Site icon Vistara News

ಕಾಶ್ಮೀರ ಗಡಿಯಲ್ಲಿ ರಕ್ಷಣಾ ಬಲ ಹೆಚ್ಚಿಸಿಕೊಳ್ಳಲು ಕಂತ್ರಿ ಪಾಕಿಸ್ತಾನಕ್ಕೆ ಕುತಂತ್ರಿ ಚೀನಾ ನೆರವು; ಸ್ಫೋಟಕ ವರದಿ ಇಲ್ಲಿದೆ

Border

China helping Pakistan in boosting defence capabilities near Jammu-Kashmir for last 3 years: ReportChina helping Pakistan in boosting defence capabilities near Jammu-Kashmir for last 3 years: Report

ನವದೆಹಲಿ: ಲಡಾಕ್‌ ಗಡಿಯಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿ ಉಪಟಳ ಮಾಡುವ ಚೀನಾದ ಮತ್ತೊಂದು ನರಿ ಬುದ್ಧಿ ಬಯಲಾಗಿದೆ. ಜಮ್ಮು-ಕಾಶ್ಮೀರ (Jammu Kashmir) ಗಡಿಯಲ್ಲಿ ಪಾಕಿಸ್ತಾನವು ತನ್ನ ರಕ್ಷಣಾ ಬಲವನ್ನು ಹೆಚ್ಚಿಸಿಕೊಳ್ಳಲು ಚೀನಾ (China) ಹಣಕಾಸು ನೆರವು ನೀಡಿದೆ ಎಂಬ ಸ್ಫೋಟಕ ವರದಿ ಬಯಲಾಗಿದೆ. ಪಾಕಿಸ್ತಾನದಲ್ಲಿ (Pakistan) ಉಗ್ರವಾದದ ಪೋಷಣೆಗೆ ಕಮ್ಯುನಿಸ್ಟ್‌ ರಾಷ್ಟ್ರದ ನೆರವಿದೆ. ಭಾರತದ (India) ವಿರುದ್ಧ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರನ್ನು ಎತ್ತಿಕಟ್ಟುತ್ತದೆ. ಇದರ ಬೆನ್ನಲ್ಲೇ, ಕಾಶ್ಮೀರ ಗಡಿಯಲ್ಲಿ ಚೀನಾದ ಮತ್ತೊಂದು ಉದ್ಧಟತನ ಬೆಳಕಿಗೆ ಬಂದಿದೆ.

ಹೌದು, ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ (LoC) ಬಳಿ ಪಾಕಿಸ್ತಾನವು ಬಂಕರ್‌ಗಳು, ಮಾನವಸಹಿತ ಹಾಗೂ ಪ್ರತಿದಾಳಿ ಮಾಡುವ ಏರಿಯಲ್‌ ವೆಹಿಕಲ್‌ಗಳ (ಡ್ರೋನ್‌ಗಳು) ನಿಯೋಜನೆ, ಅತ್ಯಾಧುನಿಕ ಕಮ್ಯುನಿಕೇಷನ್‌ ಟವರ್‌ಗಳ ನಿರ್ಮಾಣ, ಸುರಂಗ ಮಾರ್ಗಗಳಲ್ಲಿ ಫೈಬರ್‌ ಕೇಬಲ್‌ಗಳ ಅಳವಡಿಕೆ ಸೇರಿ ಹಲವು ರೀತಿಯಲ್ಲಿ ಪಾಕಿಸ್ತಾನದ ರಕ್ಷಣಾ ಬಲ ಹೆಚ್ಚಾಗಲು ಚೀನಾ ಕಳೆದ ಮೂರು ವರ್ಷಗಳಿಂದ ನೆರವು ನೀಡುತ್ತಿದೆ ಎಂಬುದಾಗಿ ತಿಳಿದುಬಂದಿದೆ.

Terrorists Killed

ರೇಡಾರ್‌ಗಳ ನೆರವು

ಮಧ್ಯಮ ಹಾಗೂ ಕಡಿಮೆ ಎತ್ತರದಲ್ಲಿ ಒದಗಿರುವ ಅಪಾಯವನ್ನು ನಿಗ್ರಹಿಸಲು ಚೀನಾ ತಾರಿಸಿದ ಜೆವೈ ಹಾಗೂ ಎಚ್‌ಜಿಆರ್‌ ಸರಣಿಯ ರೇಡಾರ್‌ಗಳನ್ನು ಕೂಡ ಚೀನಾ ನೀಡಿದೆ. ಇದರಿಂದ ಭಾರತೀಯ ಸೇನೆಯ ಚಟುವಟಿಕೆ, ಕಾರ್ಯಾಚರಣೆಗಳ ಮೇಲೆ ನಿಗಾ ಇಡಲು ಪಾಕಿಸ್ತಾನಕ್ಕೆ ನೆರವಾಗಿದೆ. ಇವುಗಳ ಜತೆಗೆ 155 ಎಂಎಂ ಹೌವಿಟ್ಜರ್‌ ಗನ್‌ಗಳನ್ನೂ ಚೀನಾ ನೀಡಿದೆ. ಜಮ್ಮು-ಕಾಶ್ಮೀರ ಗಡಿಯಲ್ಲಿ ಹಲವು ಕಡೆ ಇವುಗಳನ್ನು ನಿಯೋಜಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.

2016ರಲ್ಲಿ ಉರಿ ದಾಳಿಗೆ ಭಾರತೀಯ ಸೇನೆಯು ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ತಿರುಗೇಟು ನೀಡಿದೆ. 2019ರಲ್ಲಿ ಪುಲ್ವಾಮ ದಾಳಿಗೆ ಬಾಲಾಕೋಟ್‌ ವಾಯುದಾಳಿ ಮೂಲಕ ಎದುರೇಟು ಕೊಟ್ಟಿದೆ. ಜಮ್ಮು-ಕಾಶ್ಮೀರದಲ್ಲಿ ಸೇನೆಗೆ ಹೆಚ್ಚಿನ ಅಧಿಕಾರ ನೀಡುವ, 370ನೇ ವಿಧಿ ರದ್ದುಗೊಳಿಸುವ ಮೂಲಕ ಉಗ್ರರು, ಕಲ್ಲುತೂರಾಟಗಾರರನ್ನು ನಿಗ್ರಹಿಸಲಾಗಿದೆ. ಇದರ ಪರಿಣಾಮವಾಗಿ, ಗಡಿಯ ಹೊರತಾಗಿ ಭಾರತದಲ್ಲಿ ಯಾವುದೇ ಉಪಟಳ ಮಾಡಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಪಾಕಿಸ್ತಾನವು ಹಣಕಾಸು ವಿಚಾರದಲ್ಲಿ ದಿವಾಳಿಯಾಗಿದೆ. ಇದೇ ಕಾರಣಕ್ಕೆ ಮತ್ತೆ ಚೀನಾದ ಹಣದಿಂದ ಗಡಿಯಲ್ಲಿ ರಕ್ಷಣಾ ಬಲ ಹೆಚ್ಚಿಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: RBI Balance Sheet: ಪಾಕಿಸ್ತಾನದ ಜಿಡಿಪಿಗಿಂತ ಆರ್‌ಬಿಐ ಬ್ಯಾಲೆನ್ಸ್‌ ಶೀಟ್‌ ಎರಡೂವರೆ ಪಟ್ಟು ಹೆಚ್ಚು; ಹೀಗಿದೆ ವರದಿ

Exit mobile version