ಕಳೆದ 2022-23ರ ಆದಾಯ ತೆರಿಗೆ ವಿವರ ಸಲ್ಲಿಕೆಗೆ 2023ರ ಜುಲೈ 31 ಕೊನೆಯ ದಿನಾಂಕವಾಗಿತ್ತು. 6.77 ಕೋಟಿ ಮಂದಿ ಐಟಿ ರಿಟರ್ನ್ ಸಲ್ಲಿಸಿದ್ದರು. ಗಡುವು ತಪ್ಪಿದವರು ಈಗ ಪೆನಾಲ್ಟಿ ಕಟ್ಟಿ ಐಟಿ ರಿಟರ್ನ್ ಸಲ್ಲಿಸಲು ಅವಕಾಶ ಇದೆ. ನೀವು ಈಗಾಗಲೇ ಐಟಿ ರಿಟರ್ನ್ ಸಲ್ಲಿಸಿದ್ದು, ರಿಫಂಡ್‌ಗೆ ಕಾಯುತ್ತಿದ್ದರೆ, ನಿಮ್ಮ ಸ್ಟೇಟಸ್ ಏನಾಗಿದೆ ಎಂಬುದನ್ನು ನೋಡಬಹುದು. ನಿಮಗೆ ರಿಫಂಡ್ ವಿಳಂಬವಾಗಲು ಕಾರಣವೇನು ಎಂಬುದನ್ನು ಕೂಡ ತಿಳಿದುಕೊಳ್ಳಬಹುದು.
ಐಟಿಆರ್ ರಿಫಂಡ್ ಸ್ಟೇಟಸ್ ಪರಿಶೀಲನೆ ಹೇಗೆ?
step 1 : ಇ-ಫೈಲಿಂಗ್ ಪೋರ್ಟಲ್ ತೆರೆಯಿರಿ.
step 2 : ಪೋರ್ಟಲ್ ತೆರೆದ ಬಳಿಕ Quick Links ಸೆಕ್ಷನ್ ಅನ್ನು ಸ್ಕ್ರಾಲ್ ಡೌನ್ ಮಾಡಿ Know Your Refund Status ಮೇಲೆ ಕ್ಲಿಕ್ಕಿಸಿ.
step 3 : ನಿಮ್ಮ PAN ನಂಬರ್, ಅಸೆಸ್‌ಮೆಂಟ್ ವರ್ಷ, ( ಈಗ 2023-24 ಅಸೆಸ್‌ಮೆಂಟ್ ವರ್ಷ) ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
Step 4 : ನಿಮಗೆ OTP ಸಿಗುತ್ತದೆ. ಅದನ್ನು ನಿಗದಿತ ಸ್ಥಳದಲ್ಲಿ ನಮೂದಿಸಿ.
ಆಗ ನಿಮಗೆ ಪೋರ್ಟಲ್ ಐಟಿ ರಿಫಂಡ್ ಸ್ಟೇಟಸ್ ಅನ್ನು ತೋರಿಸುತ್ತದೆ. ನಿಮ್ಮ ಐಟಿಆರ್ ಬ್ಯಾಂಕ್ ಡಿಟೇಲ್ಸ್‌ನಲ್ಲಿ ಯಾವುದಾದರೂ ಇಶ್ಶೂ ಇದ್ದರೆ, ಹೀಗೆ ತೋರಿಸುತ್ತದೆ: No records found, please check your E-filing processing status by navigating through e -File – > Income Tax Returns -> View Filed Returns.
ತೆರಿಗೆ ರಿಫಂಡ್ 7ರಿಂದ 120 ದಿನಗಳಲ್ಲಿ ಸಿಗುತ್ತದೆ. ಹೀಗಾಗಿ ನಿಮ್ಮ ಐಟಿಆರ್ ಪ್ರೊಸೆಸಿಂಗ್‌ನಲ್ಲಿದ್ದರೆ ರಿಫಂಡ್ ಕೂಡ ವಿಳಂಬವಾದೀತು. ರಿಫಂಡ್ ವಿಳಂಬಕ್ಕೆ ಇತರ ಕಾರಣಗಳು ಇಂತಿವೆ.
ಇದನ್ನೂ ಓದಿ:ವಿಸ್ತಾರ MoneyGuide: ನಿವೃತ್ತರಾಗುವುದಕ್ಕೆ ಮುನ್ನ ಈ 5 ಪ್ರಮಾದಗಳನ್ನು ಮಾಡದಿರಿ
ಅಸಮರ್ಪಕ ಮಾಹಿತಿ: (Incorrect Information): ತೆರಿಗೆದಾರರು ತಮ್ಮ ಬ್ಯಾಂಕ್ ಖಾತೆ ನಂಬರ್, ಹೆಸರು, ವಿಳಾಸ ಇತ್ಯಾದಿ ವಿವರಗಳನ್ನು ಅಸಮರ್ಪಕವಾಗಿ ಕೊಟ್ಟಿದ್ದರೆ ರಿಫಂಡ್‌ನಲ್ಲಿ ವಿಳಂಬವಾದೀತು.
ಫೈಲಿಂಗ್ ಮಾಡುವಾಗ ಲೋಪದೋಷ: (Filing Errors) : ಟ್ಯಾಕ್ಸ್ ರಿಟರ್ನ್ ವೇಳೆ ಮಾಡುವ ಪ್ರಮಾದಗಳ ಪರಿಣಾಮ ರಿಫಂಡ್‌ನಲ್ಲಿ ವಿಳಂಬವಾದೀತು.
ಔಟ್‌ಸ್ಟ್ಯಾಂಡಿಂಗ್ ಡಿಮಾಂಡ್ (Outstanding Demand) : ತೆರಿಗೆದಾರ ಸರ್ಕಾರಕ್ಕೆ ಹಣ ಕೊಡಬೇಕಿದ್ದರೆ, ರಿಫಂಡ್ ಅನ್ನು ತೆರಿಗೆ ಬೇಡಿಕೆಗೆ ಬದಲಿಸಬಹುದು.