Site icon Vistara News

Lok Sabha Election: ಪ್ರಶಾಂತ್‌ ಕಿಶೋರ್‌ ಬಳಿಕ ಯೋಗೇಂದ್ರ ಯಾದವ್‌ ಕೂಡ ಮೋದಿ ಮತ್ತೊಮ್ಮೆ ಪ್ರಧಾನಿ ಖಚಿತ ಅಂತಿದ್ದಾರೆ!

yogendra yadav lok sabha election 2024

ಹೊಸದಿಲ್ಲಿ: ಖ್ಯಾತ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ಮತ್ತು ಯುಎಸ್ ರಾಜಕೀಯ ತಜ್ಞ ಇಯಾನ್ ಬ್ರೆಮ್ಮರ್ ನಂತರ, ಈ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ (BJP) ಗೆಲುವಿನ ಬಗ್ಗೆ ಸಾಮಾಜಿಕ ಹೋರಾಟಗಾರ, ಸ್ವರಾಜ್‌ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್ (Yogendra Yadav) ಭವಿಷ್ಯವಾಣಿ ನುಡಿದಿದ್ದಾರೆ.

ಭಾರತೀಯ ಜನತಾ ಪಕ್ಷವು (ಬಿಜೆಪಿ) ಮತ್ತೊಂದು ಸಾರ್ವತ್ರಿಕ ಚುನಾವಣೆಯ ವಿಜಯವನ್ನು ಪಡೆಯುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಭಾರತೀಯ ಜನತಾ ಪಕ್ಷದ ಪರವಾಗಿ ತಮ್ಮ ಭವಿಷ್ಯವಾಣಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಯಾದವ್‌ ಅಚ್ಚರಿ ಮೂಡಿಸಿದ್ದಾರೆ. ಯಾದವ್ ಪ್ರಕಾರ ಬಿಜೆಪಿ 240-260 ಸ್ಥಾನಗಳನ್ನು ಮತ್ತು ಅದರ ಮಿತ್ರಪಕ್ಷಗಳು 34-45 ಸ್ಥಾನಗಳನ್ನು ಗೆಲ್ಲಬಹುದು. ಅಂದರೆ ಎನ್‌ಡಿಎ (NDA) ಒಟ್ಟು 275 ಮತ್ತು 305 ಸ್ಥಾನಗಳ ನಡುವೆ ಸುಳಿದಾಡಬಹುದು.

ಇದು ಈ ಚುನಾವಣೆಯಲ್ಲಿ ಪುನರುಜ್ಜೀವನ ಹೊಂದುವ ಕಾಂಗ್ರೆಸ್ (Congress) ಪಕ್ಷದ ಭರವಸೆಯನ್ನು ನುಚ್ಚುನೂರು ಮಾಡಿದೆ. ಆದರೆ ಯಾದವ್‌ ಪ್ರಕಾರ ಈಗ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಭರವಸೆಯ ಬೆಳ್ಳಿ ರೇಖೆ ಇದೆ. ಏನೆಂದರೆ ಅದರ ಸ್ಥಾನಗಳ ಸಂಖ್ಯೆ 100 ದಾಟಬಹುದು. ಕಳೆದ ಚುನಾವಣೆಯಲ್ಲಿ ಅದು ಎರಡಂಕಿಗಳಿಗೆ ಇಳಿದಿತ್ತು.

“ದೇಶದ ಚುನಾವಣೆಗಳು ಮತ್ತು ಸಾಮಾಜಿಕ-ರಾಜಕೀಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವವರಲ್ಲಿ ವಿಶ್ವಾಸಾರ್ಹ ಮುಖವಾಗಿರುವ ಯೋಗೇಂದ್ರ ಯಾದವ್ ಅವರು 2024ರ ಲೋಕಸಭೆ ಚುನಾವಣೆಯ “ಅಂತಿಮ ಮೌಲ್ಯಮಾಪನ” ಹಂಚಿಕೊಂಡಿದ್ದಾರೆ. ಯೋಗೇಂದ್ರಜಿ ಪ್ರಕಾರ ಬಿಜೆಪಿ 240-260 ಸ್ಥಾನಗಳನ್ನು ಪಡೆಯಬಹುದು ಮತ್ತು NDAಯ ಮಿತ್ರಪಕ್ಷಗಳು 35-45 ಸ್ಥಾನಗಳು. ಒಟ್ಟಾರೆ ಬಿಜೆಪಿ/ಎನ್‌ಡಿಎಗೆ ಲೋಕಸಭೆಯಲ್ಲಿ 303/323 ಸ್ಥಾನಗಳು. ಎನ್‌ಡಿಎ ಸರ್ಕಾರ ರಚಿಸಲು 272 ಸ್ಥಾನಗಳು ಬೇಕು. ಕಳೆದ ಬಾರಿ ಶಿವಸೇನೆ ಎನ್‌ಡಿಎಯ ಭಾಗವಾಗಿ 18 ಸ್ಥಾನ ಪಡೆದಿತ್ತು. ಆದರೆ ಈಗ ಅದು ಜೊತೆಗಿಲ್ಲ. ಈಗ ಯಾರ ಸರ್ಕಾರ ರಚನೆಯಾಗಲಿದೆ ಎಂಬುದನ್ನು ನೀವೇ ಮೌಲ್ಯಮಾಪನ ಮಾಡಿ” ಎಂದು ಪ್ರಶಾಂತ್‌ ಕಿಶೋರ್ ಬರೆದಿದ್ದಾರೆ.

ಯಾದವ್, ಕಾಂಗ್ರೆಸ್ 85ರಿಂದ 100 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಬಿಜೆಪಿಯನ್ನು ಎದುರಿಸಿ ತಲೆಯತ್ತಿ ನಿಲ್ಲುವ ಆಶಯ ಹೊಂದಿರುವ ಇಂಡಿಯಾ ಬ್ಲಾಕ್ 120-135 ಸ್ಥಾನಗಳಿಗೆ ಉಳಿಯುವ ಸಾಧ್ಯತೆಯಿದೆ ಎಂದಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳನ್ನು ಗೆದ್ದಿತ್ತು.

ಕಿಶೋರ್, ಈ ವಾರ ಸಂದರ್ಶನವೊಂದರಲ್ಲಿ, ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾವುದೇ ಗಮನಾರ್ಹ ಅತೃಪ್ತಿ ಇಲ್ಲದ ಕಾರಣ ಬಿಜೆಪಿ ಆರಾಮವಾಗಿ ಬಹುಮತದ ಅಂಕವನ್ನು ದಾಟುತ್ತದೆ ಎಂದು ಹೇಳಿದ್ದರು. “ನಿರಾಶೆಗಳು, ಈಡೇರದ ಆಕಾಂಕ್ಷೆಗಳು ಇರಬಹುದು. ಆದರೆ ವ್ಯಾಪಕ ಕೋಪದ ಬಗ್ಗೆ ಯಾವುದೇ ಸುಳಿವು ಇಲ್ಲ” ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು. “ಬಿಜೆಪಿ ತನ್ನ ಮಹತ್ವಾಕಾಂಕ್ಷೆಯ 370 ಸ್ಥಾನ ಗುರಿಯನ್ನು ಸಾಧಿಸಲು ಸಾಧ್ಯವಾಗದಿರಬಹುದು” ಎಂದು ಸುಳಿವು ನೀಡಿದ್ದರು.

ಬಿಜೆಪಿ 295ರಿಂದ 315 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಮೆರಿಕದ ರಾಜಕೀಯ ತಜ್ಞ ಇಯಾನ್ ಬ್ರೆಮ್ಮರ್ ಈ ಹಿಂದೆ ತಿಳಿಸಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 303 ಲೋಕಸಭಾ ಸ್ಥಾನಗಳನ್ನು ಗೆದ್ದು, ಹಿಂದಿ ಹೃದಯ ರಾಜ್ಯಗಳಲ್ಲಿ ʼಮೋದಿ ಅಲೆ’ಯ ಮೇಲೆ ಸವಾರಿ ಮಾಡಿತ್ತು. 370 ಸೀಟುಗಳನ್ನು ಗೆಲ್ಲಬೇಕಾದರೆ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಪಕ್ಷಕ್ಕೆ ಭರ್ಜರಿ ಜಯಗಳಿಸಬೇಕು.

ಪ್ರತಿಪಕ್ಷಗಳಿಗೆ ರೆಡ್‌ ಅಲರ್ಟ್‌ ನೀಡಿದ ಪ್ರಶಾಂತ್‌ ಕಿಶೋರ್‌

ಲೋಕಸಭೆ ಚುನಾವಣೆಗೆ (Lok Sabha Election 2024) ಎರಡು ವಾರಗಳ ಮೊದಲು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ಅವರು ಕಾಂಗ್ರೆಸ್ (Congress) ಮತ್ತು ಇಂಡಿಯಾ ಬ್ಲಾಕ್‌ (INDIA Bloc) ಮೈತ್ರಿಕೂಟಕ್ಕೆ ರೆಡ್ ಅಲರ್ಟ್ ನೀಡಿದ್ದರು. ಆರು ಪೂರ್ವ ಮತ್ತು ದಕ್ಷಿಣ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಭಾರತೀಯ ಜನತಾ ಪಕ್ಷ (BJP) ಭಾರಿ ಪ್ರದರ್ಶನ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. “ಆಡಳಿತ ಪಕ್ಷವು ಅಜೇಯವಲ್ಲ. ಆದರೆ ಪ್ರತಿಪಕ್ಷಗಳು ಇನ್ನಷ್ಟು ಅವಕಾಶಗಳನ್ನು ಕಳೆದುಕೊಳ್ಳುತ್ತಿವೆ. ನೀವು ಕ್ಯಾಚ್‌ಗಳನ್ನು ಕೈಬಿಟ್ಟರೆ, ಬ್ಯಾಟರ್ ಶತಕ ಗಳಿಸುತ್ತಾರೆ” ಎಂದು ಅವರು ಹೇಳಿದ್ದಾರೆ.

ಪ್ರತಿಪಕ್ಷಗಳಿಗೆ ಪ್ರಶಾಂತ್ ಕಿಶೋರ್ ಎಚ್ಚರಿಕೆ

“ಬಿಜೆಪಿ ತೆಲಂಗಾಣದಲ್ಲಿ ಮೊದಲಿಗರು ಅಥವಾ ಎರಡನೆಯವರಾಗಲಿದ್ದಾರೆ. ಒಡಿಶಾದಲ್ಲಿ ನಂಬರ್ 1 ಆಗುತ್ತಾರೆ. ಇನ್ನೊಂದು ಆಶ್ಚರ್ಯಕರ ಬೆಳವಣಿಗೆ ಎಂದರೆ, ಬಿಜೆಪಿ ಬಂಗಾಳದಲ್ಲಿ ನಂಬರ್ 1 ಆಗಲಿದೆ” ಎಂದು ಕಿಶೋರ್ ಹೇಳಿದ್ದಾರೆ. “ತಮಿಳುನಾಡಿನಲ್ಲಿ ಪಕ್ಷವು ಎರಡಂಕಿ ಪ್ರಮಾಣದ ಮತಗಳನ್ನು ಗಳಿಸಬಹುದು” ಎಂದಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮತ ಹಂಚಿಕೆ ಇಲ್ಲಿ 3.6 ಶೇಕಡಾ ಮತ್ತು 2021ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 2.6 ಶೇಕಡಾ ಇತ್ತು.

ಈ ಹಿಂದೆ ಬಿಜೆಪಿ ಇಲ್ಲಿ ಅಸ್ತಿತ್ವಕ್ಕಾಗಿ ಸಾಕಷ್ಟು ಹೆಣಗಾಡಿದೆ. ಆದರೆ ಮತದಾರರು ಬಿಜೆಪಿಯ ಹಾರ್ಡ್‌ಕೋರ್‌ ಸಿದ್ಧಾಂತದತ್ತ ಒಲಿದಿಲ್ಲ. 2014 ಮತ್ತು 2019ರಲ್ಲಿ ತೆಲಂಗಾಣ, ಒಡಿಶಾ, ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಾದ್ಯಂತದ 164 ಸ್ಥಾನಗಳಲ್ಲಿ ಏಳು ಮತ್ತು 30 ಸ್ಥಾನಗಳನ್ನು ಮಾತ್ರ ಗೆದ್ದಿದೆ.

ಕರ್ನಾಟಕದಲ್ಲಿ 2019ರಲ್ಲಿ 28 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಬಿಜೆಪಿ ಗೆದ್ದುದು ಮಾತ್ರ ಅಪವಾದವಾಗಿದೆ. ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ದೊಡ್ಡ ಗೆಲುವಿನ ನಂತರ ಇಲ್ಲಿ ಪಕ್ಷವು ದುರ್ಬಲಗೊಂಡಿದೆ ಎಂದು ಹಲವರು ನಂಬುತ್ತಾರೆ.

ಆದರೂ, ಐದು ವರ್ಷಗಳ ಆಡಳಿತದಿಂದ ಈ ಪ್ರದೇಶಗಳಲ್ಲಿ ಬಿಜೆಪಿಯ ನಿರಂತರ ಪ್ರಭಾವ ದೊಡ್ಡ ಲಾಭಾಂಶವನ್ನು ನೀಡಬಹುದು. ಇದು ಸೀಟುಗಳಾಗಿ ಸಿಗದಿದ್ದರೂ ಸಹ ಮುಂಬರುವ ವಿಧಾನಸಭೆ ಚುನಾವಣೆಗಳಿಗೆ ಪಕ್ಷದ ಪ್ರೊಫೈಲ್ ಅನ್ನು ಹೆಚ್ಚಿಸಬಹುದು. ಈ ಆರು ರಾಜ್ಯಗಳಲ್ಲಿ ಮೂರು- ಬಂಗಾಳ, ಕೇರಳ ಮತ್ತು ತಮಿಳುನಾಡು- 2026ರಲ್ಲಿ ಮತ ಚಲಾಯಿಸುತ್ತವೆ.

ಈ ರಾಜ್ಯಗಳಲ್ಲಿ ಬಿಜೆಪಿ ವಿಸ್ತರಣೆಯ ಪ್ರಮುಖ ಹೆಜ್ಜೆಗಳನ್ನು ಇಟ್ಟಿದೆ. ಪಕ್ಷದ ಎರಡು ದೊಡ್ಡ ಹಿಟ್ಟರ್‌ಗಳಾದ ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಪುನರಾವರ್ತಿತ ಭೇಟಿಗಳನ್ನು ಪಿಕೆ ಸೂಚಿಸಿದ್ದಾರೆ. “ಕಳೆದ ಐದು ವರ್ಷಗಳಲ್ಲಿ ಪ್ರಧಾನಿಯವರು ತಮಿಳುನಾಡಿಗೆ ನೀಡಿದ ಭೇಟಿಗಳು ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ಅಥವಾ ಯಾವುದೇ ವಿರೋಧ ಪಕ್ಷದ ನಾಯಕರ ಭೇಟಿಗಳಿಗಿಂತ ಅಧಿಕ.”

ಹಿಂದಿ ಹೃದಯಭಾಗದ ಲಾಭ

ಹಿಂದಿ ಹೃದಯಭಾಗವೆನಿಸಿದ ಉತ್ತರ ಮತ್ತು ಪಶ್ಚಿಮ ರಾಜ್ಯಗಳಲ್ಲಿ 239 ಸ್ಥಾನಗಳಿವೆ. ಇಲ್ಲಿಯವರೆಗೆ ಈ ರಾಜ್ಯಗಳಲ್ಲಿ ಬಿಜೆಪಿ ಪ್ರಬಲವಾಗಿದ್ದು, ಇಲ್ಲಿ ನುಗ್ಗಲು ಪ್ರತಿಪಕ್ಷ ವಿಫಲವಾಗಿದೆ. ಮೋದಿಯವರು ಪಕ್ಷಕ್ಕೆ 370+ ಸೀಟುಗಳಿಗೆ, ಮೈತ್ರಿಕೂಟದ ಪಾಲುದಾರರು ಸೇರಿದಂತೆ 400ಕ್ಕೂ ಅಧಿಕ ಸ್ಥಾನ ಗೆಲ್ಲಲು ಯೋಜಿಸಿದ್ದಾರೆ. ಇದರ ದೊಡ್ಡ ಭಾಗವು ಗುಜರಾತ್, ರಾಜಸ್ಥಾನ, ಹರಿಯಾಣ, ಬಿಹಾರ, ಮಧ್ಯಪ್ರದೇಶ, ಹಾಗೆಯೇ ಜಾರ್ಖಂಡ್, ಛತ್ತೀಸ್‌ಗಢ ಮತ್ತು ಉತ್ತರಾಖಂಡಗಳನ್ನು ಒಳಗೊಂಡಿರುವ ಹೃದಯಭಾಗದ ರಾಜ್ಯಗಳಿಂದ ಬರುತ್ತದೆ.

ಇನ್ನಷ್ಟು ಹೃದಯಭಾಗದಲ್ಲಿ – ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರ – 149 ಸ್ಥಾನಗಳಿವೆ. 2019ರಲ್ಲಿ ಇಲ್ಲಿ ಬಿಜೆಪಿ 107, ಕಾಂಗ್ರೆಸ್ ಮೂರು ಸೇರಿ ಪ್ರಸ್ತುತ ಮಿತ್ರಪಕ್ಷಗಳು ಎಂಟು ಗೆದ್ದಿದ್ದವು. ಕಾಂಗ್ರೆಸ್ ಕಳೆದ ವರ್ಷ ಮೂರು ರಾಜ್ಯಗಳಲ್ಲಿ- ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ – ಅಧಿಕಾರ ಕಲೆದುಕೊಂಡರೆ, ಇತರ ಮೂರು – ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಗುಜರಾತ್ – ರಾಜ್ಯಗಳಲ್ಲಿ ಹಿಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಸೋತಿದೆ.

“ನಿಮ್ಮ ಹೋರಾಟ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿದೆ. ಆದರೆ ನೀವು ಮಣಿಪುರ ಮತ್ತು ಮೇಘಾಲಯ ಪ್ರವಾಸ ಮಾಡುತ್ತಿದ್ದೀರಿ. ನೀವು ಹೇಗೆ ಯಶಸ್ವಿಯಾಗುತ್ತೀರಿ?” ಎಂದು ರಾಹುಲ್‌ ಗಾಂಧಿ ಅವರ ʼಭಾರತ್ ಜೋಡೋ ನ್ಯಾಯ ಯಾತ್ರೆʼಗೆ ಸಂಬಂಧಿಸಿ ಕಿಶೋರ್ ಕೇಳಿದ್ದಾರೆ. ಮಣಿಪುರ ಮತ್ತು ಮೇಘಾಲಯ ಒಟ್ಟು ನಾಲ್ಕು ಲೋಕಸಭಾ ಸ್ಥಾನಗಳನ್ನು ಹೊಂದಿವೆ.

ಇದನ್ನೂ ಓದಿ: Prashant Kishor: ಮೋದಿ ಮೇಲೆ ಜನರಿಗೆ ಎಳ್ಳಷ್ಟೂ ಸಿಟ್ಟಿಲ್ಲ ಎಂದ ಪ್ರಶಾಂತ್‌ ಕಿಶೋರ್;‌ ಕೊಟ್ಟ ಕಾರಣ ಹೀಗಿದೆ

Exit mobile version