ಹೊಸದಿಲ್ಲಿ: ದೇಶದ ಎರಡನೇ ಅತಿ ದೊಡ್ಡ ಇಂಟರ್‌ನೆಟ್ ಸೇವಾದಾತ (internet provider) ಕಂಪನಿ ಭಾರ್ತಿ ಏರ್ಟೆಲ್ (Bharti Airtel) , ತನ್ನ ಡೇಟಾ ದರಗಳನ್ನು (Airtel price hike) ಶೇ.21ರಷ್ಟು ಹೆಚ್ಚಿಸಿದೆ. ನಿನ್ನೆ ಇದರ ಪ್ರತಿಸ್ಪರ್ಧಿ ರಿಲಯನ್ಸ್ ಜಿಯೊ (Reliance Jio) ಡೇಟಾ ದರಗಳನ್ನು (Data Price) ಏರಿಸಿದ ಬಿನ್ನಲ್ಲೇ ಇದು ಬಂದಿದೆ.
ರಿಲಯನ್ಸ್ ಜಿಯೋ ತನ್ನ ಮೊಬೈಲ್ ಡೇಟಾ ಯೋಜನೆಗಳಲ್ಲಿ 12%ರಿಂದ 25%ವರೆಗೆ ಹೆಚ್ಚಳವನ್ನು ಘೋಷಿಸಿದ ಒಂದು ದಿನದ ನಂತರ ಭಾರ್ತಿ ಏರ್‌ಟೆಲ್ ಇಂದು ತನ್ನ ಟೆಲಿಕಾಂ ಸುಂಕ ದರಗಳನ್ನು 10-21%ರಷ್ಟು ಹೆಚ್ಚಿಸಿತು. ಹೊಸ ದರವು ಜುಲೈ 3ರಿಂದ ಜಾರಿಗೆ ಬರಲಿದೆ.
ಕೆಲವು ಪರಿಷ್ಕೃತ ದರಗಳು ಹೀಗಿವೆ:
ಡೇಟಾ | ಅವಧಿ | ಹಿಂದಿನ ದರ | ಹೊಸ ದರ |
ವಾಯಿಸ್ ಕಾಲ್ ಪ್ಲಾನ್ | |||
2 GB | 28 | 179 | 199 |
8 GB | 84 | 455 | 509 |
ಡೈಲಿ ಡೇಟಾ ಪ್ಲಾನ್ | |||
1.5 ಜಿಬಿ | 28 | 299 | 349 |
2.5 ಜಿಬಿ, 28, 359, 409 | |||
3 ಜಿಬಿ, 28, 399, 449 | |||
Add- On ಪ್ಲಾನ್ | |||
1 | 1 | 19 | 22 |
2 | 1 | 29 | 33 |
ಗ್ರಾಹಕರ ಮೇಲಿನ ಹೆಚ್ಚಿನ ಹೊರೆಗಳನ್ನು ನಿವಾರಿಸುವ ಸಲುವಾಗಿ, ಎಂಟ್ರಿ ಲೆವೆಲ್ ಪ್ಲಾನ್‌ಗಳಲ್ಲಿ ಅತ್ಯಂತ ಸಾಧಾರಣ ಬೆಲೆ ಏರಿಕೆ (ದಿನಕ್ಕೆ 70 ಪೈಸೆಗಿಂತ ಕಡಿಮೆ) ಮಾಡಲಾಗಿದೆ ಎಂದು ಭಾರ್ತಿ ಏರ್ಟೆಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಭಾರತದಲ್ಲಿ ಟೆಲಿಕಾಂ ಕಂಪನಿಗಳು ಆರ್ಥಿಕವಾಗಿ ಆರೋಗ್ಯಕರ ವ್ಯವಹಾರ ಮಾಡಬೇಕು ಎಂದಿದ್ದರೆ ಮೊಬೈಲ್ ಸರಾಸರಿ ಆದಾಯ (ಎಆರ್‌ಪಿಯು) 300 ರೂ.ಗಿಂತ ಹೆಚ್ಚಾಗಿರಬೇಕು ಎಂದು ಭಾರ್ತಿ ಏರ್ಟೆಲ್ ಹೇಳಿದೆ. “ಈ ಮಟ್ಟದ ಎಆರ್‌ಪಿಯು ನೆಟ್‌ವರ್ಕ್ ತಂತ್ರಜ್ಞಾನ ಮತ್ತು ಸ್ಪೆಕ್ಟ್ರಮ್‌ನಲ್ಲಿ ಅಗತ್ಯವಿರುವ ಗಣನೀಯ ಹೂಡಿಕೆಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಬಂಡವಾಳದ ಮೇಲೆ ಸಾಧಾರಣ ಆದಾಯವನ್ನು ನೀಡುತ್ತದೆ” ಎಂದು ಅದು ಹೇಳಿದೆ.
ಇಂದು ಭಾರ್ತಿ ಏರ್ಟೆಲ್ ಷೇರುಗಳು ಬಿಎಸ್ಇಯಲ್ಲಿ ಸುಮಾರು 2% ಏರಿಕೆಯಾಗಿ 1496.80 ರೂ.ಗೆ ತಲುಪಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಭಾರ್ತಿ ಏರ್ಟೆಲ್ ಎರಡೂ ಜೂನ್ 28ರ ಆರಂಭಿಕ ವಹಿವಾಟಿನಲ್ಲಿ ಹೆಚ್ಚಿನ ಲಾಭ ಗಳಿಸಿದವು.
ಇದನ್ನೂ ಓದಿ: Jio Tariffs: ಜಿಯೋ ಬಳಕೆದಾರರಿಗೆ ಬ್ಯಾಡ್ ನ್ಯೂಸ್; ಶೇ.20ರಷ್ಟು ಶುಲ್ಕ ಹೆಚ್ಚಳ, ನೂತನ ದರಪಟ್ಟಿ ಇಲ್ಲಿದೆ