ಬೆಂಗಳೂರು: ನವೆಂಬರ್ 5ರಂದು ನಡೆಯಲಿರುವ ಅಮೆರಿಕ ಚುನಾವಣೆಯ ಕಣದಲ್ಲಿರುವ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (Donald Trump) ಗುರುವಾರ (ಆಗಸ್ಟ್ 15) ಎಐ-ರಚಿಸಿದ (ಕೃತಕ ಬುದ್ಧಿಮತ್ತೆ ಸೃಷ್ಟಿಸಿರುವ) ವೀಡಿಯೊವೊಂದರನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಮತ್ತು ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಅವರೊಂದಿಗೆ ಬೀ ಗೀಸ್ ಟ್ರ್ಯಾಕ್ ‘ಸ್ಟೇಯಿನ್’ ಅಲೈವ್’ ಮ್ಯೂಸಿಕ್ಗೆ ಹೆಜ್ಜೆ ಹಾಕಿದಂತೆ ಕಾಣುತ್ತದೆ. ಟ್ರಂಪ್ ತಮ್ಮ ಪೋಸ್ಟ್ಗೆ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಯಾವುದೇ ಶೀರ್ಷಿಕೆ ನೀಡದೇ ಶೇರ್ ಮಾಡಿದ್ದಾರೆ. ಆದರೆ ಮಸ್ಕ್ ಇದನ್ನು ಶೇರ್ ಮಾಡುವಾಗ, ವಿರೋಧಿಗಳು ಇದನ್ನು ಎಐ ರಚಿತ ಎಂದು ಬರೆಯುತ್ತಾರೆ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.
— Donald J. Trump (@realDonaldTrump) August 15, 2024
36 ಸೆಕೆಂಡುಗಳ ವೀಡಿಯೊದಲ್ಲಿ ಮಸ್ಕ್ ಮತ್ತು ಟ್ರಂಪ್ ಇಬ್ಬರೂ ಗರಿಗರಿಯಾದ ಸೂಟ್ಗಳನ್ನುಧರಿಸಿ, ಉತ್ಸಾಹಭರಿತ ಹೆಜ್ಜೆಗಳನ್ನು ಹಾಕಿದ್ದಾರೆ. ಅವರಿಬ್ಬರ ನಡುವಿನ ಸಮನ್ವಯತೆ ಇಲ್ಲಿ ಹೆಚ್ಚು ಗಮನ ಸೆಳೆದಿದೆ. ಈ ಕ್ಲಿಪ್ ಅನ್ನು ಮೊದಲು ಅಮೆರಿಕ ಸೆನೆಟರ್ ಮೈಕ್ ಲೀ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು, ಸ್ಪೇಸ್ಎಕ್ಸ್ ಮುಖ್ಯಸ್ಥ ಮಸ್ಕ್ ಆಗಸ್ಟ್ 14 ರಂದು ಇದನ್ನು ಹಂಚಿಕೊಂಡಿದ್ದಾರೆ.
Haters will say this is AI 🕺🕺 pic.twitter.com/vqWVxiYXeD
— Elon Musk (@elonmusk) August 14, 2024
ಮಸ್ಕ್ ಅವರ ಪೋಸ್ಟ್ 100 ಮಿಲಿಯನ್ (10 ಕೋಟಿ) ವೀಕ್ಷಣೆಗಳನ್ನು ದಾಟಿದರೆ, ಮಾಜಿ ಯುಎಸ್ ಅಧ್ಯಕ್ಷರು ಪೋಸ್ಟ್ ಮಾಡಿದ ಪೋಸ್ಟ್ 30 ಮಿಲಿಯನ್ (3 ಕೋಟಿ) ವೀಕ್ಷಣೆಗಳನ್ನು ಹೊಂದಿದೆ. ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಜತೆ ಎಲೋನ್ ಮಸ್ಕ್ ಅವರ ಸಂದರ್ಶನದ ಹಿನ್ನೆಲೆಯಲ್ಲಿ ಈ ವೀಡಿಯೊ ಹೊರಬಂದಿದೆ. ಇದನ್ನು ಎಕ್ಸ್ನಲ್ಲಿ ನೇರ ಪ್ರಸಾರ ಮಾಡಲಾಗಿದೆ. ತಾಂತ್ರಿಕ ದೋಷದಿಂದಾಗಿ ಸುಮಾರು 40 ನಿಮಿಷ ಸಂದರ್ಶನ ವಿಳಂಬಗೊಂಡಿತ್ತು.
ಇದನ್ನೂ ಓದಿ: Vinesh Phogat : ತೂಕ ಇಳಿಸಲು ಹೋಗಿ ಸಾವಿನ ಬಾಗಿಲು ತಟ್ಟಿದ್ದ ವಿನೇಶ್ ಫೋಗಟ್; ಭಯಾನಕ ಕ್ಷಣಗಳನ್ನು ವಿವರಿಸಿದ ಕೋಚ್!
ಪೆನ್ಸಿಲ್ವೇನಿಯಾದ ಬಟ್ಲರ್ನ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆ ಪ್ರಯತ್ನದಿಂದ ಬದುಕುಳಿದ ಕೆಲವೇ ದಿನಗಳ ನಂತರ ಜುಲೈನಲ್ಲಿ ಎಲೋನ್ ಮಸ್ಕ್ ಡೊನಾಲ್ಡ್ ಟ್ರಂಪ್ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು.
ಆಗಸ್ಟ್ 13 ರಂದು ತಮ್ಮ ಸಂದರ್ಶನದಲ್ಲಿ, ಟ್ರಂಪ್ ಹಾಲಿ ಸರ್ಕಾರದ ಕುಂದುಕೊರತೆಗಳು, ವೈಯಕ್ತಿಕ ದಾಳಿಗಳು ಮತ್ತು ದಿಟ್ಟ ಹೇಳಿಕೆಗಳನ್ನು ತೆರೆದಿಟ್ಟರು.