ಬೆಂಗಳೂರು: ಇಸ್ರೇಲ್ ಮೇಲಿನ ಇರಾನ್ ಮಿಲಿಟರಿ ದಾಳಿಗೆ (Israel Iran War) ಪ್ರತಿಕ್ರಿಯೆಯಾಗಿ ಯುನೈಟೆಡ್ ಸ್ಟೇಟ್ಸ್ ಅಮೆರಿಕ ಮತ್ತು ಯುನೈಟೆಡ್ ಕಿಂಗ್ಡಮ್ ಗುರುವಾರ ವ್ಯಾಪಕ ಕೈಗಾರಿಕೆ ಬೆಂಬಲ ಹಿಂದೆಗೆತ ಸೇರಿದಂತೆ ನಿರ್ಬಂಧಗಳನ್ನು ವಿಧಿಸಿವೆ . “ಏಪ್ರಿಲ್ 13 ರ ದಾಳಿಯಲ್ಲಿ ಬಳಸಲಾದ ಇರಾನ್ನ ಮಾನವ ರಹಿತ ಯುದ್ಧ ವಿಮಾನಗಳ ಕಾರ್ಯಾಚರಣೆಯಾಗಿರುವ ಶಹೀದ್ಗೆ ಎಂಜಿನ್ ಪೂರೈಕೆಗಳ ಮೇಲೆ ನಿರ್ಬಂಧ ಹೇರಲಾಗಿದೆ. ಜತೆಗೆ ಯುಎವಿ (ಮಾನವ ರಹಿತ ಯುದ್ಧ ಡ್ರೊನ್ಗಳು) ಉತ್ಪಾದನೆಗೆ ನೆರವಾಗುವ 16 ವ್ಯಕ್ತಿಗಳು ಮತ್ತು ಎರಡು ಘಟಕಗಳಿಗೆ ನಿರ್ಬಂಧಗಳನ್ನು ಪ್ರಕಟಿಸಲಾಗಿದೆ.
ಇರಾನ್ನ ಯುಎವಿ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕೈಗಾರಿಕೆಗಳಲ್ಲಿ ಭಾಗಿಯಾಗಿರುವ ಹಲವಾರು ಮಿಲಿಟರಿ ಸಂಸ್ಥೆಗಳು, ವ್ಯಕ್ತಿಗಳು ಮತ್ತು ಘಟಕಗಳಿಗೆ ಯುನೈಟೆಡ್ ಕಿಂಗ್ಡಮ್ ನಿರ್ಬಂಧಗಳನ್ನು ವಿಧಿಸಿದೆ.
ಡಮಾಸ್ಕಸ್ನಲ್ಲಿರುವ ಇರಾನಿನ ದೂತಾವಾಸದ ಮೇಲೆ ಏಪ್ರಿಲ್ 1 ರಂದು ನಡೆದ ವಾಯು ದಾಳಿಗೆ ಪ್ರತೀಕಾರವಾಗಿ ಇರಾನ್ ಶನಿವಾರ ತಡರಾತ್ರಿ ಇಸ್ರೇಲ್ ಮೇಲೆ ತನ್ನ ಮೊದಲ ನೇರ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿತು. ದೊಡ್ಡ ಪ್ರಮಾಣದ ದಾಳಿಯು 300 ಕ್ಕೂ ಹೆಚ್ಚು ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಒಳಗೊಂಡಿದ್ದವು. ಅವುಗಳಲ್ಲಿ ಹೆಚ್ಚಿನವು ಇಸ್ರೇಲ್ ಮತ್ತು ಯುಎಸ್ ಮತ್ತು ಯುಕೆ ಸೇರಿದಂತೆ ಅದರ ಮಿತ್ರರಾಷ್ಟ್ರಗಳ ಪ್ರತಿ ದಾಳಿಯಿಂದ ನಾಶವಾಗಿದ್ದವು.
ಈ ದಾಳಿಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ ತನ್ನನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದರು.
“ಇಂದು, ಯುನೈಟೆಡ್ ಕಿಂಗ್ಡಮ್ನ ಸಮನ್ವಯದೊಂದಿಗೆ ಮತ್ತು ಮಿತ್ರರಾಷ್ಟ್ರಗಳೊಂದಿಗೆ ಸಮಾಲೋಚಿಸಿ, ಇಸ್ರೇಲ್ ಮೇಲಿನ ಇರಾನ್ ದಾಳಿಗೆ ಪ್ರತಿಕ್ರಿಯಿಸಲು ನಾವು ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ” ಎಂದು ಯುಎಸ್ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Arvind Kejriwal : ಜಾಮೀನಿಗಾಗಿ ಕುತಂತ್ರ; ಸಿಹಿ ತಿಂಡಿ ತಿಂದು ಸಕ್ಕರೆ ಕಾಯಿಲೆ ಎನ್ನುತ್ತಿರುವ ಕೇಜ್ರಿವಾಲ್ ಎಂದ ಇಡಿ
ಮುಂದಿನ ದಿನಗಳು ಮತ್ತು ವಾರಗಳಲ್ಲಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತೇವೆ. ಇರಾನ್ ಅನ್ನು ಎದುರಿಸಲು ನಾವು ನಮ್ಮ ನಿರ್ಬಂಧಗಳ ಅಧಿಕಾರವನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಇರಾನ್ ಯುಎವಿ ಕಾರ್ಯಕ್ರಮದ ವಿರುದ್ಧದ ನಿರ್ಬಂಧಗಳ ಜೊತೆಗೆ, ಇರಾನ್ ಉಕ್ಕು ಉದ್ಯಮಕ್ಕೆ ಬಿಡಿ ಭಾಗಗಳನ್ನು ಒದಗಿಸುವ ಐದು ಕಂಪನಿಗಳಿಗೆ ಅಮೆರಿಕೆ ನಿರ್ಬಂಧ ವಿಧಿಸಿದೆ.
“ಇರಾನ್ ಲೋಹಗಳ ವಲಯವು ವಾರ್ಷಿಕವಾಗಿ ಹಲವಾರು ಶತಕೋಟಿ ಡಾಲರ್ ಆದಾಯವನ್ನು ಉತ್ಪಾದಿಸುತ್ತದೆ, ಹೆಚ್ಚಿನವು ಆಮದು ಮಾಡಿದ ಬಳಿಕ ಬರುತ್ತವೆ” ಎಂದು ಖಜಾನೆ ಇಲಾಖೆ ಹೇಳಿದೆ, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಗೆ ವಾಹನಗಳನ್ನು ಒದಗಿಸುವ ಕಂಪನಿಗಳಿಗೂ ನಿರ್ಬಂಧ ಹಾಕಲಾಗಿದೆ.