Site icon Vistara News

HP Dragonfly G4: ಹೈಬ್ರಿಡ್ ಕೆಲಸಕ್ಕೆ ಎಚ್‌ಪಿಯಿಂದ ಹೊಸ ಡ್ರ್ಯಾಗನ್ ಫ್ಲೈ ಲ್ಯಾಪ್ ಟಾಪ್ ಬಿಡುಗಡೆ

HP Dragonfly G4

ಬೆಂಗಳೂರು, ಕರ್ನಾಟಕ: ಹೈಬ್ರಿಡ್ ಕಾರ್ಯ ನಿರ್ವಹಣೆಯ ( Hybrid Work) ವಾತಾವರಣದಲ್ಲಿ ಕೆಲಸ ಮಾಡುವ ಪ್ರೀಮಿಯಂ ಬಳಕೆದಾರ ಅನುಭವವನ್ನು ನೀಡುವ ಎಚ್‌ಪಿ ಡ್ರ್ಯಾಗನ್ ಫ್ಲೈ ಜಿ4(HP Dragonfly G4) ಲ್ಯಾಪ್ ಟಾಪ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 1 ಕೆಜಿಗಿಂತಲೂ ಕಡಿಮೆ ತೂಕದ ಈ ಹೊಸ ಡ್ರ್ಯಾಗನ್ ಫ್ಲೈ ಲ್ಯಾಪ್ ಟಾಪ್ (Lap Top) 13ನೇ ಪೀಳಿಗೆಯ ಇಂಟೆಲ್® ಕೋರ್™ ಪ್ರೊಸೆಸರ್‌ನಿಂದ ಚಾಲಿತವಾಗಲಿವೆ. ಈ ಮೂಲಕ ಮೊಬೈಲ್ ಟೆಕ್-ಫಾರ್ವರ್ಡ್ ನಾಯಕರ ಅಗತ್ಯತೆಗಳನ್ನು ಪೂರೈಸಲಿದೆ. ಎಚ್‌ಪಿ ಡ್ರ್ಯಾಗನ್ ಫ್ಲೈ ಜಿ4 ಉತ್ಪಾದಕತೆ, ಸಹಯೋಗ, ಭದ್ರತೆ ಮತ್ತು ಸುಸ್ಥಿರತೆಗೆ ಆದ್ಯತೆ ನೀಡುತ್ತದೆ. ವಿಶ್ವಾಸಾರ್ಹ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯ ಬ್ಯುಸಿನೆಸ್ ಲ್ಯಾಪ್ ಟ್ಯಾಪ್‌ಗಳಿಗೆ ಹೊಸ ಮಾನದಂಡವನ್ನು ಹೊಂದಿಸುವ ರೀತಿಯಲ್ಲಿ ವಿನ್ಯಾಸಗೊಂಡಿದೆ(HP India).

ಈ ಬಗ್ಗೆ ಮಾತನಾಡಿದ ಎಚ್ ಪಿ ಇಂಡಿಯಾದ ಹಿರಿಯ ನಿರ್ದೇಶಕ (ಪರ್ಸನಲ್ ಸಿಸ್ಟಮ್ಸ್) ವಿಕ್ರಂ ಬೇಡಿ ಅವರು, “ಹೈಬ್ರಿಡ್ ಕಾರ್ಯಶೈಲಿಯು ಭಾರತದಲ್ಲಿ ವಾಸ್ತವ ರೂಪದಲ್ಲಿದೆ. ಕಾರ್ಯನಿರ್ವಹಣೆ ಮತ್ತು ಸಮಯದ ಅಂತರವನ್ನು ಕಡಿಮೆಗೊಳಿಸುವ ಅವಕಾಶಗಳನ್ನು ಗುರುತಿಸಿ ಎಚ್ ಪಿ ಭಾರತದ ಮಾರುಕಟ್ಟೆಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಈ ಹೊಸ ಹೊಸ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಎಲ್ಲಿ ಬೇಕಾದರೂ, ಯಾವುದೇ ಸಮಯದಲ್ಲೂ, ಯಾವುದೇ ಹೈಬ್ರಿಡ್ ಕೆಲಸಗಳ ಪರಿಹಾರಗಳನ್ನು ನೀಡುವುದರೊಂದಿಗೆ ತಡೆರಹಿತ ಕೆಲಸ ಕಾರ್ಯಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಮತ್ತು ನಾವೀನ್ಯತೆಯನ್ನು ನೀಡುತ್ತಾ ಬರುತ್ತಿದೆ. ಈ ಹೊಸ ಎಚ್ ಪಿ ಡ್ರ್ಯಾಗನ್ ಫ್ಲೈ ಜಿ4 ಲ್ಯಾಪ್ ಟಾಪ್ ತಡೆರಹಿತ ಮತ್ತು ಉತ್ಪಾದಕತೆಯ ಹೈಬ್ರಿಡ್ ಕೆಲಸದ ವಾತಾವರಣವನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ವ್ಯವಹಾರಸ್ಥರನ್ನು ಸಬಲೀಕರಣಗೊಳಿಸುತ್ತದೆ ಎಂಬ ವಿಶ್ವಾಸ ನಮ್ಮದಾಗಿದೆ’’ ಎಂದರು.

HP Dragonfly G4: ಹೈಬ್ರಿಡ್ –ರೆಡಿ ಡಿಸೈನ್

-ಅತ್ಯಂತ ಹಗುರ ಮತ್ತು ಪೋರ್ಟಬಲ್, 1 ಕೆಜಿಗಿಂತ ಕಡಿಮೆ ತೂಕ, ಆನ್-ದಿ-ಗೋ ವೃತ್ತಿಪರರ ಸೂಕ್ತ ಸಂಗಾತಿ
-ನ್ಯಾಚುರಲ್ ಸಿಲ್ವರ್ ಅಥವಾ ಸ್ಲೇಟ್ ಬ್ಲೂ ಬಣ್ಣಗಳಲ್ಲಿ ಸ್ಟೈಲಿಶ್ ಆದ ಲ್ಯಾಪ್ ಟಾಪ್ ಲಭ್ಯ
-ಆಯ್ಕೆಯ ಟಚ್ ಸ್ಕ್ರೀನ್ ವೈಶಿಷ್ಟ್ಯತೆಯೊಂದಿಗೆ ಸುಧಾರಿತ ನ್ಯಾವಿಗೇಶನ್
-ಎಚ್ ಪಿ ಶ್ಯೂರ್ ವ್ಯೂ ಕೀ, ಹೊಂದಾಣಿಕೆ ಮಾಡಬಹುದಾದ ಬ್ಯಾಕ್ ಲೈಟ್ ಹೊಳಪು ಮತ್ತು ದೊಡ್ಡ ಟಚ್ ಪ್ಯಾಡ್ ನೊಂದಿಗೆ ಅರ್ಥಗರ್ಭಿತ ಮತ್ತು ಕಸ್ಟಮೈಸ್ಡ್ ಕೀಬೋರ್ಡ್ ಗಳ ಆಯ್ಕೆಗಳು
-ಸ್ವಚ್ಛ ಮತ್ತು ಸರಳ ಪೋರ್ಟ್ ಕಾನ್ಫಿಗರೇಶನ್
-ಟಾಪ್ ಕವರ್, ಪಾಮ್ ರೆಸ್ಟ್ ಕವರ್ ಮತ್ತು ಬಾಟಂ ಕವರ್ ನಲ್ಲಿ ಶೇ.90 ರಷ್ಟು ಮರುಬಳಕೆಯ ಮೆಗ್ನೀಸಿಯಂ ಹಾಗೂ ಶೇ.100 ರಷ್ಟು ಸುಸ್ಥಿರವಾದ ಔಟರ್ ಬಾಕ್ಸ್ ಮತ್ತು ಪ್ಯಾಕೇಜಿಂಗ್

HP Dragonfly G4 : ವಿಶೇಷಗಳೇನು?

-5MP ಕ್ಯಾಮೆರಾದ 88° ಫೀಲ್ಡ್-ಆಫ್-ವ್ಯೂ ಜೊತೆಗೆ ವಿಶಾಲವಾದ ಶಾಟ್ (ದೃಶ್ಯ)ಗಳನ್ನು ಸೆರೆಹಿಡಿಯಬಹುದಾಗಿದೆ. ಅದೇ ರೀತಿ ನ್ಯಾಚುರಲ್ ಟೋನ್ ತಂತ್ರಜ್ಞಾನ ಇರುವುದರಿಂದ ಯಾವುದೇ ಬೆಳಕಿನಲ್ಲಿ ಉತ್ತಮವಾಗಿ ಕಾಣುವಂತೆ ಮಾಡುತ್ತದೆ
-ಹೊಂದಾಣಿಕೆಯ ಬ್ಯಾಕ್ ಗ್ರೌಂಡ್ ಬ್ಲರ್ ನೊಂದಿಗೆ ಚಿತ್ರಗಳನ್ನು ಕಸ್ಟಮೈಸ್ ಮಾಡಿಕೊಳ್ಳುವ ಅವಕಾಶ
-ಮಲ್ಟಿ-ಕ್ಯಾಮೆರಾ ಅನುಭವ, ಡ್ಯುಯೆಲ್ ವೀಡಿಯೋ ಸ್ಟ್ರೀಮ್ ಗಳು ಮತ್ತು ಕ್ಯಾಮೆರಾ ಸ್ವಿಚಿಂಗ್ ಗೆ ಬೆಂಬಲ ನೀಡುತ್ತದೆ.
-ಆಟೋ ಕ್ಯಾಮೆರಾ ಸೆಲೆಕ್ಟ್ ಬಳಕೆದಾರರ ಮುಖವನ್ನು ಅತ್ಯಂತ ಚಾಕಚಕ್ಯತೆಯಿಂದ ಟ್ರ್ಯಾಕ್ ಮಾಡುತ್ತದೆ ಮತ್ತು ಯಾವುದೇ ಅಡ್ಡಿ ಇಲ್ಲದೇ ವೀಡಿಯೊ ಅನುಭವವನ್ನು ನೀಡಲು ಸೂಕ್ತವಾದ ಕ್ಯಾಮೆರಾವನ್ನು ಆಯ್ಕೆ ಮಾಡಿಕೊಳ್ಳುವ ವೈಶಿಷ್ಟ್ಯತೆಯನ್ನು ಹೊಂದಿದೆ
-ಎಚ್ ಪಿ ಕೀಸ್ಟೋನ್ ಕರೆಕ್ಷನ್ ನೊಂದಿಗೆ ವೈಟ್ ಬೋರ್ಡ್ ಗಳು ಅಥವಾ ಭೌತಿಕ ದಾಖಲೆಗಳನ್ನು ಸುಲಭವಾಗಿ ಹಂಚಿಕೊಳ್ಳಬಹುದು
-ಎಚ್ ಪಿ ಬೀ ರೈಟ್ ಬ್ಯಾಕ್ ಅನ್ನು ಬಳಸಿಕೊಂಡು ಮೀಟಿಂಗ್ ಗಳಿಗೆ ಯಾವುದೇ ರೀತಿಯಲ್ಲೂ ಅಡ್ಡಿಯಾಗದ ರೀತಿಯಲ್ಲಿ ವಿರಾಮ ತೆಗೆದುಕೊಳ್ಳಬಹುದು. ಈ ಸಂದರ್ಭದಲ್ಲಿ ನಿಮ್ಮ ವೀಡಿಯೊ ಫೀಡ್ ಅನ್ನು ಸ್ಟಿಲ್ ಪಿಕ್ಚರ್ ಆಗಿ ಬದಲಾಯಿಸಿಕೊಳ್ಳಬಹುದು
-ಬ್ಯಾಂಗ್ & ಒಲುಫ್ಸೆನ್ ಜೊತೆಗೆ ಪ್ರೀಮಿಯಂ ಆಡಿಯೋದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದಾಗಿದೆ
-3 ಮೀಟರ್ ವ್ಯಾಪ್ತಿಯಲ್ಲಿ ಎಚ್ ಪಿ ಎಐ-ಆಧಾರಿತ ನಾಯ್ಸ್ ರಿಡಕ್ಷನ್ ಮತ್ತು ಡೈನಾಮಿಕ್ ವಾಯ್ಸ್ ಲೆವೆಲ್ಲಿಂಗ್ ನೊಂದಿಗೆ ವಾಯ್ಸ್ ಸ್ಪಷ್ಟತೆಯನ್ನು ಗರಿಷ್ಠಗೊಳಿಸುತ್ತದೆ

ಎಚ್‌ಪಿ ಡ್ರಾಗನ್‌ಫ್ಲೈ ಜಿ4‌ನಿಂದ ಹೈಬ್ರಿಡ್ ಉತ್ಪಾದಕತೆಗೆ ಹೆಚ್ಚು ಶಕ್ತಿ

-ತಡೆರಹಿತವಾದ ಮಲ್ಟಿ ಟಾಸ್ಕಿಂಗ್ ಮತ್ತು ಉತ್ಪಾದಕತೆಗಾಗಿ ಐಚ್ಛಿಕವಾದ vPro®2 ಮತ್ತು Windows 11 Pro[i] ಜೊತೆಗೆ Core™ i7ವರೆಗೆ 13 ನೇ ತಲೆಮಾರಿನ ಇಂಟೆಲ್ ಪ್ರೊಸೆಸರ್ ನೊಂದಿಗೆ ಶಕ್ತಿಯುತವಾದ ಕಾರ್ಯಕ್ಷಮತೆಯನ್ನು ಹೊಂದಿದೆ
-ಎಚ್ ಪಿ ಸ್ಮಾರ್ಟ್ ಸೆನ್ಸ್ ಮತ್ತು ಸಿಸ್ಟಂನ ನಿಯಂತ್ರಣದೊಂದಿಗೆ ಪಿಸಿಯ ಕಾರ್ಯಕ್ಷಮತೆಯನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು
-ಇಂಟಲಿಜೆಂಟ್ ಹೈಬರ್ನೇಟ್ ಮತ್ತು ಒಎಲ್ಇಡಿ ಪವರ್ ಸೇವಿಂಗ್ ಮೋಡ್ ನೊಂದಿಗೆ ಬ್ಯಾಟರಿ ಅವಧಿಯನ್ನು ಗರಿಷ್ಠಗೊಳಿಸಿಕೊಳ್ಳಬಹುದು
-ಎಚ್ ಪಿ ಆಟೋ ಲಾಕ್ ಮತ್ತು ಅವೇಕ್ ಜೊತೆಗೆ ಭದ್ರತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಮತ್ತು ಎಚ್ ಪಿ ಕಾಂಟೆಕ್ಸ್ಟ್ ಅವೇರ್ ಜೊತೆಗೆ ವೈಯಕ್ತೀಕರಿಸಿದ ಪಿಸಿ ಅನುಭವವನ್ನು ಪಡೆಯಬಹುದು
-ಎಚ್ ಪಿ ವೂಲ್ಫ್ ಸೆಕ್ಯುರಿಟಿಯಿಂದ ಎಚ್ ಪಿ ಶ್ಯೂರ್ ಸ್ಟಾರ್ಟ್ ಅನ್ನು ಸೆಲ್ಫ್ –ಹೀಲಿಂಗ್ ಬಿಐಒಎಸ್ ಗೆ ಪ್ರಯೋಜನ ಪಡೆದುಕೊಳ್ಳಲು ಅವಕಾಶವಿದೆ. ಇದಲ್ಲದೇ, ಐಟಿ ಇಂಟರ್ ವೆನ್ಷನ್ ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದೇ ತ್ವರಿತವಾಗಿ ಒಎಸ್ ಪಡೆದುಕೊಳ್ಳಲು ಎಚ್ ಪಿ ಶ್ಯೂರ್ ರಿಕವರ್ ಜೆನ್4 ಸಹಾಯ ಮಾಡಲಿದೆ.
-ಎಚ್ ಪಿ ಡ್ರ್ಯಾಗನ್ ಫ್ಲೈ ಜಿ4 ನ ಬೆಲೆ 2,20,000 ರೂಪಾಯಿಗಳಿಂದ ಆರಂಭವಾಗಲಿದ್ದು, ಎಲ್ಲಾ ಎಚ್ ಪಿ ಆನ್ ಲೈನ್ ಸ್ಟೋರ್ ಗಳು ಮತ್ತು ಎಚ್ ಪಿ ವರ್ಲ್ಡ್ ಸ್ಟೋರ್ ಗಳಲ್ಲಿ ಲಭ್ಯವಿದೆ.

ಈ ಸುದ್ದಿಯನ್ನೂ ಓದಿ: ಎಚ್‌ಪಿ 14, ಎಚ್‌ಪಿ 15 ಲ್ಯಾಪ್‌ಟಾಪ್ ಲಾಂಚ್; ಪ್ರೀಮಿಯಂ ಫೀಚರ್ಸ್ ಹೇಗಿವೆ?

ಎಚ್‌ಪಿ ಡ್ರಾಗನ್‌ಫ್ಲೈ ಜಿ4 ಲ್ಯಾಪ್‌ಟ್ಯಾಪ್ ಪ್ರಮುಖಾಂಶಗಳು

-ಅತ್ಯಂತ ಹಗುರ ಮತ್ತು ಸುಸ್ಥಿರತೆಯ ಎಚ್ ಪಿ ಡ್ರ್ಯಾಗನ್ ಫ್ಲೈ ತೂಕ 1 ಕೆಜಿಗಿಂತ ಕಡಿಮೆಯಿಂದ ಆರಂಭವಾಗುತ್ತದೆ. ಶೇ.90 ರಷ್ಟು ಮರುಬಳಕೆಯ ಮೆಗ್ನೀಸಿಯಂ ಹಾಗೂ ಡಿವಿಡಿಗಳಿಂದ ಶೇ.50 ರಷ್ಟು ಪ್ಲಾಸ್ಟಿಕ್ ಕೀಕ್ಯಾಪ್ಸ್ ಗಳ ಬಳಕೆ ಮತ್ತು ಸ್ಪೀಕರ್ ಗಳಿಗೆ ಶೇ.5 ರಷ್ಟು ಓಶನ್ –ಬೌಂಡ್ ಪ್ಲಾಸ್ಟಿಕ್ ಅನ್ನು ಬಳಸಲಾಗಿದೆ
-13 ನೇ ಪೀಳಿಗೆಯ ಇಂಟೆಲ್ ಕೋರ್ ಪ್ರೊಸೆಸರ್ ನಿಂದ ಚಾಲಿತ. ಯಾವುದೇ ಕೆಲಸದ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ
-ವಿಶ್ವದ ಮೊದಲ ಬ್ಯುಸಿನೆಸ್ ನೋಟ್ ಬುಕ್ ಇದು. ಏಕಕಾಲಕ್ಕೆ ಎರಡು ಕ್ಯಾಮೆರಾಗಳಿಗೆ ಬೆಂಬಲ ನೀಡುತ್ತದೆ
-ಸುಲಭವಾಗಿ ಚಲನೆ ಮಾಡಬಹುದು ಮತ್ತು ಎಚ್ ಪಿ ಆಟೋ ಫ್ರೇಂ ಮೂಲಕ ವೀಡಿಯೋ ಕಾಲ್ ಗಳನ್ನು ವೀಕ್ಷಿಸಬಹುದು
-ಹಿನ್ನೆಲೆಯಲ್ಲಿನ ಶಬ್ಧವನ್ನು ನಿಯಂತ್ರಿಸಬಲ್ಲ ಎಚ್ ಪಿ ಯ ಎಐ –ಆಧಾರಿತ ನಾಯ್ಸ್ ರಿಡಕ್ಷನ್ ನೊಂದಿಗೆ ಉನ್ನತೀಕರಿಸಿದ ಕಾನ್ಫರೆನ್ಸ್ ಕಾಲ್ ಅನುಭವ ಪಡೆಯಬಹುದು.
-ಎಚ್ ಪಿ ಡೈನಾಮಿಕ್ ವಾಯ್ಸ್ ಲೆವೆಲ್ಲಿಂಗ್ ನೊಂದಿಗೆ ಸುಸಜ್ಜಿತಗೊಂಡಿರುವ ಲ್ಯಾಪ್ ಟಾಪ್ ಸ್ವಯಂಚಾಲಿತವಾಗಿ 3 ಮೀಟರ್ ಗಳ ವ್ಯಾಪ್ತಿಯಲ್ಲಿ ಮೈಕ್ರೋಫೋನ್ ಗಳ ಧ್ವನಿಯನ್ನು ಗರಿಷ್ಠಗೊಳಿಸುತ್ತದೆ
-ಯಾವುದೇ ಜಾಗದಲ್ಲಿ ಕೆಲಸದ ಉತ್ತಮ ಅನುಭವವನ್ನು ಖಾತರಿಪಡಿಸಲು ಎಚ್ ಪಿ ವೂಲ್ಫ್ ಸೆಕ್ಯೂರಿಟಿ ನೆರವಾಗಲಿದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version