ಬೆಂಗಳೂರು: ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆಯುಷ್ಮಾನ್ ಭಾರತ್ ಕಾರ್ಡ್ (Ayushman Bharat ) ಯೋಜನೆಯಡಿ ಪಿಎಂ ಜನ ಆರೋಗ್ಯ ಯೋಜನೆಯನ್ನು 2018ರಲ್ಲಿ ಆರಂಭಿಸಲಾಗಿದೆ. ಸರ್ಕಾರದ ಮತ್ತು ಇತರ ಸಂಯೋಜಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಈ ಕಾರ್ಡ್ಗಳನ್ನು ಬಳಸಿಕೊಳ್ಳಬಹುದು. ಇದು ಎಲ್ಲ ರೋಗಗಳಿಗೆ 5 ಲಕ್ಷ ರೂಪಾಯಿವರಗೆ ಆರೋಗ್ಯ ರಕ್ಷಣೆಯನ್ನು ನೀಡುತ್ತದೆ. ಈ ಕಾರ್ಡ್ ಪಡೆಯಲು ಕುಟುಂಬದ ಒಬ್ಬರು ನೋಂದಾಯಿಸಿಕೊಳ್ಳಬೇಕು. ಆದರೆ ಅದಕ್ಕೆ ಕೆಲವು ಅರ್ಹತಾ ಮಾನದಂಡಗಳಿದ್ದು ಅದನ್ನು ಪೂರೈಸಬೇಕು. ಅಧಿಕಾರಿಗಳ ಅನುಮೋದನೆಯ ನಂತರ ಅರ್ಜಿದಾರರು ಆರೋಗ್ಯ ಕಾರ್ಡ್ ಅನ್ನು ಪಡೆಯುತ್ತಾರೆ. ಕಾರ್ಡ್ ಸಿಕ್ಕರೆ ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ.
Envisioned by Hon'ble Prime Minister Shri @narendramodi ji, the Ayushman Bharat card has been a boon for millions.
— Pijush Hazarika (@Pijush_hazarika) February 5, 2024
Delighted to know how Anjali Kalita Biswas, a resident of my constituency has been benefitted from the card. pic.twitter.com/Qmdn494Xez
ಅರ್ಜಿ ಸಲ್ಲಿಸುವ ಮೊದಲು ಆಯುಷ್ಮಾನ್ ಭಾರತ್ ಕಾರ್ಡ್ ಪಡೆಯಲು ನಿಮಗೆ ಅರ್ಹತೆ ಇದೆಯೇ ಮತ್ತು ನಿಮ್ಮ ಬಳಿ ಎಲ್ಲಾ ಅಗತ್ಯ ದಾಖಲೆಗಳಿವೆ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ. ಕಾರ್ಡ್ ಪಡೆಯಲು ಬೇಕಾಗಿರುವ ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ.
- ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
- ಕುಟುಂಬದಲ್ಲಿ 16 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಹೆಚ್ಚು ಆದಾಯ ಗಳಿಸುವ ಸದಸ್ಯರು ಇರಬಾರದು.
- ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿದವರಿಗೆ ನೇರ ಅರ್ಹತೆ
- ಶಾಶ್ವತ ನಿವಾಸವಿಲ್ಲದೆಯೂ ಅರ್ಜಿ ಸಲ್ಲಿಸಲು ಇದರಲ್ಲಿದೆ ಅವಕಾಶ
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ವಾಸಸ್ಥಳ ದಾಖಲೆ
- ಆದಾಯ ಪ್ರಮಾಣ ಪತ್ರಗಳು
- ಭಾವಚಿತ್ರಗಳು
- ವರ್ಗ ಪ್ರಮಾಣಪತ್ರ
ಆಯುಷ್ಮಾನ್ ಭಾರತ್ ಕಾರ್ಡ್ ನ ಪ್ರಯೋಜನಗಳು ಈ ಕೆಳಗಿನಂತಿವೆ
- ವಿವಿಧ ಆಸ್ಪತ್ರೆಗಳಲ್ಲಿ ಬಹುತೇಕ ಎಲ್ಲ ರೋಗಗಳಿಗೆ ಚಿಕಿತ್ಸೆ ಪಡೆಯಬಹುದು.
- ಪ್ರವೇಶ ಶುಲ್ಕ ಮತ್ತು ಚಿಕಿತ್ಸೆ ಸಂಪೂರ್ಣ ಉಚಿತ
- ರಾಜ್ಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ.
- 15 ದಿನಗಳ ಆಸ್ಪತ್ರೆ ವೆಚ್ಚಗಳ ಕವರೇಜ್
- ಇದನ್ನೂ ಓದಿ : RBI Caution : ಮೋಸಗಾರರಿದ್ದಾರೆ; ಕೆವೈಸಿ ಅಪ್ಡೇಟ್ ಹೆಸರಲ್ಲಿ ಕರೆ ಬಂದರೆ ಎಚ್ಚರ ವಹಿಸಿ ಎಂದ ಆರ್ಬಿಐ
ಭಾರತ್ ಕಾರ್ಡ್ ಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
- https://pmjay.gov.in/ ಆಯುಷ್ಮಾನ್ ಭಾರತ್ ಕಾರ್ಡ್ 2024 ರ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ನಿಮ್ಮ ಬಳಿ ಅಗತ್ಯ ದಾಖಲೆಗಳಿವೆ ಎಂದು ಖಚಿತಪಡಿಸಿಕೊಳ್ಳಿ.
- ABHA ನೋಂದಣಿಯ ಮೇಲೆ ಕ್ಲಿಕ್ ಮಾಡಿ ಮತ್ತು ವಿವರಗಳನ್ನು ಪೂರ್ಣಗೊಳಿಸಲು ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿ.
- ಮೊಬೈಲ್ಗೆ ಬರುವ OTP ಹಾಕಿ
- ನಿಮ್ಮ ಹೆಸರು, ಆದಾಯ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಯಂತಹ ಮಾಹಿತಿಯನ್ನು ಒದಗಿಸಿ.
- ಅಧಿಕಾರಿಗಳ ಅನುಮೋದನೆಗಾಗಿ ಕಾಯಿರಿ. ಅದರ ನಂತರ ನೀವು ಆಯುಷ್ಮಾನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು.
ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಯು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಅಪಾಯಕಾಇ ಆರೋಗ್ಯ ವೆಚ್ಚಗಳಿಂದ ಆರ್ಥಿಕ ರಕ್ಷಣೆ ಒದಗಿಸುವ ಜತೆಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಖಚಿತಪಡಿಸುತ್ತದೆ. ಅರ್ಜಿ ಪ್ರಕ್ರಿಯೆ ಮುಗಿಸುವ ಮೂಲಕ ಮತ್ತು ಅರ್ಹತಾ ಮಾನದಂಡಗಳನ್ನು ಪೂರೈಸಿ ಯೋಜನೆಯ ಪ್ರಯೋಜನ ಪಡೆಯಬಹುದು.