Ayushman Bharat : ಮೋದಿ ಗ್ಯಾರಂಟಿಯ ಆಯುಷ್ಮಾನ್ ಭಾರತ್​ ಕಾರ್ಡ್​ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ - Vistara News

ಪ್ರಮುಖ ಸುದ್ದಿ

Ayushman Bharat : ಮೋದಿ ಗ್ಯಾರಂಟಿಯ ಆಯುಷ್ಮಾನ್ ಭಾರತ್​ ಕಾರ್ಡ್​ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

Ayushman Bharat : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆಯುಷ್ಮಾನ್ ಭಾರತ್ ಕಾರ್ಡ್ ಅಡಿಯಲ್ಲಿ ಪಿಎಂ ಜನ ಆರೋಗ್ಯ ಯೋಜನೆಯನ್ನು ಪ್ರಾರಂಭಿಸಿದ್ದು, ಕಾರ್ಡ್ ಹೊಂದಿದವರು 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ಪಡೆಯುತ್ತಾರೆ.

VISTARANEWS.COM


on

Ayushman Bharath Card
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆಯುಷ್ಮಾನ್ ಭಾರತ್ ಕಾರ್ಡ್ (Ayushman Bharat ) ಯೋಜನೆಯಡಿ ಪಿಎಂ ಜನ ಆರೋಗ್ಯ ಯೋಜನೆಯನ್ನು 2018ರಲ್ಲಿ ಆರಂಭಿಸಲಾಗಿದೆ. ಸರ್ಕಾರದ ಮತ್ತು ಇತರ ಸಂಯೋಜಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಈ ಕಾರ್ಡ್​ಗಳನ್ನು ಬಳಸಿಕೊಳ್ಳಬಹುದು. ಇದು ಎಲ್ಲ ರೋಗಗಳಿಗೆ 5 ಲಕ್ಷ ರೂಪಾಯಿವರಗೆ ಆರೋಗ್ಯ ರಕ್ಷಣೆಯನ್ನು ನೀಡುತ್ತದೆ. ಈ ಕಾರ್ಡ್ ಪಡೆಯಲು ಕುಟುಂಬದ ಒಬ್ಬರು ನೋಂದಾಯಿಸಿಕೊಳ್ಳಬೇಕು. ಆದರೆ ಅದಕ್ಕೆ ಕೆಲವು ಅರ್ಹತಾ ಮಾನದಂಡಗಳಿದ್ದು ಅದನ್ನು ಪೂರೈಸಬೇಕು. ಅಧಿಕಾರಿಗಳ ಅನುಮೋದನೆಯ ನಂತರ ಅರ್ಜಿದಾರರು ಆರೋಗ್ಯ ಕಾರ್ಡ್ ಅನ್ನು ಪಡೆಯುತ್ತಾರೆ. ಕಾರ್ಡ್​ ಸಿಕ್ಕರೆ ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ.

ಅರ್ಜಿ ಸಲ್ಲಿಸುವ ಮೊದಲು ಆಯುಷ್ಮಾನ್ ಭಾರತ್ ಕಾರ್ಡ್​ ಪಡೆಯಲು ನಿಮಗೆ ಅರ್ಹತೆ ಇದೆಯೇ ಮತ್ತು ನಿಮ್ಮ ಬಳಿ ಎಲ್ಲಾ ಅಗತ್ಯ ದಾಖಲೆಗಳಿವೆ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ. ಕಾರ್ಡ್​ ಪಡೆಯಲು ಬೇಕಾಗಿರುವ ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ.

  • ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
  • ಕುಟುಂಬದಲ್ಲಿ 16 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಹೆಚ್ಚು ಆದಾಯ ಗಳಿಸುವ ಸದಸ್ಯರು ಇರಬಾರದು.
  • ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿದವರಿಗೆ ನೇರ ಅರ್ಹತೆ
  • ಶಾಶ್ವತ ನಿವಾಸವಿಲ್ಲದೆಯೂ ಅರ್ಜಿ ಸಲ್ಲಿಸಲು ಇದರಲ್ಲಿದೆ ಅವಕಾಶ

ಅಗತ್ಯ ದಾಖಲೆಗಳು

  • ಆಧಾರ್​ ಕಾರ್ಡ್
  • ವಾಸಸ್ಥಳ ದಾಖಲೆ
  • ಆದಾಯ ಪ್ರಮಾಣ ಪತ್ರಗಳು
  • ಭಾವಚಿತ್ರಗಳು
  • ವರ್ಗ ಪ್ರಮಾಣಪತ್ರ

ಆಯುಷ್ಮಾನ್ ಭಾರತ್ ಕಾರ್ಡ್ ನ ಪ್ರಯೋಜನಗಳು ಈ ಕೆಳಗಿನಂತಿವೆ

ಭಾರತ್ ಕಾರ್ಡ್ ಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

  • https://pmjay.gov.in/ ಆಯುಷ್ಮಾನ್ ಭಾರತ್ ಕಾರ್ಡ್ 2024 ರ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಮತ್ತು ನಿಮ್ಮ ಬಳಿ ಅಗತ್ಯ ದಾಖಲೆಗಳಿವೆ ಎಂದು ಖಚಿತಪಡಿಸಿಕೊಳ್ಳಿ.
  • ABHA ನೋಂದಣಿಯ ಮೇಲೆ ಕ್ಲಿಕ್ ಮಾಡಿ ಮತ್ತು ವಿವರಗಳನ್ನು ಪೂರ್ಣಗೊಳಿಸಲು ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿ.
  • ಮೊಬೈಲ್​ಗೆ ಬರುವ OTP ಹಾಕಿ
  • ನಿಮ್ಮ ಹೆಸರು, ಆದಾಯ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಯಂತಹ ಮಾಹಿತಿಯನ್ನು ಒದಗಿಸಿ.
  • ಅಧಿಕಾರಿಗಳ ಅನುಮೋದನೆಗಾಗಿ ಕಾಯಿರಿ. ಅದರ ನಂತರ ನೀವು ಆಯುಷ್ಮಾನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು.

ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಯು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಅಪಾಯಕಾಇ ಆರೋಗ್ಯ ವೆಚ್ಚಗಳಿಂದ ಆರ್ಥಿಕ ರಕ್ಷಣೆ ಒದಗಿಸುವ ಜತೆಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಖಚಿತಪಡಿಸುತ್ತದೆ. ಅರ್ಜಿ ಪ್ರಕ್ರಿಯೆ ಮುಗಿಸುವ ಮೂಲಕ ಮತ್ತು ಅರ್ಹತಾ ಮಾನದಂಡಗಳನ್ನು ಪೂರೈಸಿ ಯೋಜನೆಯ ಪ್ರಯೋಜನ ಪಡೆಯಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IND vs ENG: ರಾಂಚಿ ಟೆಸ್ಟ್​ ಪಂದ್ಯಕ್ಕೆ ಖಲಿಸ್ತಾನಿ ಉಗ್ರನಿಂದ ಬೆದರಿಕೆ; ಸ್ಟೇಡಿಯಂಗೆ ಬಿಗಿ ಭದ್ರತೆ!

ಫೆ.23ರಿಂದ ರಾಂಚಿಯಲ್ಲಿ ಆರಂಭಗೊಳ್ಳಲಿರುವ ಭಾರತ ಮತ್ತುಇಂಗ್ಲೆಂಡ್​ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯವನ್ನು(IND vs ENG) ರದ್ದು ಮಾಡುವಂತೆ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಬೆದರಿಕೆಯೊಡ್ಡಿದ್ದಾನೆ.

VISTARANEWS.COM


on

Gurpatwant Singh Pannun
Koo

ರಾಂಚಿ: ಭಾರತ ಮತ್ತು ಇಂಗ್ಲೆಂಡ್​(India vs England 4th test) ನಡುವೆ ಫೆ.23ರಿಂದ ರಾಂಚಿಯಲ್ಲಿ ಆರಂಭಗೊಳ್ಳಲಿರುವ ನಾಲ್ಕನೇ ಟೆಸ್ಟ್​ ಪಂದ್ಯವನ್ನು(IND vs ENG) ರದ್ದು ಮಾಡುವಂತೆ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಬೆದರಿಕೆಯೊಡ್ಡಿದ್ದಾನೆ. ಸಿಪಿಐ (ಮಾವೋವಾದಿ)ಗೆ ಗಲಭೆ ಸೃಷ್ಟಿಸುವಂತೆ ವಿಡಿಯೊ ಮೂಲಕ ಒತ್ತಾಯಿಸಿದ್ದಾನೆ.

ಭಾರತ ಮತ್ತು ಇಂಗ್ಲೆಂಡ್ ಆಟಗಾರರು ಈಗಾಗಲೇ ರಾಂಚಿ ತಲುಪಿದ್ದು ಅಭ್ಯಾಸ ಕೂಡ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಗುರುಪತ್ವಂತ್ ಸಿಂಗ್ ಬೆದರಿಕೆ ಹಾಕಿದ್ದಾನೆ. ಈ ಬೆದರಿಕೆಯ ಹಿನ್ನೆಲೆಯಲ್ಲಿ ಜಾರ್ಖಂಡ್ ಪೊಲೀಸರು ಅಲರ್ಟ್ ಆಗಿದ್ದು ಪಂದ್ಯ ನಡೆಯುವ ಜೆಎಸ್​ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣ(JSCA International Stadium Complex, Ranchi) ಸಂಕೀರ್ಣದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಿದ್ದಾರೆ ಮಾಡಿದ್ದಾರೆ. ಜತೆಗೆ ಪ್ರಚೋಧನೆ ನೀಡಿರುವ ಗುರುಪತ್ವಂತ್ ವಿರುದ್ಧ ದೂರ್ವಾ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣದ ಬಗ್ಗೆ ಪಿಟಿಐಗೆ ಮಾಹಿತಿ ನೀಡಿರುವ ಇಲ್ಲಿನ ಡಿಎಸ್ಪಿ ಪಿ.ಕೆ.ಮಿಶ್ರಾ, ಪಂದ್ಯಕ್ಕೆ ಯಾರು ಅಡ್ಡಿಪಡಿಸದಂತೆ ಸಂಪೂರ್ಣ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಯಾರಿಗೂ ಭಯ ಬೇಡ. ಗುರುಪತ್ವಂತ್ ಸಿಂಗ್ ಈ ರೀತಿಯ ಬೆದರಿಕೆ ಒಡ್ಡುತ್ತಿರುವುದು ಇದೇ ಮೊದಲೆನಲ್ಲ. ಇದಕ್ಕೂ ಮುನ್ನ ಹಲವು ಬಾರಿ ಈ ರೀತಿಯ ಬೆದರಿಕೆ ಹಾಕಿದ್ದಾನೆ. ಈ ಹಿಂದೆ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಬೆದರಿಕೆಯೊಡ್ಡಿದ್ದ. ಈ ಕಾರಣಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಆತನ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ Ind vs Eng : ನಾಲ್ಕನೇ ಟೆಸ್ಟ್​ಗೆ ಜಸ್​ಪ್ರಿತ್ ಬುಮ್ರಾ ಬಿಡುಗಡೆ ​, ರಾಹುಲ್ ಔಟ್​

ಇದಕ್ಕೂ ಮೊದಲು ಪನ್ನುನ್ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೇ ಬೆದರಿಕೆ ಹಾಕಿದ್ದ. ಡಿಸೆಂಬರ್ 30ರಂದು ಪ್ರಧಾನಿಯವರ ಅಯೋಧ್ಯೆ ರೋಡ್‌ಶೋ ಅನ್ನು ಹಾಳುಗೆಡಹುವಂತೆ ಮುಸ್ಲಿಮರನ್ನು ಪ್ರಚೋದಿಸಲು ಯತ್ನಿಸಿದ್ದ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Punjab CM Bhagwant Mann) ಮತ್ತು ಡಿಜಿಪಿ ಗೌರವ್ ಯಾದವ್ ಅವರನ್ನು ಕೂಡ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದ. ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದಂದು ಸಿಎಂ ಮಾನ್ ಮೇಲೆ ದಾಳಿ ಮಾಡಲು ಒಟ್ಟಾಗುವಂತೆ ಪನ್ನುನ್‌, ಇತರ ಖಲಿಸ್ತಾನಿ ಗ್ಯಾಂಗ್‌ಸ್ಟರ್‌ಗಳಿಗೆ ಕರೆ ನೀಡಿದ್ದ.

ಜನವರಿ 22ರಂದು ಅಯೋಧ್ಯೆ ರಾಮ ಮಂದಿರದ (Ayodhya Ram Mandir) ಶಂಕುಸ್ಥಾಪನೆ ಸಮಾರಂಭದಲ್ಲಿ ವಿಧ್ವಂಸಕ ಕೃತ್ಯ ಎಸಗುವುದಾಗಿ ಬೆದರಿಕೆ ಹಾಕಿದ್ದ. ʼಬಾಬರಿ ಮಸೀದಿಯನ್ನು ನಾಶ ಮಾಡಿ ನಿರ್ಮಿಸಲಾದ ಸಮಾರಂಭವನ್ನು ವಿರೋಧಿಸಿʼ ಎಂದು ಕೂಡ ಈತ ಮುಸ್ಲಿಂ ಸಮುದಾಯವನ್ನು ಒತ್ತಾಯಿಸಿದ್ದಾನೆ. ಹತರಾದ ಸಾವಿರಾರು ಮುಸ್ಲಿಮರ ದೇಹಗಳ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ ಎಂದಿದ್ದಾನೆ ಆತ. ಪ್ರಧಾನಿ ನರೇಂದ್ರ ಮೋದಿ (pm narendra modi) ಅವರನ್ನು ಪನ್ನುನ್‌ ʼಮುಸ್ಲಿಮರ ಜಾಗತಿಕ ಶತ್ರುʼ ಎಂದು ಕರೆದಿದ್ದ.

ಗುರುಪತ್ವಂತ್ ಸಿಂಗ್ ಪನ್ನುನ್ ಅವರು ಸಿಖ್ಸ್ ಫಾರ್ ಜಸ್ಟಿಸ್ (SFJ) ಎಂಬ ಪ್ರತ್ಯೇಕತಾವಾದಿ ಸಂಘಟನೆಯ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದಾನೆ. 2007 ರಲ್ಲಿ ಸ್ಥಾಪಿತವಾದ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯನ್ನು ಭಾರತ ಸರ್ಕಾರ 2019 ರಲ್ಲಿ ನಿಷೇಧಿಸಿತು. ಅಂದಿನಿಂದ ಪನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಕಣ್ಗಾವಲಿನಲ್ಲಿದ್ದ. ಕಾನೂನುಬಾಹಿರ ಚಟುವಟಿಕೆಗಳ ಕಾಯಿದೆಯಡಿ 2020 ರಲ್ಲಿ ಭಾರತ ಸರ್ಕಾರವು ಪನ್ನುವನ್ನು ಭಯೋತ್ಪಾದಕ ಎಂದು ಘೋಷಿಸಿತು. ಹೊರಡಿಸಿತು.

Continue Reading

ಪ್ರಮುಖ ಸುದ್ದಿ

Road Accident: ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ; ಬಸ್-ಬೈಕ್ ಡಿಕ್ಕಿಯಾಗಿ ನಾಲ್ವರ ದುರ್ಮರಣ

ರಾಯಚೂರು ತಾಲೂಕಿನ ಮಿಟ್ಟಿಮಲಕಾಪುರ ಬಳಿ ಬುಧವಾರ ಭೀಕರ ರಸ್ತೆ ನಡೆದಿದೆ. ಅಪಘಾತದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ನಾಲ್ವರು ಮೃತಪಟ್ಟಿದ್ದಾರೆ.

VISTARANEWS.COM


on

bike accident
Koo

ರಾಯಚೂರು: ತಾಲೂಕಿನ ಮಿಟ್ಟಿಮಲಕಾಪುರ ಬಳಿ ಬುಧವಾರ ಭೀಕರ ರಸ್ತೆ ಅಪಘಾತ ನಡೆದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದರಿಂದ ಸ್ಥಳದಲ್ಲಿ ನಾಲ್ವರು ಕೊನೆಯುಸಿರೆಳೆದಿದ್ದಾರೆ.

ರಾಯಚೂರು ನಗರದ ಇಂದಿರಾನಗರ ನಿವಾಸಿಗಳಾದ ಪರಶುರಾಮ್ (30), ರಾಘವೇಂದ್ರ (35), ಗೋವಿಂದ (32), ಪ್ರಾಣೇಶ್ (22) ಮೃತರು. ಹೊಲದ ಕೆಲಸ ಮಾಡುತ್ತಿದ್ದ ಇವರು, ಬೈಕ್‌ನಲ್ಲಿ ಹೋಗುತ್ತಿದ್ದಾಗ ದುರಂತ ನಡೆದಿದೆ. ಸ್ಥಳಕ್ಕೆ ಯರಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ಆನ್‌ಲೈನ್ ಷೇರ್ ಟ್ರೇಡಿಂಗ್ ವಂಚನೆ: 1.92 ಕೋಟಿ ರೂ. ಮೋಸ ಹೋದ ಮಹಿಳೆ! ಸುರಕ್ಷಿತ ಹೂಡಿಕೆ ಹೇಗೆ?

ಮಹಿಳೆಯೊಂದಿಗೆ ಅನುಚಿತ ವರ್ತಿಸಿದ ವ್ಯಕ್ತಿಯ ಕೊಲೆ

ಚಿಕ್ಕಬಳ್ಳಾಪುರ: ಮಹಿಳೆಯೊಂದಿಗೆ ಅನುಚಿತ ವರ್ತನೆ ಹಿನ್ನೆಲೆ ವ್ಯಕ್ತಿಯೊಬ್ಬನ ಕೊಲೆ ಮಾಡಿರುವ ಘಟನೆ ನಗರದ 31ನೇ ವಾರ್ಡ್‌ನ ಇಂದಿರಾನಗರದ ಬಾಡಿಗೆ ಮನೆಯಲ್ಲಿ ನಡೆದಿದೆ.

ಸಾದಲಿ ಗ್ರಾಮದ ಆಂಜಿನಪ್ಪ (40) ಕೊಲೆಯಾದವರು. ರಾಘವೇಂದ್ರ ಕೊಲೆ ಆರೋಪಿ. ಇಂದಿರಾನಗರದ ಕಳ್ಳೇಕಾಯಿ ಸೀನಪ್ಪ ಎಂಬುವವರ ಮನೆಯಲ್ಲಿ ಬಾಡಿಗೆಗೆ ಆಂಜಿನಪ್ಪ ವಾಸವಾಗಿದ್ದರು. ರಾಡ್‌ನಿಂದ ಹೊಡೆದು ಕೊಲೆ ಮಾಡಲಾಗಿದ್ದು, ಸ್ಥಳಕ್ಕೆ ಚಿಕ್ಕಬಳ್ಳಾಪುರ ಡಿವೈಎಸ್ಪಿ ಶಿವಕುಮಾರ್, ವೃತ್ತ ನಿರೀಕ್ಷಕ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿದ್ಯುತ್ ಪ್ರವಹಿಸಿ ಬೆಸ್ಕಾಂ ಗುತ್ತಿಗೆ ನೌಕರ ಸಾವು

ಕೋಲಾರ: ವಿದ್ಯುತ್ ಪ್ರವಹಿಸಿ ಬೆಸ್ಕಾಂ ಗುತ್ತಿಗೆ ನೌಕರ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಾಗೇರಿ ಗ್ರಾಮದ ಬಳಿ ನಡೆದಿದೆ. ಬಂಗಾರಪೇಟೆ ತಾಲೂಕಿನ ಮರವಳ್ಳಿ ಗ್ರಾಮದ ಮಂಜುನಾಥ್ (45) ಮೃತ ವ್ಯಕ್ತಿ. ವಿದ್ಯುತ್ ಕಂಬ ದುರಸ್ತಿ ಮಾಡಲು ಕಂಬಕ್ಕೆ ಹತ್ತಿದ್ದ ವೇಳೆ ಅವಘಡ ನಡೆದಿದೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ.ದಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Continue Reading

ಟಾಪ್ 10 ನ್ಯೂಸ್

VISTARA TOP 10 NEWS: ನಾಡಗೀತೆಯಲ್ಲೂ ಸರಕಾರ ಎಡವಟ್ಟು ಪಬ್ಲಿಕ್‌ ಪ್ಲೇಸಲ್ಲಿ ಸೇದಬಾರದು ಸಿಗರೇಟು.. ಮತ್ತು ಇತರ ಸುದ್ದಿಗಳು

VISTARA TOP 10 NEWS : ರಾಜ್ಯ ಸರ್ಕಾರ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡಬೇಕಾಗಿಲ್ಲ ಎಂಬ ಸುತ್ತೋಲೆ ಹೊರಡಿಸಿ ಮುಖಭಂಗ ಅನುಭವಿಸಿದೆ, ಮತ್ತೆ ಅದನ್ನು ಸರಿಪಡಿಸಿಕೊಂಡು ತೇಪೆ ಹಾಕಿದೆ. ಇದೇ ವೇಳೆ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ವಿಚಾರದಲ್ಲೂ ಕೆಲವೊಂದು ವಿವಾದ ಎದ್ದಿದೆ. ಹೀಗೆ ದಿನದ ಪ್ರಮುಖ ಸುದ್ದಿಗಳ ಸುತ್ತುನೋಟ ಇದು.

VISTARANEWS.COM


on

vistara top ten
Koo

1.ಇನ್ನೊಂದು ಎಡವಟ್ಟು; ಖಾಸಗಿ ಶಾಲೆಯಲ್ಲಿ ನಾಡಗೀತೆ ಹಾಡಬೇಕಿಲ್ಲ ಎಂದ ಸರ್ಕಾರ!
ರಾಜ್ಯದ ಕಾಂಗ್ರೆಸ್‌ ಸರ್ಕಾರ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ವಸತಿ ಶಾಲೆಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆ ಮಾಡಬಾರದು ಎಂಬ ಆದೇಶ, ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಕವಿತೆಯ ಬರಹದ ಸಾಲುಗಳನ್ನೇ ಬದಲಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿತ್ತು. ಇದೀಗ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ (Nadageethe row) ಎಂಬ ಸುತ್ತೋಲೆ ಹೊರಡಿಸಿ ವಿವಾದಕ್ಕೆ ಒಳಗಾಗಿದೆ. ಕೊನೆಗೆ ಸುತ್ತೋಲೆ ಹಿಂಪಡೆದು ತಿಪ್ಪೆಸಾರಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಮಿಷನರಿಗಳಿಗೆ ಮಣಿದ ಸರ್ಕಾರ; ಡೋಂಗಿ ಕನ್ನಡ ಪ್ರೇಮಿ ಸಿದ್ದರಾಮಯ್ಯ; ಬಿಜೆಪಿ ಆಕ್ರೋಶ
ಈ ಸುದ್ದಿಯನ್ನೂ ಓದಿ: ಕೆಟ್ಟ ಮೇಲೆ ಬುದ್ಧಿ; ವಿವಾದಿತ ನಾಡಗೀತೆ ಸುತ್ತೋಲೆ ಬದಲಿಸಿದ ಸರ್ಕಾರ

2.ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ಅನ್ಯಧರ್ಮೀಯರ ನೇಮಕಕ್ಕೆ ವಿರೋಧ
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು (Hindu Temples) ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ ದಲ್ಲಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಅನ್ಯ ಸಮುದಾಯದವರನ್ನು ನೇಮಕ ಮಾಡಲು ಅವಕಾಶ ನೀಡಿರುವುದು ಸರಿಯಲ್ಲ. ಹೀಗಾಗಿ ವಿಧೇಯಕವನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಆಗ್ರಹಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ದೇವಸ್ಥಾನದ ಆದಾಯ 1 ಕೋಟಿ ಇದ್ದರೆ ಸರ್ಕಾರಕ್ಕೆ 10 ಲಕ್ಷ ರೂ. ಸಿಗುವಂತೆ ವಿಧೇಯಕ!

3 ಮೋದಿ ಬಗ್ಗೆ ಸಿದ್ದರಾಮಯ್ಯ ಟೀಕೆ; ಪಲಾಯನವಾದಿ ಸಿಎಂ ಎಂದ ಬಿಜೆಪಿ
ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಕೇಂದ್ರದ ಅನುದಾನದ ಬಗ್ಗೆ ಪ್ರಸ್ತಾಪವಾಗಿದೆ. ಈ ವಿಷಯವನ್ನು ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಒಕ್ಕೂಟ ವ್ಯವಸ್ಥೆಗೆ ಅಪಾಯ ಎಂದು ಹೇಳಿದ್ದಾರೆ. ಆದರೆ, ಬಿಜೆಪಿ ಸಿದ್ದರಾಮಯ್ಯ ಅವರನ್ನೇ ಪಲಾಯನವಾದಿ ಎಂದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ಅನಧಿಕೃತ ಹುಕ್ಕಾ ಬಾರ್‌ ತೆರೆದ್ರೆ 3 ವರ್ಷ ಜೈಲು; ಮಸೂದೆ ಪಾಸ್‌
ರಾಜ್ಯದಲ್ಲಿ ಇನ್ನು ಹುಕ್ಕಾ ಬಾರ್ (Hookah Bar) ಅನ್ನು ಅನಧಿಕೃತ ನಡೆಸಿದರೆ ಒಂದರಿಂದ ಮೂರು ವರ್ಷ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಇಂಥದ್ದೊಂದು ವಿಧೇಯಕವನ್ನು ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಪಬ್ಲಿಕ್‌ ಪ್ಲೇಸ್‌ನಲ್ಲಿ ಸಿಗರೇಟ್‌ ಸೇದಿದ್ರೆ ಭಾರೀ ದಂಡ!

5. ವಾಟ್ಸಾಪ್‌ ವೆಬ್‌ನಲ್ಲೂ ಚಾಟ್‌ ಲಾಕ್‌ಗೆ ಸೀಕ್ರೆಟ್‌ ಕೋಡ್‌!
ವಾಟ್ಸಾಪ್(WhatsApp), ತನ್ನ ಚಾಟ್ ಲಾಕ್‌ ಫೀಚರ್ ಅನ್ನು ಮತ್ತಷ್ಟು ಸುಧಾರಿಸುವ ಪ್ರಯತ್ನವನ್ನು ಮಾಡುತ್ತಿದೆ(WhatsApp New Feature). ಕೆಲವು ವರದಿಗಳ ಪ್ರಕಾರ, ಇದರ ವೆಬ್‌ ವರ್ಷನ್ ಅಭಿವೃದ್ಧಿಪಡಿಸುತ್ತಿದೆ. ಅಂದರೆ ವೆಬ್‌ನಲ್ಲೂ ಚಾಟ್‌ ಲಾಕ್‌ಗೆ ಅವಕಾಶ ದೊರೆಯಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಮೆದುಳಿಗೆ ಚಿಪ್‌ ಅಳವಡಿಸಿಕೊಂಡ ವ್ಯಕ್ತಿ ಯೋಚನೆಯ ಮೂಲಕವೇ ಮೌಸ್‌ ಅಲ್ಲಾಡಿಸಿದ! ಏನಿದು ಎಲಾನ್‌ ಮಸ್ಕ್‌ ಪ್ರಯೋಗ?
‘ನ್ಯೂರಾಲಿಂಕ್ (Neuralink) ಬ್ರೈನ್ ಚಿಪ್‌ (Brain Chip) ಅಳವಡಿಸಿದ ಮೊದಲ ವ್ಯಕ್ತಿ ಇದೀಗ ಯೋಚನೆಯಿಂದಲೇ ಕಂಪ್ಯೂಟರ್‌ ಪರದೆಯ ಮೇಲಿನ ಕರ್ಸರ್‌ ಅನ್ನು ಚಲಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾನೆʼ ಎಂದು ಟೆಕ್‌ ದೈತ್ಯ ಎಲಾನ್‌ ಮಸ್ಕ್‌ (Elon Musk) ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಹೋಗಿ ಬನ್ನಿ ನಾರಿಮನ್‌ ಸಾಬ್‌, ಕನ್ನಡಿಗರ ಮನಸ್ಸಿನಲ್ಲಿ ನಿಮ್ಮ ನೆನಪು ಸದಾ ಹಸಿರು
ಕಾವೇರಿ ನದಿ ನೀರು ವಿವಾದದಲ್ಲಿ (Cauvery Water Dispute) ಕರ್ನಾಟಕದ ಪರ ಪ್ರಬಲ ವಾದ ಮಂಡಿಸುತ್ತಾ, ಕನ್ನಡಿಗರ ಕಣ್ಮಣಿಯಾಗಿದ್ದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಫಾಲಿ ಸ್ಯಾಮ್‌ ನಾರಿಮನ್‌ (Fali s Nariman) ಅವರ ನಿಧನಕ್ಕೆ ಕನ್ನಡ ನಾಡು ಕಂಬನಿ ಮಿಡಿದಿದೆ. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫಾಲಿ ನಾರಿಮನ್‌ ಅವರು ರಾಜ್ಯಕ್ಕೆ ನೀಡಿದ ಕೊಡುಗೆಯನ್ನು ನೆನಪಿಸಿಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಪಾಕ್‌ನಲ್ಲಿ ಕೊನೆಗೂ ಮೈತ್ರಿ ಸರ್ಕಾರ; ಶೆಹಬಾಜ್‌ ಷರೀಫ್‌ ನೂತನ ಪ್ರಧಾನಿ
ಪಾಕಿಸ್ತಾನದಲ್ಲಿ ಕೆಲ ವರ್ಷಗಳಿಂದ ಉಂಟಾಗಿರುವ ರಾಜಕೀಯ ಅರಾಜಕತೆಯು ಕೊನೆಯಾಗುವ ಲಕ್ಷಣಗಳು ಕಾಣುತ್ತಿವೆ. ಪಾಕಿಸ್ತಾನ ಮುಸ್ಲಿಂ ಲೀಗ್‌-ನವಾಜ್‌ (PML-N) ಹಾಗೂ ಪಾಕಿಸ್ತಾನ ಪೀಪಲ್ಸ್‌ ಪಕ್ಷವು (PPP) ಮೈತ್ರಿ ಮಾಡಿಕೊಂಡಿದ್ದು, ಪಿಎಂಎಲ್‌ಎನ್‌ ಪಕ್ಷದ ಅಧ್ಯಕ್ಷ ಶೆಹಬಾಜ್‌ ಷರೀಫ್‌ (Shehbaz Sharif) ಅವರೇ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಖಚಿತವಾಗಿದೆ. ಇನ್ನು ಪಿಪಿಪಿಯ ಆಸಿಫ್‌ ಜರ್ದಾರಿ ಅವರು ಮತ್ತೆ ದೇಶದ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ವಿರುಷ್ಕಾ ದಂಪತಿಯ ಮಗನ ಹೆಸರು ಅಕಾಯ್‌; ಏನಿದರ ಅರ್ಥ?
ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಹಾಗೂ ನಟಿ ಅನುಷ್ಕಾ ಶರ್ಮಾ (Anushka Sharma) ದಂಪತಿಗೆ ಎರಡನೇ ಮಗು ಜನಿಸಿದೆ. ಫೆಬ್ರವರಿ 15ರಂದು ಗಂಡು ಮಗು ಜನಿಸಿರುವುದಾಗಿ ದಂಪತಿ ಘೋಷಿಸಿದ್ದಾರೆ. ಅನುಷ್ಕಾ ಶರ್ಮಾ ತಮ್ಮ ಇನ್​ಸ್ಟಾಗ್ರಾಮ್ ಖಾತೆ ಮೂಲಕ ಮಗುವಿಗೆ ಅಕಾಯ್ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ. ಹಾಗಿದ್ದರೆ ಅಕಾಯ್‌ ಅಂದರೇನು? ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಈ ತಂಡದ ಆಟಗಾರರು ರಣಜಿ ಟ್ರೋಫಿ ಗೆದ್ದರೆ ಸಿಗಲಿದೆ bmw ಕಾರು!
ಹೈದರಾಬಾದ್​ ತಂಡದ ಆಟಗಾರರಿಗೆ ಇಲ್ಲಿನ ಕ್ರಿಕೆಟ್ ಅಸೋಷಿಯೇಷನ್(HCA) ಅಧ್ಯಕ್ಷ(HCA president) ಜಗನ್ ಮೋಹನ್ ರಾವ್(Jagan Mohan Rao) ಅವರು ಬಂಪರ್​ ಆಫರ್​ ನೀಡಿದ್ದಾರೆ. ತಂಡವು ಮುಂದಿನ ಮೂರು ವರ್ಷಗಳಲ್ಲಿ ರಣಜಿ ಟ್ರೋಫಿ (Ranji Trophy) ಗೆದ್ದರೆ ಪ್ರತಿಯೊಬ್ಬ ಆಟಗಾರನಿಗೆ BMW ಕಾರು(BMW car) ಮತ್ತು 1 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ದೇಶ

Congress Party: ಕಾಂಗ್ರೆಸ್‌ ಖಾತೆಗಳಿಂದ 65 ಕೋಟಿ ರೂ. ವಿತ್‌ಡ್ರಾ ಮಾಡಿದ ಐಟಿ ಇಲಾಖೆ!

Congress Party: ತೆರಿಗೆ ಪಾವತಿಸಿಲ್ಲ ಎಂದು ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ ಪಕ್ಷದ ಖಾತೆಗಳಿಂದ 60 ಕೋಟಿ ರೂ. ವಿತ್‌ಡ್ರಾ ಮಾಡಿದ್ದು, ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

VISTARANEWS.COM


on

IT department has withdrawn 65 crore rupees from the Congress party accounts
Koo

ನವದೆಹಲಿ: ತೆರಿಗೆ ಆದಾಯ ಪಾವತಿ (Income Tax) ವಿಷಯವು ಕೋರ್ಟ್‌ನಲ್ಲಿದ್ದಾಗ್ಯೂ ಆದಾಯ ತೆರಿಗೆ ಇಲಾಖೆಯು (IT Department) ಕಾಂಗ್ರೆಸ್ ಪಕ್ಷದ (Congress party) ವಿವಿಧ ಖಾತೆಗಳಿಂದ 65 ಕೋಟಿ ರೂಪಾಯಿ ವಿತ್‌ಡ್ರಾ (Crores Rupees Withdrawn) ಮಾಡಿಕೊಂಡಿದೆ ಎಂದು ಪಕ್ಷದ ಖಜಾಂಚಿಯಾಗಿರುವ ಅಜಯ್ ಮಾಕೇನ್ (Ajay Maken) ಅವರು ಹೇಳಿದ್ದಾರೆ. ಆದಾಯ ತೆರಿಗೆ ಇಲಾಖೆಯ ವಿರುದ್ದ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರೀಯ ರಾಜಕೀಯ ಪಕ್ಷಗಳು ಆದಾಯ ತೆರಿಗೆ ಪಾವತಿಸುವುದು ಸಾಮಾನ್ಯವೇ? ಇಲ್ಲ. ಬಿಜೆಪಿ ಆದಾಯ ತೆರಿಗೆ ಪಾವತಿಸುತ್ತದೆಯೇ? ಇಲ್ಲ. ಹಾಗಾದರೆ ಕಾಂಗ್ರೆಸ್ ಪಕ್ಷವು ₹210 ಕೋಟಿಗಳ ತೆರಿಗೆ ಕಟ್ಟಬೇಕು ಎಂಬ ಬೇಡಿಕೆಯನ್ನು ಏಕೆ ಎದುರಿಸುತ್ತಿದೆ? ಇಂದಿನ ಐಟಿಎಟಿ ಪ್ರಕ್ರಿಯೆಯಲ್ಲಿ, ನಾವು ನಮ್ಮ ವಾದವನ್ನು ಮಂಡಿಸಿದ್ದೇವೆ. ವಿಚಾರಣೆಯನ್ನು ನಾಳೆ ಮುಂದುವರಿಸಲು ನಿರ್ಧರಿಸಲಾಗಿದೆ. ಐವೈಸಿ ಮತ್ತು ಎನ್ಎಸ್‌ಯುಐ ಮೂಲಕ ಕ್ರೌಡ್‌ಫಂಡಿಂಗ್ ಮತ್ತು ಸದಸ್ಯತ್ವ ಮೂಲಕ ಸೇರಿದಂತೆ ತಳಮಟ್ಟದ ಪ್ರಯತ್ನಗಳ ಮೂಲಕ ಹಣವನ್ನು ಸಂಗ್ರಹಿಸಲಾಗಿದೆ. ಈ ಹಣಕ್ಕೆ ತೆರಿಗೆ ಕಟ್ಟಬೇಕು ಎಂಬುದು ಈ ಪರಿಸ್ಥಿತಿಯು ಪ್ರಜಾಪ್ರಭುತ್ವದ ಸ್ಥಿತಿಯ ಬಗ್ಗೆ ನಿರ್ಣಾಯಕ ಪ್ರಶ್ನೆಯನ್ನು ಎತ್ತುತ್ತದೆ. ಇದು ಬೆದರಿಕೆಯಲ್ಲಿದೇ ಮತ್ತೇನು ಎಂದು ಅಜಯ್ ಮಾಕೇನ್ ಅವರು ಪ್ರಶ್ನಿಸಿದ್ದಾರೆ.

ನವದೆಹಲಿಯ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಆದಾಯ ತೆರಿಗೆಯಿಂದ ಎಷ್ಟು ಮೊತ್ತವನ್ನು ಹಿಂಪಡೆಯಲಾಗಿದೆ ಎಂಬ ವಿವರಗಳನ್ನುಅಜಯ್ ಮಾಕೇನ್ ಅವರು ಹಂಚಿಕೊಂಡಿದ್ದಾರೆ.

ಕಾಂಗ್ರೆಸ್‌ನ ಮೂರು ಬ್ಯಾಂಕ್ ಖಾತೆಗಳಿಂದ 60.25 ಕೋಟಿಯನ್ನು ಡಿಮ್ಯಾಂಡ್ ಡ್ರಾಫ್ಟ್‌ಗಳ ರೂಪದಲ್ಲಿ ತೆಗೆದುಕೊಳ್ಳಲಾಗಿದೆ, ಆದರೆ ಭಾರತೀಯ ಯುವ ಕಾಂಗ್ರೆಸ್‌ನ ಖಾತೆಯಿಂದ 5 ಕೋಟಿ ಮೊತ್ತವನ್ನು ಹಿಂಪಡೆಯಲಾಗಿದೆ ಎಂದು ಅಜಯ್ ಅವರು ತಿಳಿಸಿದ್ದಾರೆ.

ದಿಲ್ಲಿಯ ಕೆ ಜಿ ಮಾರ್ಗ್‌ನ ಬ್ಯಾಂಕ್ ಆಫ್ ಬರೋಡಾ ಶಾಖೆಯ ಖಾತೆಯಿಂದ 17.65 ಕೋಟಿ ರೂ, ದಿಲ್ಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 41.85 ಕೋಟಿ ರೂ. ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಮತ್ತೊಂದು ಖಾತೆಯಿಂದ 74.62 ಲಕ್ಷ ರೂಪಾಯಿ ಆದಾಯ ತೆರಿಗೆ ಇಲಾಖೆ ಪಡೆದುಕೊಂಡಿದೆ ಎಂಬ ಮಾಹಿತಿಯನ್ನು ಹಂಚಿಕೊಂಡದ್ದಾರೆ.

₹210 ಕೋಟಿ ಆದಾಯ ತೆರಿಗೆ ಬೇಡಿಕೆಗೆ ಸಂಬಂಧಿಸಿದಂತೆ ಫೆಬ್ರವರಿ 16 ರಂದು ಕಾಂಗ್ರೆಸ್‌ನ ಪ್ರಮುಖ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ನಂತರ ಆದಾಯ ತೆರಿಗೆ ಇಲಾಖೆಯು ಬ್ಯಾಂಕ್‌ಗಳಿಂದ ಹಣವನ್ನು ಹಿಂಪಡೆದಿರುವ ಆರೋಪ ಹೊರಬಿದ್ದಿದೆ. ಐಟಿ ಮೇಲ್ಮನವಿ ನ್ಯಾಯಮಂಡಳಿಯು ಗುರುವಾರ ನಿಗದಿತ ವಿಚಾರಣೆಯ ಬಾಕಿ ಉಳಿದಿರುವ ಮುಖ್ಯ ಖಾತೆಯನ್ನು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿತು.

ಈ ಸುದ್ದಿಯನ್ನೂ ಓದಿ: Congress Party: ಪಕ್ಷದ ಬ್ಯಾಂಕ್ ಖಾತೆ ಸ್ಥಗಿತ; ಸರ್ಕಾರದ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲ

Continue Reading
Advertisement
shishya sweekara Mahotsav in shri swarnavalli maha samsthana matha dharmasabhe
ಉತ್ತರ ಕನ್ನಡ7 mins ago

Sirsi News: ಅಪಕಾರ ಮಾಡಿದವರಿಗೂ ಉಪಕಾರ ಬಯಸುವ ಸದ್ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಿ: ಶ್ರೀವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ

Gurpatwant Singh Pannun
ಕ್ರೀಡೆ13 mins ago

IND vs ENG: ರಾಂಚಿ ಟೆಸ್ಟ್​ ಪಂದ್ಯಕ್ಕೆ ಖಲಿಸ್ತಾನಿ ಉಗ್ರನಿಂದ ಬೆದರಿಕೆ; ಸ್ಟೇಡಿಯಂಗೆ ಬಿಗಿ ಭದ್ರತೆ!

Hello-minister-N-chaluvarayaswamy-in-vistara-news-2
ಕರ್ನಾಟಕ26 mins ago

Krishi Bhagya Scheme: 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಕೃಷಿ ಭಾಗ್ಯ ಮರು ಜಾರಿ: ಎನ್. ಚಲುವರಾಯಸ್ವಾಮಿ

bike accident
ಪ್ರಮುಖ ಸುದ್ದಿ1 hour ago

Road Accident: ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ; ಬಸ್-ಬೈಕ್ ಡಿಕ್ಕಿಯಾಗಿ ನಾಲ್ವರ ದುರ್ಮರಣ

vistara top ten
ಟಾಪ್ 10 ನ್ಯೂಸ್2 hours ago

VISTARA TOP 10 NEWS: ನಾಡಗೀತೆಯಲ್ಲೂ ಸರಕಾರ ಎಡವಟ್ಟು ಪಬ್ಲಿಕ್‌ ಪ್ಲೇಸಲ್ಲಿ ಸೇದಬಾರದು ಸಿಗರೇಟು.. ಮತ್ತು ಇತರ ಸುದ್ದಿಗಳು

Vamshi Krishna hits six sixes
ಕ್ರೀಡೆ2 hours ago

C K Nayudu Trophy: ಒಂದೇ ಓವರ್​ನಲ್ಲಿ 6 ಸಿಕ್ಸರ್ ಬಾರಿಸಿದ ವಂಶಿ ಕೃಷ್ಣ; ವಿಡಿಯೊ ವೈರಲ್​

IT department has withdrawn 65 crore rupees from the Congress party accounts
ದೇಶ2 hours ago

Congress Party: ಕಾಂಗ್ರೆಸ್‌ ಖಾತೆಗಳಿಂದ 65 ಕೋಟಿ ರೂ. ವಿತ್‌ಡ್ರಾ ಮಾಡಿದ ಐಟಿ ಇಲಾಖೆ!

Minister Madhu Bangarappa inauguration by Beneficiaries convention of guarantee schemes in Soraba
ಶಿವಮೊಗ್ಗ2 hours ago

Shivamogga News: ಸೊರಬದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಚಾಲನೆ

No water supply
ಬೆಂಗಳೂರು2 hours ago

No Water Supply: ಫೆ.27, 28ರಂದು ಬೆಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ

Rahul Gandhi used Aishwarya Rai name to criticize Modi Says Sona Mohapatra
ದೇಶ2 hours ago

Sona Mohapatra: ಮೋದಿ ಟೀಕಿಸಲು ಐಶ್ವರ್ಯಾ ಹೆಸರು ಬಳಕೆ, ರಾಹುಲ್ ಗಾಂಧಿ ವಿರುದ್ಧ ಆಕ್ರೋಶ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for february 21 2024
ಭವಿಷ್ಯ18 hours ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ2 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ3 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ4 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ4 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

read your daily horoscope predictions for february 17 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಸೀಕ್ರೆಟ್‌ ವಿಷ್ಯವನ್ನು ರಿವೀಲ್‌ ಮಾಡಿದ್ರೆ ಅಪಾಯ ಗ್ಯಾರಂಟಿ!

Karnataka Budget Session 2024 siddaramaiah use cinema Lines
ಸಿನಿಮಾ5 days ago

Karnataka Budget Session 2024: ಡಾಲಿ ಧನಂಜಯ್‌ ಬರೆದ ಸಾಲುಗಳು ಬಜೆಟ್‌ನಲ್ಲಿ ಹೈಲೈಟ್‌!

read your daily horoscope predictions for february 16 2024
ಭವಿಷ್ಯ6 days ago

Dina Bhavishya : ಈ ಹಿಂದೆ ಹಣ ಹೂಡಿಕೆ ಮಾಡಿದ್ದರೆ ಇಂದು ಈ ರಾಶಿಯವರಿಗೆ ಡಬಲ್‌ ಲಾಭ

Siddaramaiah
ರಾಜಕೀಯ6 days ago

Karnataka Budget Session 2024: ಬಿಜೆಪಿಯವರು ಗೂಂಡಾಗಳು ಎಂದ ಸಿಎಂ; ತೊಡೆ ತಟ್ಟಿದ್ದು ನಾವಾ – ನೀವಾ ಎಂದ ವಿಪಕ್ಷ!

ಟ್ರೆಂಡಿಂಗ್‌