Lok Sabha Election: ಪ್ರಶಾಂತ್‌ ಕಿಶೋರ್‌ ಬಳಿಕ ಯೋಗೇಂದ್ರ ಯಾದವ್‌ ಕೂಡ ಮೋದಿ ಮತ್ತೊಮ್ಮೆ ಪ್ರಧಾನಿ ಖಚಿತ ಅಂತಿದ್ದಾರೆ! - Vistara News

ಪ್ರಮುಖ ಸುದ್ದಿ

Lok Sabha Election: ಪ್ರಶಾಂತ್‌ ಕಿಶೋರ್‌ ಬಳಿಕ ಯೋಗೇಂದ್ರ ಯಾದವ್‌ ಕೂಡ ಮೋದಿ ಮತ್ತೊಮ್ಮೆ ಪ್ರಧಾನಿ ಖಚಿತ ಅಂತಿದ್ದಾರೆ!

Lok Sabha Election: ಭಾರತೀಯ ಜನತಾ ಪಕ್ಷದ ಪರವಾಗಿ ತಮ್ಮ ಭವಿಷ್ಯವಾಣಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಯಾದವ್‌ ಅಚ್ಚರಿ ಮೂಡಿಸಿದ್ದಾರೆ. ಯಾದವ್ ಪ್ರಕಾರ ಬಿಜೆಪಿ 240-260 ಸ್ಥಾನಗಳನ್ನು ಮತ್ತು ಅದರ ಮಿತ್ರಪಕ್ಷಗಳು 34-45 ಸ್ಥಾನಗಳನ್ನು ಗೆಲ್ಲಬಹುದು. ಅಂದರೆ ಎನ್‌ಡಿಎ (NDA) ಒಟ್ಟು 275 ಮತ್ತು 305 ಸ್ಥಾನಗಳ ನಡುವೆ ಸುಳಿದಾಡಬಹುದು.

VISTARANEWS.COM


on

yogendra yadav lok sabha election 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಖ್ಯಾತ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ಮತ್ತು ಯುಎಸ್ ರಾಜಕೀಯ ತಜ್ಞ ಇಯಾನ್ ಬ್ರೆಮ್ಮರ್ ನಂತರ, ಈ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ (BJP) ಗೆಲುವಿನ ಬಗ್ಗೆ ಸಾಮಾಜಿಕ ಹೋರಾಟಗಾರ, ಸ್ವರಾಜ್‌ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್ (Yogendra Yadav) ಭವಿಷ್ಯವಾಣಿ ನುಡಿದಿದ್ದಾರೆ.

ಭಾರತೀಯ ಜನತಾ ಪಕ್ಷವು (ಬಿಜೆಪಿ) ಮತ್ತೊಂದು ಸಾರ್ವತ್ರಿಕ ಚುನಾವಣೆಯ ವಿಜಯವನ್ನು ಪಡೆಯುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಭಾರತೀಯ ಜನತಾ ಪಕ್ಷದ ಪರವಾಗಿ ತಮ್ಮ ಭವಿಷ್ಯವಾಣಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಯಾದವ್‌ ಅಚ್ಚರಿ ಮೂಡಿಸಿದ್ದಾರೆ. ಯಾದವ್ ಪ್ರಕಾರ ಬಿಜೆಪಿ 240-260 ಸ್ಥಾನಗಳನ್ನು ಮತ್ತು ಅದರ ಮಿತ್ರಪಕ್ಷಗಳು 34-45 ಸ್ಥಾನಗಳನ್ನು ಗೆಲ್ಲಬಹುದು. ಅಂದರೆ ಎನ್‌ಡಿಎ (NDA) ಒಟ್ಟು 275 ಮತ್ತು 305 ಸ್ಥಾನಗಳ ನಡುವೆ ಸುಳಿದಾಡಬಹುದು.

ಇದು ಈ ಚುನಾವಣೆಯಲ್ಲಿ ಪುನರುಜ್ಜೀವನ ಹೊಂದುವ ಕಾಂಗ್ರೆಸ್ (Congress) ಪಕ್ಷದ ಭರವಸೆಯನ್ನು ನುಚ್ಚುನೂರು ಮಾಡಿದೆ. ಆದರೆ ಯಾದವ್‌ ಪ್ರಕಾರ ಈಗ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಭರವಸೆಯ ಬೆಳ್ಳಿ ರೇಖೆ ಇದೆ. ಏನೆಂದರೆ ಅದರ ಸ್ಥಾನಗಳ ಸಂಖ್ಯೆ 100 ದಾಟಬಹುದು. ಕಳೆದ ಚುನಾವಣೆಯಲ್ಲಿ ಅದು ಎರಡಂಕಿಗಳಿಗೆ ಇಳಿದಿತ್ತು.

“ದೇಶದ ಚುನಾವಣೆಗಳು ಮತ್ತು ಸಾಮಾಜಿಕ-ರಾಜಕೀಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವವರಲ್ಲಿ ವಿಶ್ವಾಸಾರ್ಹ ಮುಖವಾಗಿರುವ ಯೋಗೇಂದ್ರ ಯಾದವ್ ಅವರು 2024ರ ಲೋಕಸಭೆ ಚುನಾವಣೆಯ “ಅಂತಿಮ ಮೌಲ್ಯಮಾಪನ” ಹಂಚಿಕೊಂಡಿದ್ದಾರೆ. ಯೋಗೇಂದ್ರಜಿ ಪ್ರಕಾರ ಬಿಜೆಪಿ 240-260 ಸ್ಥಾನಗಳನ್ನು ಪಡೆಯಬಹುದು ಮತ್ತು NDAಯ ಮಿತ್ರಪಕ್ಷಗಳು 35-45 ಸ್ಥಾನಗಳು. ಒಟ್ಟಾರೆ ಬಿಜೆಪಿ/ಎನ್‌ಡಿಎಗೆ ಲೋಕಸಭೆಯಲ್ಲಿ 303/323 ಸ್ಥಾನಗಳು. ಎನ್‌ಡಿಎ ಸರ್ಕಾರ ರಚಿಸಲು 272 ಸ್ಥಾನಗಳು ಬೇಕು. ಕಳೆದ ಬಾರಿ ಶಿವಸೇನೆ ಎನ್‌ಡಿಎಯ ಭಾಗವಾಗಿ 18 ಸ್ಥಾನ ಪಡೆದಿತ್ತು. ಆದರೆ ಈಗ ಅದು ಜೊತೆಗಿಲ್ಲ. ಈಗ ಯಾರ ಸರ್ಕಾರ ರಚನೆಯಾಗಲಿದೆ ಎಂಬುದನ್ನು ನೀವೇ ಮೌಲ್ಯಮಾಪನ ಮಾಡಿ” ಎಂದು ಪ್ರಶಾಂತ್‌ ಕಿಶೋರ್ ಬರೆದಿದ್ದಾರೆ.

ಯಾದವ್, ಕಾಂಗ್ರೆಸ್ 85ರಿಂದ 100 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಬಿಜೆಪಿಯನ್ನು ಎದುರಿಸಿ ತಲೆಯತ್ತಿ ನಿಲ್ಲುವ ಆಶಯ ಹೊಂದಿರುವ ಇಂಡಿಯಾ ಬ್ಲಾಕ್ 120-135 ಸ್ಥಾನಗಳಿಗೆ ಉಳಿಯುವ ಸಾಧ್ಯತೆಯಿದೆ ಎಂದಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳನ್ನು ಗೆದ್ದಿತ್ತು.

ಕಿಶೋರ್, ಈ ವಾರ ಸಂದರ್ಶನವೊಂದರಲ್ಲಿ, ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾವುದೇ ಗಮನಾರ್ಹ ಅತೃಪ್ತಿ ಇಲ್ಲದ ಕಾರಣ ಬಿಜೆಪಿ ಆರಾಮವಾಗಿ ಬಹುಮತದ ಅಂಕವನ್ನು ದಾಟುತ್ತದೆ ಎಂದು ಹೇಳಿದ್ದರು. “ನಿರಾಶೆಗಳು, ಈಡೇರದ ಆಕಾಂಕ್ಷೆಗಳು ಇರಬಹುದು. ಆದರೆ ವ್ಯಾಪಕ ಕೋಪದ ಬಗ್ಗೆ ಯಾವುದೇ ಸುಳಿವು ಇಲ್ಲ” ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು. “ಬಿಜೆಪಿ ತನ್ನ ಮಹತ್ವಾಕಾಂಕ್ಷೆಯ 370 ಸ್ಥಾನ ಗುರಿಯನ್ನು ಸಾಧಿಸಲು ಸಾಧ್ಯವಾಗದಿರಬಹುದು” ಎಂದು ಸುಳಿವು ನೀಡಿದ್ದರು.

ಬಿಜೆಪಿ 295ರಿಂದ 315 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಮೆರಿಕದ ರಾಜಕೀಯ ತಜ್ಞ ಇಯಾನ್ ಬ್ರೆಮ್ಮರ್ ಈ ಹಿಂದೆ ತಿಳಿಸಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 303 ಲೋಕಸಭಾ ಸ್ಥಾನಗಳನ್ನು ಗೆದ್ದು, ಹಿಂದಿ ಹೃದಯ ರಾಜ್ಯಗಳಲ್ಲಿ ʼಮೋದಿ ಅಲೆ’ಯ ಮೇಲೆ ಸವಾರಿ ಮಾಡಿತ್ತು. 370 ಸೀಟುಗಳನ್ನು ಗೆಲ್ಲಬೇಕಾದರೆ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಪಕ್ಷಕ್ಕೆ ಭರ್ಜರಿ ಜಯಗಳಿಸಬೇಕು.

ಪ್ರತಿಪಕ್ಷಗಳಿಗೆ ರೆಡ್‌ ಅಲರ್ಟ್‌ ನೀಡಿದ ಪ್ರಶಾಂತ್‌ ಕಿಶೋರ್‌

ಲೋಕಸಭೆ ಚುನಾವಣೆಗೆ (Lok Sabha Election 2024) ಎರಡು ವಾರಗಳ ಮೊದಲು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ಅವರು ಕಾಂಗ್ರೆಸ್ (Congress) ಮತ್ತು ಇಂಡಿಯಾ ಬ್ಲಾಕ್‌ (INDIA Bloc) ಮೈತ್ರಿಕೂಟಕ್ಕೆ ರೆಡ್ ಅಲರ್ಟ್ ನೀಡಿದ್ದರು. ಆರು ಪೂರ್ವ ಮತ್ತು ದಕ್ಷಿಣ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಭಾರತೀಯ ಜನತಾ ಪಕ್ಷ (BJP) ಭಾರಿ ಪ್ರದರ್ಶನ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. “ಆಡಳಿತ ಪಕ್ಷವು ಅಜೇಯವಲ್ಲ. ಆದರೆ ಪ್ರತಿಪಕ್ಷಗಳು ಇನ್ನಷ್ಟು ಅವಕಾಶಗಳನ್ನು ಕಳೆದುಕೊಳ್ಳುತ್ತಿವೆ. ನೀವು ಕ್ಯಾಚ್‌ಗಳನ್ನು ಕೈಬಿಟ್ಟರೆ, ಬ್ಯಾಟರ್ ಶತಕ ಗಳಿಸುತ್ತಾರೆ” ಎಂದು ಅವರು ಹೇಳಿದ್ದಾರೆ.

ಪ್ರತಿಪಕ್ಷಗಳಿಗೆ ಪ್ರಶಾಂತ್ ಕಿಶೋರ್ ಎಚ್ಚರಿಕೆ

“ಬಿಜೆಪಿ ತೆಲಂಗಾಣದಲ್ಲಿ ಮೊದಲಿಗರು ಅಥವಾ ಎರಡನೆಯವರಾಗಲಿದ್ದಾರೆ. ಒಡಿಶಾದಲ್ಲಿ ನಂಬರ್ 1 ಆಗುತ್ತಾರೆ. ಇನ್ನೊಂದು ಆಶ್ಚರ್ಯಕರ ಬೆಳವಣಿಗೆ ಎಂದರೆ, ಬಿಜೆಪಿ ಬಂಗಾಳದಲ್ಲಿ ನಂಬರ್ 1 ಆಗಲಿದೆ” ಎಂದು ಕಿಶೋರ್ ಹೇಳಿದ್ದಾರೆ. “ತಮಿಳುನಾಡಿನಲ್ಲಿ ಪಕ್ಷವು ಎರಡಂಕಿ ಪ್ರಮಾಣದ ಮತಗಳನ್ನು ಗಳಿಸಬಹುದು” ಎಂದಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮತ ಹಂಚಿಕೆ ಇಲ್ಲಿ 3.6 ಶೇಕಡಾ ಮತ್ತು 2021ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 2.6 ಶೇಕಡಾ ಇತ್ತು.

ಈ ಹಿಂದೆ ಬಿಜೆಪಿ ಇಲ್ಲಿ ಅಸ್ತಿತ್ವಕ್ಕಾಗಿ ಸಾಕಷ್ಟು ಹೆಣಗಾಡಿದೆ. ಆದರೆ ಮತದಾರರು ಬಿಜೆಪಿಯ ಹಾರ್ಡ್‌ಕೋರ್‌ ಸಿದ್ಧಾಂತದತ್ತ ಒಲಿದಿಲ್ಲ. 2014 ಮತ್ತು 2019ರಲ್ಲಿ ತೆಲಂಗಾಣ, ಒಡಿಶಾ, ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಾದ್ಯಂತದ 164 ಸ್ಥಾನಗಳಲ್ಲಿ ಏಳು ಮತ್ತು 30 ಸ್ಥಾನಗಳನ್ನು ಮಾತ್ರ ಗೆದ್ದಿದೆ.

ಕರ್ನಾಟಕದಲ್ಲಿ 2019ರಲ್ಲಿ 28 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಬಿಜೆಪಿ ಗೆದ್ದುದು ಮಾತ್ರ ಅಪವಾದವಾಗಿದೆ. ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ದೊಡ್ಡ ಗೆಲುವಿನ ನಂತರ ಇಲ್ಲಿ ಪಕ್ಷವು ದುರ್ಬಲಗೊಂಡಿದೆ ಎಂದು ಹಲವರು ನಂಬುತ್ತಾರೆ.

ಆದರೂ, ಐದು ವರ್ಷಗಳ ಆಡಳಿತದಿಂದ ಈ ಪ್ರದೇಶಗಳಲ್ಲಿ ಬಿಜೆಪಿಯ ನಿರಂತರ ಪ್ರಭಾವ ದೊಡ್ಡ ಲಾಭಾಂಶವನ್ನು ನೀಡಬಹುದು. ಇದು ಸೀಟುಗಳಾಗಿ ಸಿಗದಿದ್ದರೂ ಸಹ ಮುಂಬರುವ ವಿಧಾನಸಭೆ ಚುನಾವಣೆಗಳಿಗೆ ಪಕ್ಷದ ಪ್ರೊಫೈಲ್ ಅನ್ನು ಹೆಚ್ಚಿಸಬಹುದು. ಈ ಆರು ರಾಜ್ಯಗಳಲ್ಲಿ ಮೂರು- ಬಂಗಾಳ, ಕೇರಳ ಮತ್ತು ತಮಿಳುನಾಡು- 2026ರಲ್ಲಿ ಮತ ಚಲಾಯಿಸುತ್ತವೆ.

ಈ ರಾಜ್ಯಗಳಲ್ಲಿ ಬಿಜೆಪಿ ವಿಸ್ತರಣೆಯ ಪ್ರಮುಖ ಹೆಜ್ಜೆಗಳನ್ನು ಇಟ್ಟಿದೆ. ಪಕ್ಷದ ಎರಡು ದೊಡ್ಡ ಹಿಟ್ಟರ್‌ಗಳಾದ ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಪುನರಾವರ್ತಿತ ಭೇಟಿಗಳನ್ನು ಪಿಕೆ ಸೂಚಿಸಿದ್ದಾರೆ. “ಕಳೆದ ಐದು ವರ್ಷಗಳಲ್ಲಿ ಪ್ರಧಾನಿಯವರು ತಮಿಳುನಾಡಿಗೆ ನೀಡಿದ ಭೇಟಿಗಳು ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ಅಥವಾ ಯಾವುದೇ ವಿರೋಧ ಪಕ್ಷದ ನಾಯಕರ ಭೇಟಿಗಳಿಗಿಂತ ಅಧಿಕ.”

ಹಿಂದಿ ಹೃದಯಭಾಗದ ಲಾಭ

ಹಿಂದಿ ಹೃದಯಭಾಗವೆನಿಸಿದ ಉತ್ತರ ಮತ್ತು ಪಶ್ಚಿಮ ರಾಜ್ಯಗಳಲ್ಲಿ 239 ಸ್ಥಾನಗಳಿವೆ. ಇಲ್ಲಿಯವರೆಗೆ ಈ ರಾಜ್ಯಗಳಲ್ಲಿ ಬಿಜೆಪಿ ಪ್ರಬಲವಾಗಿದ್ದು, ಇಲ್ಲಿ ನುಗ್ಗಲು ಪ್ರತಿಪಕ್ಷ ವಿಫಲವಾಗಿದೆ. ಮೋದಿಯವರು ಪಕ್ಷಕ್ಕೆ 370+ ಸೀಟುಗಳಿಗೆ, ಮೈತ್ರಿಕೂಟದ ಪಾಲುದಾರರು ಸೇರಿದಂತೆ 400ಕ್ಕೂ ಅಧಿಕ ಸ್ಥಾನ ಗೆಲ್ಲಲು ಯೋಜಿಸಿದ್ದಾರೆ. ಇದರ ದೊಡ್ಡ ಭಾಗವು ಗುಜರಾತ್, ರಾಜಸ್ಥಾನ, ಹರಿಯಾಣ, ಬಿಹಾರ, ಮಧ್ಯಪ್ರದೇಶ, ಹಾಗೆಯೇ ಜಾರ್ಖಂಡ್, ಛತ್ತೀಸ್‌ಗಢ ಮತ್ತು ಉತ್ತರಾಖಂಡಗಳನ್ನು ಒಳಗೊಂಡಿರುವ ಹೃದಯಭಾಗದ ರಾಜ್ಯಗಳಿಂದ ಬರುತ್ತದೆ.

ಇನ್ನಷ್ಟು ಹೃದಯಭಾಗದಲ್ಲಿ – ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರ – 149 ಸ್ಥಾನಗಳಿವೆ. 2019ರಲ್ಲಿ ಇಲ್ಲಿ ಬಿಜೆಪಿ 107, ಕಾಂಗ್ರೆಸ್ ಮೂರು ಸೇರಿ ಪ್ರಸ್ತುತ ಮಿತ್ರಪಕ್ಷಗಳು ಎಂಟು ಗೆದ್ದಿದ್ದವು. ಕಾಂಗ್ರೆಸ್ ಕಳೆದ ವರ್ಷ ಮೂರು ರಾಜ್ಯಗಳಲ್ಲಿ- ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ – ಅಧಿಕಾರ ಕಲೆದುಕೊಂಡರೆ, ಇತರ ಮೂರು – ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಗುಜರಾತ್ – ರಾಜ್ಯಗಳಲ್ಲಿ ಹಿಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಸೋತಿದೆ.

“ನಿಮ್ಮ ಹೋರಾಟ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿದೆ. ಆದರೆ ನೀವು ಮಣಿಪುರ ಮತ್ತು ಮೇಘಾಲಯ ಪ್ರವಾಸ ಮಾಡುತ್ತಿದ್ದೀರಿ. ನೀವು ಹೇಗೆ ಯಶಸ್ವಿಯಾಗುತ್ತೀರಿ?” ಎಂದು ರಾಹುಲ್‌ ಗಾಂಧಿ ಅವರ ʼಭಾರತ್ ಜೋಡೋ ನ್ಯಾಯ ಯಾತ್ರೆʼಗೆ ಸಂಬಂಧಿಸಿ ಕಿಶೋರ್ ಕೇಳಿದ್ದಾರೆ. ಮಣಿಪುರ ಮತ್ತು ಮೇಘಾಲಯ ಒಟ್ಟು ನಾಲ್ಕು ಲೋಕಸಭಾ ಸ್ಥಾನಗಳನ್ನು ಹೊಂದಿವೆ.

ಇದನ್ನೂ ಓದಿ: Prashant Kishor: ಮೋದಿ ಮೇಲೆ ಜನರಿಗೆ ಎಳ್ಳಷ್ಟೂ ಸಿಟ್ಟಿಲ್ಲ ಎಂದ ಪ್ರಶಾಂತ್‌ ಕಿಶೋರ್;‌ ಕೊಟ್ಟ ಕಾರಣ ಹೀಗಿದೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಧಾರ್ಮಿಕ

Bakrid 2024: ತ್ಯಾಗ, ಬಲಿದಾನವನ್ನು ಸ್ಮರಿಸುವ ಈದುಲ್ ಅಝ್ಹಾ

Bakrid 2024: ಹಝ್ರತ್ ಇಬ್ರಾಹಿಂ ಅವರಿಗೆ ಖಲೀಲುಲ್ಲಾಹ್ ಅಲ್ಲಾಹನ ಸ್ನೇಹಿತ ಎಂಬ ಗೌರವ ಪದವಿಯನ್ನು ನೀಡಿ ಗೌರವಿಸುತ್ತಾನೆ. ಪ್ರವಾದಿ ಇಬ್ರಾಹಿಂ ಅವರ ಜೀವನ ಬದುಕು ಇತಿಹಾಸವನ್ನು ನೆನಪಿಸುವುದೇ ಹಜ್ ಬಕ್ರೀದ್‌ ಆಚರಣೆಯ ಉದ್ದೇಶ.

VISTARANEWS.COM


on

bakrid 2024
Koo

:: ಹಾಶಿಂ ಬನ್ನೂರು

ಮುಸ್ಲಿಮರು (Muslim) ಆಚರಿಸುವ ಹಬ್ಬಗಳ ಪೈಕಿ ಈದುಲ್ ಅಝ್ಹಾ (Eid UL Adha- Bakrid 2024) ಹಬ್ಬವು ಒಂದು. ಇದು ಬಹಳ ವಿಶೇಷತೆಯನ್ನು ಹೊಂದಿದೆ. ಜಾಗತಿಕ ವಲಯದಲ್ಲಿ ಸರ್ವ ಮುಸಲ್ಮಾನರು ಎಲ್ಲಾ ಹಬ್ಬಗಳ ಹಾಗೆ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಇದು ತ್ಯಾಗ ಮತ್ತು ಬಲಿದಾನ ಸಾವಿರಾರು ಹಿಂದಿನ ಐತಿಹಾಸಿಕ ಚಾರಿತ್ರಿಕ ಘಟನೆಯನ್ನು ಸ್ಮರಿಸುವ ಹಬ್ಬ. ಈ ಕುರಿತಾದ ಚರಿತ್ರೆಗಳು ಮತ್ತು ನೈಜ ಘಟನೆಗಳು ಖುರ್ ಆನ್ (Quran) ಹಾಗೂ ಇಸ್ಲಾಮಿನ ಧಾರ್ಮಿಕ ಗ್ರಂಥದಲ್ಲಿ ಪುರಾವೆ ಸಮೇತ ಉಲ್ಲೇಖವಿದೆ.

ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಅರೇಬಿಕ್ ತಿಂಗಳ ಕೊನೇಯ ತಿಂಗಳ ಝುಲ್ ಹಿಜ್ಜ ಬಹಳ ಪವಿತ್ರ ತಿಂಗಳು. ಆರೋಗ್ಯ, ಸಂಪತ್ತು, ಸೌಕರ್ಯ ಹೊಂದಿ ಜವಾಬ್ದಾರಿ ಮುಕ್ತನಾಗಿರುವ ಮುಸ್ಲಿಂ ವ್ಯಕ್ತಿಯ ಮೇಲೆ ಇಸ್ಲಾಮಿನ ಐದು ಪಂಚ ಕರ್ಮಗಳಲ್ಲಿ ಒಂದಾದ ಹಜ್ ಕಡ್ಡಾಯವಾಗಿದೆ. ಅದರ ನಿರ್ವಹಣೆಗಿರುವ ಸಮಯ ಮತ್ತು ತಿಂಗಳು ಇದೇ ಝುಲ್ ಹಜ್ ಆಗಿರುತ್ತದೆ.

ಆಧ್ಯಾತ್ಮಿಕ ಶುದ್ಧೀಕರಣದೊಂದಿಗೆ ಮೆಕ್ಕಾದಲ್ಲಿರುವ ಪವಿತ್ರ್ ಭವನ ಕಅಬಾಗೆ ತೆರಳಿ ಕಅಬಾ ಭವನಕ್ಕೆ ಪ್ರದಕ್ಷಿಣೆ, ಸಫಾ ಮರ್ವಾ ಬೆಟ್ಟಗಳ ಮಧ್ಯೆ ನಡೆಯುವುದು, ಮಿನಾದಲ್ಲಿ ತಂಗುವುದು, ಅರಫಾ ಮೈದಾನಕ್ಕೆ ತೆರಳುವುದು, ಮುಝ್ದಲಿಫಾದಲ್ಲಿ ಇರುವುದು, ಜಮ್ರಾದಲ್ಲಿ ಕಲ್ಲೆಸೆಯುವುದು, ಮತ್ತೆ ಮಿನಾದಲ್ಲಿ ತಂಗಿ ಬಲಿ ನೀಡುವುದು ಈ ರೀತಿ ಕೆಲವೊಂದು ಕರ್ಮಗಳನ್ನು ಒಳಗೊಂಡ ಮಕ್ಕಾ ಪುಣ್ಯ ಯಾತ್ರೆಗೆ ಹಜ್ ಎಂದು ಕರೆಯುತ್ತೇವೆ. ಹಜ್ ನಂತೆಯೇ ಉಮ್ರಾ ಕೂಡ ಇದೇ ಕರ್ಮಗಳನ್ನು ಒಳಗೊಂಡಿವೆ. ಆದರೆ ಹಜ್ ವರ್ಷಕ್ಕೆ ಒಂದು ಬಾರಿ ಝುಲ್ ಹಿಜ್ಜ ತಿಂಗಳಲ್ಲಿ ಮಾತ್ರ. ಉಮ್ರಾ ವರ್ಷದ ಎಲ್ಲಾ ದಿನವು ಮಾಡಬಹುದಾಗಿದೆ.

ಧರ್ಮ ಪ್ರಚಾರ

ಇಸ್ಲಾಂ ದರ್ಮದ ಪ್ರಚಾರಕರಾಗಿ ಆಯುಕ್ತರಾಗಿದ್ದ ಒಂದು ಲಕ್ಷಕ್ಕಿಂತಲೂ ಅಧಿಕ ಪ್ರವಾದಿಗಳ ಪೈಕಿ ಅಲ್ಲಾಹನ ಇಷ್ಟ ದಾಸರಾಗಿ ವಿಶೇಷ ಸ್ಥಾನಮಾನ ಪಡೆದ ಮಹಾನರಾಗಿದ್ದರು ಹಜ್ರತ್ ಇಬ್ರಾಹಿಮ್ ಅಲೈಹಿಸ್ಸಲಾಮ್, ಅವರು ಪ್ರವಾದಿಯಾದ ಬಳಿಕ, ಧರ್ಮ ಪ್ರಚಾರಕ್ಕಿಳಿಯುತ್ತಾರೆ. ಈ ವೇಳೆ ದೇವರು ಇಬ್ರಾಹಿಮ್ ಅವರನ್ನು ಹಲವಾರು ಪರೀಕ್ಷೆಗಳಿಗೆ ಒಳಪಡಿಸುತ್ತಾನೆ. ಏಕದೇವ ವಿಶ್ವಾಸದ ಅನುಷ್ಠಾನಕ್ಕಾಗಿ ಸ್ವಂತ ಹೆತ್ತವರು, ಕುಟುಂಬ, ಮನೆ, ಆಸ್ತಿ, ಊರು ಎಲ್ಲವನ್ನೂ ತ್ಯಾಗ ಮಾಡಿ ದೇಶಾಂತರ ಹೊರಟು, ಸಂತಾನ ಭಾಗ್ಯ ಇಲ್ಲದೆ ಕೊರಗುತ್ತಿದ್ದ ಪ್ರವಾದಿ ಇಬ್ರಾಹಿಂ ಮತ್ತು ಹಾಜರ ಬೀವಿ ಅವರಿಗೆ ಪವಾಡದಂತೆ ವೃದ್ಧಾಪ್ಯದಲ್ಲಿ ಲಭಿಸಿದ ಗಂಡು ಮಗು ಇಸ್ಮಾಯಿಲ್ ಸ್ವಂತ ಮಗನನ್ನೂ ದೇವರ ಆದೇಶದಂತೆ ಬಲಿ ಕೊಡಲು ಮುಂದಾಗುತ್ತಾರೆ. ನಿರ್ಜಲ, ನಿರ್ಜನ ಮರುಭೂಮಿಯಲ್ಲಿ ಪುಟ್ಟ ಮಗುವನ್ನು ಮಡದಿಯನ್ನು ಏಕಾಂಗಿಯಾಗಿ ಬಿಟ್ಟು ಬಿಡುತ್ತಾರೆ.

ಅಲ್ಲಾಹನ ಎಲ್ಲಾ ಆಜ್ಞೆಗಳನ್ನು ಈಡೇರಿಸಿ ಪರೀಕ್ಷೆಗಳನ್ನು ಎದುರಿಸಿ ದೇವ ಪ್ರೀತಿಗೆ ಪಾತ್ರರಾಗಿ ಪ್ರವಾದಿ ಇಬ್ರಾಹಿಂ ಮತ್ತು ಮಡದಿ ಹಾಜರ ಮಗ ಇಸ್ಮಾಯಿಲ್ ತ್ಯಾಗ ಮತ್ತು ಅಛಲ ವಿಶ್ವಾಸ ಸ್ನೇಹ ನಂಬಿಕೆಯ ಬದುಕನ್ನು ರೂಪಿಸಿಕೊಳ್ಳುತ್ತಾರೆ. ಪ್ರವಾದಿ ಇಬ್ರಾಹಿಂ ಅವರ ನಂತರ ತಮ್ಮ ಮಗ ಇಸ್ಮಾಯಿಲ್ ಪ್ರವಾದಿ ಪಟ್ಟವನ್ನು ಸ್ವೀಕರಿಸುತ್ತಾರೆ. ಹಝ್ರತ್ ಇಬ್ರಾಹಿಂ ಅವರಿಗೆ ಖಲೀಲುಲ್ಲಾಹ್ ಅಲ್ಲಾಹನ ಸ್ನೇಹಿತ ಎಂಬ ಗೌರವ ಪದವಿಯನ್ನು ನೀಡಿ ಗೌರವಿಸುತ್ತಾನೆ. ಪ್ರವಾದಿ ಇಬ್ರಾಹಿಂ ಅವರ ಜೀವನ ಬದುಕು ಇತಿಹಾಸವನ್ನು ನೆನಪಿಸುವುದೇ ಹಜ್ ಬಕ್ರೀದ್‌ ಆಚರಣೆಯ ಉದ್ದೇಶ.

ಇದನ್ನೂ ಓದಿ:Govt Holidays : 2024ರಲ್ಲಿ ಸರ್ಕಾರಿ ನೌಕರರಿಗೆ ಭರ್ಜರಿ ರಜೆ; ಇಲ್ಲಿದೆ ಸರ್ಕಾರಿ ರಜೆಗಳ ಪಟ್ಟಿ

Continue Reading

ಭವಿಷ್ಯ

Dina Bhavishya : ಗೌಪ್ಯ ವಿಷಯವನ್ನು ಹಂಚಿಕೊಂಡರೆ ಈ ರಾಶಿಯವರಿಗೆ ಅಪಾಯ ಗ್ಯಾರಂಟಿ!

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ ಏಕಾದಶಿ ಅಹೋರಾತ್ರಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ತುಲಾ ರಾಶಿಯಿಂದ ಸೋಮವಾರ ಮಧ್ಯರಾತ್ರಿ 02:37ಕ್ಕೆ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ತುಲಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ವೃಷಭ ರಾಶಿಯವರಿಗೆ ಕುಟುಂಬದ ಸದಸ್ಯರಿಗೆ ಸಂಬಂಧಿಗಳಿಂದ ಶುಭ ಸುದ್ದಿ ಬರುವುದು. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಮನೆಯಲ್ಲಿ ಶುಭ ಕಾರ್ಯಗಳ ಕುರಿತು ಚರ್ಚೆ ಮಾಡುವಿರಿ. ಕಟಕ ರಾಶಿಯವರು ಅತಿಯಾದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸೂಕ್ತ ವ್ಯಕ್ತಿಗಳ ಬೆಂಬಲದಿಂದ ಹೂಡಿಕೆ ವ್ಯವಹಾರದಲ್ಲಿ ತೊಡುಗುವ ಸಾಧ್ಯತೆ ಇದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (17-06-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ.
ತಿಥಿ: ಏಕಾದಶಿ ಅಹೋರಾತ್ರಿ ವಾರ: ಸೋಮವಾರ
ನಕ್ಷತ್ರ: ಚಿತ್ತಾ 13:49 ಯೋಗ: ಪರಿಘ 21:33
ಕರಣ: ವಣಿಜ 17:38 ಅಮೃತಕಾಲ: ಬೆಳಗ್ಗೆ 06:44ರಿಂದ 08:31ರವರೆಗೆ
ದಿನದ ವಿಶೇಷ: ಬೆಂಗಳೂರು ಪ್ರಸನ್ನ ವೀರಾಂಜನೆಯ ಉತ್ಸವ, ತಲಕಾಡು ಬ್ರಹ್ಮಾನಂದ ಸರಸ್ವತಿ ವರ್ಧಂತಿ

ಸೂರ್ಯೋದಯ : 05:54   ಸೂರ್ಯಾಸ್ತ : 06:47

ರಾಹುಕಾಲ: ಬೆಳಗ್ಗೆ 7.30 ರಿಂದ 9.00
ಗುಳಿಕಕಾಲ: ಮಧ್ಯಾಹ್ನ 1.30 ರಿಂದ 3.00
ಯಮಗಂಡಕಾಲ: ಬೆಳಗ್ಗೆ 10.30 ರಿಂದ 12.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಭಾವನಾತ್ಮಕವಾಗಿ ನೀವಿಂದು ಸ್ಥಿರವಾಗಿರುವುದಿಲ್ಲ. ಆತುರದಲ್ಲಿ ಆಡಿದ ಮಾತು ಅಪಾಯ ತಂದಿತು ಎಚ್ಚರಿಕೆ ಇರಲಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿಫಲ ಸಿಗುವುದರ ಜತೆಗೆ ಪುರಸ್ಕಾರ ಸಿಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಕುಟುಂಬದ ಸದಸ್ಯರಿಗೆ ಸಂಬಂಧಿಗಳಿಂದ ಶುಭ ಸುದ್ದಿ ಬರುವುದು. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಮನೆಯಲ್ಲಿ ಶುಭ ಕಾರ್ಯಗಳ ಕುರಿತು ಚರ್ಚೆ ಮಾಡುವಿರಿ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

Horoscope Today

ಮಿಥುನ: ಸಕಾರಾತ್ಮಕ ಆಲೋಚನೆಗಳು ಪುಷ್ಟಿ ನೀಡುವಂತೆ ಮಾಡುವುದು. ಆತುರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಬೇಡಿ. ಆಡಿದ ಮಾತುಗಳು ಅಪಾಯ ತಂದಿತು ಎಚ್ಚರಿಕೆ ಇರಲಿ. ಆರೋಗ್ಯ ಕೊಂಚ ಮಟ್ಟಿಗೆ ಹದಗೆಡುವ ಸಾಧ್ಯತೆ ಇದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿಯಾಗಲಿದೆ. ಮನೆಯವರ ಧೈರ್ಯದ ಮಾತುಗಳು ಮನಸ್ಸಿಗೆ ಸಂತೋಷ ನೆಮ್ಮದಿ ತರುವುದು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಕಟಕ:ಅತಿಯಾದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸೂಕ್ತ ವ್ಯಕ್ತಿಗಳ ಬೆಂಬಲದಿಂದ ಹೂಡಿಕೆ ವ್ಯವಹಾರದಲ್ಲಿ ತೊಡುಗುವ ಸಾಧ್ಯತೆ ಇದೆ. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವಿರಿ. ಸಂಗಾತಿ ನಿಮ್ಮ ಮನಸ್ಸಿಗೆ ಮುದ ನೀಡುವಳು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ಸಿಂಹ:ನಿಮ್ಮ ವರ್ತನೆಯಲ್ಲಿ ಬದಲಾವಣೆ ಆಗಲಿದೆ. ಹಿರಿಯರ ಆಶೀರ್ವಾದದ ಬಲದಿಂದ ಯಶಸ್ಸು ಸಿಗಲಿದೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಭೇಟಿ ಮಾಡಿ ಸ್ವಾಂತನ ಹೇಳಬಹುದು. ದಿಢೀರ್‌ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕನ್ಯಾ: ಒತ್ತಡದ ಕಾರ್ಯ ಆಯಾಸವನ್ನುಂಟು ಮಾಡುವುದು. ಕುಟುಂಬ ಸದಸ್ಯರ ಅವಶ್ಯಕತೆಗಾಗಿ ಅನಗತ್ಯ ಖರ್ಚು ಮಾಡುವಿರಿ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಇದರ ಮಧ್ಯೆ ಕುಟುಂಬ ಸದಸ್ಯರು ನಿಮ್ಮ ಮುಂದೆ ಸಮಸ್ಯೆ ಹಂಚಿಕೊಳ್ಳುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಕೈಗೊಂಡ ಧಾರ್ಮಿಕ ಕಾರ್ಯಗಳು ಮನಸ್ಸಿಗೆ ಸಮಾಧಾನ ತರುವುದು. ಅಗತ್ಯಕ್ಕೆ ತಕ್ಕಂತೆ ಖರ್ಚು ಇರಲಿದೆ. ಕುಟುಂಬದ ಸದಸ್ಯರಿಂದ ರಹಸ್ಯ ಸುದ್ದಿ ಅಚ್ಚರಿ ತರುವುದು, ಕೋಪದಲ್ಲಿ ಮಾತಿಗೆ ಇಳಿಯುವುದರಿಂದ ಕಠಿಣ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ :ಕಠಿಣ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗುವಿರಿ. ಭಾವನಾತ್ಮಕ ನಿರ್ಧಾರ ಕೈಗೊಳ್ಳುವ ಭರದಲ್ಲಿ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುವುದು ಬೇಡ. ಅಜಾಗೃತ ಕಾರ್ಯ ನಿಮಗೆ ಆರ್ಥಿಕ ನಷ್ಟ ಉಂಟು ಮಾಡಬಹುದು. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 3

Horoscope Today

ಧನಸ್ಸು: ಉದ್ಯೋಗದ ಸ್ಥಳದಲ್ಲಿ ಹೊಸ ಭರವಸೆಗಳು ಮೂಡಲಿವೆ. ಕುಟುಂಬದ ಸದಸ್ಯರ ವರ್ತನೆಯಿಂದ ಕೋಪಗೊಳ್ಳುವ ಸಾಧ್ಯತೆ ಇದೆ. ಸಂಬಂಧಿಕರಿಂದ ವ್ಯಾಜ್ಯ ಉಂಟಾಗುವ ಸಾಧ್ಯತೆ ಇದೆ. ಆತುರದ ಮಾತುಗಳು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 9

Horoscope Today

ಮಕರ: ಜೀವನದಲ್ಲಿ ಹೊಸ ಪಾಠ ಕಲಿಯುವಿರಿ. ಕೌಟುಂಬಿಕ ಒತ್ತಡ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಸಾಧ್ಯತೆ ಇದೆ. ಕೋಪದಲ್ಲಿ ಆಡಿದ ಮಾತುಗಳ ಮನವರಿಕೆ ಆಗುವುದು. ಆರೋಗ್ಯದ ಕಡೆಗೆ ಗಮನ ಹರಿಸಿ. ವೈದ್ಯರ ಸಲಹೆ ಪಡೆಯುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕುಂಭ: ಆತ್ಮವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು ,ಕೀರ್ತಿ ಸಿಗುವುದು. ದಿನದ ಮಟ್ಟಿಗೆ ಅನಗತ್ಯವಾಗಿ ಖರ್ಚು ಮಾಡುವ ಸಾಧ್ಯತೆ ಇದೆ. ಗೌಪ್ಯ ವಿಷಯಗಳನ್ನು ಹಂಚಿಕೊಂಡು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಕುಟುಂಬದ ಕಲಹದಲ್ಲಿ ಧ್ವನಿ ಸೇರಿಸುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಮೀನ: ಒತ್ತಡದ ಜೀವನಕ್ಕೆ ಕೊಂಚ ಮಟ್ಟಿಗೆ ಸಮಾಧಾನದ ಮಾತುಗಳು ಸೂಕ್ತ ವ್ಯಕ್ತಿಗಳಿಂದ ಸಿಗಲಿವೆ. ನಿಮ್ಮ ವರ್ತನೆಯಿಂದ ಕುಟುಂಬದ ಸದಸ್ಯರು ಕೋಪಗೊಳ್ಳವ ಸಾಧ್ಯತೆ ಇದೆ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಅವಶ್ಯಕ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 4

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಪ್ರಮುಖ ಸುದ್ದಿ

World War 3: ಜೂನ್ 18ರಿಂದ 3ನೇ ಮಹಾಯುದ್ಧ ಶುರು; ಖ್ಯಾತ ಜ್ಯೋತಿಷಿಯ ಭವಿಷ್ಯವಾಣಿ ಸಂಚಲನ

World War 3: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ದುರಂತದಿಂದ ಸಾವಿಗೀಡಾಗುತ್ತಾರೆ ಎಂಬುದಾಗಿ ಇದಕ್ಕೂ ಮೊದಲು ಕುಶಾಲ್‌ ಕುಮಾರ್ ಅವರು ಭವಿಷ್ಯ ನುಡಿದಿದ್ದರು. ಅದರಂತೆ, ಇಬ್ರಾಹಿಂ ರೈಸಿ ಅವರು ಮೇ 19ರಂದು ಸಂಭವಿಸಿದ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟಿದ್ದರು. ಈಗ ರಾಜಕೀಯ ಹಾಗೂ ಜಾಗತಿಕ ಗಡಿ ಬಿಕ್ಕಟ್ಟಿನಿಂದಾಗಿ ಮೂರನೇ ಮಹಾಯುದ್ಧ ಸಂಭವಿಸಲಿದೆ ಎಂದು ಮಾಧ್ಯಮ ಸಂಸ್ಥೆಯೊಂದಕ್ಕೆ ಕುಶಾಲ್‌ ಕುಮಾರ್‌ ಅವರು ಭವಿಷ್ಯ ನುಡಿದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

VISTARANEWS.COM


on

World War 3
Koo

ನವದೆಹಲಿ: ಅಫಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಜಾರಿಗೆ ಬಂದಿದ್ದು, ಮಾನವ ಹಕ್ಕುಗಳು ಸರ್ವನಾಶಗೊಂಡಿವೆ. ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡುತ್ತಲೇ ಇದೆ. ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ದಾಳಿ ನಡೆಸುತ್ತಲೇ ಇದೆ. ಇದೆಲ್ಲದ ಕಾರಣ ನಾಸ್ಟ್ರಾಡಾಮಸ್‌ ಹಾಗೂ ಬಾಬಾ ವಂಗಾ ಅವರು ಮೂರನೇ ಮಹಾಯುದ್ಧದ ಕುರಿತು ಭವಿಷ್ಯ ನುಡಿದಿದ್ದಾರೆ. ಇದರ ಬೆನ್ನಲ್ಲೇ, ಭಾರತದ ಜ್ಯೋತಿಷಿಯೊಬ್ಬರು ಮುಂದಿನ 48 ಗಂಟೆಗಳಲ್ಲಿಯೇ ಮೂರನೇ ಮಹಾಯುದ್ಧ ಆರಂಭವಾಗಲಿದ್ದು, ಜಗತ್ತಿನ ಬಹುತೇಕ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಭವಿಷ್ಯ ನುಡಿದಿರುವುದು ಸಂಚಲನ ಮೂಡಿಸಿದೆ.

ಹೌದು, ಹರಿಯಾಣದವರಾದ ಕುಶಾಲ್‌ ಕುಮಾರ್‌ ಅವರು ಮೂರನೇ ಮಹಾಯುದ್ಧದ ಕುರಿತು ಭವಿಷ್ಯ ನುಡಿದಿದ್ದಾರೆ. “2024ರ ಜೂನ್‌ 18ರಿಂದಲೇ ಅಂದರೆ, ಮುಂದಿನ 48 ಗಂಟೆಗಳಲ್ಲಿಯೇ ಜಗತ್ತಿನಾದ್ಯಂತ ಬಿಕ್ಕಟ್ಟು ಸೃಷ್ಟಿಯಾಗಲಿದೆ. ತಮ್ಮನ್ನು ತಾವು ವೈದಿಕ ಜ್ಯೋತಿಷಿ ಎಂದು ಘೋಷಿಸಿಕೊಂಡಿರುವ ಕುಶಾಲ್‌ ಕುಮಾರ್‌ ಅವರು ಇದುವರೆಗೆ ನುಡಿದ ಭವಿಷ್ಯಗಳು ನಿಜವಾಗಿವೆ. ಜೂನ್‌ 18ರಂದೇ ಜಾಗತಿಕವಾಗಿ ಸಂಚಲನ ಮೂಡಿಸುವ ಬೆಳವಣಿಗೆಯೊಂದು ನಡೆಯಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಜ್ಯೋತಿಷಿ ಕುಶಾಲ್‌ ಕುಮಾರ್.‌

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ದುರಂತದಿಂದ ಸಾವಿಗೀಡಾಗುತ್ತಾರೆ ಎಂಬುದಾಗಿ ಇದಕ್ಕೂ ಮೊದಲು ಕುಶಾಲ್‌ ಕುಮಾರ್ ಅವರು ಭವಿಷ್ಯ ನುಡಿದಿದ್ದರು. ಅದರಂತೆ, ಇಬ್ರಾಹಿಂ ರೈಸಿ ಅವರು ಮೇ 19ರಂದು ಸಂಭವಿಸಿದ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟಿದ್ದರು. ಈಗ ರಾಜಕೀಯ ಹಾಗೂ ಜಾಗತಿಕ ಗಡಿ ಬಿಕ್ಕಟ್ಟಿನಿಂದಾಗಿ ಮೂರನೇ ಮಹಾಯುದ್ಧ ಸಂಭವಿಸಲಿದೆ ಎಂದು ಮಾಧ್ಯಮ ಸಂಸ್ಥೆಯೊಂದಕ್ಕೆ ಕುಶಾಲ್‌ ಕುಮಾರ್‌ ಅವರು ಭವಿಷ್ಯ ನುಡಿದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಉತ್ತರ ಕೊರಿಯಾ ಸೈನಿಕರು ದಕ್ಷಿಣ ಕೊರಿಯಾ ಗಡಿಗಳತ್ತ ನುಗ್ಗುತ್ತಿದ್ದಾರೆ. ಇಸ್ರೇಲ್‌ ಹಾಗೂ ಗಾಜಾ ನಡುವಿನ ಸಮರವು ಭಾರಿ ಬಿಕ್ಕಟ್ಟು ಸೃಷ್ಟಿಸಿದೆ. ಉಕ್ರೇನ್‌ನಲ್ಲಿ ರಷ್ಯಾವಂತೂ ಮಾರಣಹೋಮ ನಡೆಸುತ್ತಿದೆ. ಇನ್ನು ಕಳೆದ ಜೂನ್‌ನಲ್ಲಿಯೇ ಜಮ್ಮು-ಕಾಶ್ಮೀರದಲ್ಲಿ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಇದೆಲ್ಲ ಕಾರಣದಿಂದಾಗಿ ಜಾಗತಿಕ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿ, ಇದು ಮಿಲಿಟರಿ ಕಾರ್ಯಾಚರಣೆಗಳಿಗೆ ಮುನ್ನುಡಿ ಬರೆಯುತ್ತದೆ. ಇದರಿಂದ ಜಾಗತಿಕ ಅಶಾಂತಿ ಸೃಷ್ಟಿಯಾಗುತ್ತದೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: Moscow Attack: ರಷ್ಯಾದಲ್ಲಿ ಉಗ್ರರ ದಾಳಿ; ಸಾವಿನ ಸಂಖ್ಯೆ 150, ಏನೆಲ್ಲ ಬೆಳವಣಿಗೆ?

Continue Reading

ಪ್ರಮುಖ ಸುದ್ದಿ

NCERT Textbooks: ರಾಜಕೀಯ ಶಾಸ್ತ್ರದ ಪಠ್ಯದಿಂದ ‘ಬಾಬ್ರಿ ಮಸೀದಿ’ ಅಧ್ಯಾಯ ತೆಗೆದ ಎನ್‌ಸಿಇಆರ್‌ಟಿ!

NCERT Textbooks: ಎನ್‌ಸಿಇಆರ್‌ಟಿ ಪಠ್ಯದಲ್ಲಿ ‘ಬಾಬ್ರಿ ಮಸೀದಿ’ ಎಂಬ ಪದವನ್ನು ತೆಗೆದುಹಾಕಲಾಗಿದೆ. ಬಾಬ್ರಿ ಮಸೀದಿಯನ್ನು ಮೂರು ಅಂತಸ್ತಿನ ಗೊಮ್ಮಟ ಎಂದು ಪ್ರಸ್ತಾಪಿಸಲಾಗಿದೆ. ಇನ್ನು ಅಯೋಧ್ಯೆಯ ಕುರಿತ ನಾಲ್ಕು ಪುಟಗಳ ಅಧ್ಯಾಯವನ್ನು ತೆಗೆದುಹಾಕಿದೆ. ಸೋಮನಾಥ ದೇವಾಲಯದಿಂದ ಅಯೋಧ್ಯೆವರೆಗೆ ಎಲ್‌.ಕೆ.ಅಡ್ವಾಣಿ ಅವರು ಕೈಗೊಂಡ ರಥಯಾತ್ರೆ, ಕರಸೇವೆ ಸೇರಿ ಹಲವು ಅಂಶಗಳನ್ನು ತೆಗೆದುಹಾಕಲಾಗಿದೆ.

VISTARANEWS.COM


on

NCERT Textbooks
Koo

ನವದೆಹಲಿ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ (Ram Mandir) ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಮಿತಿಯು (NCERT) 12ನೇ ತರಗತಿಯ ರಾಜಕೀಯ ಶಾಸ್ತ್ರದ ಪಠ್ಯಪುಸ್ತಕದಲ್ಲಿ (NCERT Textbooks) ಕೆಲ ಬದಲಾವಣೆಗಳನ್ನು ಮಾಡಿದೆ. ಅದರಲ್ಲೂ, ರಾಜಕೀಯ ಶಾಸ್ತ್ರ ಪುಸ್ತಕದಿಂದ ಬಾಬ್ರಿ ಮಸೀದಿ, ಕರಸೇವೆ ಸೇರಿ ಹಲವು ಅಧ್ಯಾಯಗಳನ್ನು ತೆಗೆದುಹಾಕಿದೆ. ಇದು ಈಗ ಚರ್ಚೆಗೂ ಗ್ರಾಸವಾಗಿದೆ.

ಎನ್‌ಸಿಇಆರ್‌ಟಿ ಪಠ್ಯದಲ್ಲಿ ‘ಬಾಬ್ರಿ ಮಸೀದಿ’ ಎಂಬ ಪದವನ್ನು ತೆಗೆದುಹಾಕಲಾಗಿದೆ. ಬಾಬ್ರಿ ಮಸೀದಿಯನ್ನು ಮೂರು ಅಂತಸ್ತಿನ ಗೊಮ್ಮಟ ಎಂದು ಪ್ರಸ್ತಾಪಿಸಲಾಗಿದೆ. ಇನ್ನು ಅಯೋಧ್ಯೆಯ ಕುರಿತ ನಾಲ್ಕು ಪುಟಗಳ ಅಧ್ಯಾಯವನ್ನು ತೆಗೆದುಹಾಕಿದೆ. ಸೋಮನಾಥ ದೇವಾಲಯದಿಂದ ಅಯೋಧ್ಯೆವರೆಗೆ ಎಲ್‌.ಕೆ.ಅಡ್ವಾಣಿ ಅವರು ಕೈಗೊಂಡ ರಥಯಾತ್ರೆ, ಕರಸೇವೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನೆಲಸಮಗೊಳಿಸಿದ್ದಕ್ಕೆ ಬಿಜೆಪಿ ನಾಯಕರ ವಿಷಾದದ ಹೇಳಿಕೆಗಳನ್ನು ಪಠ್ಯದಿಂದ ಕೈಬಿಡಲಾಗಿದೆ.

Ayodhya Babri Masjid

ಬಾಬ್ರಿ ಮಸೀದಿ ಉಲ್ಲೇಖ ತೆಗೆದುಹಾಕಿದ ಕುರಿತು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್‌ ಪ್ರಸಾದ್‌ ಸಕ್ಲಾನಿ ಅವರು ಇಂಡಿಯಾ ಟುಡೇ ಟಿವಿಗೆ ಪ್ರತಿಕ್ರಿಯಿಸಿದ್ದಾರೆ. “ವಿದ್ಯಾರ್ಥಿಗಳು ಏಕೆ ಗಲಭೆ, ಹಿಂಸಾಚಾರ ಸೇರಿ ಹಲವು ನಕಾರಾತ್ಮಕ ಅಂಶಗಳ ಕುರಿತು ಕಲಿಯಬೇಕು. ಗುಜರಾತ್‌ ಹಿಂಸಾಚಾರ, ಬಾಬ್ರಿ ಮಸೀದಿ ನೆಲಸಮ ಸೇರಿ ಹಲವು ಅಂಶಗಳ ಕುರಿತು ಏಕೆ ಅಧ್ಯಯನ ಮಾಡಬೇಕು. ಅಷ್ಟಕ್ಕೂ, ನಾವು ಪಠ್ಯವನ್ನು ತಯಾರಿಸುವಾಗ ಯಾವುದೇ ಸಿದ್ಧಾಂತಗಳನ್ನು ಅನುಸರಿಸುವುದಿಲ್ಲ. ತಜ್ಞರ ಶಿಫಾರಸಿನಂತೆ ಬದಲಾವಣೆ ಮಾಡಲಾಗಿದೆ” ಎಂದು ತಿಳಿಸಿದರು.

ಬಾಬ್ರಿ ಮಸೀದಿ ಬದಲು ಮೂರು ಅಂತಸ್ತಿನ ಗುಮ್ಮಟ ಎಂದು ಪ್ರಸ್ತಾಪಿಸಿರುವುದು, ಗುಜರಾತ್‌ ಹಿಂಸಾಚಾರವನ್ನು ಕೈಬಿಟ್ಟಿರುವುದು ಸೇರಿ ಹಲವು ಅಂಶಗಳನ್ನು ಕೈಬಿಟ್ಟಿರುವ ಕುರಿತು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರದ ಸಿದ್ಧಾಂತಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಆದಾಗ್ಯೂ, ಎನ್‌ಸಿಇಆರ್‌ಟಿಯು ಬಳಿಕ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: Textbook Revision: ಪಠ್ಯ ಪುಸ್ತಕ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ; ಯಾವ ಪಾಠಗಳಿಗೆ ಕೊಕ್‌?

Continue Reading
Advertisement
Actor Darshan Renukaswamy Send His Photos To Pavitra Gowda
ಕ್ರೈಂ8 mins ago

Actor Darshan: ಹತ್ಯೆಯಾದ ರೇಣುಕಾಸ್ವಾಮಿ ಮೊಬೈಲ್‌ ಹೋಯಿತೆಲ್ಲಿ?

bakrid 2024
ಧಾರ್ಮಿಕ31 mins ago

Bakrid 2024: ತ್ಯಾಗ, ಬಲಿದಾನವನ್ನು ಸ್ಮರಿಸುವ ಈದುಲ್ ಅಝ್ಹಾ

Karnataka weather Forecast
ಮಳೆ1 hour ago

Karnataka weather : ಇಂದು ಕರಾವಳಿ, ಮಲೆನಾಡಿನಲ್ಲಿ ಹಗುರ, ಒಳನಾಡಿನಲ್ಲಿ ಸಾಧಾರಣ ಮಳೆ ಸಾಧ್ಯತೆ

Dina Bhavishya
ಭವಿಷ್ಯ3 hours ago

Dina Bhavishya : ಗೌಪ್ಯ ವಿಷಯವನ್ನು ಹಂಚಿಕೊಂಡರೆ ಈ ರಾಶಿಯವರಿಗೆ ಅಪಾಯ ಗ್ಯಾರಂಟಿ!

World War 3
ಪ್ರಮುಖ ಸುದ್ದಿ9 hours ago

World War 3: ಜೂನ್ 18ರಿಂದ 3ನೇ ಮಹಾಯುದ್ಧ ಶುರು; ಖ್ಯಾತ ಜ್ಯೋತಿಷಿಯ ಭವಿಷ್ಯವಾಣಿ ಸಂಚಲನ

Cholera outbreak
ಕರ್ನಾಟಕ11 hours ago

Cholera outbreak: ಕಲುಷಿತ ನೀರು ಸೇವನೆ; ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ವ್ಯಕ್ತಿಗೆ ಕಾಲರಾ ದೃಢ

NCERT Textbooks
ಪ್ರಮುಖ ಸುದ್ದಿ11 hours ago

NCERT Textbooks: ರಾಜಕೀಯ ಶಾಸ್ತ್ರದ ಪಠ್ಯದಿಂದ ‘ಬಾಬ್ರಿ ಮಸೀದಿ’ ಅಧ್ಯಾಯ ತೆಗೆದ ಎನ್‌ಸಿಇಆರ್‌ಟಿ!

Parenting Tips
ಪ್ರಮುಖ ಸುದ್ದಿ11 hours ago

Parenting Tips: ನೀವು ಹೊಸ ಅಪ್ಪ ಅಮ್ಮಂದಿರೇ? ನಿಮಗಿದೆ ಇಲ್ಲಿ ಮುಖ್ಯವಾದ ಟಿಪ್ಸ್!

Drowns in Lake
ಕರ್ನಾಟಕ12 hours ago

Drowns in lake: ಸ್ನೇಹಿತರ ಜತೆ ಕೆರೆಗೆ ಈಜಲು ಹೋದ ಬಾಲಕ ನೀರುಪಾಲು

Petrol Diesel Price
ಕರ್ನಾಟಕ12 hours ago

Petrol Diesel Price: ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ ಎಂದ ಸಿಎಂ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renukaswamy murder case The location of the accused is complete
ಸಿನಿಮಾ13 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ14 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ19 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ6 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ಟ್ರೆಂಡಿಂಗ್‌