Site icon Vistara News

Hoax Bomb Threat: ವೈಟ್ ಫೀಲ್ಡ್‌ನ ಮಾಲ್ ಸೇರಿ‌ ಬೆಂಗಳೂರಿನ ಹಲವು ಮಾಲ್‌ಗಳಿಗೆ ಬಾಂಬ್ ಬೆದರಿಕೆ!

Hoax bomb threat

ಬೆಂಗಳೂರು: ಮುಂಬೈ, ನೋಯ್ಡಾ, ಗುರುಗ್ರಾಮ, ಚೆನ್ನೈ ಸೇರಿ ದೇಶದ ವಿವಿಧ ನಗರಗಳ ಮಾಲ್‌, ಆಸ್ಪತ್ರಗಳಿಗೆ ಬಾಂಬ್‌ ಬೆದರಿಕೆ ಬಂದ ಬೆನ್ನಲ್ಲೇ ನಗರದ ವೈಟ್‌ಫೀಲ್ಡ್‌ನ ಮಾಲ್ ಸೇರಿ ಹಲವು ಮಾಲ್‌ಗಳಿಗೆ ಸೋಮವಾರ ಬಾಂಬ್ ಬೆದರಿಕೆ (Hoax Bomb Threat) ಸಂದೇಶ ಬಂದಿದೆ. ಇ-ಮೇಲ್ ಮುಖಾಂತರ ಬಾಂಬ್ ಬೆದರಿಕೆ ಬಂದಿದ್ದು, ನೀವು ಯಾರೂ ಬದುಕಲು ಅರ್ಹರಲ್ಲ. ಕಟ್ಟಡದ ಒಳಗಿರುವ ಎಲ್ಲರ ಜೀವ ರಕ್ತದ ಮಡುವಿನಲ್ಲಿ ಅಂತ್ಯವಾಗುತ್ತೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆ ಸ್ಫೋಟದ ಬೆನ್ನಲ್ಲೇ ಮಾಲ್‌ಗೆ ಬಾಂಬ್‌ ಬೆದರಿಕೆ ಸಂದೇಶ ಬಂದಿರುವುದರಿಂದ ಆತಂಕ ಮೂಡಿಸಿದೆ. “ಕಟ್ಟಡದ ಒಳಗೆ ಬಾಂಬ್ ಇದೆ. ಈ ಕಟ್ಟಡದ ಒಳಗಿರುವ ಎಲ್ಲರ ಜೀವ ರಕ್ತದ ಮಡುವಿನಲ್ಲಿ ಅಂತ್ಯವಾಗುತ್ತದೆ. ನಾನು ಮಾನವೀಯತೆಯನ್ನು ದ್ವೇಷಿಸುವೆ, ನೀವು ಯಾರೂ ಬದುಕಲು ಅರ್ಹರಲ್ಲ. ನಿಮ್ಮನ್ನೆಲ್ಲಾ ಕೊಲ್ಲುತ್ತೇನೆ, ನಾವು ಭಯೋತ್ಪಾದನೆಯನ್ನು ನಿಲ್ಲಿಸುವುದಿಲ್ಲ. ಈ ಸಂದೇಶ ಕಳುಹಿಸಿರುವುದು KNR ಎಂದು ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಪೊಲೀಸರು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ಪರಿಶೀಲಿಸಿದಾಗ, ಇದೊಂದು ಹುಸಿ ಬಾಂಬ್‌ ಬೆದರಿಕೆ ಎಂಬುವುದು ತಿಳಿದುಬಂದಿದೆ. ಹೀಗಾಗಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Viral Video

ಬೆಂಗಳೂರಿನ ಅನೇಕ ಮಾಲ್​​ಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ಸುಮಾರು 20ಕ್ಕೂ ಹೆಚ್ಚು ಮಾಲ್​​​ಗಳಿಗೆ ಇಮೇಲ್​​ ಬೆದರಿಕೆ ಬಂದಿದೆ ಎನ್ನಲಾಗಿದೆ.

ತ್ರಿವರ್ಣ ಧ್ವಜ ಹರಿದು, ಗೋ ಬ್ಯಾಕ್‌ ಇಂಡಿಯಾ ಘೋಷಣೆ- ಖಲಿಸ್ತಾನಿಗಳ ಅಟ್ಟಹಾಸ; ವಿಡಿಯೋ ವೈರಲ್‌

Viral Video

ಟೊರೊಂಟೋ: ಸ್ವಾತಂತ್ರ್ಯ ದಿನಾಚರಣೆ(Independence Day 2024) ಅಂಗವಾಗಿ ಆಯೋಜಿಸಲಾಗಿದ್ದ ಇಂಡಿಯಾ ಡೇ ಪರೇಡ್‌(India Day Parade) ಕಾರ್ಯಕ್ರಮದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು(Khalistan) ಭಾರತದ ತ್ರಿವರ್ಣ ಧ್ವಜವನ್ನು ಹರಿದಿರುವ ಘಟನೆ ಟೊರೊಂಟೋದಲ್ಲಿ ನಡೆದಿದೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌(Viral Video) ಆಗುತ್ತಿದೆ.

ಟೊರೊಂಟೋ ಸಿಟಿ ಹಾಲ್‌(Toronto City Hall)ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾರ್ಯಕ್ರಮದ ನಡುವೆ ಘೋಷಣೆ ಕೂಗುತ್ತಾ ಎಂಟ್ರಿಯಾದ ಖಲಿಸ್ತಾನಿಗಳು ಚಾಕುವಿನಿಂದ ಭಾರತದ ಧ್ವಜವನ್ನು ಹರಿದುಹಾಕಿದ್ದಾರೆ. ಅಲ್ಲದೇ ಗೋ ಬ್ಯಾಕ್‌ ಇಂಡಿಯಾ ಎಂದು ಘೋಷಣೆ ಕೂಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಕೆನಡಾದಲ್ಲಿ ಸ್ವಾತಂತ್ರ್ಯದ ಅತಿದೊಡ್ಡ ಆಚರಣೆಯಾದ ಇಂಡಿಯಾ ಡೇ ಪರೇಡ್ ಟೊರೊಂಟೊದಲ್ಲಿ ನಡೆಯಿತು. ಖಲಿಸ್ತಾನ್ ಪರ ಗುಂಪುಗಳ ಯೋಜಿತ ಪ್ರತಿ-ರ್ಯಾಲಿಯಿಂದಾಗಿ ಈ ಕಾರ್ಯಕ್ರಮಕ್ಕೆ ಸಕಲ ಭದ್ರತೆ ಒದಗಿಸಲಾಗಿತ್ತು. ಇಂಡಿಯಾ ಡೇ ಪರೇಡ್ ಅನ್ನು ಆಗಸ್ಟ್ 15 ರ ನಂತರದ ಮೊದಲ ಭಾನುವಾರದಂದು ನಡೆಸಲಾಯಿತು. ಈ ಕಾರ್ಯಕ್ರಮವನ್ನು ಪನೋರಮಾ ಇಂಡಿಯಾ ಆಯೋಜಿಸಿದ್ದು, ಇದು ಇಂಡೋ-ಕೆನಡಿಯನ್ ಸಾಂಸ್ಕೃತಿಕ ಸಮಾಗಮವಾಗಿದೆ.

ಪನೋರಮಾ ಇಂಡಿಯಾದ ಪರೇಡ್‌ನ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಕಾರಣ ಈ ವರ್ಷ ಈ ಕಾರ್ಯಕ್ರಮ ಬಹಳ ಮಹತ್ವ ಪಡೆದುಕೊಂಡಿತ್ತು. ಟೊರೊಂಟೊ ಡೌನ್‌ಟೌನ್‌ನಲ್ಲಿರುವ ನಾಥನ್ ಫಿಲಿಪ್ಸ್ ಸ್ಕ್ವೇರ್‌ನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವೈವಿಧ್ಯಮಯ ಭಾರತೀಯ ತಿನಿಸುಗಳು ಕಾರ್ಯಕ್ರಮವನ್ನು ಹೆಚ್ಚಿಸಿದವು. ‘ಖಾಲಿಸ್ತಾನ್ ಸಿಖ್ಖರು’ ಮತ್ತು ‘ಕೆನಡಾದ ಹಿಂದೂಗಳ ನಡುವೆ ಮುಖಾಮುಖಿ’ಗಾಗಿ ಕರೆ ನೀಡುವ ಉದ್ದೇಶದಿಂದಲೇ ಸಮೀಪದಲ್ಲಿ ಖಲಿಸ್ತಾನಿಗಳು ಕಾರ್ಯಕ್ರಮ ಆಯೋಜಿಸಿತ್ತು.

ಕೆಲವು ದಿನಗಳ ಹಿಂದೆಯಷ್ಟೇ ಭಯೋತ್ಪಾದಕ ಚಟುವಟಿಕೆಗಳಿಗೆ ಮಾರಾಕಾಸ್ತ್ರಗಳ ಪೂರೈಕೆಗೆ ಸಂಬಂಧಿಸಿ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾನ ಪ್ರಮುಖ ಸಹಾಯಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಶುಕ್ರವಾರ ಬಂಧಿಸಿದೆ. ಮಾರಕಾಸ್ತ್ರಗಳ ಪೂರೈಕೆಗೆ ಸಂಬಂಧಿಸಿದ ಪ್ರಮುಖ ಭಯೋತ್ಪಾದನಾ ಜಾಲವನ್ನು ಭೇದಿಸಿದ ಎನ್‌ಐಎ, ಮಧ್ಯಪ್ರದೇಶದ ಬದ್ವಾನಿ ಜಿಲ್ಲೆಯ ಬಲ್ಜೀತ್ ಸಿಂಗ್ ಅಲಿಯಾಸ್ ರಾಣಾ ಭಾಯ್ ಅಲಿಯಾಸ್ ಬಲ್ಲಿ ಎಂಬಾತನನ್ನು ಗುರುವಾರ ಪಂಜಾಬ್‌ನಲ್ಲಿ ಬಂಧಿಸಿದೆ.

ಇದನ್ನೂ ಓದಿ: Tarsem Singh: ಎನ್‌ಐಎ ಪ್ರಮುಖ ಕಾರ್ಯಾಚರಣೆ; ಅಬುಧಾಬಿಯಲ್ಲಿ ಖಲಿಸ್ತಾನಿ ಉಗ್ರ ತರ್ಸೇಮ್‌ ಸಿಂಗ್ ಬಂಧನ!

Exit mobile version