ಬೆಂಗಳೂರು : ಮಾರ್ಕೆಂಟಿಂಗ್ ಕ್ಷೇತ್ರದಲ್ಲಿ ಸವಾಲು ಜಾಸ್ತಿ. ಕೆಲಸವೂ ಹೆಚ್ಚು ಅತಂತ್ರ. ಅಂತೆಯೇ ಯುವತಿಯೊಬ್ಬಳು ಕಂಪನಿಯೊಂದರಲ್ಲಿ ಕೆಲಸ ಕಳೆದುಕೊಂಡಿದ್ದಳು. ಆ ಬೇಜಾರಿನಲ್ಲಿ ಆಕೆ ಮಾಡಿದ ವಿಡಿಯೊಗೆ ಸಾವಿರಾರು ಜಾಬ್ ಆಫರ್ಗಳು ಬಂದ ಪ್ರಸಂಗವೊಂದು ನಡೆದಿದೆ. ಇದು ನಡೆದಿರುವುದು ಸ್ಪೇನ್ನಲ್ಲಿ. ಆಕೆಯ ಹೆಸರು ಮರ್ತಾ ಪೋರ್ಟೊ . ಲಿಂಕ್ಡ್ಇನ್ನಲ್ಲಿ ಆಕೆ ಪೋಸ್ಟ್ ಮಾಡಿದ 1 ನಿಮಿಷ, 42 ಸೆಕೆಂಡುಗಳ ಸುದೀರ್ಘ ವೀಡಿಯೊಗೆ (Viral Video) ಸಿಕ್ಕಾಪಟ್ಟೆ ಆಫರ್ಗಳು ಬಂದಿವೆ.
ಇಲ್ಲಿದೆ ಮಾರ್ತಾ ಮಾಡಿದ ವಿಡಿಯೊ
ಕೆಲಸವನ್ನು ಕಳೆದುಕೊಂಡ ತನ್ನನ್ನು ಪರಿಚಯಿಸಲು ರೆಸ್ಯೂಮ್ ಅನ್ನು ಮಾಡುವ ಬದಲ, ಮ್ಯಾಡ್ರಿಡ್ ಮೂಲದ ಮಾರ್ಕೆಟಿಂಗ್ ಮ್ಯಾನೇಜರ್ ಮಾರ್ತಾ ಪೋರ್ಟೊ ತನ್ನ ಕಥೆಯನ್ನು ವಿಭಿನ್ನ ರೀತಿಯಲ್ಲಿ ಹೇಳಲು ಪ್ರಯತ್ನಿಸಿದ್ದರು. ಸ್ವತಃ ಮಾರ್ಕೆಟಿಂಗ್ ಮಾಡುವ ಮೂಲಕ ತನ್ನ ಕೌಶಲ್ಯಗಳನ್ನು ಪ್ರದರ್ಶಿಸಿದ್ದರು. ಹೀಗಾಗಿ ಅವರು ಹಲವಾರು ಆಫರ್ಗಳನ್ನು ಪಡೆದುಕೊಂಡಿದ್ದಾರೆ.
ಪೋರ್ಟೋ ವಿಡಿಯೋ ವೈರಲ್ ಆಗಿದ್ದು, ಲಿಂಕ್ಡ್ಇನ್ನಲ್ಲಿ 60,000 ಕ್ಕೂ ಹೆಚ್ಚು ಲೈಕ್ಗಳು ಬಂದಿವೆ ಮತ್ತು ನೂರಾರು ಉದ್ಯೋಗದಾತರ ಗಮನ ಸೆಳೆದಿದೆ. ಪೋರ್ಟೊ ಅವರು ಈಗ ಕಂಪನಿಗಳಿಂದ ಇಂಟರ್ವ್ಯೂ ಕರೆಗಳಿಂದ ಬ್ಯುಸಿಯಾಗಿದ್ದಾರೆ. ಲಿಂಕ್ಡ್ಇನ್ 5,000 ಕ್ಕೂ ಹೆಚ್ಚು ಸಂಪರ್ಕ ಸ್ವೀಕರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಹಳೆ ಕಂಪನಿಯಿಂದಲೇ ಕರೆ
ನನ್ನ ನೆಟ್ವರ್ಕ್ನಿಂದ 100 ಅಥವಾ ಗರಿಷ್ಠ 200 ಲೈಕ್ಗಳು ಬರಬಹುದು ಎಂದು ನಾನು ಭಾವಿಸಿದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ ಆಗಿದ್ದೇ ಬೇರೆ. ನನ್ನನ್ನೇ ಬೇಡ ಎಂದು ಹೇಳಿ ಮನೆಗೆ ಕಳುಹಿಸಿದ್ದ ಹಳೆ ಕಂಪನಿಯೂ ಕೆಲಸಕ್ಕೆ ಕರೆದಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : Inhuman Behaviour : ಬಾಯ್ ಫ್ರೆಂಡ್ ಜತೆ ಸೇರಿ ಹೆತ್ತ ಮಗುವಿನ ಮರ್ಮಾಂಗ ಕಚ್ಚಿದಳು ರಾಕ್ಷಸಿ!
ಅಕ್ಟೋಬರ್ನಲ್ಲಿ ಫಿನ್ಟೆಕ್ ಕಂಪನಿಯಲ್ಲಿ ಕೆಲಸ ಕಳೆದುಕೊಂಡ ಪೋರ್ಟೊ ಹಲವಾರು ಕೆಸಲಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ಅವರಿಗೆ ಸೂಕ್ತ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಹೀಗಾಗಿ ಅವರು ವಿಡಿಯೊ ಮಾಡಲು ಮುಂದಾದರು. ಅದರ ಪರಿಣಾಮವಾಗಿ ಹಲವಾರು ಆಯ್ಕೆಗಳು ಸಿಕ್ಕಿವೆ.
ಪಿತ್ತಕೋಶದ ಶಸ್ತ್ರಚಿಕಿತ್ಸೆ ಬದಲು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದರು !
ಬೆಂಗಳೂರು: ಕೆಲವೊಮ್ಮೆ ವೈದ್ಯರು ಮಾಡುವ ಸಣ್ಣದೊಂದು ಎಡವಟ್ಟು, ನಿರ್ಲಕ್ಷ್ಯ ರೋಗಿಯ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಕೆಲವೊಮ್ಮೆ ಪ್ರಾಣವನ್ನೇ ಕಸಿದು ಬಿಡುತ್ತದೆ. ಕೆಲವು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ದಂತ ವೈದ್ಯರ ನಿರ್ಲಕ್ಷ್ಯದಿಂದ ಯುವಕನೊಬ್ಬ ಮೃತಪಟ್ಟಿದ್ದ. ಇದೀಗ ದೂರದ ಅರ್ಜೆಂಟೀನಾದಲ್ಲಿ ವೈದ್ಯರ ಎಡವಟ್ಟಿನಿಂದ ವ್ಯಕ್ತಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ ಘಟನೆ ವರದಿಯಾಗಿದೆ. ವೈದ್ಯರು ಪಿತ್ತಕೋಶದ ಶಸ್ತ್ರಚಿಕಿತ್ಸೆಗಾಗಿ ದಾಖಲಾದ ವ್ಯಕ್ತಿಯ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿದ್ದಾರೆ (Viral News).
ಘಟನೆಯ ವಿವರ
41 ವರ್ಷದ ಜಾರ್ಜ್ ಬೇಸೆಟೊ ತೊಂದರೆಗೆ ಸಿಲುಕಿದವರು. ಅವರು ಪಿತ್ತಕೋಶದ ಶಸ್ತ್ರಚಿಕಿತ್ಸೆಗಾಗಿ ಅರ್ಜೆಂಟೀನಾದ ಕಾರ್ಡೋಬಾದಲ್ಲಿರುವ ಫ್ಲೋರೆನ್ಸಿಯೊ ಡಿಯಾಜ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಫೆಬ್ರವರಿ 28ರಂದು ಶಸ್ತ್ರ ಚಿಕಿತ್ಸೆಯ ದಿನ ನಿಗದಿಯಾಗಿತ್ತು. ಆದರೆ ಕಾರಣಾಂತರಗಳಿಂದ ಫೆಬ್ರವರಿ 29ಕ್ಕೆ ಮುಂದೂಡಲಾಗಿತ್ತು. ʼʼಶಸ್ತ್ರಚಿಕಿತ್ಸೆಯ ದಿನದಂದು ಆಸ್ಪತ್ರೆಯ ಸಿಬ್ಬಂದಿ ಏನನ್ನೂ ಕೇಳದೆ ಅಥವಾ ಹೆಲ್ತ್ ಚಾರ್ಟ್ ಅನ್ನು ಕೂಡ ಪರಿಶೀಲಿಸದೆ ಆಪರೇಷನ್ ಮಾಡಲು ಕರೆದುಕೊಂಡು ಹೋಗಿದ್ದರುʼʼ ಎಂದು ಜಾರ್ಜ್ ಬೇಸೆಟೊ ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆ ಪೂರ್ಣಗೊಂಡ ಬಳಿಕ ಎಚ್ಚರಗೊಂಡ ಜಾರ್ಜ್ ಬೇಸೆಟೊ ಬಳಿ ಸಂತಾನಶಕ್ತಿ ಹರಣ ಚಿಕಿತ್ಸೆಯ ಬಗ್ಗೆ ವೈದ್ಯರು ತಿಳಿಸಿದ್ದರು. ಇದರಿಂದ ಜಾರ್ಜ್ ಬೇಸೆಟೊ ಶಾಕ್‌ಗೆ ಒಳಗಾಗಿದ್ದರು. ನಂತರ ಪಿತ್ತಕೋಶದ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಸದ್ಯ ವೈದ್ಯರ ಈ ಎಡವಟ್ಟಿನ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಜಾರ್ಜ್ ಅವರ ವಕೀಲ ಡಿಯಾಗೋ ಲ್ಯಾರೆ ಮಾತನಾಡಿ, ”ವೈದ್ಯರ ಈ ಮಟ್ಟದ ನಿರ್ಲಕ್ಷ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಜಾರ್ಜ್ ಇಬ್ಬರು ಗಂಡು ಮಕ್ಕಳ ತಂದೆಯಾಗಿದ್ದರೂ, ಕೂಡ ಅವರು ಹೊಸ ಸಂಬಂಧದಲ್ಲಿದ್ದಾರೆ ಮತ್ತು ಭವಿಷ್ಯದಲ್ಲಿ ಮತ್ತೊಂದು ಮಗು ಹೊಂದಲು ಯೋಜನೆಯನ್ನು ಹಾಕಿಕೊಂಡಿದ್ದರು” ಎಂದು ಹೇಳಿದ್ದಾರೆ. ಜಾರ್ಜ್ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.