಕ್ಕೆ ಹೋಗಿ ಹಲ್ಲೆ ಪವನ್ ಮಾಡಿದ್ದಾನೆ. ಬೇರೊಂದು ಇನ್ಸ್ಟಾಗ್ರಾಮ್ ಅಕೌಂಟ್ ಮಾಡಿ ರೇಣುಕಾಸ್ವಾಮಿ ಜೊತೆಗೆ ಚಾಟ್ ಮಾಡಿ ಕಿಡ್ನಾಪ್ ಮಾಡುವಂತೆ ಸೂಚಿನೆ ನಿಡಿದ್ದಾನೆ. ರೇಣುಕಾಸ್ವಾಮಿ ಗೆ ಹಲ್ಲೆ ಮಾಡಿದ್ದು, ಇದೆಲ್ಲದಕ್ಕು ಸಾಕ್ಷಿ ಲಭ್ಯ ವಿದೆ.

ರಾಘವೇಂದ್ರ

ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಅದ್ಯಕ್ಷ, ಕಿಡ್ನಾಪ್ ಮಾಡುವಲ್ಲಿ ಪ್ರಮುಖ ಪಾತ್ರ. ಕೊಲೆಯಾದ ಸ್ಥಳದಲ್ಲಿ ಹಾಜರಿದ್ದ. ಕೊಲೆ ಬಳಿಕ ರೇಣುಕಾಸ್ವಾಮಿ ಮೈ ಮೇಲಿದ್ದ ಆಭರಣ ತೆಗೆದಿದ್ದ. ಕೊಲೆ ಮಾಡುವ ಮೊದಲು ಕಿಡ್ನಾಪ್ ಮಾಡುವಲ್ಲಿ ಸಕ್ರಿಯವಾಗಿ ಕೆಲಸ ಮಾಡಿರುವುದಕ್ಕೆ ಸಾಕ್ಷಿ ಲಭ್ಯವಾಗಿದೆ.

ನಂದೀಶ

ಹಲ್ಲೆ ಮಾಡುವಾಗ ಜೊತೆಗೆ ಇದ್ದು , ರಣೇಕಾ ಸ್ವಾಮಿಗೆ ತೀವ್ರವಾಗಿ ಹಲ್ಲೆ ಮಾಡಿದವನು. ರೇಣುಕಾಸ್ವಾಮಿ ಬಳಸಿದ್ದ ಬಟ್ಟೆಯಲ್ಲಿ ರಕ್ತವಿದೆ. ಕೊಲೆ ಬಳಿಕ ವಾಹನದಲ್ಲಿ ಮೃತ ದೇಹ ಇಟ್ಟಿದ್ದು, ದೇಹ ಹೊತ್ತುಕೊಂಡು ಬಂದಿದ್ದ ದೃಶ್ಯ ಪತ್ತೆಯಾಗಿದೆ.

ಜಗದೀಶ್ ಅಲಿಯಾಸ್ ಜಗ್ಗ

ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಬಂದಿದ್ದ ತಂಡದ ಸದಸ್ಯ, ಚಿತ್ರದುರ್ಗದಿಂದ ಕರೆತಂದು ಕೊಲೆ ಮಾಡಿದ ಬಳಿಕ ಎಸ್ಕೇಪ್ ಆಗಿದ್ದನ್ನು. ರೇಣುಕಾಸ್ವಾಮಿ ಕಿಡ್ನಾಪ್ ನಂತರ ಕರೆತರುವಾಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅನುಕುಮಾರ್ ಅಲಿಯಾಸ್ ಅನು

ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಬಂದಿದ್ದ ತಂಡದ ಸದಸ್ಯ ಈ ಅನುಕುಮಾರ್. ಚಿತ್ರದುರ್ಗದಿಂದ ಕರೆತಂದ ಕೊಲೆ ಮಾಡಿದ ಬಳಿಕ ಎಸ್ಕೇಪ್ ಆಗಿದ್ದ. ಕಿಡ್ನಾಪ್ ಸಮಯದಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರವಿ ಅಲಿಯಾಸ್ ರವಿಶಂಕರ್

ಕಾರು ಚಾಲಕ, ಈತ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿದ್ದ. ಕೊಲೆ ಬಳಿಕ ಕಾರಿನಲ್ಲಿ ಉಳಿದ ಆರೋಪಿಗಳ ಕರೆದುಕೊಂಡು ಹೋಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಜು ಅಲಿಯಾಸ್ ಧನರಾಜ್

ದರ್ಶನ್ ನಿವಾಸದಲ್ಲಿ ಕೆಲಸ ಮಾಡಿಕೊಂಡಿದ್ದ ರಾಜರಾಜೇಶ್ವರಿ ನಗರ ನಿವಾಸಿ. ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿದ್ದು, ಮೃತ ದೇಹ ಸಾಗಾಣೆ ಈ ರಾಜು ಅಲಿಯಾಸ್ ಧನರಾಜ್.

ವಿನಯ್

ದರ್ಶನ್ ಆಪ್ತನಾಗಿದ್ದು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲಿಕ, ಈತ ಹಲ್ಲೆ ಮಾಡಿದ್ದವರ ಪೈಕಿ ಪ್ರಮುಖ ವ್ಯಕ್ತಿ. ಮನಸ್ಸಿಗೆ ಬಂದಹಾಗೆ ಹಲ್ಲೆ ಮಾಡಿದ್ದಾನೆ ಲಾಠಿ ಬೀಸಿ ಬೀಸಿ ಹೊಡೆದಿದ್ದಾನೆ. ಕೊಲೆಗು ಮೊದಲಿನಿಂದ ದರ್ಶನ್ ಜೊತೆಗೆ ಇದ್ದ. ಸ್ಟೋನಿ ಬ್ರೂಕ್‌ನಲ್ಲಿ ನಡೆದ ಕೊಲೆಗು ಮೊದಲ ಮಾತುಕತೆಯಲ್ಲಿ ಭಾಗಿದ್ದಾನೆ.

ನಾಗರಾಜು ಅಲಿಯಾಸ್ ನಾಗ

ನಟ ದರ್ಶನ್‌ನ ಅನಧಿಕೃತ ಮ್ಯಾನೇಜರ್ ಇವನನು. ಪಾರ್ಟಿ ಕುಡಿತ ಸೇರಿ ಎಲ್ಲಾ ಕಡೆ ಇರುತ್ತಿದ್ದ. ಹಲ್ಲೆ ಮಾಡುವಾಗ ಜೊತೆಗೆ ಇದ್ದು ಹಲ್ಲೆ ಮಾಡಿ ಕಾಲಿನಿಂದಲೂ ಒದ್ದಿದ್ದ. ಬೇರೆಯವರಿಗೆ ಶರಣಾಗುವಂತೆ ವ್ಯವಸ್ಥೆ ಮಾಡುವಲ್ಲಿಯೂ ಪಾತ್ರ ನಿರ್ವಹಿಸಿದ್ದಾನೆ.

ಲಕ್ಷ್ಮಣ್

ದರ್ಶನ್ ಕಾರು ಚಾಲಕ. ಕೊಲೆ ಮಾಡುವಾಗ ಸ್ಥಳದಲ್ಲಿ ಇದ್ದು ಹಲ್ಲೆ ಮಾಡಿದ್ದು, ಮೃತ ದೇಹವನ್ನು ಎಸೆಯಲು ಬೇಕಾದ ವ್ಯವಸ್ಥೆ ಮಾಡಿದ್ದು ಕೊಲೆಗೆ ಮೊದಲೆ ಜೊತೆಗೆ ಇದ್ದಿದ್ದು ಈ ಲಕ್ಷ್ಮಣ್. ಕೊಲೆಯ ನಂತ್ರ ಎ2 ಆರೋಪಿ ಜೊತೆಗೆ ಪರಾರಿಯಾಗಲು ಸಹಾಯ ಸಹ ಮಾಡಿದ್ದಾನೆ.

ದೀಪಕ್

ದರ್ಶನ್ ಆಪ್ತ. ಹಲ್ಲೆ ಮಾಡಿದ್ದು ನಂತರ ದರ್ಶನ್, ಪ್ರದೋಶ್ ಹೇಳಿದಂತೆ ಹಣವನ್ನು ನಿಕಿಲ್, ಕೇಶವಮೂರ್ತ, ಮತ್ತು ಕಾರ್ತಿಕ್‌ಗೆ ಹೇಳಿ ಒಪ್ಪಿಸಿ ಹಣ ನೀಡಿದ್ದ ತಲಾ ಐದು ಲಕ್ಷ ಹಣ ನೀಡಿದ್ದ. ಕೊಲೆ ನಡೆದ ಶೆಡ್ ಸ್ಥಳದ ಜವಾಬ್ದಾರಿ ಹೊಂದಿದ್ದ.

ಪ್ರದೂಶ್

ದರ್ಶನ್ ಜೊತೆಗೆ ಇದ್ದುಕೊಂಡು ಹಲ್ಲೆ ಮಾಡಿದವನು, ನಂತರ ದರ್ಶನ್ ಜೊತೆಗೆ ವ್ಯವಹಾರ, ಕೊಲೆ ಮಾಡಿದ್ದವರ ಖರ್ಚಿಗಾಗಿ ಮೂವತ್ತು ಲಕ್ಷ ಹಣವನ್ನು ಪಡೆದುತಂದಿದ್ದ. ಆರೋಪಿಗಳು ಭಯ ಪಟ್ಟಾಗ ಮತ್ತೆ ದರ್ಶನ್ ಬೇಟಿ ಮಾಡಿಸಿ ಮೂವರನ್ನ ಸರಂಡರ್ ಮಾಡಿಸಿದ್ದ.

ಕಾರ್ತಿಕ್ ಅಲಿಯಾಸ್ ಕಪ್ಪೆ

ಶೆಡ್‌ನಲ್ಲಿ ಕೆಲಸ ಮಾಡಿಕೊಂಡಿದ್ದ, ಹಣ ನೀಡಿದ ಬಳಿಕ ಶವ ಸಾಗಿಸಿದ್ದ. ನಂತರ ಪೊಲೀಸರ ಮುಂದೆ ಸರಂಡರ್ ಆಗಿದ್ದನು.

ಕೇಶವಮೂರ್ತಿ

ಕೊಲೆ ಮಾಡಿದ್ದ ಬಳಿಕ ಐದು ಲಕ್ಷ ಹಣ ಪಡೆದುಕೊಂಡು ಮೃತ ದೇಹವನ್ನು ಸಾಗಿಸುವ ಕೆಲಸ ಮಾಡಿದ್ದ. ಆಮೇಲೆ ಪೊಲೀಸರ ಎದುರು ಸರಂಡರ್ ಆಗಿದ್ದನು.

ನಿಕಿಲ್

ಕೊಲೆ ಮಾಡಿದ್ದ ಬಳಿಕ ಐದು ಲಕ್ಷ ಹಣ ಪಡೆದುಕೊಂಡು ಮೃತ ದೇಹವನ್ನು ಸಾಗಿಸುವ ಕೆಲಸ ಮಾಡಿದ್ದ. ಅಮೇಲೆ ಪೊಲೀಸರ ಎದುರು ಸರಂಡರ್ ಆಗಿದ್ದನು.

Exit mobile version