ಮುಂಬಯಿ: ಮಹಾರಾಷ್ಟ್ರದ ಸೋಲಾಪುರದಲ್ಲಿ (Lok Sabha Election) ಕಾಂಗ್ರೆಸ್ ಅಭ್ಯರ್ಥಿ ಪ್ರಣೀತಿ ಶಿಂಧೆ ಪರ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ (Shah Rukh Khan) ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಪ್ರಚಾರ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಬಿಜೆಪಿ ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದು. ಕಾಂಗ್ರೆಸ್ ಪಕ್ಷದ ‘ಹಗರಣ’ ಎಂದು ಕರೆದಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಚುನಾವಣಾ ಆಯೋಗ ಮತ್ತು ಶಾರುಖ್ ಖಾನ್ ಅವರನ್ನು ಟ್ಯಾಗ್ ಮಾಡಿ ಪ್ರಚಾರದ ಬಗ್ಗೆ ಕೆಲವು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ . “ಕಾಂಗ್ರೆಸ್ ಪಕ್ಷವು ಜನರನ್ನು ನಾಚಿಕೆಯಿಲ್ಲದೆ ಮತ್ತು ಬಹಿರಂಗವಾಗಿ ಮೂರ್ಖರನ್ನಾಗಿಸಲು ಮುಂದಾಗಿದೆ.. ನಕಲಿ ಸಮೀಕ್ಷೆಗಳನ್ನು ಹರಡುವುದು, ಭಾರತ ವಿರೋಧಿ ನಿರೂಪಣೆಗಳನ್ನು ರಚಿಸುವುದು, ಎಐ ಬಳಸಿ ಸೆಲೆಬ್ರಿಟಿಗಳ ಡೀಪ್ ಫೇಕ್ಗಳನ್ನು ನಿರ್ಮಿಸುತ್ತದೆ. ಈ ಪಕ್ಷವು ಈಗಾಗಲೇ ಇವಿಎಂಗಳನ್ನು ದೂಷಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.
One more SCAM of Congress party
— Shehzad Jai Hind (Modi Ka Parivar) (@Shehzad_Ind) April 19, 2024
Hired Duplicate Shahrukh Khan for election campaign!
Imagine the lengths to which the party can go to fool people so brazenly & openly. @iamsrk @ECISVEEP
Peddling fake surveys, making up fake anti India narratives, using AI generated Deep Fakes… pic.twitter.com/dF1Iyn5tZO
ವರದಿಗಳ ಪ್ರಕಾರ ಇದು ಶಾರುಖ್ ಖಾನ್ ಅವರ ಹೋಲುವ ಇಬ್ರಾಹಿಂ ಖಾದ್ರಿ ಎಂಬುವರು ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಇಬ್ರಾಹಿಂ ಖಾದ್ರಿ ಶಾರುಖ್ ಖಾನ್ ಅವರ ತದ್ರೂಪಿ ಎಂದೇ ಪ್ರಸಿದ್ದರಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಅಭಿಮಾನಿಗಳನ್ನು ಹೊಂದಿದ್ದಾರೆ. ಶಾರುಖ್ ಖಾನ್ ಅವರ ರಯೀಸ್ ಸಿನಿಮಾ ಬಿಡುಗಡೆಯಾದಾಗ ಗುಜರಾತ್ ಮೂಲದ ಇಬ್ರಾಹಿಂ ಖಾದ್ರಿ ಖ್ಯಾತಿ ಪಡೆದುಕೊಂಡಿದ್ದರು. ಏಕೆಂದರೆ ಶಾರುಖ್ ಅವರೊಂದಿಗಿನ ಖಾದ್ರಿ ಅವರ ಹೋಲಿಕೆ ಈ ವೇಳೆ ಗಮನಕ್ಕೆ ಬಂದಿತ್ತು. ಖಾದ್ರಿ ಶಾರುಖ್ ಅವರಂತೆಯೇ ಮಾತನಾಡುವ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾರೆ. ಶಾರುಖ್ ಅವರ ಸಿಗ್ನೇಚರ್ ಸ್ಟೈಲ್ಗಳನ್ನು ನಕಲ ಮಾಡುತ್ತಾರೆ. ಅವರ ನೃತ್ಯ ಚಲನೆಗಳನ್ನೂ ಅನುಕರಣೆ ಮಾಡುತ್ತಾರೆ.
After fake surveys, fake videos Congress brings out fake campaigners.
— Suresh Nakhua (Modi Ka Parivar) 🇮🇳 (@SureshNakhua) April 19, 2024
This one looks like duplicate of @iamsrk !!!#LokSabhaElections2024 #ModiParivarVsSorosGang pic.twitter.com/8g1JrKVuXs
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಶಾರುಖ್ ಅವರ ತದ್ರೂಪಿ ಖಾದರ್ ಪೋನಿಟೈಲ್ ಹೊಂದಿದ್ದಾರೆ. ಜನರತ್ತ ಕೈ ಬೀಸುತ್ತಾ ತೆರೆದ ವಾಹನದಲ್ಲಿ ಸಾಗಿದ್ದಾರೆ. ಆವಾಹನದಲ್ಲಿ ರಾಹುಲ್ ಗಾಂಧಿ, ಪ್ರಣೀತಿ ಶಿಂಧೆ ಅವರ ಭಾವಚಿತ್ರವಿರುವ ಕಾಂಗ್ರೆಸ್ ಬ್ಯಾನರ್ ಇತ್ತು.
ಪ್ರಣೀತಿ ಶಿಂಧೆ ಅವರು 2003-2004ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಪುತ್ರಿ. ಅವರು ಸೋಲಾಪುರ ಸಿಟಿ ಸೆಂಟ್ರಲ್ ಕ್ಷೇತ್ರದ ಹಾಲಿ ಶಾಸಕಿಯಾಗಿದ್ದಾರೆ. ಲೋಕಸಭೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾರೆ. ಸೋಲಾಪುರದಲ್ಲಿ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. 2019 ರಲ್ಲಿ ಸುಶೀಲ್ ಶಿಂಧೆ ಸೋಲಾಪುರ ಕ್ಷೇತ್ರದಲ್ಲಿ ಬಿಜೆಪಿಯ ಜೈಸಿದ್ದೇಶ್ವರ ಸ್ವಾಮಿ ವಿರುದ್ಧ ಸೋತಿದ್ದರು. ಈ ಬಾರಿ ಸುಶೀಲ್ ಶಿಂಧೆ ಅವರ ಪುತ್ರಿಯ ವಿರುದ್ಧ ಬಿಜೆಪಿ ರಾಮ್ ಸಾತ್ಪುತೆ ಅವರನ್ನು ಕಣಕ್ಕಿಳಿಸಿದೆ. ರಾಮ್ ಅವರು ಮಹಾರಾಷ್ಟ್ರದ ಮಾಲ್ಶಿರಾಸ್ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ನಿರುದ್ಯೋಗ ಮತ್ತು ಬೆಲೆ ಏರಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ವೀಡಿಯೊ ವೈರಲ್ ಆಗಿತ್ತು.