ಮೈಸೂರು: ಗುಜರಿಯ ಗೋಡೌನ್‌ನಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿ (Gas Leakage) 30 ಮಂದಿ ಅಸ್ವಸ್ಥಗೊಂಡ ಘಟನೆ ಮೈಸೂರಿನಲ್ಲಿ ಸಂಭವಿಸಿದೆ. ಮೈಸೂರಿನ ಹಳೆ ಕೆಸರೆಯ ಗುಜರಿ ಅಂಗಡಿಯಲ್ಲಿ ಈ ಸಮಸ್ಯೆ ಉಂಟಾಗಿದ್ದು, ಆರಂಭದಲ್ಲಿ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಐವರು ಅಸ್ವಸ್ಥಗೊಂಡರೆ ಬಳಿಕ ಸುತ್ತಲಿನ ಗ್ರಾಮಸ್ಥರೂ ಆರೋಗ್ಯ ಸಮಸ್ಯೆ ಎದುರಿಸಿ ಆಸ್ಪತ್ರೆ ಸೇರಿದ್ದಾರೆ.
ಸಂಜೆ ವೇಳೆಗೆ ವಿಷಾನಿಲ ಸೋರಿಕೆಯಾಗಿತ್ತು. ಮೊದಲು ಗುಜರಿ ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದವರು ಅಸ್ವಸ್ಥಗೊಂಡ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬಳಿಕ ಗ್ರಾಮಸ್ಥರಿಗೆ ಕೆಮ್ಮು, ವಾಂತಿ ಶುರುವಾಗಿದೆ. ಅಸ್ವಸ್ಥಗೊಂಡಿರುವ 30 ಮಂದಿಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಮೈಸೂರಿನ ಹಳೆ ಕೆಸರೆಯ ರಿದಾ ಸ್ಟೀಲ್ ಟ್ರೇಡರ್ಸ್ ಗುಜರಿ ಗೋಡೌನ್‌ನಲ್ಲಿ ಘಟನೆ ಸಂಭವಿಸಿದೆ. ಅನಿಲ ಗೋಡೌನ್ನಿಂದ ಹೊರಕ್ಕೆ ಬಂದು ಕೆಸರೆ ಗ್ರಾಮದಲ್ಲಿ ಹರಡಿದಿಎ. ಕೆಸರೆ ಗ್ರಾಮಸ್ಥರಲ್ಲೂ ಉಸಿರಾಟದ ತೊಂದರೆ, ಕೆಮ್ಮು ಕಾಣಿಸಿಕೊಂಡು ಪರದಾಡಿದ್ದಾರೆ. ಎನ್.ಆರ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲಿಸರು ಹಾಗೂ ಆರೋಗ್ಯಾಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿದ್ದಾರೆ.
ವಾಟ್ಸ್ಆ್ಯಪ್ ಗ್ರೂಪ್ ಮೆಸೇಜ್ ಓಪನ್ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಾಪಾರಿ
ಗದಗ: ವಾಟ್ಸ್ಆ್ಯಪ್ ಗ್ರೂಪ್‌ಗೆ (WhatsApp Group) ಬಂದಿದ್ದ ಮೆಸೇಜ್‌ವೊಂದನ್ನು ತೆರೆದು ನೋಡಿದ ವ್ಯಾಪಾರಿಯೊಬ್ಬರು ತಮ್ಮ ಖಾತೆಯಲ್ಲಿದ್ದ ಮೂರೂವರೆ ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. ಸೈಬರ್ (Cyber Crime) ವಂಚಕರು ಹಣ ಲಪಟಾಯಿಸಿದ್ದಾರೆ. ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Assault Case: ಹರಿಹರದಲ್ಲಿ ನೈತಿಕ ಪೊಲೀಸ್ ಗಿರಿ; ಯುವಕನನ್ನು ರೂಮ್‌ನಲ್ಲಿ ಹಾಕಿ ಮನಸೋ ಇಚ್ಛೆ ಹಲ್ಲೆz
ಅನಿಲ್ ಮಲ್ಲಪ್ಪ ಚಿನ್ನಾಪುರ ಎಂಬುವವರೇ ಸೈಬರ್ ವಂಚನೆಗೆ ಒಳಗಾದ ವ್ಯಕ್ತಿ. ನಗರದ ಜಿ.ಎಸ್. ಪಾಟೀಲ್ ಲೇಔಟ್‌ನಲ್ಲಿ ವಾಸವಾಗಿರುವ ಇವರು, ಮೊದಲು ಜಿ.ಎಸ್. ಪಾಟೀಲ್ ಲೇಔಟ್ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಯುನಿಯನ್ ಬ್ಯಾಂಕ್‌ನ ಎಪಿಕೆ ಹೆಸರಿನಲ್ಲಿ ಬಂದಿದ್ದ ಲಿಂಕ್ ಮೆಸೇಜ್ ಅನ್ನು ತೆರದು ನೋಡಿದ್ದಾರೆ. ಇದಾದ ಬಳಿಕ ಮರುದಿನ ಫೋನ್ ಕರೆಯೊಂದು ಬಂದಿದೆ. ಯೂನಿಯನ್ ಬ್ಯಾಂಕ್ ಮುಖ್ಯಸ್ಥ ಎಂದು ಕರೆ ಮಾಡಿದ ವ್ಯಕ್ತಿಯು, ನಿಮ್ಮ ಬ್ಯಾಂಕ್ ಖಾತೆ ಡಿಆಕ್ಟಿವೇಟ್ ಆಗಿದೆ ಎಂದು ಕೆಲವು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಇದಾದ ಅರ್ಧಗಂಟೆಯಲ್ಲೇ ಅನಿಲ್ ಅವರ ಯೂನಿಯನ್ ಬ್ಯಾಂಕ್ ಖಾತೆಯಿಂದ ಮೊದಲ ಹಂತದಲ್ಲಿ 50 ಸಾವಿರ ರೂ, 2ನೇ ಹಂತದಲ್ಲಿ 2,25,000 ರೂ. ಹೀಗೆ ಒಟ್ಟು 3,74,998 ರೂಗಳನ್ನು ಸೈಬರ್ ವಂಚಕರು ಎಗರಿಸಿದ್ದಾರೆ.
ಈ ಕುರಿತು ಸೈಬರ್ ವಂಚನೆಗೆ ಒಳಗಾದ ಅನಿಲ್ ನಗರದ ರಾಜೀವ್ ಗಾಂಧಿ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ಖಾತೆಯಿಂದ ಎಗರಿಸಿದ ಹಣವು ತಮಿಳುನಾಡು ಹಾಗೂ ಬಾಂಗ್ಲಾದೇಶದ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದೆ ಎಂದು ಪೊಲೀಸರು ಪ್ರಾಥಮಿಕ ತನಿಖೆ ಮೂಲಕ ಮಾಹಿತಿಯನ್ನು ನೀಡಿದ್ದಾರೆ.