ಉಡುಪಿ: ಪರೀಕ್ಷೆಯ ಭಯದಿಂದ ನಡುಗುತ್ತಿದ್ದ (Exam Phobia) ವಿದ್ಯಾರ್ಥಿಯೊಬ್ಬ ಕಟ್ಟಡದಿಂದ ಜಿಗಿದು ಆತ್ಮಹತ್ಯೆ (Student ends life) ಮಾಡಿಕೊಂಡಿದ್ದಾನೆ. ಮಣಿಪಾಲದಲ್ಲಿ (Manipal News) ಈ ದುರ್ಘಟನೆ ನಡೆದಿದೆ.
ಮಣಿಪಾಲ ಮಾಹೆ (MAHE in Manipal) ವಿವಿಯ ಎಂಸಿಎಚ್‌ಪಿ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿರುವ ಬಿಹಾರ ಮೂಲದ ಸತ್ಯಂ ಸುಮನ್(19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಆತ ಪರೀಕ್ಷೆ ನಡೆಯುತ್ತಿದ್ದ ವೇಳೆಯಲ್ಲೇ ಕಟ್ಟಡದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ ಪರೀಕ್ಷೆ ಬರೆಯಲೆಂದು ಕೋಣೆಗೆ ಬಂದಿದ್ದ. ಆದರೆ ಪ್ರಶ್ನೆ ಪತ್ರಿಕೆ ನೋಡಿದ ಮೇಲೆ ಆತಂಕಗೊಂಡವನಂತೆ ಕಂಡ ಆತ ಹೊರಗೆ ಬಂದು ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ. ಆತ ಕಟ್ಟಡದಿಂದ ಜಿಗಿಯುತ್ತಿದ್ದಂತೆಯೇ ಇತರ ವಿದ್ಯಾರ್ಥಿಗಳು ಗಾಬರಿಯಾಗಿ ಓಡುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರೀಕ್ಷಾ ಭಯವೇ ನಿಜವಾದ ಕಾರಣವೇ?
ಮಣಿಪಾಲದ ಮಾಹೆಯಲ್ಲಿ ಇಂಥ ಘಟನೆಗಳು ನಡೆಯುವುದು ಅಪರೂಪ. ಕಾಲೇಜಿನಲ್ಲಿ, ಹಾಸ್ಟೆಲ್‌ನಲ್ಲಿ ಪ್ರಾಣ ಕಳೆದುಕೊಳ್ಳುವುದು ಕಡಿಮೆ. ಪರೀಕ್ಷೆ ವಿಚಾರದಲ್ಲೂ ಒತ್ತಡಗಳಿಗೆ ಒಳಗಾಗಿದ್ದು ಕಡಿಮೆ. ಆದರೆ, ಈ ವಿದ್ಯಾರ್ಥಿ ಪರೀಕ್ಷಾ ಭಯದಿಂದ ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂಬುದು ಚರ್ಚೆಗೆ ಕಾರಣವಾಗಿದೆ.
ಆತ ನಿಜಕ್ಕೂ ಪರೀಕ್ಷೆಯ ಭಯದಿಂದ ಆತ್ಮಹತ್ಯೆ ಮಾಡಿಕೊಂಡನೇ ಅಥವಾ ಬೇರೆ ಏನಾದರೂ ಕಾರಣಗಳಿವೆಯೇ ಎನ್ನುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಬೇಕಾಗಿದೆ. ಆತ ಇದುವರೆಗೆ ಹಲವು ಪರೀಕ್ಷೆಗಳನ್ನು ಎದುರಿಸಿಯೇ ಬಂದಿರುವುದರಿಂದ ಈ ಹಂತದಲ್ಲಿ ಎಕ್ಸಾಂ ಭಯ ಎನ್ನುವ ಪ್ರಶ್ನೆ ಬರುವುದಿಲ್ಲ ಎನ್ನಲಾಗಿದೆ. ಆದರೆ, ಕೆಲವರಿಗೆ ನಾನಾ ಕಾರಣಗಳಿಗಾಗಿ ಸಮಸ್ಯೆಗಳು ಎದುರಾಗುತ್ತವೆ. ಅದು ಈ ಹುಡುಗನಿಗೂ ಕಾಡುತ್ತಿರುವ ಸಾಧ್ಯತೆಯೂ ಇದೆ.
ಇದನ್ನೂ ಓದಿ : Self Harming: ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಕಾನ್‌ಸ್ಟೇಬಲ್
ಮಹಿಳಾ ಕಾನ್‌ಸ್ಟೇಬಲ್ ಆತ್ಮಹತ್ಯೆಗೆ ಶರಣು
ರಾಮನಗರ: ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ (Police Constable) ಆತ್ಮಹತ್ಯೆ. ಮಾಡಿದ್ದಾರೆ (Self Harming). ಬೆಂಗಳೂರು ನಗರ ವ್ಯಾಪ್ತಿಯ ಪೋಲಿಸ್ ಠಾಣೆಯಲ್ಲಿ ಕೆಲಸ ಮಾಡುತಿದ್ದ ಮಹಿಳಾ ಕಾನ್‌ಸ್ಟೇಬಲ್ ಮಂಜುಶ್ರೀ (27) ಆತ್ಮಹತ್ಯೆ ಮಾಡಿಕೊಂಡವರು.
ಮಂಜುಶ್ರೀ ಅವರು ಹಾರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದ್ಯಾವಸಂದ್ರ ಗ್ರಾಮದ ನಿವಾಸಿಯಾಗಿದ್ದು, ಬೆಂಗಳೂರಿನ ಮೈಕೋ ಲೇಔಟ್ ಪೋಲಿಸ್ ಠಾಣೆ ಕಾನ್‌ಸ್ಟೇಬಲ್ ಆಗಿದ್ದಾರೆ. ಅವರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ. ಮಾಡಿಕೊಂಡಿದ್ದು, ಸಾವಿಗೆ ಕಾರಣವೇನು ಎಂದು ತಿಳಿದುಬಂದಿಲ್ಲ. ಸ್ಥಳಕ್ಕೆ ಹಾರೋಹಳ್ಳಿ ಪೊಲೀಸರು ಭೇಟಿ ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.
ಇನ್ನೊಬ್ಬ ಮಹಿಳೆ ಜತೆ ಜಗಳ: ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ದೇವಮ್ಮ
ರಾಯಚೂರು: ಕೆಲವೊಮ್ಮೆ ಅತ್ಯಂತ ಸಣ್ಣ ಸಣ್ಣ ಘಟನೆಗಳು ಪ್ರಾಣಕ್ಕೇ ಎರವಾಗುತ್ತವೆ ಎನ್ನುವುದಕ್ಕೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಜಮೀನಿನಲ್ಲಿ ಇನ್ನೊಬ್ಬ ಮಹಿಳೆಯ ಜತೆ ನಡೆದ ಜಗಳದಿಂದ ಬೇಸತ್ತು ಮಹಿಳೆಯೊಬ್ಬರು ಬಾವಿಗೆ ಹಾರಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ (Self Harming).
ದೇವದುರ್ಗ ತಾಲ್ಲೂಕಿನ ಹೊನ್ನಟಗಿ ಗ್ರಾಮದಲ್ಲಿ ಘಟನೆ ನಡೆದಿದ್ದು ಲಿಂಗಸೂಗೂರು ಮೂಲದ ಮಹಿಳೆ ದೇವಮ್ಮ (35) ಮೃತಪಟ್ಟವರು. ಗ್ರಾಮದ ಬಸನಗೌಡ ಮಾಲಿ ಪಾಟೀಲ್ ಎಂಬವರ ಜಮೀನು ಕೆಲಸಕ್ಕೆ ಬಂದಿದ್ದ ಮಹಿಳೆ ಅಲ್ಲೇ ಬಾವಿಗೆ ಹಾರಿದ್ದಾರೆ.
ಜಮೀನಿನಲ್ಲಿ ಕೆಲಸ ಮಾಡುವ ವೇಳೆ ದೇವಮ್ಮ ಅವರಿಗೆ ಮತ್ತೊಬ್ಬ ಮಹಿಳೆ ದುರ್ಗಮ್ಮ ಅನ್ನೋರ ಜೊತೆ ಜಗಳ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು, ಜಮೀನಿನಲ್ಲಿ ಇದ್ದ ಬಾವಿಗೆ ಹಾರಿದ್ದಾರೆ ದೇವಮ್ಮ.
ಜಮೀನಿನ ಕೆಲಸಕ್ಕೆ ಬಂದಾಗ ಮೂವರು ಮಕ್ಕಳನ್ನು ಕೂಡಾ ಕರೆದುಕೊಂಡು ಬಂದಿದ್ದರು. ಅವರು ಶೆಡ್‌ನಲ್ಲಿ ಮೂವರು ಮಕ್ಕಳನ್ನು ಬಿಟ್ಟು ಜಮೀನಿನ ಕೆಲಸಕ್ಕೆ ಹೋಗಿದ್ದರು. ಅಲ್ಲಿ ಜಗಳ ನಡೆದು ದೇವಮ್ಮ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಬ್ಬೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.