Site icon Vistara News

Xiaomi Car: ಎಲೆಕ್ಟ್ರಿಕ್​ ಕಾರು ಮಾರುಕಟ್ಟೆಗೆ ಇಳಿಸಿದ ಮೊಬೈಲ್ ಕಂಪನಿ ರೆಡ್​ಮಿ

Xiaomi Car in China

ಬೀಜಿಂಗ್: ಕಡಿಮೆ ಬೆಲೆಯಲ್ಲಿ ಸ್ಮಾರ್ಟ್​ಫೋನ್​​​ಗಳನ್ನು ಮಾರಾಟ ಮಾಡುವ ಮೂಲಕ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ಶಿಯೋಮಿ (Xiaomi Car) ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್​ ಕಾರನ್ನು (EV Car) ಮಾರುಕಟ್ಟೆಗೆ ಇಳಿಸಿದೆ. ಇದು ಮೊಬೈಲ್​ನಂತೆಯೇ (Smart Phoni) ಹಲವಾರು ಫ್ಯಾನ್ಸಿ ಫೀಚರ್​ಗಳನ್ನು ಹೊಂದಿರುವ ಕಾರು ಎಂದು ಹೇಳಲಾಗಿದೆ. ಆದರೆ, ಈ ಕಾರು ಸದ್ಯ ಬಿಡುಗಡೆಗೊಂಡಿರುವುದು ಚೀನಾದಲ್ಲಿ. ಭಾರತಕ್ಕೆ ಬರುವುದೇ ಎಂದು ಗೊತ್ತಿಲ್ಲ.

ಚೀನಾದ ಗ್ರಾಹಕ ಟೆಕ್ ದೈತ್ಯ ಶಿಯೋಮಿ ಗುರುವಾರ ಬೀಜಿಂಗ್ ನಲ್ಲಿ ಈ ಕಾರನ್ನು ಬಿಡುಗಡೆ ಮಾಡಿದೆ. ಅಲ್ಲದೆ ವಿಶ್ವದ ಅತಿದೊಡ್ಡ ಕಾರು ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆಗೆ ಇಳಿದಿದೆ. ಚೀನಾದ ಇವಿ ವಲಯವು ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ ಆ ಕ್ಷೇತ್ರಕ್ಕೆ ಎಂಟ್ರಿ ಪಡೆದಿದೆ. ಶಿಯೋಮಿ ತನ್ನ ಕೈಗೆಟುಕುವ ಸ್ಮಾರ್ಟ್​ಫೋನ್​ಗಳು ಮತ್ತು ಗೃಹೋಪಯೋಗಿ ವಸ್ತುಗಳಿಗೆ ಹೆಸರುವಾಸಿಯಾಗಿದೆ. ಇದೀಗ MI SU 7 ಇವಿಯೊಂದಿಗೆ ತನ್ನ ಖ್ಯಾತಿಯನ್ನು ಹೆಚ್ಚಿಸಲು ಮುಂದಾಗಿದೆ. ಚೀನಾದ ಕಾರು ಮಾರುಕಟ್ಟೆಯ ದೈತ್ಯ ಬಿವೈಡಿ ಮತ್ತು ಎಲೋನ್ ಮಸ್ಕ್ ಅವರ ಟೆಸ್ಲಾಗೆ ಸವಾಲು ಹಾಕುವುದು ಪಕ್ಕಾ.

ಮೂಲ ಎಸ್ ಯು 7 ಮಾದರಿಯ ಬೆಲೆ 215,900 ಯುವಾನ್ (24,90,198 ರೂಪಾಯಿ) ಎಂದು ಲೀ ಜುನ್ ಗುರುವಾರ ಸಂಜೆ ಬೀಜಿಂಗ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಸ್ಪೋರ್ಟಿ ಎಸ್ ಯು 7 ಒಂಬತ್ತು ಬಣ್ಣಗಳಲ್ಲಿ ಲಭ್ಯವಿರುತ್ತದೆ ಮತ್ತು “ಸೌಂಡ್ ಸಿಮ್ಯುಲೇಶನ್” ಅನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: ಮೋದಿ ಅವರ ಡೀಸೆಲ್ ಚಾಲಿತ ವಿಶೇಷ ವಾಹನಗಳ ನೋಂದಣಿ ವಿಸ್ತರಣೆ ತಿರಸ್ಕರಿಸಿದ ಎನ್‌ಜಿಟಿ; ಕಾರಣವೇನು?

ಇದು ಕರೋಕೆ ಉಪಕರಣಗಳು ಮತ್ತು ಮಿನಿ-ಫ್ರಿಜ್ ನಂತಹ ಸಾಕಷ್ಟು ಇತರ ಆಕರ್ಷಕ ಫೀಚರ್​ಗಳನ್ನು ಹೊಂದಿದೆ. 500,000 ಯುವಾನ್ ಗಿಂತ ಕಡಿಮೆ ಬೆಲೆಯ “ಅತ್ಯುತ್ತಮವಾಗಿ ಕಾಣುವ, ಅತ್ಯುತ್ತಮವಾಗಿ ಚಲಿಸುವ ಮತ್ತು ಸ್ಮಾರ್ಟ್ ಕಾರು” ಎಂದು ಶಿಯೋಮಿ ಹೇಳಿದೆ. ಈ ಕಾರಿನ ಬೆಲೆಯು ಉಳಿದ ಕಾರಿಗಿಂತ ಹೆಚ್ಚು ಸ್ಪರ್ಧಾತ್ಮಕವಾಗಿದೆ.

ಟೆಸ್ಲಾಗೆ ಹೋಲಿಕೆ

ಲೀ ಜುನ್ ಗುರುವಾರದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಕಂಪನಿಯ ಚೊಚ್ಚಲ ವಾಹನವನ್ನು ಟೆಸ್ಲಾದ ಮಾಡೆಲ್ 3 ಗೆ ಹೋಲಿಸಬಹುದು ಮತ್ತು ಕೆಲವು ಅಂಶಗಳಲ್ಲಿ ಅಮೇರಿಕನ್ ತಯಾರಕರ ಸೆಡಾನ್ ಅನ್ನು ಮೀರಿಸಿದೆ ಎಂದು ಹೇಳಿಕೊಂಡಿದ್ದಾರೆ.

ಶಿಯೋಮಿ ವಿಶ್ವದ ಮೂರನೇ ಅತಿದೊಡ್ಡ ಸ್ಮಾರ್ಟ್​ಫೋನ್ ತಯಾರಕ ಕಂಪನಿಯಾಗಿದ್ದು, ಆ ವಲಯದಲ್ಲಿ ಅದರ ಅನುಭವವು ಅದರ ಇವಿ ಕಾರ್ಯತಂತ್ರವನ್ನು ರೂಪಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಕಟುವಾದ ಮಾರುಕಟ್ಟೆ

“ಪ್ರೀಮಿಯಂ ವಿಭಾಗವನ್ನು ಪ್ರವೇಶಿಸುವ ಮೂಲಕ, ಶಿಯೋಮಿ ಟೆಸ್ಲಾ ಮತ್ತು ನಿಯೋದಂತಹ ಸ್ಥಾಪಿತ ಬ್ರಾಂಡ್​ಗ ಳಿಗೆ ಪೈಪೋಟಿ ನೀಡಬಹುದು” ಎಂದು ರೈಸ್ಟಾಡ್ ಎನರ್ಜಿಯ ಹಿರಿಯ ಎಲೆಕ್ಟ್ರಿಕ್ ವಾಹನ ವಿಶ್ಲೇಷಕ ಅಭಿಷೇಕ್ ಮುರಳಿ ಎಎಫ್ಪಿಗೆ ತಿಳಿಸಿದರು.

ಚೀನಾ ವಿಶ್ವದಲ್ಲಿ ಅತಿ ಹೆಚ್ಚು ವಾಯು ಮಾಲಿನ್ಯ ಹೊಂದಿರುವ ದೇಶ. ಹೀಗಾಗಿ 2035 ರ ವೇಳೆಗೆ ಹೆಚ್ಚಿನ ದೇಶೀಯ ಕಾರು ಮಾರಾಟವನ್ನು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಮಾದರಿಗಳಿಂದ ತಯಾರಿಸಲು ಯೋಜಿಸಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ವಿಶ್ವದ ಅಗ್ರ ಮಾರಾಟಗಾರ ಬಿವೈಡಿ ದಾಖಲೆಯ ವಾರ್ಷಿಕ ಲಾಭವನ್ನು ದಾಖಲಿಸಿದ ಕೆಲವೇ ದಿನಗಳ ನಂತರ ಎಸ್ ಯು 7 ಬಿಡುಗಡೆಯಾಗಿದೆ, ಏಕೆಂದರೆ ಇದು ಆಗ್ನೇಯ ಏಷ್ಯಾದ ದೇಶಗಳಿಗೆ ಮತ್ತು ಲ್ಯಾಟಿನ್ ಅಮೆರಿಕ ಮತ್ತು ಯುರೋಪ್ ಗೆ ವಿಸ್ತರಣೆಗೊಳ್ಳಬಹುದು.

Exit mobile version