Site icon Vistara News

Swine Fever: ಹಂದಿ ಜ್ವರಕ್ಕೆ ಭಾರತದ ಮೊದಲ ಲಸಿಕೆ ಅಭಿವೃದ್ಧಿಪಡಿಸಿದ ಐಐಟಿ ಗುವಾಹಟಿ

Swine Fever

ಬೆಂಗಳೂರು: ಹಂದಿಗಳಿಗೆ ಬರುವ ಜ್ವರಕ್ಕೆ (Swine Fever) ಭಾರತದ ಮೊದಲ ಮರುಸಂಯೋಜಕ ಲಸಿಕೆಯನ್ನು ಐಐಟಿ ಗುವಾಹಟಿ (IIT Guwahati) ಅಭಿವೃದ್ಧಿ ಮಾಡಿದೆ. ಅಸ್ಸಾಂ ಕೃಷಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಲಸಿಕೆಯನ್ನು ತಯಾರಿಸಲಾಗಿದೆ. ಸಾಂಕ್ರಾಮಿಕ ಹಂದಿ ಜ್ವರವು ರಾಷ್ಟ್ರಾದ್ಯಂತ, ವಿಶೇಷವಾಗಿ ಈಶಾನ್ಯ ಮತ್ತು ಬಿಹಾರ, ಕೇರಳ, ಪಂಜಾಬ್, ಹರಿಯಾಣ ಮತ್ತು ಗುಜರಾತ್​ನಲ್ಲಿ ಹೆಚ್ಚಾಗಿವೆ. ಹೀಗಾಗಿ ಲಸಿಕೆಯನ್ನು ಕಂಡುಕೊಳ್ಳಲಾಗಿದೆ.

ಐಐಟಿ ಗುವಾಹಟಿ ಅಸ್ಸಾಂ ಕೃಷಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಲಸಿಕೆ ಅಭಿವೃದ್ಧಿಪಡಿಸಲಾಗಿದೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಲಸಿಕೆಯು ಹೊಸ ಮಾದರಿಯ ರಿವರ್ಸ್ ಜೆನೆಟಿಕ್ಸ್ ಮೂಲಕ ತಯಾರಿಸಲಾಗಿದೆ ಎಂದು ಅದು ಹೇಳಿದೆ, “ಈ ವಿಧಾನವು ತ್ವರಿತ ಮತ್ತು ಕಡಿಮೆ ವೆಚ್ಚದ ಪರಿಣಾಮಕಾರಿ ರೋಗನಿರೋಧಕ ಲಸಿಕೆಯ ಅಭಿವೃದ್ದಿಗೆ ಪೂರಕವಾಗಿದೆ.
ಈ ತಂತ್ರಜ್ಞಾನ ಪ್ರಸ್ತುತ ಲಸಿಕೆಯ ಕೊರತೆಯಿರುವ ಭಾರತಕ್ಕೆ ಈ ರೋಗದ ವಿರುದ್ಧದ ಹೋರಾಟದಲ್ಲಿ ವಿನೂತನ ಮೈಲುಗಲ್ಲಾಗಿದೆ ಎಂದು ಐಐಟಿ ಗುವಾಹಟಿ ಹೇಳಿದೆ.

2019ರಲ್ಲಿ ಆರಂಭಗೊಂಡ ಯೋಜನೆ

ಐಐಟಿ ಗುವಾಹಟಿಯ ಜೈವಿಕ ವಿಜ್ಞಾನ ಮತ್ತು ಜೈವಿಕ ಎಂಜಿನಿಯರಿಂಗ್ ವಿಭಾಗದ ಸಂಶೋಧಕರು ಮತ್ತು ಗುವಾಹಟಿಯ ಅಸ್ಸಾಂ ಕೃಷಿ ವಿಶ್ವವಿದ್ಯಾಲಯದ ಸಂಶೋಧಕರ ನಡುವಿನ ಸಹಯೋಗದ ಪ್ರಯತ್ನಗಳ ಮೂಲಕ ಲಸಿಕೆ ಕೆಲಸವನ್ನು 2018-2019 ರಲ್ಲಿ ಪ್ರಾರಂಭಿಸಲಾಯಿತು. ಅವರ ಸಂಶೋಧನೆಗಳನ್ನು ಎರಡು ಪ್ರಬಂಧಗಳಲ್ಲಿ ಪ್ರಕಟಿಸಲಾಗಿದೆ. ಇದು ಪ್ರೊಸೆಸ್ ಬಯೋಕೆಮಿಸ್ಟ್ರಿ ಮತ್ತು ಆರ್ಕೈವ್ಸ್ ಆಫ್ ವೈರಾಲಜಿ ಜರ್ನಲ್​ನಲ್ಲಿ ಪ್ರಕಟವಾಗಿದೆ.

ಈ ರೋಗವು ಭಾರತದ ಹಂದಿ ಉದ್ಯಮಕ್ಕೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ ಹಾಗೂ ಅದಕ್ಕೆ ಪ್ರಸ್ತುತ, ಯಾವುದೇ ಲಸಿಕೆ ಲಭ್ಯವಿಲ್ಲ.

ರಿವರ್ಸ್ ಜೆನೆಟಿಕ್ಸ್ ಪ್ರಾಣಿ ಮತ್ತು ಮಾನವ ರೋಗಗಳ ಲಸಿಕೆಗಳ ಅಭಿವೃದ್ಧಿಗೆ ಪ್ರಬಲ ವಿಧಾನವಾಗಿದೆ. ಪ್ರಸ್ತುತ, ಲಸಿಕೆ ಪರೀಕ್ಷೆ ಮತ್ತು ವಿಶ್ಲೇಷಣೆ ಪರವಾನಗಿ ಸಲ್ಲಿಸುವ ಪ್ರಕ್ರಿಯೆಯಲ್ಲಿದೆ. ಭಾರತದಲ್ಲಿ, ವಿಶೇಷವಾಗಿ ಈಶಾನ್ಯ ರಾಜ್ಯಗಳ ಹಂದಿಗಳ ಸಂತಾನೋತ್ಪತ್ತಿ ಕೇಂದ್ರಗಳಲ್ಲಿ ಕಾಣಿಸಿಕೊಂಡಿರುವ ಗುಣಪಡಿಸಲಾಗದ ರೋಗದ ಹರಡುವಿಕೆಯನ್ನು ತಡೆಯುವಲ್ಲಿ ಈ ಪ್ರಗತಿ ನಿರ್ಣಾಯಕವಾಗಿದೆ.

Exit mobile version