Site icon Vistara News

Hosur Airport: ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಹೊಣೆ ಬಿಐಎಎಲ್‌ಗೆ! ಕರ್ನಾಟಕಕ್ಕೆ ಟಕ್ಕರ್‌ ಕೊಟ್ಟ ತಮಿಳುನಾಡು

hosur airport

ಬೆಂಗಳೂರು: ಹೊಸೂರಿನಲ್ಲಿ (Hosur) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (International Airport) ನಿರ್ಮಿಸುವುದಾಗಿ (Hosur Airport) ಘೋಷಿಸಿದ ತಮಿಳುನಾಡು ಸರ್ಕಾರ (Tamil Nadu Govt) ಇದೀಗ ಅದರ ಹೊಣೆಯನ್ನು ಬಿಐಎಎಲ್‌ಗೆ (BIAL) ವಹಿಸಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಪ್ಲ್ಯಾನ್‌ ಮಾಡಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (Kempegowda International Airport) ನಿರ್ವಹಿಸುತ್ತಿರುವ ಬಿಐಎಎಲ್‌ಗೆ ಜವಾಬ್ದಾರಿ ನೀಡಲು ಮಾತುಕತೆ ನಡೆದಿದೆ. ಕೆಂಪೇಗೌಡ ನಿಲ್ದಾಣಕ್ಕೆ 25 ವರ್ಷ ತುಂಬುವವರೆಗೆ 150 ಕಿಮೀ ವ್ಯಾಪ್ತಿಯೊಳಗೆ ಹೊಸ ವಿಮಾನ ನಿಲ್ದಾಣ ನಿರ್ಮಿಸುವಂತಿಲ್ಲ ಎಂಬ ಒಪ್ಪಂದವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ಮಾಡಿಕೊಂಡಿತ್ತು. ಬಿಐಎಎಲ್‌ ಜುಲೈ 5, 2004ರಂದು ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ದೃಷ್ಟಿಯಿಂದ 2033ರವರೆಗೆ ಹೊಸೂರಿನಲ್ಲಿ ವಿಮಾನ ನಿಲ್ದಾಣ ತಲೆ ಎತ್ತುವಂತಿಲ್ಲ.

ಈ ತಡೆಯನ್ನು ಮೀರಲು ಸ್ಟಾಲಿನ್‌ ಸರ್ಕಾರ ಪ್ಲ್ಯಾನ್‌ ಹಾಕಿಕೊಂಡಿದೆ. ಈ ಬಗ್ಗೆ ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮ ಟಿಡ್ಕೊದ ಉನ್ನತ ಅಧಿಕಾರಿಗಳ ಸಭೆ ನಡೆದಿದ್ದು, ಬಿಐಎಎಲ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಇದಕ್ಕೆ ಬಿಐಎಎಲ್‌ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಬಿಐಎಎಲ್‌ಗೆ ಹೊಸೂರು ವಿಮಾನ ನಿಲ್ದಾಣ ಟೆಂಡರ್ ಕೊಟ್ಟರೆ ಈ ಒಪ್ಪಂದ ಅನ್ವಯ ಆಗುವುದಿಲ್ಲ ಎನ್ನಲಾಗುತ್ತಿದೆ.

ಹೊಸೂರು ಕೈಗಾರಿಕಾ ವಲಯಕ್ಕೆ ಹೆಚ್ಚಿದ ಬೇಡಿಕೆ

ತಮಿಳುನಾಡು ಏರ್‌ಪೋರ್ಟ್ ಘೋಷಣೆ‌ ಬೆನ್ನಲ್ಲೇ ಹೊಸೂರು ಕೈಗಾರಿಕಾ ವಲಯಕ್ಕೆ ಬೇಡಿಕೆ ಹೆಚ್ಚಿದೆ. ಕಳೆದ ಐದು ವರ್ಷದಲ್ಲಿ ಹೊಸೂರು ಸುತ್ತ 200 ಹೊಸ ಕಂಪನಿಗಳು- ಕಾರ್ಖಾನೆಗಳು ಆರಂಭವಾಗಿವೆ. ಬೆಂಗಳೂರು ಸುತ್ತ ಅನುಷ್ಠಾನ ಆಗಬೇಕಿದ್ದ ಕಂಪನಿಗಳು ಹೊಸೂರಿಗೆ ಶಿಫ್ಟ್ ಆಗಿವೆ.

ಇದಕ್ಕೆ ಕಾರಣ, ತಮಿಳುನಾಡು ಸರ್ಕಾರ ಕೈಗಾರಿಕಾ ಕಂಪನಿಗಳಿಗೆ ಕಡಿಮೆ ಬೆಲೆಗೆ ಭೂಮಿ ನೀಡಿತ್ತು. ಮೆಟ್ರೋ ನಗರ ಬೆಂಗಳೂರಿಗೆ ಹತ್ತಿರದಲ್ಲೇ ಇರಿವುದರಿಂದ ಮೂಲಸೌಕರ್ಯಗಳಿಗೆ ಮೋಸವಿಲ್ಲ. ಇನ್ನು ಅತ್ತಿಬೆಲೆವರೆಗೂ ಮೆಟ್ರೋ ವಿಸ್ತೀರ್ಣದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಅದೂ ಅನುಷ್ಠಾನಗೊಳ್ಳಲಿದೆ. ಹೊಸೂರು ಹೊಸ ಇಂಡಸ್ಟ್ರಿಗಳಿಗೆ ವರದಾನವಾಗುತ್ತಿದೆ. ಬೆಂಗಳೂರಿನ ಕಂಪನಿಗಳು ಹೊಸೂರಿಗೆ ಸ್ಥಳಾಂತರಕ್ಕೆ ಇದೂ ಕೂಡಾ ಕಾರಣ.

ಹೊಸೂರಿನಲ್ಲಿ ಕಾಸ್ಟ್ ಆಫ್ ಲಿವಿಂಗ್ ಕಡಿಮೆ, ಟ್ರಾನ್ಸ್ ಪೋರ್ಟ್ ಕನೆಕ್ಟಿವಿಟಿ ಹೆಚ್ಚು ಇದೆ. ಟ್ರಾಫಿಕ್ ಸಮಸ್ಯೆ ಕಡಿಮೆ ಹಾಗೂ ಮೂಲಭೂತ ಸೌಕರ್ಯ ಹೆಚ್ಚಾಗಿ ಲಭ್ಯವಿದೆ. ಹೀಗಾಗಿ ದೊಡ್ಡ ಕಂಪನಿಗಳು ಅತ್ತ ಶಿಫ್ಟ್‌ ಆಗಲು ಯೋಚಿಸುತ್ತಿವೆ. ನಗರದೊಳಗೆ ಹೆಚ್ಚುತ್ತಿರುವ ಟ್ರಾಫಿಕ್‌, ಜೀವನವೆಚ್ಚ ಜಾಗದ ಕೊರತೆಗಳು ಇದನ್ನು ಇನ್ನಷ್ಟು ಪ್ರಚೋದಿಸುತ್ತಿವೆ.

ಇದನ್ನೂ ಓದಿ: Hosur International Airport: ಹೊಸೂರು ವಿಮಾನ ನಿಲ್ದಾಣದಿಂದ ಬೆಂಗಳೂರಿನ ಪ್ರತಿಷ್ಠೆಗೆ ಧಕ್ಕೆ?

Exit mobile version