Site icon Vistara News

Bajaj : ಜೂನ್​ನಲ್ಲಿ ಮಾರುಕಟ್ಟೆಗೆ ಇಳಿಯಲಿದೆ ಮೊಟ್ಟ ಮೊದಲ ಸಿಎನ್​ಜಿ ಬೈಕ್​

Rajjiv Bajaj

ನವ ದೆಹಲಿ: ಭಾರತೀಯ ಮಾರುಕಟ್ಟೆಯಲ್ಲಿ ಸಿಎನ್​ಜಿ (CNG) ಇಂಧನ ಆಧಾರಿತ ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳು ಹೆಚ್ಚಾಗುತ್ತಿವೆ. ಹೆಚ್ಚು ಮೈಲೇಜ್ ಹಾಗೂ ಪರಿಸರ ಸ್ನೇಹಿ ಇಂಧನದ ಈ ವಾಹನಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಇದೇ ನಿಟ್ಟಿನಲ್ಲಿ ಸಿಎನ್​ಜಿ ಬೈಕ್​​ಗಳನ್ನು ಮಾರುಕಟ್ಟೆಗೆ ಇಳಿಸಲು ಭಾರತದ ಮುಂಚೂಣಿ ದ್ವಿಚಕ್ರ ವಾಹನ ಕಂಪನಿಯಾಗಿರುವ ಬಜಾಜ್​ ಆಟೋ (Bajaj) ಮುಂದಾಗಿದೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ (Rajeev Bajaj) ಅವರು ಈ ಘೋಷಣೆಯನ್ನು ಮಾಡಿದ್ದಾರೆ. ಬೈಕ್​ನ ಮೊದಲ ಮಾದರಿ ಜೂನ್ ನಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ವರದಿಯಾಗಿದೆ.

ಮುಂದಿನ ಐದು ವರ್ಷಗಳಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಪ್ರಯತ್ನಗಳಲ್ಲಿ 5,000 ಕೋಟಿ ರೂ.ಗಳನ್ನು ಹೂಡಿಕೆ ಮಾಡುವ ಬಜಾಜ್ ಗ್ರೂಪ್​, ಆ ನಿಟ್ಟಿನಲ್ಲಿ ಸಿಎನ್​ಜಿ ಬೈಕ್​ಗಳನ್ನು ಮಾರುಕಟ್ಟೆಗೆ ಇಳಿಸಲಿದೆ.

ಮುಂಬರುವ ಬೈಕ್ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ ಜಿ) ನಲ್ಲಿ ಕಾರ್ಯನಿರ್ವಹಿಸಲಿದ್ದು, ಪರಿಸರ ಪ್ರಜ್ಞೆಯುಳ್ಳ ಗ್ರಾಹಕರಿಗೆ ನೆರವಾಗಲಿದೆ. ಈ ಬೈಕ್​ಗಳು ಹೆಚ್ಚು ಮೈಲೇಜ್ ಕೂಡ ನೀಡುತ್ತದೆ. ಹೊಸ ಬೈಕ್ ಮೈಲೇಜ್ ಪ್ರಜ್ಞೆಯುಳ್ಳ ಸವಾರರನ್ನು ಆಕರ್ಷಿಸಲೂ ಸಾಧ್ಯವಿದೆ. ಬಜಾಜ್ ಈ ಬೈಕ್ ಅನ್ನು ವಿಭಿನ್ನ ಬ್ರಾಂಡ್ ಅಡಿಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ : Viral News : ರೈಲಿನಲ್ಲಿ ಹುಟ್ಟಿದ ಹೆಣ್ಣು ಮಗುವಿಗೆ ರೈಲಿನದ್ದೇ ಹೆಸರಿಟ್ಟರು!

ಸಿಎನ್ ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೆಚ್ಚಿದ ಉತ್ಪಾದನಾ ವೆಚ್ಚ ಮತ್ತು ಪೆಟ್ರೋಲ್ ಮತ್ತು ಸಿಎನ್ ಜಿ ಇಂಧನ ಆಯ್ಕೆಗಳನ್ನು ಸಕ್ರಿಯಗೊಳಿಸುವ ವಿಶೇಷ ಟ್ಯಾಂಕ್ ಅಳವಡಿಸಬೇಕಾಗುತ್ತದೆ. ಹೀಗಾಗಿ ಸಿಎನ್ ಜಿ ಮೋಟಾರ್ ಸೈಕಲ್ ಗಳು ಸಾಂಪ್ರದಾಯಿಕ ಪೆಟ್ರೋಲ್ ಮಾದರಿಗಳಿಗೆ ಹೋಲಿಸಿದರೆ ಹೆಚ್ಚಿನ ಬೆಲೆ ಹೊಂದಿರುತ್ತವೆ ಎಂದು ನಿರೀಕ್ಷಿಸಲಾಗಿದೆ.

ಅರ್ಥಪೂರ್ಣ ಯೋಜನೆಗಳ ಜಾರಿಗೆ

ಬಜಾಜ್ ಫಿನ್ ಸರ್ವ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಬಜಾಜ್ ಮಾತನಾಡಿ, ಸಕಾರಾತ್ಮಕ ಸಾಮಾಜಿಕ ಪರಿಣಾಮವನ್ನು ಹೆಚ್ಚಿಸುವಲ್ಲಿ ಕೌಶಲ್ಯ ಅಭಿವೃದ್ಧಿಯ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. ವೇಗವಾಗಿ ವಿಸ್ತರಿಸುತ್ತಿರುವ ಹಣಕಾಸು ಸೇವಾ ವಲಯದಲ್ಲಿ ಉದ್ಯೋಗಾವಕಾಶಗಳಿಗಾಗಿ ಯುವಕರನ್ನು ಸಿದ್ಧಪಡಿಸುವ ಬ್ಯಾಂಕಿಂಗ್, ಹಣಕಾಸು ಮತ್ತು ವಿಮೆಯಲ್ಲಿ ಪ್ರಮಾಣಪತ್ರ ಕಾರ್ಯಕ್ರಮ (ಸಿಪಿಬಿಎಫ್ಐ) ನಂತಹ ಉಪಕ್ರಮಗಳ ಯಶಸ್ಸನ್ನು ಅವರು ಎತ್ತಿ ತೋರಿಸಿದರು.

Exit mobile version