ಬೆಂಗಳೂರು: ಭಾರತೀಯ ರೈಲ್ವೇ (Indian Railway) ತನ್ನ ಜನರಲ್ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ (General Passenger) ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಈ ಸಾಮಾನ್ಯ ಪ್ರಯಾಣಿಕರೂ ಟಿಕೆಟ್ (General Ticket Booking) ಪಡೆಯುವಾಗ ನಗದು ಪಾವತಿ (cash payment) ಜೊತೆಗೆ ಆನ್‌ಲೈನ್ ಪಾವತಿಯನ್ನೂ (Online payment) ಮಾಡಬಹುದು. ಅಂದರೆ ಯುಪಿಐ ಪೇಮೆಂಟ್ (UPI Payment) ವ್ಯವಸ್ಥೆಯನ್ನು ಕಲ್ಪಿಸಲು ಇಲಾಖೆ ಮುಂದಾಗಿದೆ.
ಭಾರತೀಯ ರೈಲ್ವೆಯಲ್ಲಿ ಎಸಿ ಕೋಚ್, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್ ಟಿಕೆಟ್ ಬುಕ್ಕಿಂಗ್ ಅನ್ನು ಆನ್‌ಲೈನ್ ಮೂಲಕ ಮಾಡುವ ಅವಕಾಶವಿದೆ. ಸಾಮಾನ್ಯ ಪ್ರಯಾಣಿಕರು (General Ticket Booking) ಟಿಕೆಟ್ ಅನ್ನು ಕೌಂಟರ್‌ನಲ್ಲಿ ನಗದು ಹಣ ನೀಡಿ ಪಡೆಯಬೇಕಿತ್ತು. ಮುಂದಿನ ವರ್ಷದಿಂದ ಈ ಸಾಮಾನ್ಯ ಟಿಕೆಟ್‌ನ ನಿಯಮದಲ್ಲಿ ಕೆಲವು ಬದಲಾವಣೆ ತರಲಾಗುತ್ತದೆ. ಯುಪಿಐ ಪೇಮೆಂಟ್ ಅದರಲ್ಲಿ ಪ್ರಮುಖ.
ರೈಲ್ವೆ ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ತನ್ನ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ಅಂತಹ ಒಂದು ಬದಲಾವಣೆಯು ಶೀಘ್ರದಲ್ಲೇ ದೇಶದ ಎಲ್ಲಾ-ಜನಪ್ರಿಯ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಪಾವತಿ ವೇದಿಕೆಯ ತ್ವರಿತ ಪ್ರತಿಕ್ರಿಯೆಯನ್ನು (QR) ಬಳಸಿಕೊಂಡು ಸಾಮಾನ್ಯ ಟಿಕೆಟ್‌ಗಳಿಗೆ ಪಾವತಿಸಲು ಅವಕಾಶ ಕಲ್ಪಿಸಲಿದೆ.
ಮುಂದಿನ ಆರ್ಥಿಕ ವರ್ಷದಿಂದ ಅಂದರೆ ಮುಂದಿನ ತಿಂಗಳು ಏಪ್ರಿಲ್ 1ರಿಂದ ಜನರಲ್ ಪ್ರಯಾಣಿಕರು ಸಹ ಮೊಬೈಲ್‌ನಲ್ಲಿ UPI ಪಾವತಿ ವಿಧಾನ ಬಳಸಿಕೊಂಡು ಸಾಮಾನ್ಯ ದರ್ಜೆಯ ರೈಲು ಬುಕಿಂಗ್‌ಗಳಿಗೆ ಪಾವತಿಸಲು ಅವಕಾಶ ದೊರೆಯಲಿದೆ. ಈ ಮೂಲಕ ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಇಲಾಖೆ ಗಮನಾರ್ಹವಾಗಿ ಸುಲಭಗೊಳಿಸುತ್ತಿದೆ. ಇದರಿಂದ ಸಾಮಾನ್ಯ ಪ್ರಯಾಣಿಕರಿಗೆ ಟಿಕೆಟ್ ಖರೀದಿ ವೇಳೆ ಚಿಲ್ಲರೆ ಸಮಸ್ಯೆಯೂ ತಪ್ಪಲಿದೆ.
ರೈಲ್ವೆ ನಿಲ್ದಾಣಗಳಲ್ಲಿ ಕಾಯ್ದಿರಿಸದೇ ಇರುವ ಟಿಕೆಟ್‌ಗಳನ್ನು ಕೌಂಟರ್‌ಗಳಲ್ಲಿ ನೀಡುವ ಸೌಲಭ್ಯವನ್ನು ರೈಲ್ವೇ ಒದಗಿಸುತ್ತಿದೆ. ಸಾಮಾನ್ಯ ದಿನಗಳಲ್ಲಿ ಅಷ್ಟಾಗಿ ಆನ್‌ಲೈನ್‌ನಲ್ಲಿ ಭರ್ತಿಯಾಗದ ಎಸಿ, ಸ್ಲೀಪರ್ ಮತ್ತಿತರ ಟಿಕೆಟ್‌ಗಳನ್ನು ಕೌಂಟರ್‌ನಲ್ಲಿ ಪಾವತಿಸಿ ಪಡೆಯಬಹುದು. ಓಡಾಡುವಾಗ ಹೆಚ್ಚಿನ ಹಣದ ಮೊತ್ತವನ್ನು ಕೈಯಲ್ಲಿ ಇಟ್ಟುಕೊಂಡಿರದ ಪ್ರಯಾಣಿಕರಿಗೂ ಇದು ಬಹಳ ನೆರವಾಗಲಿದೆ.
ಇದನ್ನೂ ಓದಿ: UPI Payment: ಇಂದಿನಿಂದ UPIಗೆ ಹೊಸ ನಿಯಮ; ಏನೇನು ಬದಲಾವಣೆ ನೋಡಿ