Site icon Vistara News

Indian Army: ಭಾರತೀಯ ಸೇನೆಗೆ ಬರಲಿವೆ ₹84,560 ಕೋಟಿ ಮೌಲ್ಯದ ʼಮೇಡ್ ಇನ್ ಇಂಡಿಯಾʼ ಸಲಕರಣೆ; ಏನೇನಿವೆ?

Indian Army Export

ಹೊಸದಿಲ್ಲಿ: ಟಾರ್ಪೆಡೋಗಳು, ಇಂಧನ ತುಂಬುವ ವಿಮಾನ, ಬಹು-ಮಿಷನ್ ಕಡಲ ವಿಮಾನ ಸೇರಿದಂತೆ ₹84,560 ಕೋಟಿ ಮೌಲ್ಯದ ʼಮೇಡ್‌ ಇನ್‌ ಇಂಡಿಯಾʼ (Made In India) ರಕ್ಷಣಾ ಸಾಮಗ್ರಿಗಳನ್ನು (military equipment) ಭಾರತೀಯ ಸೇನೆಗೆ (Indian Army) ಸೇರಿಸಲು ರಕ್ಷಣಾ ಇಲಾಖೆ (defence ministry) ಸಜ್ಜಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ (ಡಿಎಸಿ) ಸಶಸ್ತ್ರ ಪಡೆಗಳ ಒಟ್ಟಾರೆ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸಲು ₹84,560 ಕೋಟಿ ಮೌಲ್ಯದ ಹಾರ್ಡ್‌ವೇರ್ ಖರೀದಿಸುವ ಪ್ರಸ್ತಾವನೆಗಳನ್ನು ಅನುಮೋದಿಸಿದೆ.

DACಯಿಂದ ಅಂಗೀಕಾರಗೊಂಡ ಪ್ರಸ್ತಾವನೆಗಳಲ್ಲಿ ಹೊಸ-ಪೀಳಿಗೆಯ ಆಂಟಿ-ಟ್ಯಾಂಕ್ ಬಾಂಬ್‌ಗಳು, ವಾಯು ರಕ್ಷಣಾ ಯುದ್ಧತಂತ್ರದ ನಿಯಂತ್ರಣ ರಾಡಾರ್, ಭಾರಿ ಟಾರ್ಪೆಡೊಗಳು, ಮಧ್ಯಮ-ಶ್ರೇಣಿಯ ಕಡಲ ವಿಚಕ್ಷಣ ಮತ್ತು ಬಹು-ಮಿಷನ್ ಕಡಲ ವಿಮಾನಗಳು, ಆಕಾಶದಲ್ಲೇ ವಿಮಾನಕ್ಕೆ ಇಂಧನ ತುಂಬುವ ವಿಮಾನಗಳು ಮತ್ತು ಸಾಫ್ಟ್‌ವೇರ್ ಚಾಲಿತ ರೇಡಿಯೋಗಳು ಸೇರಿವೆ.

ಭಾರತೀಯ ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಯ ಕಣ್ಗಾವಲು ಮತ್ತು ಪ್ರತಿರೋಧ ಸಾಮರ್ಥ್ಯಗಳನ್ನು ಬಲಪಡಿಸಲು ಮಧ್ಯಮ-ಶ್ರೇಣಿಯ ಕಡಲ ವಿಚಕ್ಷಣ ಮತ್ತು ಬಹು-ಮಿಷನ್ ಕಡಲ ವಿಮಾನಗಳ ಖರೀದಿಗೆ ಡಿಎಸಿ ಅನುಮೋದನೆ ನೀಡಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಭಾರತ ನಿರ್ಮಿತ ಸಾಧನಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದೆ.

ವಾಯು ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸಲು, ವಿಶೇಷವಾಗಿ ನಿಧಾನ, ಸಣ್ಣ ಮತ್ತು ಕಡಿಮೆ ಹಾರುವ ಗುರಿಗಳನ್ನು ಹೊಂದಿದ ಶತ್ರುಸಾಧನಗಳನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಬಲಪಡಿಸಲು ವಾಯು ರಕ್ಷಣಾ ಯುದ್ಧತಂತ್ರದ ನಿಯಂತ್ರಣ ರಾಡಾರ್ ಅನ್ನು ಹೊಂದುವ ಪ್ರಸ್ತಾಪವನ್ನು ಅನುಮೋದಿಸಲಾಗಿದೆ ಎಂದು ಅದು ಹೇಳಿದೆ.

“ದೃಷ್ಟಿಗೋಚರ ರೇಖೆಯನ್ನು ಮೀರಿದ ಗುರಿಗಳನ್ನು ಟಾರ್ಗೆಟ್‌ ಮಾಡಲು, ಯುದ್ಧ ಪ್ರದೇಶದಲ್ಲಿ ಕಾರ್ಯಾಚರಣೆಯ ದಕ್ಷತೆ ಮತ್ತು ಪ್ರಾಬಲ್ಯವನ್ನು ಹೆಚ್ಚಿಸಲು, ಅಗತ್ಯ ಯಂತ್ರಾಂಶಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಕ್ಯಾನಿಸ್ಟರ್ ಆಂಟಿ-ಆರ್ಮರ್ ಲೋಯ್ಟರ್ ಮ್ಯೂನಿಷನ್ ಸಿಸ್ಟಮ್ ಅನ್ನು ಖರೀದಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಭಾರತೀಯ ವಾಯುಪಡೆಯ ಕಾರ್ಯಾಚರಣೆಯ ಸಾಮರ್ಥ್ಯಗಳು ಮತ್ತು ವ್ಯಾಪ್ತಿಯನ್ನು ಹೆಚ್ಚಿಸಲು ಫ್ಲೈಟ್ ರಿಫ್ಯೂಲ್ಲರ್ ಏರ್‌ಕ್ರಾಫ್ಟ್‌ಗಳ ಖರೀದಿಗಾಗಿಯೂ ಅನುಮೋದನೆ ನೀಡಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: INSAT-3DS Launch: ʼನಾಟಿ ಬಾಯ್‌ʼ ರಾಕೆಟ್‌ ಮೂಲಕ ಇಂದು ಭಾರತದ ಹವಾಮಾನ ಉಪಗ್ರಹ ಉಡಾವಣೆ; ಏಕೆ ಈ ಹೆಸರು?

Exit mobile version