Site icon Vistara News

Actor Darshan : ದರ್ಶನ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌; ನ.8ರಂದು ನವಗ್ರಹ ಸಿನಿಮಾ ರೀ-ರಿಲೀಸ್‌

actor darshan

ಬೆಂಗಳೂರು: ಜೈಲಿನಲ್ಲಿರುವ ನಟ ದರ್ಶನ್ ಬೆನ್ನು ನೋವಿನಿಂದ ಒದ್ದಾಡುತ್ತಿರುವುದನ್ನು ಕಂಡು ಬೇಸರದಲ್ಲಿರುವ ಅಭಿಮಾನಿಗಳಿಗೆ ಕೊನೆಗೂ ಗುಡ್‌ ನ್ಯೂಸ್‌ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟರಲ್ಲೇ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ರಿಲೀಸ್ ಆಗ್ಬೇಕಿತ್ತು. ಆದರೆ ಇದೀಗ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಬಂಧಿಯಾಗಿದ್ದಾರೆ.

ದಾಸನ ಸಿನಿಮಾ ರೀ-ರಿಲೀಸ್, ಡೇಟ್ ಅನೌನ್ಸ್

ನಟ ದರ್ಶನ್ ಜೈಲಿನಲ್ಲಿದ್ದರೂ ಹಳೆಯ ಸಿನಿಮಾಗಳು ಥಿಯೇಟರ್​ಗಳಲ್ಲಿ ಸೌಂಡ್ ಮಾಡುತ್ತಿವೆ. ಈ ವರ್ಷ ‘DEVIL THE HERO’ ಸಿನಿಮಾವನ್ನು ನೋಡಬೇಕು ಎಂಬುದು ದರ್ಶನ್ ಅಭಿಮಾನಿಗಳ ಆಸೆ ಆಗಿತ್ತು. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದ ಬಳಿಕ ಆ ಸಿನಿಮಾದ ಕೆಲಸಕ್ಕೆ ಬ್ರೇಕ್​ ಬಿತ್ತು. ಹಾಗಾಗಿ ದೊಡ್ಡ ಪರದೆ ಮೇಲೆ ದರ್ಶನ್ ಹೊಸ ಸಿನಿಮಾ ತೆರೆಕಾಣಲಿಲ್ಲ. ಈ ಸಂದರ್ಭದಲ್ಲಿ ಅಭಿಮಾನಿಗಳು ದರ್ಶನ್​ ಅವರನ್ನು ಬಹಳ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅವರ ಈ ಹಿಂದಿನ ಹಿಟ್ ಸಿನಿಮಾಗಳನ್ನು ಮತ್ತೆ ತೆರೆಗೆ ತರಲಾಗುತ್ತಿದೆ. ಇತ್ತೀಚೆಗಷ್ಟೇ ದರ್ಶನ್ ಅಭಿನಯದ ಕರಿಯ, ಶಾಸ್ತ್ರಿ ಹಾಗೂ ಪೊರ್ಕಿ ಸಿನಿಮಾಗಳನ್ನು ಮರು ಬಿಡುಗಡೆಗೊಂಡಿತ್ತು.

‘ನವಗ್ರಹ’ ಸಿನಿಮಾ ಹಿಟ್‌ ಆದ ನಂತರ ಸಿನಿಮಾದ ಸೀಕ್ವೆಲ್‌ ಬರಲಿದೆ ಅಂತ ಹೇಳಲಾಗಿತ್ತಾದರೂ ಕೊನೆವರೆಗೂ ಈ ಸಿನಿಮಾದ ಸೀಕ್ವೆಲ್‌ ಬರಲೇ ಇಲ್ಲ. ಇದೊಂದು ವಿಷಯ ಡಿ ಬಾಸ್‌ ಫ್ಯಾನ್ಸ್‌ ಅಲ್ಲಿ ನಿರಾಶೆ ಉಂಟು ಮಾಡಿತ್ತು. ಕೆಲವು ದಿನಗಳ ಹಿಂದೆ, ‘ನವಗ್ರಹ’ ಸಿನಿಮಾ ರೀ ರಿಲೀಸ್‌ ಮಾಡಬೇಕೆಂದು ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಅಭಿಯಾನವನ್ನು ಸ್ಟಾರ್ಟ್‌ ಮಾಡಿದ್ದರು. #WeWantNavagrahaReRelease ಎಂಬ ಹ್ಯಾಶ್‌ಟ್ಯಾಗ್‌ ಬಳಸುವ ಮೂಲಕ ಈ ಟ್ರೆಂಡ್‌ ಅನ್ನು ವೈರಲ್‌ ಆಗಿತ್ತು. ಇದೀಗ ಮತ್ತೆ ಈ ಸಿನಿಮಾ ನೋಡೋ ಆಸೆಯಿಂದ ಅಭಿಮಾನಿಗಳು ಚಿತ್ರದ ರೀ ರಿಲೀಸ್‌ಗಾಗಿ ಪಟ್ಟು ಹಿಡಿದಿದ್ದಾರೆ.

ಕುತೂಹಲ ಮೂಡಿಸಿದ ದಿನಕರ್​ ಪೋಸ್ಟ್

‘ನವಗ್ರಹ’ ಕನ್ನಡ ಚಿತ್ರರಂಗದ ಸೂಪರ್ ಹಿಟ್​ ಸಿನಿಮಾ. 2008ರಲ್ಲಿ ತೆರೆಕಂಡ ನಟ ದರ್ಶನ್​​ ಮುಖ್ಯಭೂಮಿಕೆಯ ಈ ಚಿತ್ರ ಸೂಪರ್ ಹಿಟ್​ ಆಗಿತ್ತು. ಬಹುತಾರಾಗಣದ ಈ ಚಿತ್ರ ‘ಅಂಬಾರಿ’ ಕಳ್ಳತನಕ್ಕೆ ಪ್ರಯತ್ನಿಸುವ ಕಥೆಯನ್ನು ಒಳಗೊಂಡಿತ್ತು. ಈ ಸಿನಿಮಾ ರೀ-ರಿಲೀಸ್​ ಆಗುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ದಿನಕರ್ ತೂಗುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ‘ನನ್ನ ನಿರ್ದೇಶನದ 2ನೇ ಸಿನಿಮಾ ನವಗ್ರಹ. ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕರ ಮಕ್ಕಳನ್ನು ಒಟ್ಟಿಗೆ ಬೆಳ್ಳಿ ತೆರೆಯ ಮೇಲೆ ತಂದ ಒಂದು ಪ್ರಾಮಾಣಿಕ ಪ್ರಯತ್ನ. 16 ವರ್ಷಗಳ ಹಿಂದೆ ಬಿಡುಗಡೆಯಾಗಿ ನಿಮ್ಮೆಲ್ಲರ ಪ್ರೀತಿ-ಪ್ರೋತ್ಸಾಹದಿಂದ ಇಂದಿಗೂ ಜನಮೆಚ್ಚುಗೆಗೆ ಪಾತ್ರವಾಗಿದೆ. ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರ ಒತ್ತಾಯದ ಫಲವಾಗಿ ಇದೇ ನವೆಂಬರ್ 8ರಂದು ಮರುಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಮ್ಮೆ ಬೆಳ್ಳಿಪರದೆಯ ಮೇಲೆ ನೋಡಿ ಆನಂದಿಸಿ’ ಎಂದು ಅವರು ಬರೆದುಕೊಂಡಿದ್ದಾರೆ.

‘ನವಗ್ರಹ’ ಸಿನಿಮಾಗೆ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ನಿರ್ದೇಶನ ಮಾಡಿದ್ದಾರೆ. ದರ್ಶನ್ ಜೊತೆ ತರುಣ್ ಸುಧೀರ್​, ಧರ್ಮ ಕೀರ್ತಿರಾಜ್, ವಿನೋದ್ ಪ್ರಭಾಕರ್​, ಸೃಜನ್ ಲೋಕೇಶ್, ಗಿರಿ ದಿನೇಶ್, ನಾಗೇಂದ್ರ ಅರಸ್​, ವರ್ಷಾ, ಶರ್ಮಿಳಾ ಮಾಂಡ್ರೆ, ಕುರಿ ಪ್ರತಾಪ್, ಡೇರಿಂಗ್ ಸ್ಟಾರ್ ಧರ್ಮ ಸೇರಿದಂತೆ ಅನೇಕರು ನಟಿಸಿದ್ದಾರೆ. ಎ.ವಿ ಕೃಷ್ಣಕುಮಾರ್​ ಕ್ಯಾಮರಾ ಕೈಳಚಕವಿರುವ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಒದಗಿಸಿದ್ದರು. ಟಿ ಶಶಿಕುಮಾರ್​ ಸಂಕಲನದ ಹೊಣೆ ಹೊತ್ತಿದ್ದರು. ತೂಗುದೀಪ ಪ್ರೊಡಕ್ಷನ್ಸ್ ಅಡಿ ನಿರ್ಮಾಣಗೊಂಡ ಈ ಚಿತ್ರ 2008ರ ನವೆಂಬರ್​​ 7ರಂದು ಚಿತ್ರಮಂದಿರ ಪ್ರವೇಶಿಸಿ ಯಶಸ್ವಿಯಾಗಿತ್ತು. ಇದೀಗ ಅದೇ ದಿದಂದೇ ಮರು ಬಿಡುಗಡೆಗೆ ಸನ್ನದ್ಧವಾಗಿದೆ.

Exit mobile version