Site icon Vistara News

Friendship Day 2023: ನೀವು ಒಳ್ಳೆಯ ಗೆಳೆಯರೇ? ರಾಶಿಗನುಗುಣವಾಗಿ ನಿಮ್ಮ ಗೆಳೆತನದ ಗುಣ ಹೀಗಿದೆ!

zodiac friends

ಎಲ್ಲರಿಗೂ ಒಳ್ಳೆಯ ಗೆಳೆಯರಿರುವುದಿಲ್ಲ. ಒಳ್ಳೆಯ ಗೆಳೆತನಕ್ಕೂ ಅದೃಷ್ಟ ಬೇಕು. ಅದು ಎಲ್ಲರಿಗೂ ಸಿಗುವಂಥದ್ದಲ್ಲ. ನಿಮಗೆ ಒಂದಿಬ್ಬರು ಅತ್ಯುತ್ತಮ ಗೆಳೆಯರಿರಬಹುದು, ಆಥವಾ ನೀವು ಯಾರಿಗಾದರೂ ಅತ್ಯದ್ಭುತ ಗೆಳೆಯರಾಗಿರಲೂಬಹುದು. ನನಗೆ ಒಳ್ಳೆಯ ಗೆಳೆಯರೇ (good friends) ಯಾಕಿಲ್ಲ ಎಂದು ಕೆಲವೊಮ್ಮೆ ನಿಮಗೆ ಅನಿಸಬಹುದು ಅಥವಾ ನಿಮ್ಮನ್ನು ಬಹುಬೇಗನೆ ಕೆಲವರು ಹಚ್ಚಿಕೊಂಡುಬಿಟ್ಟು, ತಮ್ಮ ಸುಖದುಃಖಗಳನ್ನು ಹಂಚಿಕೊಳ್ಳಬಹುದು. ಯಾಕೆ ಹೀಗೆ ಎಂದನಿಸಿದೆಯಾ? ಯಾಕೆ ಎಲ್ಲರೂ ಎಲ್ಲರೂ ಗೆಳೆಯರಾಗುವುದಿಲ್ಲ? ಯಾಕೆ, ಕೆಲವರಿಗೆ ಮಾತ್ರ ಕೆಲವರು ಕಚ್ಚಿಕೊಂಡುಬಿಟ್ಟಿರುತ್ತಾರೆ. ಎಲ್ಲರಲ್ಲೂ ಯಾಕೆ ನಮ್ಮ ಒಳಹೊರಗನ್ನೂ ಬಿಚ್ಚಿಕೊಳ್ಳಲಾಗುವುದಿಲ್ಲ? ಎಂದು ಎಂದಾದರೂ ಯೋಚಿಸಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಅದು ಪ್ರತಿಯೊಬ್ಬರ ವ್ಯಕ್ತಿತ್ವದಲ್ಲಿದೆ. ಸ್ನೇಹಿತರ ಜೊತೆ ನಾವು ಹೇಗಿರುತ್ತೇವೆ ಎಂಬ ನಮ್ಮ ಅಥವಾ ಆ ವ್ಯಕ್ತಿಯ ಮೂಲ ಗುಣದಲ್ಲಿದೆ. ಇದಕ್ಕೆ ಕಾರಣ ಪ್ರತಿಯೊಬ್ಬರ ರಾಶಿಗುಣ. ಹಾಗಾದರೆ ಬನ್ನಿ, ಪ್ರತಿಯೊಬ್ಬರೂ ಅವರವರ ರಾಶಿಗನುಗುಣವಾಗಿ (zodiac and friends) ಎಷ್ಟೊಳ್ಳೆ ಸ್ನೇಹಿತರಾಗುವ ಲಕ್ಷಣಗಳಿವೆ ಎಂಬುದನ್ನು ಮುಂಬರುವ ಸ್ನೇಹಿತರ ದಿನದ (Friendship Day 2023) ಹಿನ್ನೆಲೆಯಲ್ಲಿ ನೋಡೋಣ. ಮೇಷದಿಂದ ಸಿಂಹ ರಾಶಿಯವರೆಗೆ ಇಲ್ಲಿದೆ.

೧. ಮೇಷ: ಮೇಷ ರಾಶಿಯ ಮಂದಿ ಪ್ರಾಮಾಣಿಕರು. ಇವರು ಗೆಳೆತನದ ವಿಷಯದಲ್ಲಿ ಪಾರದರ್ಶಕ ವ್ಯಕ್ತಿತ್ವ ಹೊಂದಿರುವವರು. ಈ ಮಂದಿ ತಮ್ಮ ಗೆಳೆಯರು ಎಡವಿದಾಗಲೂ ಎದ್ದಾಗಲೂ ನೇರವಾಗಿ ಹೇಳುವ ಗುಣದವರು. ನೀವು ಹಾಕಿ ಬಟ್ಟೆ ನಿಮಗೆ ಹೊಂದಿಕೆಯಾಗುತ್ತಿಲ್ಲ ಎಂಬುದನ್ನೂ ಹೇಳಿಯಾರು ಅಷ್ಟೇ ಅಲ್ಲ, ನೀವು ಮಾಡಿದ ಅಡುಗೆ ಅದ್ಭುತವಾಗಿದ್ದರೆ ಹೊಗಳಿ ಅಟ್ಟಕ್ಕೇರಿಸಿಯಾರು. ಹಾಗಾಗಿ ಇಂಥವರ ಜೊತೆಗೆ ಗೆಳೆತನವಿದ್ದರೆ, ಚಿಂತೆಯೇ ಇಲ್ಲ.

೨. ವೃಷಭ: ಸ್ವಲ್ಪ ಹಠಮಾರಿ ಸ್ವಭಾವದ ಈ ಮಂದಿ ಗೆಳೆತನದ ಆರಂಭದಲ್ಲಿ ಖುಷಿಯನ್ನೇ ತರುವುದಿಲ್ಲ. ಆದರೆ, ಒಮ್ಮೆ ಇವರ ಜೊತೆಗೆ ಗೆಳೆತನದಲ್ಲಿರುವುದು ಅಭ್ಯಾಸವಾಗಿಬಿಟ್ಟರೆ ಮತ್ತೆ ಹಿಂತಿರುಗಿ ನೋಡಬೇಕಿಲ್ಲ. ಅಷ್ಟು ನಂಬಿಕಸ್ಥ ಮಂದಿ ಇವರು. ಏನೇ ಬರಲಿ, ಇವರು ನಿಮ್ಮೊಂದಿಗಿರುತ್ತಾರೆ.

೩. ಮಿಥುನ: ಎರಡು ಬಗೆಯ ವ್ಯಕ್ತಿತ್ವ ಅಂದರೆ ದ್ವಂದ್ವ ವ್ಯಕ್ತಿತ್ವ ಇವರು ಸದಾ ಗೆಳೆತನದಲ್ಲಿ ಬಿಂದಾಸ್‌ ಆಗಿರುವ ಮಂದಿ. ಮಿಥುನ ರಾಶಿಯ ಮಂದಿ ನಿಮ್ಮ ಗೆಳೆಯರಾಗಿದ್ದರೆ, ಅವರ ಜೊತೆಗಿರುವ ಎಲ್ಲ ಗೆಳೆಯರೂ ಮಜವಾಗಿರುತ್ತಾರೆ. ಅಲ್ಲಿ ತಮಾಷೆ, ಖುಷಿಯ ಗಳಿಗೆಗಳೇ ಹೆಚ್ಚಾಗಿರುತ್ತದೆ. ಇವರು ಅದ್ಭುತ ಕಥೆಗಾರೂ ಆಗಿರುವುದರಿಂದ ಸಮಯ ಕಳೆಯಲು ಅದ್ಭುತ ಸಾಥ್‌ ಇವರು ನೀಡುತ್ತಾರೆ.

ಇದನ್ನೂ ಓದಿ: Friendship Day 2023: ಗೆಳೆತನದ ಸೀಕ್ರೆಟ್; ದೂರದ ಗೆಳೆಯರು ಸದಾ ಇರಲಿ ನಿಮ್ಮ ಹತ್ತಿರ!

೪. ಕರ್ಕ: ಇಂಥವರ ಗೆಳೆತನದಲ್ಲಿ ತಿರುಗಿ ನೋಡುವ ಅಗತ್ಯವೇ ಇಲ್ಲ. ಇವರಷ್ಟು ನಿಮ್ಮನ್ನು ಕಾಳಜಿ ಮಾಡುವವರು ಬೇರೆ ಯಾರೂ ಇರಲಿಕ್ಕಿಲ್ಲ. ಗೆಳೆಯರನ್ನು ಪ್ರೀತಿ ಕಾಳಜಿಗಳಿಂದ ನೋಡಿಕೊಳ್ಳುವ, ಕಷ್ಟದಲ್ಲಿದ್ದಾಗ ಹೇಳದಿದ್ದರೂ ದೂರದಿಂದಲೇ ಸಂಕಟ ಅರಿತು ಜೊತೆಗೆ ನಿಲ್ಲುವ, ಸಮಯ ಸಂದರ್ಭಕ್ಕೆ ತಕ್ಕಂತೆ ನಿಮ್ಮಗೆ ಸಲಹೆ ನೀಡುವ, ಅಳುವಾಗ ಹೆಗಲು ಹೊಡುವ ಗೆಳಯರಿವರು.

೫. ಸಿಂಹ: ಹೆಸರಿಗೆ ಸಿಂಹ ರಾಶಿಯಾದರೂ ಮಿದುವಾದ ಹೃದಯ ಇವರದ್ದು. ಇವರೂ ಕೂಡಾ ಅತ್ಯುತ್ತಮ ಗೆಳೆಯರು. ಸಮಯ ಸಂದರ್ಭಕ್ಕೆ ತಕ್ಕಂತೆ ಗೆಳೆಯರಿಗೆ ಸಹಾಯ ಮಾಡುವ, ಸಮಸ್ಯೆಯಿದ್ದಾಗ ಮುಂದಾಳತ್ವ ವಹಿಸಿ ಗೆಳೆಯರ ಬಳಗವನ್ನೇ ಹೊತ್ತು ತಂದು ಸಮಸ್ಯೆಯನ್ನು ಸರಳವಾಗಿಸಿ ಹೆಗಲು ಕೊಡುವ, ಸಾಮಾಜಿಕವಾಗಿ ಎಲ್ಲರ ಜೊತೆ ಬೆರೆತು ಅತ್ಯುತ್ತಮ ಬಾಂಧವ್ಯ ಎಲ್ಲರೊಡನೆ ಸೃಷ್ಟಿಸುವ ಮಂದಿ ಇವರು. ಹೆಚ್ಚು ತಲೆಕೆಡಿಸಿಕೊಳ್ಳದ ಬಿಂದಾಸ್‌ ಗೆಳೆಯರಿವರು.

ಕನ್ಯಾ ರಾಶಿಯಿಂದ ಮೀನರಾಶಿಯವರೆಗಿನ ಮಂದಿಯ ಬಗೆಗೆ ಮುಂದಿನ ಭಾಗದಲ್ಲಿ ನೋಡೋಣ.

ಇದನ್ನೂ ಓದಿ: Friendship Day : ಫ್ರೆಂಡ್‌ಶಿಪ್‌ ಡೇ ಬಂದೇಬಿಡ್ತು! ಎಂದು? ಏನಿದರ ವಿಶೇಷ?

Exit mobile version