Site icon Vistara News

Cab Service : ಆ್ಯಪ್​ ಆಧಾರಿತ ಕ್ಯಾಬ್​ಗಳು ಶೇ. 5ಕ್ಕಿಂತ ಹೆಚ್ಚು ಸೇವಾ ಶುಲ್ಕ ವಿಧಿಸುವಂತಿಲ್ಲ; ಸರ್ಕಾರದ ಆದೇಶಕ್ಕೆ ಕೋರ್ಟ್​ ಮನ್ನಣೆ

Cab service

ಬೆಂಗಳೂರು: ಆ್ಯಪ್ ಮೂಲಕ ಕಾರ್ಯಾಚರಿಸುವ ಕ್ಯಾಬ್ ಅಗ್ರಿಗೇಟರ್​ಗಳು (Cab Service) ಗ್ರಾಹಕರಿಂದ ಸಂಗ್ರಹಿಸುವ ಸೇವಾ ಶುಲ್ಕ ನಿಗದಿಪಡಿಸುವ ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿ ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ ಎಂದು ಬಾರ್ ಆ್ಯಂಡ್​ ಬೆಂಚ್ ವರದಿ ಮಾಡಿದೆ. ಕ್ಯಾಬ್​ ಕಂಪನಿಗಳು ಗರಿಷ್ಠ ಶೇಕಡಾ 5ರಷ್ಟು ಸೇವಾ ಶುಲ್ಕ ಮಾತ್ರ ಸಂಗ್ರಹಿಬಹುದು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಇದರಿಂದಾಗಿ ಬೆಂಗಳೂರು ನಗರ ಸೇರಿದಂತೆ ಕರ್ನಾಟಕದಲ್ಲಿ ಆ್ಯಪ್ ಆಧಾರಿತ ಕ್ಯಾಬ್​​ಗಳನ್ನು ಬಳಸುವ ಗ್ರಾಹಕರಿಗೆ ಅನುಕೂಲವಾಗಲಿದೆ. ಮಿತಿ ಮೀರಿ ಶುಲ್ಕ ವಿಧಿಸುವ ಕಂಪನಿಗಳ ಯೋಜನೆಗೆ ಕಡಿವಾಣ ಬೀಳಲಿದೆ.

ನ್ಯಾಯಾಲಯವು ಆದೇಶದಲ್ಲಿ. ರಿಟ್ ಅರ್ಜಿಗಳನ್ನು ವಜಾಗೊಳಿಸಲಾಗಿದೆ. ಕ್ಯಾಬ್ ಸಂಸ್ಥೆಗಳು ಈಗ ನಿಗದಿಪಡಿಸಿದ ಶೇಕಡಾ 5 ಸೇವಾ ಶುಲ್ಕ ಸಂಗ್ರಹಿಸಲು ಮಾತ್ರ ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ. ಅಪ್ಲಿಕೇಶನ್ ಆಧಾರಿತ ಆಟೋ ಚಾಲಕರ ಸೇವಾ ಶುಲ್ಕವನ್ನು ಕರ್ನಾಟಕ ಸಾರಿಗೆ ಇಲಾಖೆ ನವೆಂಬರ್ 25, 2022 ರಂದು ಶೇಕಡಾ 5 ಕ್ಕೆ (ಮೂಲ ಶುಲ್ಕಕ್ಕೆ ಅನ್ವಯವಾಗುವ ಜಿಎಸ್​ಟಿಯೊಂದಿಗೆ) ಮಿತಗೊಳಿಸಿತ್ತು. ಆದರೆ ಉಬರ್, ಓಲಾ ಮತ್ತು ರ್ಯಾಪಿಡೊದಂತಹ ರೈಡ್-ಹೆಯ್ಲಿಂಗ್ ಅಪ್ಲಿಕೇಶನ್ ಗಳು ಈ ಕ್ರಮವನ್ನು ಪ್ರಶ್ನಿಸಿದ್ದವು. ಶೇಕಡಾ 20 ರಷ್ಟು ಸಾಮಾನ್ಯ ದರ ವಿಧಿಸಲು ಅನುಮತಿ ನೀಡಬೇಕು ಮತ್ತು ಮೂಲ ದರದ ಜತೆಗೆ ಶೇಕಡಾ 20ರಷ್ಟು ಸರ್ಜ್​ ಪ್ರೈಸ್ ಅಥವಾ ದುಪ್ಪಟ್ಟು ಶುಲ್ಕ ವಿಧಿಸಲು ಅವಕಾಶ ನೀಡಬೇಕು ಎಂದು ಕೋರಿತ್ತು. ಈ ಎಲ್ಲ ಕಂಪನಿಗಳು ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಕಾನೂನುಬಾಹಿರ, ನಿರಂಕುಶ ಮತ್ತು ತರ್ಕರಹಿತ ಎಂದು ವಾದಿಸಿದ್ದವು.

ಇದನ್ನು ಓದಿ : Lok Sabha Election : ಷೇರು ಮಾರುಕಟ್ಟೆ ಸಂಸ್ಥೆಯ ಪ್ರಕಾರ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸೀಟು ಗೆಲ್ಲಲಿದೆ; ಲೆಕ್ಕಾಚಾರ ಹೀಗಿದೆ

ನೋಟಿಸ್ ಅನ್ನು ನ್ಯಾಯಾಲಯವು ಜನವರಿ 2023 ರಲ್ಲಿ ತಡೆಹಿಡಿದಿತ್ತು. ಶೇಕಡಾ 10 ರ ಅನುಕೂಲಕರ ಶುಲ್ಕದೊಂದಿಗೆ ಅಗ್ರಿಗೇಟರ್​ಗಳು ಅಲ್ಪಾವಧಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಿತು. ಸೋಮವಾರ, ನ್ಯಾಯಾಲಯವು ಅಂತಿಮವಾಗಿ ಅರ್ಜಿಗಳನ್ನು ವಜಾಗೊಳಿಸಿತು. ಈ ತೀರ್ಪಿನಿಂದ ಬೆಂಗಳೂರಿನ ಸಾವಿರಾರು ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

Exit mobile version