Site icon Vistara News

Bangladesh Protest : ಆಘಾತಕಾರಿ ಬೆಳವಣಿಗೆ; ಬಾಂಗ್ಲಾದಲ್ಲಿ ಹಿಂದೂಗಳಿಗೆ ಜೀವ ಬೆದರಿಕೆ; ಕಣ್ಣೀರಿಡುತ್ತಿದ್ದಾರೆ ಮಹಿಳೆಯರು…

Bangladesh Protest

ನವದೆಹಲಿ: ಬಾಂಗ್ಲಾದಲ್ಲಿ ಉಂಟಾಗಿರುವ ಅರಾಜಕತೆ (Bangladesh Protest ) ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಜೀವಕ್ಕೆ ಅಪಾಯ ತಂದೊಡ್ಡಿದೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಅಲ್ಲಿನ ಹಿಂದೂ ಮಹಿಳೆಯೊಬ್ಬರು ಸುರಕ್ಷತೆಗಾಗಿ ಅಂಗಲಾಚುವ ವಿಡಿಯೊವೊಂದು ವೈರಲ್ ಆಗಿದೆ. ಇದು ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳ ಜೀವನದ ದುಃಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತಿದೆ. ದುಷ್ಕರ್ಮಿಗಳು ತಮ್ಮ ಮನೆಯನ್ನು ಧ್ವಂಸಗೊಳಿಸಿದ್ದಲ್ಲದೆ, ತನ್ನ ಕುಟುಂಬವನ್ನು ಭಾರತಕ್ಕೆ ವಾಪಸ್​ ಹೋಗುವಂತೆ ಒತ್ತಾಯಿಸಿ ಕೊಲೆ ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ ಎಂದು ಮಹಿಳೆ ವಿವರಿಸಿದ್ದಾರೆ. ಘಟನೆಯನ್ನು ವಿವರಿಸುವಾಗ ಮಹಿಳೆಯ ಜೋರಾಗಿ ಅಳುತ್ತಿದ್ದಾರೆ.

ದುಷ್ಕರ್ಮಿಗಳು ನನ್ನ ಮನೆಯನ್ನು ಧ್ವಂಸಗೊಳಿಸಿದರು. ನನ್ನ ಕುಟುಂಬ ಮತ್ತು ನನಗೆ ಕೊಲೆ ಬೆದರಿಕೆಗಳು ಬರುತ್ತಿವೆ. ನಾವೆಲ್ಲರೂ ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಓಡಿ ಹೋಗಲು ಬೆದರಿಕೆ ಹಾಕಲಾಗುತ್ತಿದೆ. ನಾನು ಬಾಂಗ್ಲಾದೇಶದ ಪ್ರಜೆಯಲ್ಲವೇ? ನಾನು ಇಲ್ಲಿ ವಾಸಿಸಲು ಸ್ವತಂತ್ರನಲ್ಲವೇ? ನನ್ನ ಕುಟುಂಬ ಮತ್ತು ನಾನು ಭಾರತದಲ್ಲಿ ಆಶ್ರಯವನ್ನು ಏಕೆ ಹುಡುಕಬೇಕು? ನಾವು ಹಿಂದೂಗಳು ಎಂಬ ಕಾರಣಕ್ಕಾಗಿಯೇ?” ಎಂದು ಮಹಿಳೆ ಭಾವುಕರಾಗಿ ಕೇಳಿದ್ದಾರೆ.

ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಯ ನಂತರ ಉಂಟಾಗಿರುವ ರಾಜಕೀಯ ಅಸ್ಥಿರತೆಯನ್ನು ಇಸ್ಲಾಮಿಕ್ ಉಗ್ರಗಾಮಿಗಳು ಬಳಸಿಕೊಳ್ಳುತ್ತಿದ್ದಾರೆ. ಬಾಂಗ್ಲಾದೇಶವು ಪ್ರಸ್ತುತ ಪ್ರಕ್ಷುಬ್ಧತೆಯಲ್ಲಿ ಮುಳುಗಿದೆ. ಉಗ್ರಗಾಮಿ ಗುಂಪುಗಳು ಹಿಂದೂ ಅಲ್ಪಸಂಖ್ಯಾತರ ಮೇಲೆ ತಮ್ಮ ದಾಳಿಗಳನ್ನು ಆರಂಭಿಸಿವೆ. ಮನೆಗಳನ್ನು ಸುಡುವುದು, ಮಹಿಳೆಯರ ಅಪಹರಣ ಮತ್ತು ವ್ಯಾಪಕ ಹಿಂಸಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಗಲಭೆ ಪೀಡಿತ ಪ್ರದೇಶಗಳ ಪ್ರತ್ಯಕ್ಷದರ್ಶಿ ವರದಿಗಳು ಮತ್ತು ವೀಡಿಯೊಗಳು ಬೆಚ್ಚಿ ಬೀಳಿಸುವಂತಿದೆ. ಇಸ್ಕಾನ್ ಮತ್ತು ಕಾಳಿ ದೇವಾಲಯ ಸೇರಿದಂತೆ ಹಿಂದೂ ಮನೆಗಳು ಮತ್ತು ದೇವಾಲಯಗಳನ್ನು ಲೂಟಿ ಮಾಡಲಾಗುತ್ತಿದೆ. ಅಲ್ಲೆಲ್ಲ ಬೆಂಕಿ ಹಚ್ಚಲಾಗಿದೆ. ಮಹಿಳೆಯರನ್ನು ಅಪಹರಿಸಿ ಅಜ್ಞಾತ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ದಾಳಿಕೋರರು ಕಾನೂನು ಮತ್ತು ಮಾನವ ಜೀವದ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಅಲ್ಪ ಸಂಖ್ಯಾತ ಸಮುದಾಯವು ಭಯದಲ್ಲಿ ಬದುಕುತ್ತಿದೆ.

ಹಿಂಸಾಚಾರವು ಭಾನುವಾರ ಭೀಕರವಾಗಿತ್ತು ಘರ್ಷಣೆಗಳ ಪರಿಣಾಮವಾಗಿ ಹಿಂದೂ ಕೌನ್ಸಿಲರ್ ಹಾಗೂ ಪರಶುರಾಮ್ ಥಾನಾ ಅವಾಮಿ ಲೀಗ್ ಸದಸ್ಯ ಹರಧನ್ ರಾಯ್ ಸೇರಿದಂತೆ ನೂರಾರು ಜನರನ್ನು ಹತ್ಯೆ ಮಾಡಲಾಗಿದೆ. ಪ್ರತಿಭಟನಾಕಾರರು ಮತ್ತು ಸರ್ಕಾರದ ಬೆಂಬಲಿಗರ ನಡುವಿನ ಘರ್ಷಣೆಗಳು ತೀವ್ರಗೊಳ್ಳುತ್ತಿದ್ದಂತೆ ಹಿಂಸಾಚಾರಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Muhammad Yunus : ನೊಬೆಲ್ ಪುರಸ್ಕೃತ ಮುಹಮ್ಮದ್ ಯೂನುಸ್​ ಬಾಂಗ್ಲಾ ಮಧ್ಯಂತರ ಸರ್ಕಾರದ ಸಲಹೆಗಾರ

ಹೆಚ್ಚುತ್ತಿರುವ ಹಿಂಸಾಚಾರವನ್ನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಖಂಡಿಸಿವೆ. ಹಿಂದೂ ಅಲ್ಪಸಂಖ್ಯಾತರನ್ನು ರಕ್ಷಿಸಲು ತಕ್ಷಣದ ಕ್ರಮವನ್ನು ಒತ್ತಾಯಿಸಿವೆ. ಆದಾಗ್ಯೂ, ಬಾಂಗ್ಲಾದೇಶದ ಅಧಿಕಾರಿಗಳು ಬಿಕ್ಕಟ್ಟನ್ನು ಪರಿಹರಿಸಲು ಹೆಣಗಾಡುತ್ತಿದೆ.

Exit mobile version