Site icon Vistara News

Child Marriage : 12 ವರ್ಷದ ಬಾಲೆಯನ್ನು ವಿವಾಹವಾದ 63 ವರ್ಷದ ಧರ್ಮಗುರು!

Child Marriage

ನವದೆಹಲಿ: 63 ವರ್ಷದ ಧರ್ಮಗುರುವೊಬ್ಬರು 12 ವರ್ಷದ ಬಾಲಕಿಯನ್ನು ಮದುವೆಯಾಗುವ (Child Marriage) ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಘಾನದಲ್ಲಿ ಈ ಪ್ರಸಂಗ ನಡೆದಿದ್ದು ಸ್ಥಳೀಯವಾಗಿ ಅಸಮಾಧಾನ ಭುಗಿಲೆದ್ದಿದೆ. ಗ್ಬೊರ್ಬು ವುಲೊಮೊ, ನುಮೊ ಬೊರ್ಕೆಟೆ ಲಾವೆಹ್ XXXIII ಎಂಬ ಹೆಸರಿನ ವ್ಯಕ್ತಿ ಮದುವೆಯಾದವರು. ಮಾರ್ಚ್ 30 ರ ಶನಿವಾರ ಘಾನಾದ ನುಂಗುವಾದಲ್ಲಿ ನಾ ಒಕ್ರೊಮೊ ಎಂಬ ಬಾಲಕಿಯನ್ನು ಮದುವೆಯಾಗಿದ್ದಾ

ಈ ಆಘಾತಕಾರಿ ಕೃತ್ಯವನ್ನು ಸಮರ್ಥಿಸಿಕೊಂಡ ಸ್ಥಳೀಯ ನಾಯಕರು, ಇದು “ಇತರ ಪುರುಷರನ್ನು ಬಾಲಕಿಯಿಂದ ದೂರವಿಡುವ ಸಂಪ್ರದಾಯವಾಗಿದೆ ಎಂದು ಹೇಳಿದ್ದಾರೆ. “ಮದುವೆ ಮತ್ತು ಹೆರಿಗೆಯ ಕಾನೂನುಬದ್ಧ ವಯಸ್ಸನ್ನು ತಲುಪುವವರೆಗೆ” ಬಾಲಕಿಯನ್ನು ಕಾಯಲು ಮದುವೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕನ್ಯೆಯನ್ನು ಮೊದಲು ಧರ್ಮಗುರು ಮದುವೆಯಾಗಬೇಕೆಂಬ ಹಳೆಯ ಪದ್ಧತಿಯಂತೆ ಮದುವೆ ನಡೆಯಿತು ಎಂದು ಮದುವೆಯಲ್ಲಿ ಪಾಲ್ಗೊಂಡಿದ್ದ ಅತಿಥಿಯೊಬ್ಬರು ವಿವರಿಸಿದ್ದಾರೆ. ಈ ಪ್ರದೇಶದಲ್ಲಿ ಇದೇ ಪದ್ದತಿ ಮಾಮೂಲು ಎಂದು ಹೇಳಿದ್ದಾರೆ. ಪಾದ್ರಿ ಹುಡುಗಿಯನ್ನು ಕೇವಲ ಆರು ವರ್ಷದವಳಿದ್ದಾಗ ಆಯ್ಕೆ ಮಾಡಿಕೊಂಡಿದ್ದರು. ಇದೀಗ ಮದುವೆಯಾಗಿದ್ದಾರೆ. ಇನ್ನೊಂದು ಶುದ್ಧೀಕರಣ ಸಮಾರಂಭವೂ ನಡೆಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral News : ಟಾಯ್ಲೆಟ್​ಗೆ ಹೋಗುವ ಅರ್ಜೆಂಟಲ್ಲಿ ಸ್ಪೈಡರ್​ ಮ್ಯಾನ್ ಆದ ರೈಲು ಪ್ರಯಾಣಿಕ!

ಈ ಆಚರಣೆಯು ಮಕ್ಕಳನ್ನು ಹೊಂದುವುದನ್ನು ಒಳಗೊಂಡಿರುವ ಗ್ಬೊರ್ಬು ವುಲೊಮೊ ಅವರ ಪತ್ನಿಯಾಗಿ ತನ್ನ ಕರ್ತವ್ಯಗಳನ್ನು ಪೂರೈಸಲು ಅವಳನ್ನು ಸಶಕ್ತಗೊಳಿಸುತ್ತದೆ ಎಂದು ನಂಬಲಾಗಿದೆ. “ಈ ಆಚರಣೆಯು ಮಕ್ಕಳನ್ನು ಹೆರುವುದು ಸೇರಿದಂತೆ ಗ್ಬೋರ್ಬು ವುಲೊಮೊಗೆ ಹೆಂಡತಿಯಾಗಿ ತನ್ನ ನಿರೀಕ್ಷಿತ ಜವಾಬ್ದಾರಿಗಳನ್ನು ನಿರ್ವಹಿಸಲು ಅವಳನ್ನು ಸಶಕ್ತಗೊಳಿಸುತ್ತದೆ ಎಂದು ಭಾವಿಸಲಾಗಿದೆ” ಎಂದು ಪಲ್ಸ್ ಹೇಳಿದರು.

ಗ್ರೇಟರ್ ಅಕ್ರಾ ಪ್ರದೇಶದ ನುಂಗುವಾದಲ್ಲಿರುವ ಗ್ಬೊರ್ಬು ವುಲೊಮೊ ಪ್ರಾರ್ಥನಾ ಮಂದಿರವು ಮದುವೆಯನ್ನು ಸಮರ್ಥಿಸಿಕೊಂಡಿದೆ: “ಅವಳು ಇನ್ನೂ ಶಾಲೆಯಲ್ಲಿದ್ದಾಳೆ, ಅವಳು ಗ್ಬೋರ್ಬು ವುಲೊಮೊದೊಂದಿಗೆ ವಾಸಿಸುತ್ತಿಲ್ಲ. ಇತರ ಪುರುಷರನ್ನು ದೂರವಿಡಲು ನಾವು ಆಕೆಯ ಸಾಂಪ್ರದಾಯಿಕ ವಿವಾಹವನ್ನು ಪ್ರಾರಂಭಿಸಿದ್ದೇವೆ. ಅವಳು ಪ್ರಬುದ್ಧಳಾದಾಗ ನಾವು ನಮ್ಮ ಅಂತಿಮ ಕ್ರಮಗಳನ್ನು ಮಾಡುತ್ತೇವೆ ಎಂದು ಹೇಳಿದೆ.

ಘಾನಾ ಕಾನೂನು ಸಾಂಪ್ರದಾಯಿಕ ವಿವಾಹಗಳನ್ನು ಮಾನ್ಯ ಮಾಡಿದರೂ, ಸಾಂಸ್ಕೃತಿಕ ಆಚರಣೆಗಳ ನೆಪದಲ್ಲಿ ಬಾಲ್ಯ ವಿವಾಹಗಳನ್ನು ನಿಷೇಧಿಸುತ್ತದೆ. ಘಾನಾದಲ್ಲಿ ಮದುವೆಗೆ ಕಾನೂನುಬದ್ಧ ಕನಿಷ್ಠ ವಯಸ್ಸು 18. ಘಾನಾದಲ್ಲಿ ಬಾಲ್ಯ ವಿವಾಹ ಪ್ರಮಾಣ ಕಡಿಮೆಯಾಗುತ್ತಿದೆ, ಆದರೆ ಈ ಅಭ್ಯಾಸವು ಇನ್ನೂ ಮುಂದುವರೆದಿದೆ ಎಂದು ಬಿಬಿಸಿ ವರದಿ ಮಾಡಿದೆ.

ಘಾನಾದಲ್ಲಿ ಸುಮಾರು 19% ಹುಡುಗಿಯರು 18 ವರ್ಷ ವಯಸ್ಸನ್ನು ತಲುಪುವ ಮೊದಲು ಮದುವೆಯಾಗುತ್ತಾರೆ, 5% ಹುಡುಗಿಯರು ತಮ್ಮ 15 ನೇ ಹುಟ್ಟುಹಬ್ಬದ ಮೊದಲೇ ಮದುವೆಯಾಗುತ್ತಾರೆ ಎಂದು ಎನ್ಜಿಒ ಒಂದು ಹೇಳಿದೆ. ಈ ವಿವಾದಾತ್ಮಕ ಮದುವೆಗೆ ಬಗ್ಗೆ ಸರ್ಕಾರಿ ಅಧಿಕಾರಿಗಳು ಇನ್ನೂ ಪ್ರತಿಕ್ರಿಯಿಸಿಲ್ಲ.

Exit mobile version