Site icon Vistara News

Ebola Virus: ಲ್ಯಾಬ್‌ನಲ್ಲಿ ಮತ್ತೊಂದು ಡೆಡ್ಲಿ ವೈರಸ್‌ ಸೃಷ್ಟಿಸಿದ ಚೀನಾ; ಈ ಲಕ್ಷಣ ಕಂಡರೆ ಮರಣ ನಿಶ್ಚಿತ!

Ebola Virus

Chinese Scientists Create Mutant Ebola Virus In Lab That Causes Horrific Symptoms

ಬೀಜಿಂಗ್: ಜಗತ್ತಿಗೇ ಕೊರೊನಾ (Corona Virus) ಎಂಬ ಮಹಾಮಾರಿಯನ್ನು ಹರಡಿ, ಕೋಟ್ಯಂತರ ಜನರ ಪ್ರಾಣಕ್ಕೆ ಕುತ್ತು ತಂದ ಚೀನಾ ಈಗ ಮತ್ತೊಂದು ಜೈವಿಕ ಯುದ್ಧಕ್ಕೆ ಮುಂದಾಗಿದೆ. ಮಾರಣಾಂತಿಕ ಎಬೋಲಾ ರೂಪಾಂತರಿ ಸೋಂಕನ್ನು (Ebola Mutant Virus) ಚೀನಾದ ವಿಜ್ಞಾನಿಗಳು ಸೃಷ್ಟಿಸಿದ್ದು, ಇದರಿಂದ ಜಗತ್ತಿಗೇ ಆತಂಕ ಎದುರಾಗಿದೆ. ಹೆಬೈ ಮೆಡಿಕಲ್‌ ಯುನಿವರ್ಸಿಟಿಯಲ್ಲಿ ವಿಜ್ಞಾನಿಗಳು ಎಬೋಲಾ ರೂಪಾಂತರಿ ವೈರಸ್‌ಅನ್ನು ಸೃಷ್ಟಿಸಿದ್ದಾರೆ. ಹ್ಯಾಮ್‌ಸ್ಟರ್‌ಗಳಿಗೆ (ಕಿರುಕಡಿಗ-ಇಲಿಯಂತ ಚಿಕ್ಕ ಪ್ರಾಣಿ) ವೈರಸ್‌ ಇಂಜೆಕ್ಟ್‌ ಮಾಡಿದರೆ, ಮೂರೇ ದಿನಗಳಲ್ಲಿ ಅವರು ಸಾಯುತ್ತವೆ ಎಂದು ಸೈನ್ಸ್‌ ಡೈರೆಕ್ಟ್‌ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದೆ.

ಸಿರಿಯಾ ಮೂಲದ, ಮೂರು ವಾರಗಳ ಹಿಂದೆ ಜನಿಸಿದ ಹ್ಯಾಮ್‌ಸ್ಟರ್‌ಗಳಿಗೆ ಎಬೋಲಾ ರೂಪಾಂತರಿ ತಳಿಯ ವೈರಸ್‌ಅನ್ನು ಇಂಜೆಕ್ಟ್‌ ಮಾಡಲಾಗಿತ್ತು. 5 ಗಂಡು ಹಾಗೂ 5 ಹೆಣ್ಣು ಹ್ಯಾಮ್‌ಸ್ಟರ್‌ಗಳಿಗೆ ಸೋಂಕನ್ನು ಇಂಜೆಕ್ಷನ್‌ ಮೂಲಕ ನೀಡಲಾಗಿತ್ತು. ಮೂರು ದಿನಗಳಲ್ಲಿಯೇ ಅವರು ಮೃತಪಟ್ಟವು” ಎಂಬುದಾಗಿ ವಿಜ್ಞಾನಿಗಳೇ ಹೇಳಿದ್ದಾರೆ. ಹಾಗಾಗಿ, ಇದು ಕೂಡ ಕೊರೊನಾ ಸಾಂಕ್ರಾಮಿಕದಂತೆ ಮಾರಣಾಂತಿಕವಾಗಿದ್ದು, ಭಾರತ ಸೇರಿ ಜಗತ್ತಿನ ಹಲವು ರಾಷ್ಟ್ರಗಳಿಗೆ ಕಮ್ಯುನಿಸ್ಟ್‌ ರಾಷ್ಟ್ರವು ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ.

ಮನುಷ್ಯರಿಗೆ ಹೇಗೆ ಅಪಾಯ?

ಹ್ಯಾಮ್‌ಸ್ಟರ್‌ಗಳಿಗೆ ಉಂಟಾದ ಪರಿಣಾಮವೇ ಮನುಷ್ಯರಿಗೂ ಆಗಲಿದೆ. ಮೊದಲು ಜೀವಕೋಶಗಳಿಗೆ ಹರಡುವ ಸೋಂಕು, ಹೃದಯ, ಶ್ವಾಸಕೋಶ, ಹೊಟ್ಟೆ, ಲಿವರ್‌ ಸೇರಿ ಹಲವು ಅಂಗಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಕೊನೆಗೆ, ಬಹು ಅಂಗಾಂಗ ವೈಫಲ್ಯದಿಂದ ಮನುಷ್ಯನು ಕೂಡ ಮೂರ್ನಾಲ್ಕು ದಿನಗಳಲ್ಲಿಯೇ ಮೃತಪಡಲಿದ್ದಾನೆ ಎಂಬುದಾಗಿ ಚೀನಾ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಜಗತ್ತಿನಾದ್ಯಂತ ಭೀತಿ ಎದುರಾಗಿದೆ.

ಎಬೋಲಾ ಹರಡುವುದು ಹೇಗೆ?

ಎಬೋಲಾ ಸಾಂಕ್ರಾಮಿಕವಾಗಿದ್ದು, ಇದು ವೈರಾಣುವಿನಿಂದ ಹರಡುವ ಕಾಯಿಲೆಯಾಗಿದೆ. ಕೋತಿ, ಬಾವಲಿಯ ರಕ್ತ, ಸೋಂಕಿನಿಂದ ಕೂಡಿದ ಗಾಳಿ ಅಥವಾ ಎಬೋಲಾ ಸೋಂಕಿತನ ವೀರ್ಯದಿಂದ ಹರಡುತ್ತದೆ ಎಂದು ತಿಳಿದುಬಂದಿದೆ. ಗಂಟಲು ನೋವು, ಸ್ನಾಯು ನೋವು ಮತ್ತು ತಲೆನೋವು, ಯಕೃತ್ತು ಮತ್ತು ಮೂತ್ರ ಕಾರ್ಯನಿರ್ವಹಣೆಯ ಹದಗೆಡುತ್ತದೆ. ಸಾಮಾನ್ಯವಾಗಿ ವಾಕರಿಕೆ, ವಾಂತಿ ಮತ್ತು ಭೇದಿ ಇದರ ಲಕ್ಷಣಗಳಾಗಿವೆ. ಬಾವಲಿ, ಕೋತಿಯಂತಹ ಪ್ರಾಣಿಗಳಿಂದ ದೂರ ಇರುವುದು ಒಳಿತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Chocolate: ಏನಿದು ಮೀಲಿಬಗ್‌ ವೈರಸ್‌? ಚಾಕೊಲೇಟ್ ದರ ಏರಿಕೆಗೂ ಇದಕ್ಕೂ ಏನು ಸಂಬಂಧ?

Exit mobile version