ಹೊಸದಿಲ್ಲಿ: ಸಾಮಾನ್ಯವಾಗಿ ಒಣ ಹವಾಮಾನ (Dry weather) ಮತ್ತು ಸುಡುವ ತಾಪಮಾನವನ್ನು (heat) ಅನುಭವಿಸುವ ಒಮಾನ್ (Oman), ದುಬೈ (Dubai) ಬಹ್ರೇನ್ (Bahrain) ಮುಂತಾದ ದೇಶಗಳು ಮಂಗಳವಾರ ಸುರಿದ (Dubai Rain) ಭಾರೀ ಮಳೆ (heavy Rain) ಹಾಗೂ ಹಠಾತ್ ಪ್ರವಾಹ (Flash Flood) ಪರಿಣಾಮ ಅಸ್ತವ್ಯಸ್ತವಾದವು. ಒಮಾನ್‌ನಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ ಕೇರಳದ ಒಬ್ಬ ವ್ಯಕ್ತಿ ಸೇರಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವರ್ಷಧಾರೆಯಿಂದ ತತ್ತರಗೊಂಡಿತು. ಏರ್‌ಪೋರ್ಟ್‌ನಲ್ಲಿ ಕೃತಕ ಪ್ರವಾಹ ಉಂಟಾಗಿ ವಿಮಾನ ಪ್ರಯಾಣ ಅಸ್ತವ್ಯಸ್ತವಾಯಿತು. ಒಮಾನ್‌ನಲ್ಲಿ, ಮಂಗಳವಾರ ಘೋಷಿಸಲಾದ ಸಾವಿನ ಸಂಖ್ಯೆಯಲ್ಲಿ ಕನಿಷ್ಠ ಒಂಬತ್ತು ಶಾಲಾ ಮಕ್ಕಳು ಮತ್ತು ಅವರ ಚಾಲಕರು ಸೇರಿದ್ದಾರೆ. ಅವರ ವಾಹನಗಳು ಭಾನುವಾರ ಸಮದ್ ಅಶಾನ್‌ನಲ್ಲಿ ಪ್ರವಾಹದ ನೀರಿನಿಂದ ಕೊಚ್ಚಿಹೋಗಿವೆ.
ಮರುಭೂಮಿ ದೇಶದಾದ್ಯಂತ ವ್ಯಾಪಕವಾಗಿ ಮಳೆಯಾಗಿದ್ದು, ಹಲವು ಕಡೆ ಪ್ರವಾಹದಂಥ ಪರಿಸ್ಥಿತಿ ಉಂಟಾಗಿದೆ. ಅನಿರೀಕ್ಷಿತವಾದ ಈ ಜಲಧಾರೆ ಮರುಭೂಮಿ ನಗರವನ್ನು ಸ್ತಬ್ಧಗೊಳಿಸಿದೆ. ಮಾತ್ರವಲ್ಲದೆ, ಹವಾಮಾನ ವೈಪರೀತ್ಯದ ಹೆಚ್ಚು ಸ್ಪಷ್ಟವಾದ ಪ್ರಭಾವವನ್ನು ಕಾಣಿಸಿ, ಈ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಒಮಾನ್‌ನಲ್ಲಿ ಗೋಡೆಯೊಂದು ಕುಸಿದು ಬಿದ್ದ ನಂತರ ಸಾವನ್ನಪ್ಪಿದ ಕೇರಳದ ವಲಸಿಗನನ್ನು ಕೊಲ್ಲಂ ಮೂಲದ ಸದಾನಂದನ್ ಎಂದು ಗುರುತಿಸಲಾಗಿದೆ.
Dubai Airport right now
— Science girl (@gunsnrosesgirl3) April 16, 2024
pic.twitter.com/FX992PQvAU
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಶ್ವದ ಅತ್ಯಂತ ಜನನಿಬಿಡ ವಾಯು ಕೇಂದ್ರದ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭಾರೀ ಮಳೆಯ ಪರಿಣಾಮ ಕಾರ್ಯಾಚರಣೆ ನಿಲ್ಲಿಸಿತು. ಹಲವಾರು ಒಳಬರುವ ವಿಮಾನಗಳನ್ನು ತಿರುಗಿಸಿ ಬೇರೆಡೆ ಕಳಿಸಲಾಯಿತು. ಸಂಜೆ 100ಕ್ಕೂ ಹೆಚ್ಚು ವಿಮಾನಗಳ ಆಗಮನವನ್ನು ಕಾಣುವ ವಿಮಾನ ನಿಲ್ದಾಣದಲ್ಲಿ, ಯಾವುದೇ ವಿಮಾನ ಇಳಿಯಲಿಲ್ಲ. 25 ನಿಮಿಷಗಳ ನಂತರ ವಾಯುಯಾನ ಪುನರಾರಂಭವಾಯಿತು. ಸಂಜೆ ಹೊರಡುವ ವಿಮಾನಗಳು ವಿಳಂಬ ಮತ್ತು ರದ್ದತಿಯನ್ನು ಎದುರಿಸಿದವು.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೋಗಳು, ಪ್ರವಾಹಕ್ಕೆ ಸಿಲುಕಿದ ರನ್‌ವೇಗಳಲ್ಲಿ ವಿಮಾನಗಳು ಹಾಗೂ ಟ್ಯಾಕ್ಸಿಗಳು ಮಾಡುವುದನ್ನು ಮತ್ತು ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಅರ್ಧದಷ್ಟು ನೀರಿನಲ್ಲಿ ಮುಳುಗಿರುವ ಕಾರುಗಳನ್ನು ತೋರಿಸಿದೆ. ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಗಳೂ ಜಲಾವೃತಗೊಂಡಿವೆ.
ದುಬೈ ಮಾಲ್ ಮತ್ತು ಮಾಲ್ ಆಫ್ ಎಮಿರೇಟ್ಸ್‌ನಂತಹ ಪ್ರಮುಖ ಶಾಪಿಂಗ್ ಸೆಂಟರ್‌ಗಳು ಸೇರಿದಂತೆ ನಗರದ ಪ್ರಮುಖ ಮೂಲಸೌಕರ್ಯಗಳು ಜಲಾವೃತಗೊಂಡವು. ದುಬೈ ಮೆಟ್ರೋ ನಿಲ್ದಾಣವನ್ನು ಪಾದದಷ್ಟು ಆಳದ ನೀರು ಮುಳುಗಿಸಿತು. ರಸ್ತೆಗಳು ತುಂಬಿ ಹರಿದವು. ವಸತಿ ಸಮುದಾಯಗಳಲ್ಲಿ ನೀರು ತುಂಬಿ ತುಳುಕಿತು.
Current weather in Dubai pic.twitter.com/v6dqxaA97A
— CLEAN CAR CLUB (@TheCleanCarClub) April 16, 2024
ಈ ಆಕಸ್ಮಿಕ ಚಂಡಮಾರುತದ ಪ್ರಭಾವ ದುಬೈನ ಆಚೆಗೂ ವಿಸ್ತರಿಸಿದೆ. ಇಡೀ UAE ಮತ್ತು ನೆರೆಯ ಬಹ್ರೇನ್ ಪ್ರವಾಹ ಮತ್ತು ಅವ್ಯವಸ್ಥೆಯನ್ನು ಅನುಭವಿಸುತ್ತಿದೆ. ಎಮಿರೇಟ್ಸ್‌ನಾದ್ಯಂತ ಶಾಲೆಗಳನ್ನು ಮುಚ್ಚಲಾಗಿದೆ. ಆಲಿಕಲ್ಲು ಮಳೆ ಸುರಿದಿದೆ. ಸರ್ಕಾರಿ ನೌಕರರಿಗೆ ವರ್ಕ್ ಫ್ರಂ ಹೋಮ್ ಮಾಡಲು ಕೇಳಿಕೊಳ್ಳಲಾಗಿದೆ.
ಚಂಡಮಾರುತದಿಂದಾಗಿ ಬಹ್ರೇನ್ ಕೂಡ ಪ್ರವಾಹವನ್ನು ಅನುಭವಿಸಿದೆ. ಹಿಂದಿನ ವರ್ಷದ COP28 UN ಹವಾಮಾನ ಸಮ್ಮೇಳನದ ಆತಿಥೇಯರಾದ ಒಮಾನ್ ಮತ್ತು UAE ಎರಡೂ ಈ ಹಿಂದೆ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಪ್ರವಾಹದ ಹೆಚ್ಚಿನ ಸಂಭವನೀಯತೆಯ ಬಗ್ಗೆ ಎಚ್ಚರಿಕೆ ನೀಡಿವೆ.
ಇದನ್ನೂ ಓದಿ: Cyclonic Storm : ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ, 4 ಸಾವು, 100ಕ್ಕೂ ಅಧಿಕ ಮಂದಿಗೆ ಗಾಯ