Site icon Vistara News

Border Security Force : ಗಡಿಯಲ್ಲಿ ಭಯೋತ್ಪಾದನೆ ಹೆಚ್ಚಳ; ಬಿಎಸ್​ಎಫ್​ ಮುಖ್ಯಸ್ಥರನ್ನು ಹುದ್ದೆಯಿಂದ ತೆಗೆದು ಹಾಕಿದ ಕೇಂದ್ರ ಸರ್ಕಾರ

Border Security Force

ನವದೆಹಲಿ: ಗಡಿಯ ಮೂಲಕ ಪಾಕಿಸ್ತಾನದ ಉಗ್ರರ ನುಸುಳುವಿಕೆ ವರದಿಯಾದ ಬೆನ್ನಲ್ಲೇ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ. ಶುಕ್ರವಾರ ಗಡಿ ಭದ್ರತಾ ಪಡೆ (Border Security Force) ಡೈರೆಕ್ಟರ್​ ನಿತಿನ್ ಅಗರ್ವಾಲ್ ಮತ್ತು ಅವರ ಡೆಪ್ಯುಟಿ ಡೈರೆಕ್ಟರ್​ (ಪಶ್ಚಿಮ) ವೈಬಿ ಖುರಾನಿಯಾ ಅವರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಿದೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ರಾಜ್ಯ ಕೇಡರ್​ಗಳಿಗೆ ವಾಪಸ್ ಕಳುಹಿಸಿದೆ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಅಗರ್ವಾಲ್ ಅವರು 1989ರ ಬ್ಯಾಚ್​​ನ ಕೇರಳ ಕೇಡರ್ ಅಧಿಕಾರಿಯಾಗಿದ್ದು, ಖುರಾನಿಯಾ 1990ರ ಬ್ಯಾಚ್​ನ ಒಡಿಶಾ ಕೇಡರ್​ಗೆ ಸೇರಿದವರಾಗಿದ್ದಾರೆ.

ಅಗರ್ವಾಲ್ ಅವರು ಕಳೆದ ವರ್ಷ ಜೂನ್​​ನಲ್ಲಿ ಬಿಎಸ್ಎಫ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಖುರಾನಿಯಾ ಅವರು ವಿಶೇಷ ಡಿಜಿ (ಪಶ್ಚಿಮ) ಆಗಿ ಪಾಕಿಸ್ತಾನ ಗಡಿಯಲ್ಲಿ ಪಡೆ ರಚನೆಯ ನೇತೃತ್ವ ವಹಿಸಿದ್ದರು. ಕ್ಯಾಬಿನೆಟ್​ನಲ್ಲಿ ನೇಮಕಾತಿ ಸಮಿತಿ ಹೊರಡಿಸಿದ ಪ್ರತ್ಯೇಕ ಆದೇಶಗಳಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ “ಅಕಾಲಿಕವಾಗಿ” ವಾಪಸ್ ಕಳುಹಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: High Speed Road Corridor : 8 ಹೊಸ ಹೈಸ್ಪೀಡ್​ ರೋಡ್​ ಕಾರಿರಾಡ್​ಗೆ ಒಪ್ಪಿಗೆ ಕೊಟ್ಟ ಕೇಂದ್ರ ಸರ್ಕಾರ

ಅಂತರರಾಷ್ಟ್ರೀಯ ಗಡಿಯಿಂದ ನಿರಂತರ ಒಳನುಸುಳುವಿಕೆ ಹಿನ್ನೆಲೆಯಲ್ಲಿ ಈ ಕ್ರಮ ಎಂದು ಹೇಳಲಾಗಿದೆ. ಸಮನ್ವಯದ ಕೊರತೆ ಸೇರಿದಂತೆ ನಿರ್ಣಾಯಕ ವಿಷಯಗಳ ಬಗ್ಗೆ ಬಿಎಸ್ಎಫ್ ಮುಖ್ಯಸ್ಥರ ವಿರುದ್ಧ ದೂರುಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ. ಬಿಎಸ್ಎಫ್ ಸುಮಾರು 2.65 ಲಕ್ಷ ಸಿಬ್ಬಂದಿಯನ್ನು ಹೊಂದಿದೆ ಮತ್ತು ಪಶ್ಚಿಮದಲ್ಲಿ ಪಾಕಿಸ್ತಾನ ಮತ್ತು ಪೂರ್ವದಲ್ಲಿ ಬಾಂಗ್ಲಾದೇಶದ ಗಡಿಗಳನ್ನು ಕಾಯುತ್ತಿದೆ.

Exit mobile version