Site icon Vistara News

Ather Halo Helmet : ಈ ಸ್ಮಾರ್ಟ್​ ಹೆಲ್ಮೆಟ್​ ಹಾಕೊಂಡ್ರೆ ಮ್ಯೂಸಿಕ್ ಕೇಳಬಹುದು; ಅದರಲ್ಲೇ ಮಾತನಾಡಬಹುದು

Ather Halo Helmet

ಬೆಂಗಳೂರು: ಟೆಕ್ ಕಂಪನಿ ಅಥೆರ್ ಎನರ್ಜಿ ಹಲವಾರು ದಿನಗಳಿಂದ ಹೊಚ್ಚ ಹೊಸ ಟೆಕ್​ ಆಧಾರಿತ ಹೆಲ್ಮೆಟ್ (Ather Halo Helmet) ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಹಲವಾರು ಟೀಸರ್ ಗಳು ಮತ್ತು ಜಾಹೀರಾತುಗಳನ್ನು ಪ್ರಕಟಿಸಿತ್ತು. ಇದೀಗ ಆ ಹೆಲ್ಮೆಟ್ ಅನ್ನು ಮಾರಕಟ್ಟೆಗೆ ಇಳಿಸಿದೆ. ಬೆಂಗಳೂರಿನಲ್ಲಿ ನಡೆದ ಅಥೆರ್​ ಕಮ್ಯುನಿಟಿ ಡೇ ಕಾರ್ಯಕ್ರಮದಲ್ಲಿ ಈ ಹೆಲ್ಮೆಟ್​ ಬಿಡುಗಡೆಗೊಂಡಿದೆ.

ಅಥೆರ್ ಎನರ್ಜಿ ತನ್ನ ಹೊಸ ಸರಣಿಯ ಸ್ಮಾರ್ಟ್ ಹೆಲ್ಮೆಟ್ ಗಳಿಗೆ ‘ಹ್ಯಾಲೋ’ ಎಂದು ಹೆಸರಿಟ್ಟಿದೆ. ತೆರೆದ ಮತ್ತು ಮುಚ್ಚಿದ ಸೇರಿದಂತೆ ಎರಡು ಮಾದರಿಯಲ್ಲಿ ಈ ಹೆಲ್ಮೆಟ್ ಲಭ್ಯವಿದೆ. ಹ್ಯಾಲೋ ಹೆಲ್ಮೆಟ್ ಪ್ರಯಾಣಿಕರನ್ನು ಕೇವಲ ಸುರಕ್ಷಿತವಾಗಿರಿಸುವ ಬದಲು ಸವಾರಿ ಅನುಭವವನ್ನು ಹೆಚ್ಚಿಸುತ್ತದೆ. ಹಾಡು ಕೇಳಿಕೊಂಡು, ಅಗತ್ಯ ಸಂದರ್ಭದಲ್ಲಿ ಮಾತನಾಡಿಕೊಂಡು ಹೋಗಬಹುದಾದ ಈ ಹೆಲ್ಮೆಟ್ ಅನ್ನು ಭವಿಷ್ಯದ ಹೆಲ್ಮೆಟ್ ಎಂದೇ ಕಂಪನಿ ಹೇಳಿಕೊಂಡಿದೆ.

ಡಾಟ್ 2 ಮತ್ತು ಐಎಸ್ಐ ಸುರಕ್ಷತಾ ರೇಟಿಂಗ್ಸ್​ಗಳೊಂದಿಎ ಫುಲ್-ಫೇಸ್ ಅಥೆರ್ ಹ್ಯಾಲೋ ಹೆಲ್ಮೆಟ್ 14,999 ರೂ. ಬೆಲೆಗೆ ಮಾರಾಟ‘ವಾಗಲಿದೆ. ಅದೇ ರೀತಿ ಮೊದಲ 1000 ಯುನಿಟ್​ಗಳು ರಿಯಾಯಿತಿಯೊಂದಿಗೆ 12,999 ರೂ.ಗೆ ಲಭ್ಯವಿರುತ್ತವೆ. ಅಂದ ಹಾಗೆ ಇದೇ ಹೆಲ್ಮೆಟ್ ಅನ್ನು ಕಮ್ಯುನಿಟಿ ಡೇ ಈವೆಂಟ್​ನಲ್ಲಿ ಶೇಕಡಾ 50ರ ರಿಯಾಯಿತಿಯೊಂದಿಗೂ ನೀಡಿದೆ. ಓಪನ್-ಫೇಸ್ ಹೆಲ್ಮೆಟ್​​ಗಳಿಗೆ ಹ್ಯಾಲೋ ಬಿಟ್ ಎಂದು ಕರೆಯಲಾಗಿದ್ದು. 4,999 ರೂ.ಗಳಿಗೆ ಲಭ್ಯವಿದೆ.

ಹ್ಯಾಲೋ ಎಂದರೇನು?

ಅಥೆರ್ ಹ್ಯಾಲೋ ಹೆಲ್ಮೆಟ್ ಬೇರೆ ಯಾವುದೇ ಹೆಲ್ಮೆಟ್​ಗಳ ಮಾದರಿಯನ್ನು ಆಧರಿಸಿಲ್ಲ ಅಥವಾ ಬೇರೆ ಯಾವುದೇ ಕಂಪನಿಯಿಂದ ವಿನ್ಯಾಸಗೊಳಿಸಲಾಗಿಲ್ಲ. ಇದನ್ನು ಸಂಪೂರ್ಣವಾಗಿ ಅಥೆರ್ ಆಂತರಿಕವಾಗಿ ಅಭಿವೃದ್ಧಿಪಡಿಸಿದೆ. ಪ್ಯಾಡಿಂಗ್ ನಿಂದ ಚಿಪ್​ನವರೆಗೆ ಇಲ್ಲೇ ತಯಾರಾಗಿದೆ. ಇದನ್ನು ಹೆಚ್ಚು ಆಧುನಿಕ ಮತ್ತು ಭವಿಷ್ಯದ ಹೆಲ್ಮೆಟ್​ ಎಂದು ಹೇಳಿದೆ. ಅದರಲ್ಲಿ ಹ್ಯಾಲೋ ತಂತ್ರಜ್ಞಾನವಾಗಿರುವ ಕಾರಣ ಅದಕ್ಕೆ ಅದೇ ಹೆಸರು ಇಡಲಾಗಿದೆ. ಆಡಿಯೊ ಹರ್ಮನ್ ಕಾರ್ಡನ್ ತಾಂತ್ರಿಕತೆಯನ್ನು ಬಳಸಲಾಗಿದೆ.

ಇದನ್ನೂ ಓದಿ: Ather Rizta : ದೊಡ್ಡ ಸ್ಟೋರೇಜ್​, ಕಡಿಮೆ ಬೆಲೆ; ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಹೊಸ ಅಥೆರ್​ ರಿಶ್ತಾ

ಆಧುನಿಕ ಸ್ಮಾರ್ಟ್ಫೋನ್ ಯುಗವನ್ನು ಪರಿಗಣಿಸಿ, ಹ್ಯಾಲೋ ಟೆಕ್ ಅನ್ನು ನಮ್ಮ ದೈನಂದಿನ ಜೀವನದಲ್ಲಿ ಸುಲಭವಾಗಿ ಸಂಯೋಜಿಸಲು ವಿನ್ಯಾಸಗೊಳಿಸಲಾಗಿದೆ. ಅದನ್ನು ಧರಿಸಿದ ಕ್ಷಣದಿಂದಲೇ ಹ್ಯಾಲೋ ಹೆಲ್ಮೆಟ್ ಸ್ವಯಂಚಾಲಿತವಾಗಿ ಸ್ವಿಚ್ ಆನ್ ಆಗುತ್ತದೆ ಮತ್ತು ಬ್ಲೂಟೂತ್ ಮೂಲಕ ಅಥೆರ್ ಸ್ಕೂಟರ್ ಮತ್ತು ನಿಮ್ಮ ಫೋನ್ ಗೆ ಸಂಪರ್ಕ ಸಾಧಿಸುತ್ತದೆ. ಸ್ಪೀಕರ್​ಗಳು ಮತ್ತು ಸಂವೇದಕಗಳನ್ನು ಬಳಸಿ ನಾಯ್ಸ್​ ಕ್ಯಾನ್ಸಲೇಷನ್​ ವ್ಯವಸ್ಥೆ ಮಾಡಲಾಗಿದೆ. ಸಂಗೀತ ಪ್ಲೇಬ್ಯಾಕ್ ಮತ್ತು ವಾಯ್ಸ್​ ರಿಟರ್ನ್​​ ಕಾಲ್​​ಗಳನ್ನು ಮಾಡಬಹುದು.

ಅಥೆರ್ ಹ್ಯಾಲೋವನ್ನು ತಂತ್ರಜ್ಞಾನದ ಆವೃತ್ತಿಯಾಗಿ ಇರಿಸುತ್ತಿದೆ, ಇದು ಕಾರಿನಂತಹ ಅನುಭವವನ್ನು ನೀಡುತ್ತದೆ, ವಿಶೇಷವಾಗಿ ಅದರ ಅಥೆರ್ ಚಿಟ್ಚಾಟ್ ಕಾರ್ಯದೊಂದಿಗೆ. ಇದು ಸವಾರ ಮತ್ತು ಹಿಂಬದಿ ಸವಾರನಿಗೆ ಸುತ್ತಮುತ್ತಲಿನ ಶಬ್ದದಿಂದ ಯಾವುದೇ ಹಸ್ತಕ್ಷೇಪವಿಲ್ಲದೆ ಹೆಲ್ಮೆಟ್ ಮೂಲಕ ಪರಸ್ಪರ ಮಾತನಾಡಲು ಅನುವು ಮಾಡಿಕೊಡುತ್ತದೆ.

ಹ್ಯಾಲೋ ಹೆಲ್ಮೆಟ್ ಒಂದೇ ಚಾರ್ಜ್​ನಲ್ಲಿ ಸರಿಸುಮಾರು 10 ದಿನಗಳ ಬ್ಯಾಟರಿ ಬಾಳಿಕೆ ಪಡೆಯುತ್ತದೆ. ಹ್ಯಾಲೋ ಹೆಲ್ಮೆಟ್​​ಗಳನ್ನು ಧರಿಸಿದ್ದರೆ ಸವಾರ ಮತ್ತು ಹಿಂಬದಿ ಸವಾರ ಒಂದೇ ಸಂಗೀತವನ್ನು ಕೇಳಬಹುದು ಎಂದು ಅಥೆರ್ ಹೇಳಿಕೊಂಡಿದೆ.

ಅಥೆರ್ ನ ಹೊಸ ಹ್ಯಾಲೋ ಸರಣಿಯ ಹೆಲ್ಮೆಟ್ ಗಳನ್ನು ಮೊದಲು ಬೆಂಗಳೂರಿನಲ್ಲಿ ನಡೆದ ಅಥೆರ್ ಕಮ್ಯುನಿಟಿ ಡೇ 2024 ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಗಿದೆ. ಅದಕ್ಕಿಂತ ಮೊದಲು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ರಿಶ್ತಾ ಬಿಡುಗಡೆ ಮಾಡಿತು. ತನ್ನ ಹೊಸ ಅಥೆರ್ ಸ್ಟಾಕ್ 6 ಸಾಫ್ಟ್ ವೇರ್ ಅನ್ನು ಬಿಡುಗಡೆ ಮಾಡಿದೆ.

Exit mobile version