ನವದೆಹಲಿ: ಮಳೆಗಾಲ ಶುರುವಾಗಿದೆ. ಗ್ರಾಮೀಣ ಭಾಗಗಳಲ್ಲಿ ವಾಸಿಸುವವರು, ಬೆಟ್ಟ-ಗುಡ್ಡಗಳ ಪಕ್ಕದಲ್ಲಿ, ಜಮೀನಿನಲ್ಲಿ ಮನೆ ಮಾಡಿಕೊಂಡಿರುವವರಿಗೆ ಹಾವುಗಳು (Snake) ಕಾಣಿಸುವುದು ಮಳೆಯಷ್ಟೇ ಸಹಜವಾಗಿರುತ್ತದೆ. ಆದರೆ, ನಗರ ಪ್ರದೇಶಗಳಲ್ಲಿ ಹಾವುಗಳು ಮಳೆಗಾಲದಲ್ಲೂ ಕಾಣಿಸಿಕೊಳ್ಳುವುದು ವಿರಳ. ಆದರೂ, ಶೂನಲ್ಲೇ, ಹೆಲ್ಮೆಟ್‌ನಲ್ಲೋ, ಕಿಟಕಿಯಲ್ಲೋ ಕಾಣಿಸಿಕೊಳ್ಳುವ ಹಾವುಗಳು ಭಾರಿ ಆತಂಕ ಸೃಷ್ಟಿಸುತ್ತವೆ. ಆದರೆ, ಥಾಯ್ಲೆಂಡ್‌ನಲ್ಲಿ (Thailand) ಮಲಗಿದ್ದ ಯುವಕನೊಬ್ಬನ ಚಡ್ಡಿಯೊಳಗೇ ನಾಗರಹಾವೊಂದು ನುಗ್ಗಿದ್ದು, ಆತ ಎಚ್ಚರಗೊಂಡಾಗ ಪ್ರಾಣವು ಬಾಯಿಗೆ ಬಂದಿದ್ದಂತೂ ಸುಳ್ಳಲ್ಲ.
ಹೌದು, ಥಾಯ್ಲೆಂಡ್‌ನಲ್ಲಿ ಇತ್ತೀಚೆಗೆ ಯುವಕನೊಬ್ಬ ರಾತ್ರಿ ಮಲಗಿದ್ದಾನೆ. ಇಡೀ ದಿನ ಸುತ್ತಾಡಿದ ಸುಸ್ತೋ ಏನೋ, ಗಾಢವಾಗಿ ಆತನನ್ನು ನಿದ್ರಾದೇವತೆ ಆವರಿಸಿದ್ದಾಳೆ. ಇದೇ ವೇಳೆ ಎಲ್ಲಿಂದಲೋ ಮೆಲ್ಲಗೆ ಬಂದ ಹಾವು, ನಿಧಾನವಾಗಿ ಯುವಕನ ಚಡ್ಡಿಯೊಳಗೆ (ಶಾರ್ಟ್ಸ್) ಪ್ರವೇಶಿಸಿದೆ. ಇಡೀ ರಾತ್ರಿ ಹಾವು ಯುವಕನ ಚಡ್ಡಿಯೊಳಗೆ ಬೆಚ್ಚಗೆ ಮಲಗಿದೆ. ಯುವಕನೂ ಮಲಗಿದ್ದಾನೆ. ಆದರೆ, ಬೆಳಗ್ಗೆ ಏಳುತ್ತಲೇ ಯುವಕನಿಗೆ ತನ್ನ ಚಡ್ಡಿಯೊಳಗೆ ಏನೂ ನುಸುಳಿದ, ಅಲುಗಾಡಿದ ಅನುಭವವಾಗಿದೆ.
ಅಪಾಯದ ಮುನ್ಸೂಚನೆ ಅರಿತ ಯುವಕನು ಅಲುಗಾಡದೆ ಚಡ್ಡಿಯೊಳಗೆ ಏನಿದೆ ಎಂಬುದನ್ನು ನೋಡಿದ್ದಾನೆ. ಆಗ ನಾಗರಹಾವು ಕಂಡ ಆತನಿಗೆ ಆಘಾತವಾಗಿದೆ. ಸ್ವಲ್ಪ ಅಲುಗಾಡಿದರೂ ಹಾವು ಕಚ್ಚುತ್ತದೆ ಎಂಬುದನ್ನು ಅರಿತ ಆತನು ಗೆಳೆಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸುದ್ದಿ ತಿಳಿದ ಗೆಳೆಯರು ಕೂಡ ಆಘಾತಕ್ಕೊಳಗಾಗಿದ್ದು, ಕೂಡಲೇ ಸ್ಥಳೀಯ ಉರಗ ತಜ್ಞರನ್ನು ಕರೆದುಕೊಂಡು ಮನೆಗೆ ಹೋಗಿದ್ದಾರೆ.
ಯುವಕನ ಮನೆಗೆ ಬಂದ ಉರಗ ತಜ್ಞನು ಯುವಕನ ಚಡ್ಡಿಯಿಂದ ನಿಧಾನವಾಗಿ ಹಾವನ್ನು ಹೊರತೆಗೆದಿದ್ದಾರೆ. ಹಾವು ನೋಡಿದ ಕ್ಷಣದಿಂದ, ಗೆಳೆಯರಿಗೆ ಕರೆ ಮಾಡಿ, ಅವರು ಉರಗ ತಜ್ಞನನ್ನು ಕರೆದುಕೊಂಡು ಬಂದು, ಆತ ಹಾವನ್ನು ಹೊರಗೆ ತೆಗೆಯುವವರೆಗೂ ಯುವಕನು ಸ್ವಲ್ಪವೂ ಅಲುಗಾಡದೆ ಇದ್ದಿದ್ದು, ಹಾವು ಕೂಡ ಕೋಪದಲ್ಲಿ ಈತನಿಗೆ ಕಚ್ಚದೆ ಇದ್ದಿದ್ದು ಆತನ ಅದೃಷ್ಟವೇ ಸರಿ. ಇನ್ನು, ಯುವಕನ ಚಡ್ಡಿಯಿಂದ ಹಾವನ್ನು ತೆಗೆದಿರುವ ವಿಡಿಯೊ ಈಗ ಭಾರಿ ವೈರಲ್ ಆಗಿದೆ. ಇನ್ನು ಯುವಕನು ಮಲಗುವ ಮುನ್ನ ಹಾಗೂ ಎದ್ದ ನಂತರ ಚಡ್ಡಿಯನ್ನು ನೋಡಿಕೊಳ್ಳುವುದೇ ಕೆಲಸವಾಗಿದೆ. ಅವನಿಗೆ ಅಷ್ಟು ಆಘಾತವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Viral Video: ನಾಗರಹಾವು ಟಾಯ್ಲೆಟ್ ಕಮೋಡ್ ನೊಳಗೂ ಇರಬಹುದು, ಹುಷಾರ್! ಈ ವಿಡಿಯೊ ನೋಡಿ